ಮಂಗಳೂರು ವಿವಿಯ ಲೇಡಿಸ್ ಟಾಯ್ಲೆಟ್ ಮೊಬೈಲ್ ಕ್ಯಾಮೆರಾ ಪ್ರಕರಣಕ್ಕೆ 2 ವರ್ಷ!
ಭರ್ತಿ 2 ವರ್ಷಗಳಾಗುತ್ತಾ ಬಂದಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಯುವತಿಯರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮೆರಾ ಸೆಟ್ ಮಾಡಿದ ಘಟನೆ. ಅದು ಬೆಳಕಿಗೆ ಬರುವಾಗಲೇ ಸುಮಾರು ಹದಿನೈದು ದಿನ ತಡವಾಗಿತ್ತು. ಅದು ಮಾಧ್ಯಮಗಳಲ್ಲಿ ಬರದಂತೆ ಮಂಗಳೂರು ವಿವಿಯ ಅನೈತಿಕ ಕೃತ್ಯಗಳ ರಕ್ಷಣಾ ತಂಡ ಆಫ್ ಭೈರಪ್ಪ ಸಂಪೂರ್ಣ ಪ್ರಯತ್ನ ಮಾಡಿತ್ತು. ಆದರೆ ಅಗಸ್ಟ್ 31, 2016 ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಯಾವುದೋ ವಿಷಯ ಚರ್ಚೆಯಾದಾಗ ಅದರ ನಡುವೆ ಈ ವಿಷಯ ನುಸುಳಿದೆ. ಅಲ್ಲಿಂದ ಅದು ಪತ್ರಿಕೆಗಳಲ್ಲಿ ಬಂದಿದೆ. ನಂತರ ಟಿವಿ ವಾಹಿನಿಗಳಲ್ಲಿ ಚರ್ಚೆಯಾಗಿದೆ. ಯುವತಿಯರ ಟಾಯ್ಲೆಟಿನಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟವನು ಯಾರು ಎಂದು ಎಲ್ಲರಿಗೂ ಗೊತ್ತಾಗಿದೆ. ಅವನ ಸಂತೋಷ.
ಸಂತೋಷನನ್ನು ಪೊಲೀಸರು ಬಂಧಿಸಿದ್ದರು. ಭೈರಪ್ಪನವರು ಆವತ್ತು ಈ ವಿಷಯ ಬಹಿರಂಗೊಂಡ ನಂತರ ಬೇರೆ ದಾರಿ ಇಲ್ಲದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ಆಗ ಪೊಲೀಸ್ ಕಮೀಷನರ್ ಆಗಿದ್ದ ಚಂದ್ರಶೇಖರ್ ಅವರು ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದರು. ಸಂತೋಷ್ ಯಾವ ಅಂಗಡಿಯಿಂದ ಮೊಬೈಲ್ ಖರೀದಿಸಿದ್ದ ಎಂದು ತನಿಖೆ ಮೂಲಕ ಪತ್ತೆ ಹಚ್ಚಿದ್ದರು. ನಂತರ ಆ ಮೊಬೈಲ್ ಅಂಗಡಿಗೆ ತೆರಳಿ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಈ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿರುವುದು ಸ್ಪಷ್ಟವಾಗಿತ್ತು. ಆರೋಪಿ ಸಂತೋಷ್ ಮೇಲೆ ಭಾರತೀಯ ದಂಡ ಸಂಹಿತೆ 354 ಕಲಾಂ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಐಪಿಸಿ 354 ಅಂದರೆ ಮಹಿಳೆಯ ಮಾನಕ್ಕೆ ಕುಂದುತರುವ ಯತ್ನ. ನಿಜಕ್ಕೂ ಸಂತೋಷ್ ಮಾಡಿದ ದುಷ್ಕತ್ಯ ಚಿಕ್ಕದಲ್ಲವೇ ಅಲ್ಲ. ಇನ್ನು ತಾನು ಸಿಕ್ಕಿಬೀಳುವುದಿಲ್ಲವೆಂದು ಆರೋಪಿಗೆ ಸಂಪೂರ್ಣ ಧೈರ್ಯ ಇತ್ತು ಎಂದು ತನಿಖೆಯಿಂದ ಗೊತ್ತಾಗಿದೆ. ಈ ಕುರಿತು 84 ಹೆಣ್ಣುಮಕ್ಕಳನ್ನು ವಿಚಾರಿಸಲಾಗಿತ್ತು. ಸಂತೋಷನ ಗೆಳೆಯರನ್ನು ಮಾತನಾಡಿಸಿದಾಗ ಸಂತೋಷನಿಗೆ ತಾನು ಸಿಕ್ಕಿಬೀಳುವ ಚಾನ್ಸೆ ಇರಲಿಲ್ಲ ಎನ್ನುವ ಧೈರ್ಯ ಇತ್ತು ಎಂದು ಕೂಡ ಗೊತ್ತಾಗಿದೆ. ಹೀಗೆ ಪೊಲೀಸರು ಸೂಕ್ತವಾಗಿ ತನಿಖೆ ಮಾಡಿದ ಪರಿಣಾಮವಾಗಿ ಅನೇಕ ಹೆಣ್ಣುಮಕ್ಕಳು ನಿಟ್ಟುಸಿರುಬಿಟ್ಟಿದ್ದರು. ಕೊಣಾಜೆ ಪೊಲೀಸರ ತನಿಖೆಯ ವೇಗ ಕಂಡು ಖುಷಿಗೊಂಡ ಪೊಲೀಸ್ ಕಮೀಷನರ್ ಚಂದ್ರಶೇಖರ್ ಅವರು ಪೊಲೀಸ್ ಸಿಬ್ಬಂದಿಗಳಿಗೆ ಹತ್ತು ಸಾವಿರ ಇನಾಮು ಕೂಡ ನೀಡಿ ಪ್ರೋತ್ಸಾಹ ನೀಡಿದ್ದರು. ಇನ್ನೇನೂ ಸಂತೋಷನಿಗೆ ಈ ಪ್ರಕರಣದಲ್ಲಿ ಶಿಕ್ಷೆಯಾಗುತ್ತದೆ ಎಂದೇ ಎಲ್ಲರೂ ನಂಬಿದ್ದರು.
ಇಲ್ಲಿಯ ತನಕ ವರದಿ ಇಲ್ಲ..
ಆದರೆ ಈ ನಡುವೆ ಮಂಗಳೂರು ವಿವಿಯ ಸಿಂಡಿಕೇಟ್ ಸದಸ್ಯರೊಬ್ಬರು ಭೈರಪ್ಪನವರಿಗೆ ಹೋಗಿ ಪ್ರಕರಣ ಹಿಂದಕ್ಕೆ ಪಡೆದುಕೊಳ್ಳುವಂತೆ ಮನವೊಲಿಸಿದರು. ಯಾಕೆಂದರೆ ಸಂತೋಷ್ ಆ ಸಿಂಡಿಕೇಟ್ ಸದಸ್ಯನ ಜಾತಿ ಬಾಂಧವನಾಗಿದ್ದ. ತನ್ನ ಸಿಂಡಿಕೇಟ್ ಸದಸ್ಯನಿಗಾಗಿ ಭೈರಪ್ಪ ಕೊಣಾಜೆ ಪೊಲೀಸ್ ಠಾಣೆಯ ಅಧಿಕಾರಿಗೆ ಫೋನ್ ಮಾಡಿ ನೀವು ಈ ಕೇಸಿನಲ್ಲಿ ಮುಂದುವರೆಯುವುದು ಬೇಡಾ, ನಾವು ಈ ಪ್ರಕರಣವನ್ನು ಹಿಂದಕ್ಕೆ ಪಡೆದುಕೊಳ್ಳುತ್ತೇವೆ, ಸಂತೋಷ್ ಗೆ ಮಂಗಳೂರು ವಿವಿಯ ಆಂತರಿಕ ಸಮಿತಿಯಿಂದಲೇ ತನಿಖೆ ಮಾಡಿ ಶಿಕ್ಷೆ ನೀಡುತ್ತೇವೆ ಎಂದು ತಿಳಿಸಿದರು.
