• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

35 ವರ್ಷದಿಂದ ಜನರಲ್ ಬಿಪಿನ್ ರಾವತ್ ಅವರು ಸಿನೆಮಾ ನೋಡಿಲ್ಲ. ಕಾರಣ ಕೇಳಿದರೇ ಹೆಮ್ಮೆ ಎನಿಸುತ್ತೆ

TNN Correspondent Posted On July 5, 2018
0


0
Shares
  • Share On Facebook
  • Tweet It

ದೆಹಲಿ: ಭಾರತೀಯ ಸೈನಿಕರು ತಮ್ಮ ಕುಟುಂಬವನ್ನು ಬಿಟ್ಟು, ತಮ್ಮ ಪ್ರಾಣ ಪಣಕ್ಕಿಟ್ಟು ದೇಶ ರಕ್ಷಣೆಗೆ ಹೋರಾಡುತ್ತಾರೆ. ಅದರ ಜೊತೆಗೆ ಆಗಾಗ ಸ್ವಲ್ಪ ಮನರಂಜನೆಗೆ ತಮ್ಮ ಶಿಬಿರದಲ್ಲೇ ಹಾಡು, ಕುಣಿತ ಮಾಡುತ್ತಾರೆ. ಇದೂ ಕೂಡ ವಿರಳಾತೀ ವಿರಳ ಎನ್ನಬಹುದು. ಇನ್ನು ಪ್ರಸ್ತುತ ದಿನಗಳಲ್ಲಿ ಯಾವುದೇ ಹುದ್ದೇಯಲ್ಲಿದ್ದರೂ ಸಿನೆಮಾ ನೋಡದವರು ಸಿಗುವುದು ಕಡಿಮೆ. ಅದರಲ್ಲೂ ಉನ್ನತ ಹುದ್ದೆಯಲ್ಲಿದ್ದವರು ತಮ್ಮ ಕೆಲಸದ ಒತ್ತಡದ ಮಧ್ಯೆ ಸಿನೆಮಾ ನೋಡುವುದು ಸಾಮಾನ್ಯ . ಆದರೇ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್  ಬಿಪಿನ್ ರಾವತ್  ಅವರು, 35 ವರ್ಷದಿಂದ ಸಿನೆಮಾವನ್ನೇ ನೋಡಿಲ್ಲ, ನನಗೆ ಮೂರು ಗಂಟೆ ಒಂದೇ ಕಡೆ ಕೂಡಲು  ಸಮಯ ಸಿಕ್ಕಿಲ್ಲ ಎಂಬ ಸತ್ಯವನ್ನು ಹೊರ ಹಾಕಿದ್ದಾರೆ. ಈ ಒಂದು ಮಾತು ಸೈನಿಕರಲ್ಲಿರುವ ಕಾರ್ಯತ್ಪರತೆ, ದೇಶ ಭಕ್ತಿಗೆ ಸಾಕ್ಷಿಯಾಗಿ ನಿಂತಿದೆ.

ದೆಹಲಿಯ ಪಬ್ಲಿಕ್ ಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳೊಂದಿಗಿನ ಸಂವಾದದ ವೇಳೆ 8ನೇ ತರಗತಿ ವಿದ್ಯಾರ್ಥಿ ಶ್ರೀವೋಮ್  ಕಶ್ಯಪ್  ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಶ್ವದ ಬಲಿಷ್ಠ ಸೈನಿಕ ಪಡೆಯ ಮುಖ್ಯಸ್ಥರಾಗಿರುವ ಜನರಲ್ ಬಿಪಿನ್ ರಾವತ್ ಅವರು ಕಳೆದ 35 ವರ್ಷದಿಂದ ಸಿನೆಮಾವನ್ನೇ ನೋಡಿಲ್ಲ ಎಂದು ಹೇಳಿದ್ದಾರೆ. ನನಗೆ 35 ವರ್ಷದಿಂದ ಸಿನೆಮಾ ನೋಡಲು ಮೂರು ಘಂಟೆ ಸಮಯ ದೊರಕ್ಕಿಲ್ಲ ಎಂಬ ಉತ್ತರವನ್ನು ನೀಡುವ ಮೂಲಕ ದೇಶಸೇವೆಗೆ ಅವರ ಕೊಡುಗೆ ಎಂಥಾದ್ದು ಎಂಬುದನ್ನು ತಿಳಿಸಿದ್ದಾರೆ.

ಅಲ್ಲದೇ ವಿದ್ಯಾರ್ಥಿಗಳಿಗೆ ಮಹತ್ವದ ಸಲಹೆಯನ್ನು ನೀಡಿರುವ ಅವರು ‘ಕಠಿಣ ಪರಿಶ್ರಮ ಪಡಿ. ಯಶಸ್ಸು ದೊರೆಯುತ್ತದೆ. ಜೀವನದಲ್ಲಿ ವಿಫಲರಾದವರನ್ನು ನೋಡದೇ ಮುನ್ನಡೆಯಿರಿ. ದೇಶಸೇವೆ ಮಾಡಲು ಮಕ್ಕಳು ಭವಿಷ್ಯದಲ್ಲಿ ಸೇನೆ ಸೇರಬೇಕು ಎಂದು ಹೇಳಿದರು.

ಭಾರತೀಯ ಸೇನೆಗೆ 1978 ಡಿಸೆಂಬರ್ 16ರಂದು  ಭಾರತೀಯ ಸೇನೆಗೆ ಸೇರ್ಪಡೆಯಾಗಿರುವ ರಾವತ್ ನಾನಾ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅವರ ದೇಶ ಸೇವೆ ಆರಂಭವಾಗಿ ಸುಮಾರು 40 ವರ್ಷಗಳಾಗಿದ್ದು, ಸುಮಾರು 35 ವರ್ಷದಿಂದ ಸಿನೆಮಾವನ್ನೇ ನೋಡಿಲ್ಲ. ನನಗೆ ಸಿನೆಮಾ ನೋಡಲು ಮೂರು ಘಂಟೆ ಸಮಯ ಸಿಕ್ಕಿಲ್ಲ ಎಂಬ ಅವರ ಮಾತು ಎಂಥವರಿಗೂ ದೇಶ ಸೇವಕನ ಕಾರ್ಯ ವೈಖರಿಗೆ ಹೆಮ್ಮೆ ಮೂಡಿಸದೇ ಇರದು. ಇಂಥವರಿಂದಲ್ಲವೇ ಭಾರತ  ರಕ್ಷಣಾ ವ್ಯವಸ್ಥೆ ಇಷ್ಟು ಬಲಿಷ್ಠವಾಗಿರುವುದು.

0
Shares
  • Share On Facebook
  • Tweet It




Trending Now
ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
Tulunadu News June 16, 2026
Najlepsze bonusy i sloty w polskim kasynie online
Tulunadu News May 29, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ

  • Privacy Policy
  • Contact
© Tulunadu Infomedia.

Press enter/return to begin your search