ರೈತರ ಹಿತಕ್ಕಾಗಿ ನುಡಿದಂತೆ ನಡೆದ ಮೋದಿ ಸರ್ಕಾರ, ಭತ್ತಕ್ಕೆ ಬೆಂಬಲ ಬೆಲೆ ಏರಿಸಲು ಸಂಪುಟ ಸಮಿತಿ ಒಪ್ಪಿಗೆ!
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದಲ್ಲಿ ರೈತರ ಹಿತಾಸಕ್ತಿಗಾಗಿ ಕೆಲಸಗಳು ಆಗುತ್ತಿವೆ. ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಫಸಲ್ ಬಿಮಾ ಯೋಜನೆ ಮೂಲಕ ರೈತರ ಬೆಳೆಗೆ ವಿಮೆ, ಕೃಷಿ ಸಿಂಚಾಯಿ ಯೋಜನೆ ಮೂಲಕ ನೀರಿನ ಸೌಲಭ್ಯ ಸೇರಿ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ.
ಅದರಲ್ಲೂ ಕಳೆದ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ರೈತರು ಬೆಳೆದ ಬೆಳೆಗೆ ಒಂದೂವರೆ ಪಟ್ಟು ಹೆಚ್ಚು ಬೆಂಬಲ ಬೆಲೆ ನೀಡಲಾಗುವುದು ಎಂದು ಘೋಷಣೆ ಮಾಡಿತ್ತು, ಆ ಮೂಲಕ ನಾವು ರೈತರ ಪರ ಆಡಳಿತ ನೀಡುವವರು ಎಂಬುದನ್ನು ಸಾರಿತ್ತು.
ಈಗ ಅದರಂತೆಯೇ ಕೇಂದ್ರ ಸರ್ಕಾರ ನಡೆದುಕೊಂಡಿದ್ದು, ರೈತರು ಬೆಳೆಯುವ ಭತ್ತಕ್ಕೆ ನೀಡುತ್ತಿದ್ದ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ಹೌದು, ಈ ಕುರಿತು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆ ನಡೆಸಿದ್ದು, ಮುಂಗಾರಿನಲ್ಲಿ ಬೆಳೆದ ಭತ್ತಕ್ಕೆ ನೀಡುತ್ತಿದ್ದ ಬೆಂಬಲ ಬೆಲೆ ಏರಿಕೆ ಮಾಡಿದೆ.
ಇದುವರೆಗೆ ಕೇಂದ್ರ ಸರ್ಕಾರ ಒಂದು ಕ್ವಿಂಟಾಲ್ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಯಾಗಿ 1550 ರೂಪಾಯಿ ನೀಡುತ್ತಿತ್ತು. ಆದರೆ ಇದು ಇನ್ನು ಮುಂದೆ 1800 ರೂಪಾಯಿ ಆಗಲಿದ್ದು, ಕೇಂದ್ರ ಸರ್ಕಾರ 250 ರೂಪಾಯಿ ಬೆಂಬಲ ಬೆಲೆ ನೀಡುತ್ತದೆ. ಇದರಿಂದ ಸರ್ಕಾರಕ್ಕೆ 38 ಸಾವಿರ ಕೋಟಿ ರೂಪಾಯಿ ಖರ್ಚಾಗಲಿದ್ದು, ರೈತರಿಗೆ ಅಪಾರ ಅನುಕೂಲವಾಗಲಿದೆ. ಶೀಘ್ರದಲ್ಲೇ ಸರ್ಕಾರ ರೈತರ ಬೆಳೆಗೆ ಒಂದೂವರೆ ಪಟ್ಟು ಬೆಂಬಲ ಬೆಲೆ ಘೋಷಿಸಲಿದೆ ಎಂದು ಮೂಲಗಳು ತಿಳಿಸಿವೆ.
Leave A Reply