• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ನೇತ್ರಾವತಿ ಹಾಗು ಕುಮಾರಧಾರ ಸಹಸ್ರಲಿಂಗೇಶ್ವರದಲ್ಲಿ ಸಂಗಮ : ಭಕ್ತರಿಂದ ಗಂಗಾಪೂಜೆ

Tulunadu News Posted On August 16, 2018
0


0
Shares
  • Share On Facebook
  • Tweet It

ಮಂಗಳೂರು: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಒಂದೆಡೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಇನ್ನೊಂದೆಡೆ ಕೆಲ ಅಪರೂಪದ ವಿದ್ಯಮಾನಗಳಿಗೂ ಸಾಕ್ಷಿಯಾಗುತ್ತಿದೆ. ಸರಿಸುಮಾರು 5 ವರ್ಷಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಮುಂದೆ ಸಂಗಮಗೊಂಡಿದೆ.

ಸತತವಾಗಿ ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗಿದ್ದರೂ, ಕುಮಾರಧಾರ ಮತ್ತು ನೇತ್ರಾವತಿ ನದಿಗಳು ಸಂಗಮ ಆಗಿರಲಿಲ್ಲ. ಆದರೆ ರಾತ್ರಿ ನೀರಿನ ಒಳಹರಿವು ಹೆಚ್ಚಾಗುತ್ತಿದ್ದಂತೆ ನಿನ್ನೆ ರಾತ್ರಿ ನದಿಗಳ ಸಂಗಮವಾಗಿದ್ದು, ಎರಡೂ ನದಿಗಳ ನೀರು ದೇವಸ್ಥಾನದ ಒಳಗೆ ನುಗ್ಗಿ ಗರ್ಭಗುಡಿ ಪ್ರವೇಶ ಮಾಡುವ ಅಪರೂಪದ ಸನ್ನಿವೇಶಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಇದೇ ಸಂದರ್ಭದಲ್ಲಿ ಸೇರಿದ್ದ ಅರ್ಚಕರು ಮತ್ತು ಭಕ್ತವೃಂದ ಗಂಗಾಪೂಜೆ ನಡೆಸಿದರು. ಈ ಹಿಂದೆ ಕೊನೆಯ ಬಾರಿಗೆ ಅಂದರೆ 2013ರ ಜುಲೈ 4ರಂದು ಹಾಗೂ ಅದಕ್ಕೂ ಹಿಂದೆ 2008ರ ಆಗಸ್ಟ್ 13ರಂದು ಉಭಯ ನದಿಗಳು ಸಂಗಮಗೊಂಡಿದ್ದವು. ನಿನ್ನೆ ಮುಂಜಾನೆಯಿಂದಲೇ ತಟದಲ್ಲಿ ನದಿಗಳ ಸಂಗಮಕ್ಕಾಗಿ ಭಕ್ತರು ಕಾದು ಕುಳಿತಿದ್ದರು. ಇದರಿಂದಾಗಿ ಉಪ್ಪಿನಂಗಡಿಯ ಹೆದ್ದಾರಿಯಲ್ಲಿ ಭಾರೀ ವಾಹನ ದಟ್ಟಣೆ ಆಗಿತ್ತು.

0
Shares
  • Share On Facebook
  • Tweet It




Trending Now
Fortune Clock Casino No Deposit Bonus Codes
Tulunadu News May 19, 2026
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Tulunadu News May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • Fortune Clock Casino No Deposit Bonus Codes
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
  • Popular Posts

    • Fortune Clock Casino No Deposit Bonus Codes

  • Privacy Policy
  • Contact
© Tulunadu Infomedia.

Press enter/return to begin your search