• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮರಳು ಬಂಗಾರದ ರೇಟಿಗೆ ಹೋಗಿದೆ, ಕಟ್ಟಡ ಕಾರ್ಮಿಕನ ಬದುಕು ಮೂರಾಬಟ್ಟೆಯಾಗಿದೆ!!

hanumantha kamath Posted On December 11, 2018


  • Share On Facebook
  • Tweet It

ಇಡೀ ಕರಾವಳಿಯಲ್ಲಿ ಈಗ ಮರಳು ಅಥವಾ ಹೊಯಿಗೆ ಇದರದ್ದೇ ಚಿಂತೆ. ಎಲ್ಲರೂ ಇದೇ ವಿಷಯ ಮಾತನಾಡುತ್ತಿದ್ದಾರೆ. ಇದಕ್ಕೆ ಕಾರಣ ಈಗ ಮರಳು ಸುಲಭವಾಗಿ ಸಿಗುವುದಿಲ್ಲ. ಸುಲಭವಾಗಿ ಸಿಗುವಾಗ ಮರಳು ತೆಗೆಯುವವರು, ಪೊಲೀಸ್ ಅಧಿಕಾರಿಗಳು, ಗಣಿ ಇಲಾಖೆಯ ಅಧಿಕಾರಿಗಳು ಮತ್ತು ಆಡಳಿತ ಪಕ್ಷ ಅಂದರೆ ಸರಕಾರ ನಡೆಸುತ್ತಿದ್ದವರು ಎಲ್ಲರೂ ಸೇರಿ ಮರಳನ್ನು ತಟ್ಟೆ ತುಂಬಾ ತಿಂದರು.

ಎರಡು ಕೈಗಳಿಂದ ತಿಂದರು. ಅದರ ಪರಿಣಾಮವಾಗಿ ನದಿ ತೀರಗಳು ಬರಿದಾದವು. ಸೇತುವೆಗಳು ಅಸ್ಥಿರವಾದವು. ನದಿಪಾತ್ರದ ಜನ ಸಾವು, ನೋವು ನೋಡಬೇಕಾಯಿತು. ಆದ್ದರಿಂದ ಜಿಲ್ಲಾಡಳಿತಗಳು ಮರಳು ತೆಗೆಯುವುದನ್ನು ನಿರ್ಭಂದಿಸಿದವು ಮತ್ತು ಮರೆತುಬಿಟ್ಟವು. ಅದರಿಂದ ಈಗ ಸಮಸ್ಯೆ ಉದ್ಭವವಾಗಿರುವುದು. ಅಂತರ್ ಜಿಲ್ಲೆ ಮರಳು ಹೋದದ್ದೆ… ಹತ್ತು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಮರಳನ್ನು ಅಂತರ್ ಜಿಲ್ಲೆಯೊಳಗೆ ಮಾರುವಂತಿರಲಿಲ್ಲ. ಅಂತರ್ ರಾಜ್ಯದೊಳಗೆ ಕೂಡ ಮರಳು ವ್ಯವಹಾರಗಳಿರಲಿಲ್ಲ. ಇದರಿಂದ ನಮ್ಮ ಊರಿನ ಮಧ್ಯಮ ವರ್ಗದ ಜನರಿಗೆ ಮನೆ ಕಟ್ಟಲು ಕಡಿಮೆ ದರದಲ್ಲಿ ಮರಳು ಸಿಗುತ್ತಿತ್ತು. ಮನೆಗಳು ಕೂಡ ಕಡಿಮೆ ಖರ್ಚಿನಲ್ಲಿ ಬಡವರು ಕಟ್ಟಬಹುದಾಗಿತ್ತು. ಆದರೆ ಯಾವ ಪುಣ್ಯಾತ್ಮ ಯಾವ ದುರಾಸೆಗೆ ನಿಯಮದಲ್ಲಿ ಬದಲಾವಣೆ ತಂದನೋ ದೇವರಿಗೆ ಗೊತ್ತು. ಮರಳನ್ನು ಅಂತರ್ ಜಿಲ್ಲೆಯಲ್ಲಿ ಮಾರಲು ಅವಕಾಶ ಸಿಕ್ಕಿತ್ತು. ಅದರ ನಂತರ ಅಂತರ್ ರಾಜ್ಯದಲ್ಲಿಯೂ ಮರಳು ವ್ಯಾಪಾರ ಜೋರಾಗಿ ಶುರುವಾಯಿತು. ಇದರಿಂದಲೇ ನಿಜವಾದ ಸಮಸ್ಯೆ ಆರಂಭವಾಗಿರುವುದು. ಇಲ್ಲಿಂದ ಮರಳು ದೊಡ್ಡ ಪ್ರಮಾಣದಲ್ಲಿ ಬೆಂಗಳೂರಿನಂತಹ ಜಿಲ್ಲೆಗೆ ರಫ್ತಾಗಲು ಶುರುವಾಯಿತು.