ಅದರ ನಂತರ ಲೇಡಿಸ್ ಟಾಯ್ಲೆಟಿನಲ್ಲಿ ಮೊಬೈಲ್ ಇಟ್ಟು ವಿದ್ಯಾರ್ಥಿನಿಯರ ವಿಡಿಯೋ ತೆಗೆಯುತ್ತಿದ್ದ ಸಂತೋಷನ ಪ್ರಕರಣವನ್ನು ವಿವಿಯ ಸ್ಪರ್ಶ ಎನ್ನುವ ಸಮಿತಿಗೆ ನೀಡಲಾಯಿತು. ಈ ಅಗಸ್ಟಿಗೆ ಈ ಪ್ರಕರಣ ನಡೆದು ಎರಡು ವರ್ಷಗಳಾಗುತ್ತಾ ಬಂತು. ಸ್ಪರ್ಶ ಸಮಿತಿ ಇಲ್ಲಿಯ ತನಕ ಯಾವುದೇ ವರದಿ ನೀಡಿಲ್ಲ. ಸಂತೋಷನ ಮೇಲೆ ಇಲ್ಲಿಯ ತನಕ ಯಾವುದೇ ಪ್ರಕರಣ ದಾಖಲಾಗಿಲ್ಲ. ಈ ಮಧ್ಯೆ ಇತ್ತೀಚೆಗೆ ಭೈರಪ್ಪ ನಿವೃತ್ತಿ ಹೊಂದಿದ್ದಾರೆ. ಅವರೊಂದಿಗೆ ಒಂದು ಸೆನ್ಸಿಟಿವ್ ಪ್ರಕರಣ ಕೂಡ ಹಳ್ಳ ಹಿಡಿದಿದೆ. ಅಷ್ಟಕ್ಕೂ ಈ ಪ್ರಕರಣ ಮುಚ್ಚಿ ಹಾಕಲು ತನು, ಮನ, ಧನ ಹಾಕಿ ಶ್ರಮಿಸಿದ ಯಾರಿಗೂ ಮಾನವೀಯತೆನೆ ಇಲ್ವಾ ಎನ್ನುವ ಪ್ರಶ್ನೆ ಉಳಿದಿದೆ. ಒಂದು ವೇಳೆ ತಮ್ಮ ಮನೆಯ ಸ್ನಾನಗೃಹ, ಶೌಚಾಲಯದಲ್ಲಿ ಯಾರಾದರೂ ಮೊಬೈಲ್ ಕ್ಯಾಮೆರಾ ಇಟ್ಟು ವಿಡಿಯೋ ಮಾಡಿದಿದ್ದರೆ ಹೀಗೆ ಎಲ್ಲರೂ ಅದನ್ನು ಮುಚ್ಚಿಹಾಕುತ್ತಿದ್ದರಾ? ಒಟ್ಟಿನಲ್ಲಿ ಸಂತೋಷ ಪ್ರಕರಣ ಇಂತಹದೇ ಕೆಟ್ಟ ಮನಸ್ಸಿನ ಬೇರೆಯವರಿಗೆ ಹೀಗೆ ಮಾಡಲು ಭೈರಪ್ಪ ಅಂಡ್ ಟೀಮ್ ಧೈರ್ಯ ಕೊಟ್ಟ ಹಾಗೆ ಆಗಿದೆ. ಹುಡುಗಿಯರೇ ನಿಮ್ಮ ಹುಶಾರಿನಲ್ಲಿ ನೀವಿರಿ ಎನ್ನುವುದು ನಮ್ಮ ಕಳಕಳಿ!
Leave A Reply