ರಾಚೇನಹಳ್ಳಿ 15 ಡಿನೋಟಿಫಿಕೇಶನ್ ಪ್ರಕರಣದಲ್ಲಿ ಯಡಿಯೂರಪ್ಪ ಖುಲಾಸೆ
Posted On August 28, 2018
0

ಬೆಂಗಳೂರು: ರಾಚೇನಹಳ್ಳಿ ಡಿನೋಟಿಫಿಕೇಶನ್ ಸೇರಿದಂತೆ 15 ಪ್ರಕರಣಗಳಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಖುಲಾಸೆಗೊಂಡಿದ್ದಾರೆ. ತಾಂತ್ರಿಕ ಕಾರಣಗಳನ್ನು ನೀಡಿ ಅವರನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ ನೀಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ವಿ.ಪಾಟೀಲ್ ಅವರು ಮಂಗಳವಾರ ಈ ಕುರಿತು ಆದೇಶ ಹೊರಡಿಸಿದ್ದಾರೆ.
ರಾಚೇನಹಳ್ಳಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸಹ ಯಡಿಯೂರಪ್ಪ ಅವರನ್ನು ಖುಲಾಸೆಗೊಳಿಸಿತ್ತು. ಸಿರಾಜಿನ್ ಬಾಷಾ ಮತ್ತು ಬಾಲಕೃಷ್ಣ ಅವರು ಯಡಿಯೂರಪ್ಪ ವಿರುದ್ಧ ದೂರು ಸಲ್ಲಿಸಿದ್ದರು. ದೂರು ಸಲ್ಲಿಸುವ ಮೊದಲು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದಿಲ್ಲ ಎಂಬ ಕಾರಣ ನೀಡಿ, ಪ್ರಕರಣಗಳಿಂದ ಖುಲಾಸೆಗೊಳಿಸಲಾಗಿದೆ.
Trending Now
ಯೋಗಿ ದೇಶದ ನಂ 1 ಸಿಎಂ - ಇಂಡಿಯಾ ಟುಡೇ ಸಮೀಕ್ಷೆ
August 30, 2025
ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
August 30, 2025