• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ತಿಂಗಳಿಗೆ 6 ಲಕ್ಷ ಬಾಡಿಗೆ ಕೊಟ್ಟು ಬೆಂಗಳೂರಿನ ಅತಿಥಿಗೃಹದಲ್ಲಿ ನಿಲ್ಲುತ್ತಿದ್ದ ಭೈರಪ್ಪ!!

Ganesh Raj Posted On July 12, 2018
0


0
Shares
  • Share On Facebook
  • Tweet It

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ಕಳೆದ ತಿಂಗಳು ನಿವೃತ್ತಿಯಾಗಿರುವ ಭೈರಪ್ಪನವರು ಮಾಡಿರುವ ಭ್ರಷ್ಟಾಚಾರದ ಬಗ್ಗೆ ಇವತ್ತು ವಿಧಾನಪರಿಷತ್ತಿನಲ್ಲಿ ಚರ್ಚೆಯಾಗಿದೆ. ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಅವರು ಈ ಬಗ್ಗೆ ಸದನದಲ್ಲಿ ಮಾತನಾಡಿದ್ದಾರೆ. ಅದರಲ್ಲಿ ಅವರು ಅನೇಕ ಹಗರಣದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ರವಿ ಕುಮಾರ್ ಅವರು ಭೈರಪ್ಪನವರ ಅವಧಿಯಲ್ಲಿ ಆಗಿರುವ ಎಸ್ ಸಿ-ಎಸ್ ಟಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಹಗರಣ, ವಿವಿಗೆ ಕಂಪ್ಯೂಟರ್ ಖರೀದಿ ಹಗರಣ, ಸಿಸಿಟಿವಿ ಕ್ಯಾಮೆರಾ ಅಳವಡಿಕೆಯಲ್ಲಿ ಕೆಟಿಪಿಪಿ ಕಾಯ್ದೆಯನ್ನು ಉಲ್ಲಂಘಿಸಿ ಅಳವಡಿಕೆ, ಅನಧಿಕೃತ ಹುದ್ದೆಗಳ ನೇಮಕ, ಸೋಲಾರ್ ಬೀದಿ ದೀಪಗಳ ಹಗರಣ, ಓಪನ್ ಹೌಸ್ ಸೇರಿದಂತೆ ಹಲವು ಅಕ್ರಮಗಳ ಕುರಿತು ಪ್ರಸ್ತಾಪಿಸಿದ್ದಾರೆ.
ನಿಮಗೆ ಇನ್ನೊಂದು ಆಶ್ಚರ್ಯಕರ ಸಂಗತಿಯನ್ನು ಹೇಳಲೇಬೇಕು. ಯಾವುದೇ ವಿಶ್ವವಿದ್ಯಾನಿಲಯದ ಕುಲಪತಿಯಾಗಿರುವವರಿಗೆ ತಿಂಗಳಿಗೆ ಎರಡು ಅಥವಾ ಮೂರು ಸಲ ಬೆಂಗಳೂರಿಗೆ ಹೋಗುವ ಕೆಲಸ ಬರಬಹುದು. ಇವರು ಅಲ್ಲಿ ಹೋದರೆ ಉಳಿದುಕೊಳ್ಳಲಿಕ್ಕೆ ಸರಕಾರಿ ಅತಿಥಿಗೃಹ ಇರುತ್ತದೆ. ಆದರೆ ಭೈರಪ್ಪನವರ ಮರ್ಜಿಯೇ ಬೇರೆ. ಅವರಿಗೆ ಸರಕಾರಿ ಅತಿಥಿಗೃಹದಲ್ಲಿ ಉಳಿಯಲು ಮನಸ್ಸೇ ಇರುತ್ತಿರಲಿಲ್ಲವೋ ಅಥವಾ ತಮ್ಮ ಬೇರೆ “ಇಚ್ಚೆ”ಗಳನ್ನು ತೀರಿಸಲು ಅಲ್ಲಿ ಸಾಧ್ಯವಿಲ್ಲವೆಂದೋ ಅವರು ಬೆಂಗಳೂರಿಗೆ ಹೋದಾಗ ನಿಲ್ಲಲು ಒಂದು ಅತಿಥಿಗೃಹವನ್ನೇ ಬಾಡಿಗೆಗೆ ಪಡೆದುಕೊಂಡಿದ್ದಾರೆ. ಅದಕ್ಕೆ ಎಷ್ಟು ಬಾಡಿಗೆ ಮಂಗಳೂರು ವಿವಿ ಅಂದರೆ ನಮ್ಮ ತೆರಿಗೆಯ ಹಣದಿಂದ ಕೊಡಲಾಗುತ್ತದೆ ಎಂದು ಗೊತ್ತಾದರೆ ನಿಮಗೆ ಶಾಕ್ ಆಗಬಹುದು. ಭೈರಪ್ಪನವರು ಬಾಡಿಗೆಗೆ ಪಡೆದುಕೊಂಡಿರುವ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಅತಿಥಿಗೃಹದ ತಿಂಗಳ ಬಾಡಿಗೆ ಆರು ಲಕ್ಷ ರೂಪಾಯಿಗಳು. ಇಷ್ಟು ಬಾಡಿಗೆ ಕೊಟ್ಟು ಅತಿಥಿಗೃಹವನ್ನು ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಇವರು ಬೆಂಗಳೂರಿಗೆ ಹೋಗಿ ಸ್ಟಾರ್ ಹೋಟೇಲಿನಲ್ಲಿ ನಿಂತರೂ ತಿಂಗಳಿಗೆ ಆರು ಲಕ್ಷ ಖರ್ಚಾಗುವುದಿಲ್ಲ. ಹಾಗಿರುವಾಗ ತಿಂಗಳಲ್ಲಿ ಹೆಚ್ಚೆಂದರೆ ಆರು ದಿನಗಳ ಸ್ಟೇಗಾಗಿ ಆರು ಲಕ್ಷ ಉಡಾಯಿಸುವ ಶೋಕಿ ಭೈರಪ್ಪನವರದ್ದು. ಯಾಕೆಂದರೆ ಹಣ ಸರಕಾರದ್ದಲ್ವಾ? ಹೀಗೆ ಇಂತವರು ದುಂದುವೆಚ್ಚ ಮಾಡುವುದರಿಂದ ಮುಂದಿನ ಭವ್ಯ ಭಾರತದ ಪ್ರಜೆಗಳನ್ನು ತಯಾರಿಸಬೇಕಾದ ಮಂಗಳೂರು ವಿವಿಯಲ್ಲಿ ಇಂತವರಿಗೆ ಪಾಠ ಮಾಡುವ ನೈತಿಕತೆ ಎಲ್ಲಿರುತ್ತದೆ. ನಿಮಗೆ ಆರು ಲಕ್ಷ ಕೊಟ್ಟು ಅತಿಥಿಗೃಹದಲ್ಲಿ ಉಳಿದುಕೊಳ್ಳುವ ಅಗತ್ಯ ಏನಿತ್ತು ಎಂದು ರಾಜ್ಯಪಾಲರು ಭೈರಪ್ಪನವರಿಗೆ ಕೇಳಬೇಕು.

