ಕ್ಯಾನ್ಸರ್ ರೋಗಿಗಳ ಕಾರ್ಯಕ್ರಮದಲ್ಲಿ ಇಂತಹ ಬಟ್ಟೆ ತೊಡುವ ಅವಶ್ಯವೇನಿತ್ತು ಹೀನಾ ಖಾನ್?
ಸಾಮಾನ್ಯವಾಗಿ ಬಾಲಿವುಟ್ ಸಿನಿಮಾ ಇರಬಹುದು ಇಲ್ಲವೇ ಕಿರುತೆರೆ ನಟ-ನಟಿಯರಿರಬಹುದು, ಅವರು ಫ್ಯಾಶನ್ ಜಗತ್ತಿನಲ್ಲಿ ಗುರುತಿಸಿಕೊಳ್ಳಲು ತುಂಬ ಇಷ್ಟಪಡುತ್ತಾರೆ. ಹಾಗಾಗಿ ಜೀನ್ಸ್, ಟೀಶರ್ಟ್ ಹಾಗೂ ತುಂಡುಡುಗೆಗೆ ಹೆಚ್ಚಿನ ಪ್ರಾಧಾನ್ಯ ನೀಡುತ್ತಾರೆ. ಆ ಮೂಲಕ ಬಟ್ಟೆಯಿಂದಲೂ ತಾವು ಮುಖ್ಯವಾಹಿನಿಗೆ ಬರಲು ಯತ್ನಿಸಿದ್ದಾರೆ.
ಆದರೆ ಇದು ಅತಿರೇಕವಾದಾಗ, ಎಲ್ಲಿ ಯಾವ ರೀತಿ ಬಟ್ಟೆ ತೊಡಬೇಕು ಎಂಬುದನ್ನೇ ಮರೆಯುವ ಮೂಲಕ ನಗೆಪಾಟಲೀಗೀಡಾಗುತ್ತಾರೆ. ಇದಕ್ಕೆ ನಿದರ್ಶನವಾಗಿ ಹಿಂದಿ ಕಿರುತೆರೆ ನಟಿ ಹೀನಾ ಖಾನ್ ನಡೆದುಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ಎದುರಿಸುತ್ತಿದ್ದಾರೆ.
ಹೌದು, ಇತ್ತೀಚೆಗೆ ಮುಂಬೈನಲ್ಲಿ ಕ್ಯಾನ್ಸರ್ ಪೀಡಿತರಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟಿ ಹೀನಾ ಖಾನ್ ಭಾಗವಹಿಸಿದ್ದು, ಅರ್ಧ ತೋಳು ಕಾಣುವ ಹಾಗಿರುವ ಅಂಗಿ ಹಾಗೂ ಡೆನಿಮ್ ಜೀನ್ಸ್ ತೊಟ್ಟು ಭಾಗವಹಿಸಿದ್ದಾರೆ. ಅಲ್ಲದೆ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಸೇರಿ ಹಲವು ಲೇಖನಿ ಸಾಮಗ್ರಿ ನೀಡಿದ್ದು, ಫೋಟೋಗೆ ನೀಡಿದ ಪೋಸ್ ಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿವೆ.
ಎಲ್ಲಿ ಯಾವ ರೀತಿ ಬಟ್ಟೆ ತೊಡಬೇಕು ಎಂಬ ಕನಿಷ್ಠ ಅರಿವಿಲ್ಲವೇ ಹೀನಾ ಖಾನ್? ಕ್ಯಾನ್ಸರ್ ರೋಗಿಗಳ ಕಾರ್ಯಕ್ರಮದಲ್ಲೂ ನೀವು ಫ್ಯಾಶನ್ ಶೋ ನಡೆಸಬೇಕೆ? ಏಕೆ ಹೀಗೆ ಅರ್ಧ ಮೈ ಕಾಣುವ ಹಾಗೆ ಇಂತ ಬಟ್ಟೆ ತೊಡುತ್ತೀರಿ? ಸಮಾಜಕ್ಕೆ ಮಾದರಿಯಾಗಬೇಕಾಗಿರುವ ನೀವು ಹೀಗೆ ಇಂತಹ ಬಟ್ಟೆ ತೊಟ್ಟು, ಕ್ಯಾನ್ಸರ್ ರೋಗಿಗಳಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಸರಿಯೇ? ಮೊದಲು ಎಲ್ಲಿ ಎಂತಹ ಬಟ್ಟೆ ಹಾಕಬೇಕು ಎಂಬುದನ್ನು ಕಲಿಯಿರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಲಾಗಿದೆ.
Leave A Reply