ರಾಹುಲ್ ಗಾಂಧಿ ಮಾಡಿದ ರಾಫೆಲ್ ಸವಾಲಿಗೆ ಯಡಿಯೂರಪ್ಪ ಹೇಗೆ ಟಾಂಗ್ ನೀಡಿದ್ದಾರೆ ಗೊತ್ತಾ?

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಪೆಟ್ರೋಲ್ ಕೆಜಿ ಲೆಕ್ಕದಲ್ಲಿ ಸಿಗುತ್ತದೋ, ಲೀಟರ್ ಲೆಕ್ಕದಲ್ಲಿ ಸಿಗುತ್ತದೋ ಗೊತ್ತಿಲ್ಲ. ಅದರೆ ಅವರು ಭಾಷಣಕ್ಕೆ ನಿಂತರೆ ಮಾತ್ರ ದೇಶದ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ. ಆದರೆ ಹಾಗೆ ಮಾತನಾಡುವಾಗ ಅಭಿವೃದ್ಧಿಗಿಂತ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುವುದರಲ್ಲೇ ಕಾಲ ಕಳೆದುಬಿಡುತ್ತಾರೆ.
ಯಾವುದೇ ದಾಖಲೆ, ಅಂಕಿ-ಅಂಶ ಇಲ್ಲದೆ ವೃಥಾ ಆರೋಪ ಮಾಡುವಲ್ಲಿ ರಾಹುಲ್ ಗಾಂಧಿ ನಿಸ್ಸೀಮರಾಗಿದ್ದು, ಇತ್ತೀಚೆಗೆ ಭಾರತ ಸರ್ಕಾರ 2015ರಲ್ಲಿ ಫ್ರಾನ್ಸ್ ನೊಂದಿಗೆ ಮಾಡಿಕೊಂಡಿರುವ ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಹಗರಣವಾಗಿದೆ ಎಂದು ರಾಹುಲ್ ಗಾಂಧಿಯವರು ಹಲವು ತಿಂಗಳಿಂದ ಆರೋಪ ಮಾಡುತ್ತಲೇ ಇದ್ದಾರೆ. ಆದರೆ ಇದುವರೆಗೂ ಹೇಗೆ ಹಗರಣವಾಗಿದೆ ಎಂಬ ಕುರಿತು ಅಧಿಕೃತ ದಾಖಲೆಯನ್ನೇ ಬಿಡುಗಡೆ ಮಾಡಿಲ್ಲ. ಬರೀ ಆರೋಪವನ್ನಷ್ಟೇ ಮಾಡಿದ್ದಾರೆ.
ಅಷ್ಟೇ ಅಲ್ಲ, ಸೋಮವಾರ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದ ರಾಹುಲ್ ಗಾಂಧಿಯವರು, ಬೀದರ್ ನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕಿದ್ದರು. ರಾಫೆಲ್ ಒಪ್ಪಂದದ ಕುರಿತು ನನ್ನ ಜತೆ ಚರ್ಚೆಗೆ ಬನ್ನಿ ನರೇಂದ್ರ ಮೋದಿ ಅವರೇ ಎಂದು ಗುಟುರು ಹಾಕಿದ್ದರು.
ಆದರೆ ರಾಹುಲ್ ಗಾಂಧಿಯವರ ಸವಾಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟಾಂಗ್ ನೀಡಿದ್ದು, ಭಾರತ ಪ್ರಸ್ತುತ ವಿಶ್ವದ 6ನೇ ಬೃಹತ್ ವಿತ್ತೀಯ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿದೆ. ಮೋದಿ ಸರ್ಕಾರದ ನೇತೃತ್ವದಲ್ಲೇ ಮೂರನೇ ಸ್ಥಾನಕ್ಕೂ ಹೋಗುತ್ತದೆ. ಹಾಗಾಗಿ ರಾಹುಲ್ ಗಾಂಧಿಯವರು ಇಂಥ ಸವಾಲು ಹಾಕುವ ಮುನ್ನ ತಮ್ಮ ಪಕ್ಷದ ಪರಿಸ್ಥಿತಿ ಬಗ್ಗೆ ಮೊದಲು ಅವಲೋಕನ ಮಾಡಿಕೊಳ್ಳಬೇಕು ಎಂದು ಯಡಿಯೂರಪ್ಪ ಅವರು ಟಾಂಗ್ ನೀಡಿದ್ದಾರೆ.
Leave A Reply