ಪರ್ಮನೆಂಟ್ ಮಾಡುತ್ತೇನೆ ಎಂದು ಲಂಚ…

140 ಜನರಿಗೆ ಮಂಗಳೂರು ವಿವಿಯಲ್ಲಿ ವಿವಿಧ ಹುದ್ದೆಗಳಿಗೆ ತಾತ್ಕಾಲಿಕ ನೆಲೆಯಲ್ಲಿ ಭರ್ಥಿ ಮಾಡಿದ್ದಾರೆ. ಅವರಿಗೆಲ್ಲ ಪರ್ಮನೆಂಟ್ ಮಾಡುತ್ತೇನೆ ಎಂದು ಕೆಲಸಕ್ಕೆ ತೆಗೆದುಕೊಳ್ಳುವಾಗ ಭರವಸೆ ನೀಡಿದ್ದಾರೆ. ಅವರಿಂದ ಮೂರು ಲಕ್ಷದಿಂದ ಏಳು ಲಕ್ಷದ ತನಕ ಲಂಚ ತೆಗೆದುಕೊಂಡಿದ್ದಾರೆ. ಅಷ್ಟು ಮಂದಿಗೂ ಶಾಶ್ವತ ಉದ್ಯೋಗ ಕೊಡಲು ಸಾಧ್ಯವಿಲ್ಲವೆಂದೂ ಅವರಿಗೂ ಗೊತ್ತಿದೆ. ಆದರೂ ಮಂಗಳೂರು ವಿವಿಯಲ್ಲಿ ಪರ್ಮನೆಂಟ್ ಉದ್ಯೋಗ ಸಿಗುತ್ತದೆ ಎಂದು ಆಸೆಯಿಂದ ಜನ ಲಕ್ಷ ಕೊಟ್ಟು ತಾತ್ಕಾಲಿಕವಾಗಿ ಒಳಗೆ ಸೇರಿದ್ದಾರೆ. ಅದರಲ್ಲಿ ಮೊನ್ನೆ ಇವರು ನಿವೃತ್ತಿಯಾಗುವ ಕೊನೆಯ ದಿನ ಅಂದರೆ ಜೂನ್ ತಿಂಗಳ ನಾಲ್ಕನೇ ತಾರೀಕು ಕೊನೆಯ ಸಿಂಡಿಕೇಟ್ ಸಭೆಯಲ್ಲಿನಾಲ್ಕು ಜನ ಚಾಲಕರನ್ನು ಪರ್ಮನೆಂಟ್ ಮಾಡಿದ್ದಾರೆ. ಅಸೋಸಿಯೇಟ್ ಪ್ರೋಫೆಸರ್ ಆಗಿದ್ದ ಪ್ರಶಾಂತ್ ನಾಯಕ್, ಚಂದ್ರ ಅವರನ್ನು ಪ್ರೊಫೆಸರ್ ಆಗಿ ಪ್ರಮೋಶನ್ ಮಾಡಿದ್ದಾರೆ. ಇವರು ತರಾತುರಿಯಲ್ಲಿ ಹೇಗೆ ಇದೆಲ್ಲಾ ಮಾಡಿದ್ದಾರೆಂದರೆ ಬೆಳಿಗ್ಗೆ ಸಂದರ್ಶನದ ಕೆಲಸ ಮಾಡಿದ್ದಾರೆ, ಮಧ್ಯಾಹ್ನ ಸಿಂಡಿಕೇಟ್ ಸಭೆಯಲ್ಲಿ ವಿಷಯ ಇಟ್ಟಿದ್ದಾರೆ, ಸಂಜೆ ಪ್ರಮೋಶನ್ ಲೆಟರ್ ಕೊಟ್ಟಿದ್ದಾರೆ. ಇಷ್ಟಾಗಿಯೂ ಇದ್ಯಾವುದೋ ಹೊರಗೆ ಗೊತ್ತಾಗದೆ ನೋಡಿಕೊಂಡಿದ್ದಾರೆ.
ನಿವೃತ್ತಿಯ ನಂತರ ಇವರೇ ಹಣ ಕೊಟ್ಟು ತಮ್ಮನ್ನು ತಾವೇ ಸನ್ಮಾನ ಮಾಡಿಸಿಕೊಂಡಿದ್ದಾರೆ. ಯಾಕೆಂದರೆ ಇವರ ಭ್ರಷ್ಟಾಚಾರ ಗೊತ್ತಿರುವವರು ಇವರಿಗೆ ಸನ್ಮಾನ ಮಾಡುವುದಿಲ್ಲವೆಂದು ಅವರಿಗೂ ಗೊತ್ತಿದೆ. ಇನ್ನು ನಿವೃತ್ತಿ ಆದ ನಂತರ ತಮಗೆ ಅಧಿಕಾರ ಇದ್ದಾಗ ಕೊಟ್ಟಿದ್ದಂತಹ ಸರಕಾರಿ ಬಂಗಲೆಯಲ್ಲಿ ಹದಿನೈದು ದಿನಗಳ ತನಕ ಇದ್ದು ಎಲ್ಲಾ ಕಡತಗಳನ್ನು ವಿಲೇವಾರಿ ಮಾಡಿ ನಂತರ ಬಂಗಲೆ ಖಾಲಿ ಮಾಡಿಕೊಟ್ಟಿದ್ದಾರೆ!!

0
Shares
  • Share On Facebook
  • Tweet It




Trending Now
ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
Ganesh Raj June 16, 2026
Najlepsze bonusy i sloty w polskim kasynie online
Ganesh Raj May 29, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ

  • Privacy Policy
  • Contact
© Tulunadu Infomedia.

Press enter/return to begin your search