ಆರ್ ಎಸ್ ಎಸ್ ಸಭೆಯಲ್ಲಿ ಭಾಗವಹಿಸಿದಕ್ಕೆ ಪ್ರಣಬ್ ಮುಖರ್ಜಿಗೆ ಹಿಂಜರಿಕೆ ಬೇಡ: ಭಾಗವತ್
ನಾಗಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘ ಶಿಕ್ಷಾ ವರ್ಗದಲ್ಲಿ ಭಾಗವಹಿಸಿದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿರುವುದಕ್ಕೆ, ವಿರೋಧಕ್ಕೆ ಯಾವುದೇ ಹಿಂಜರಿಕೆಪಟ್ಟಕೊಳ್ಳುವುದು ಬೇಡ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ ಪ್ರೇರಣಾ ವಿದ್ಯಾರ್ಥಿ ಸಮ್ಮೇಳನದಲ್ಲಿ ಮಾನಾಡಿದ ಅವರು, ಪ್ರಣಬ್ ಮುಖರ್ಜಿ ಅವರು ಯಾವುದೇ ಪಕ್ಷದಲ್ಲಿದ್ದರೇ ಆಗ ಪಕ್ಷದ ಸಿದ್ಧಾಂತಕ್ಕೆ ನಿಷ್ಠರಾಗಿರಬೇಕು. ಆದರೆ ಯಾವಾಗ ದೇಶದ ರಾಷ್ಟ್ರಪತಿ ಆದ ನಂತರ ಅವರು ಪಕ್ಷಕ್ಕೆ ನೀತಿ ನಿಯಮಗಳಿಗೆ ನಿಷ್ಠರಾಗಿರಬೇಕಿಲ್ಲ. ರಾಷ್ಟ್ರಪತಿಯಾದ ನಂತರ ಅವರು ದೇಶದ ಎಲ್ಲರ ಭಾವನೆಗಳಿಗೆ ಬೆಲೆ ನೀಡಬೇಕಾಗುತ್ತದೆ ಆದ್ದರಿಂದ ಸಂಘದ ಆಹ್ವಾನ ಸ್ವೀಕರಿಸಿದಕ್ಕೆ ಯಾವುದೇ ಹಿಂಜರಿಕೆ ಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಭಾಗವತ್ ಜೀ ಸ್ಪಷ್ಟಪಡಿಸಿದ್ದಾರೆ.
ಪ್ರಣಬ್ ಮುಖರ್ಜಿ ಅವರನ್ನು ಆಹ್ವಾನಿಸಿದಕ್ಕೆ ಸಂಘಕ್ಕೆ ಯಾವುದೇ ಹಿಂಜರಿಕೆಯಿಲ್ಲ ಇಲ್ಲ ಮತ್ತು ಹಿನ್ನೆಡೆ ಇಲ್ಲ. ಹಾಗೇಯೇ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ಪ್ರಣಬ್ ಮುಖರ್ಜಿ ಅವರು ಯಾವುದೇ ಕಾರಣಕ್ಕೂ ಹಿಂಜರಿಕೆ ಪಡುವ ಅವಶ್ಯವಿಲ್ಲ. ದೇಶದ ಪ್ರತಿಯೊಬ್ಬರಲ್ಲಿ ಪರಸ್ಪರ ಆತ್ಮೀಯತೆ ಬೆಳೆಯಬೇಕು ಎಂದು ಹೇಳಿದ್ದಾರೆ.
ಕಳೆದ ತಿಂಗಳು ನಾಗಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘ ಶಿಕ್ಷಾ ವರ್ಗದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಭಾಗವಹಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಹಲವರು ಪ್ರಣಬ್ ಜೀ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ ಈ ಕುರಿತು ಮೋಹನ್ ಭಾಗವತ್ ಜೀ ಪ್ರತಿಕ್ರಿಯೆ ನೀಡಿ, ಮತ್ತೊಮ್ಮೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
Leave A Reply