ಒಂದು ಟನ್ ಮರಳು ರಫ್ತಿಗೆ ಅನುಮತಿ ಇದ್ದರೆ ಗುತ್ತಿಗೆದಾರರು ಹದಿನೈದು ಟನ್ ಮರಳು ರಫ್ತು ಮಾಡಲು ಶುರು ಮಾಡಿದರು. ಅಂತರ್ ಜಿಲ್ಲೆಗೆ ಮರಳು ರಫ್ತು ಮಾಡಲು ಸಿಕ್ಕಿದ ಅವಕಾಶವನ್ನು ಮರಳು ಸಾಗಾಟದಾರರು ಭರಪೂರವಾಗಿ ಬಳಸಿಕೊಂಡರು. ಸಾಂಪ್ರದಾಯಿಕವಾಗಿ ಮರಳು ತೆಗೆಯಬೇಕು. ದೋಣಿಗಳಲ್ಲಿ ಮಾತ್ರ ಹೋಗಿ ತೆಗೆಯಬೇಕು ಎಂದು ನಿಯಮ ಇರುವುದು. ಆದರೆ ಪರ್ಮಿಟ್ ಇರುವವರು ನೇರವಾಗಿ ನದಿ ಪಾತ್ರಕ್ಕೆ ಕೈ ಹಾಕಿದರು. ಜೆಸಿಬಿ ಬಳಸಿ ಎಷ್ಟು ಬಾಚಬಹುದೋ ಅಷ್ಟೇ ಲಾರಿಗಳಲ್ಲಿ ತುಂಬಿಸಿಕೊಂಡರು. ಇದು ಕರಾವಳಿಯ ಪರಿಸರದ ಮೇಲೆ ನಡೆದ ಮೊದಲ ಪ್ರಮುಖ ದೌರ್ಜನ್ಯ. ಮರಳು ಸಾಗಾಟದಾರರ, ಗುತ್ತಿಗೆದಾರರ ತೀಜೋರಿ ತುಂಬತೊಡಗಿತು. ಹಾಗಂತ ಈ ಗೋಲ್ ಮಾಲ್ ಯಾರಿಗೂ ಗೊತ್ತಾಗುತ್ತಿರಲಿಲ್ಲ ಎಂದಲ್ಲ. ಪೊಲೀಸರಿಗೆ ಗೊತ್ತಾಗುತ್ತಿತ್ತು. ಆದರೆ ಅವರಿಗೆ ಅಲ್ಲಲ್ಲಿ ಚೆಕ್ ಪೋಸ್ಟ್ ನಲ್ಲಿ ಸಂದಾಯವಾಗುತ್ತಿತ್ತು. ಅದಕ್ಕೆ ಪೊಲೀಸ್ ಅಧಿಕಾರಿಗಳು ಮಾತನಾಡುತ್ತಿರಲಿಲ್ಲ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೂ ಇದರ ವಾಸನೆ ಗೊತ್ತಾಗಿತ್ತು. ಅವರು ಕೂಡ ಧ್ವನಿ ಎತ್ತಿ ಜೋರು ಮಾಡಬಹುದಿತ್ತು. ಆದರೆ ಅವರಿಗೆ ಎಷ್ಟು ಹೋಗಬೇಕೋ ಅಷ್ಟು ಹೋಗುವ ವ್ಯವಸ್ಥೆ ನಡೆಯಿತು. ಇದೆಲ್ಲ ದಾಟಿಯೂ ಒಬ್ಬ ದಕ್ಷ ಪೊಲೀಸ್ ಅಧಿಕಾರಿ ಲಾರಿಗಳನ್ನು ಹಿಡಿದರೆ ಕಳೆದ ಬಾರಿ ಅಧಿಕಾರ ಮಾಡುತ್ತಿದ್ದ ರಾಜ್ಯ ಸರಕಾರದ ಜನಪ್ರನಿಧಿಗಳು ಒತ್ತಡ ಹಾಕುತ್ತಿದ್ದರು. ಅವರಿಗೂ ಕಾಲಕಾಲಕ್ಕೆ ಕಪ್ಪ ಸಂದಾಯವಾಗುತ್ತಿತ್ತು. ಅಲ್ಲಿಗೆ ಎಲ್ಲವೂ ಯೋಜನಾಬದ್ಧವಾಗಿ ನಡೆಯಿತು. ಉತ್ತರ ಕರ್ನಾಟಕದ ಕಾರ್ಮಿಕರ ಗತಿ… ಬೆಂಗಳೂರಿನಲ್ಲಿ ಇಲ್ಲಿಂದ ಹೋದ ಹತ್ತು ಟನ್ ಮರಳಿಗೆ ಕಣ್ಣು ಮುಚ್ಚಿ ಇಪ್ಪತ್ತು ಸಾವಿರ ರೂಪಾಯಿ ಸಿಗುತ್ತಿತ್ತು. ಹಾಗಿರುವಾಗ ಯಾರೂ ತಾನೆ ಸ್ಥಳೀಯರಿಗೆ ಅದೇ ಮರಳನ್ನು ಎಂಟು ನೂರು ರೂಪಾಯಿಗಳನ್ನು ಒಪ್ಪುತ್ತಾನೆ. ಇಲ್ಲಿ ಕೂಡ ಮರಳಿನ ದರ ಹತ್ತು ಟನ್ ಗೆ ನಾಲ್ಕೈದು ಸಾವಿರ ಮುಟ್ಟಿತ್ತು. ನಿಯಮ ಪ್ರಕಾರ ಒಬ್ಬ ಮರಳು ತೆಗೆಯುವ ಗುತ್ತಿಗೆದಾರನಿಗೆ ತಿಂಗಳಿಗೆ ಇರುವುದು ಇಪ್ಪತ್ತಾರು ಪರ್ಮಿಟ್ ಗಳು. ಅದರಲ್ಲಿ ಅವನು ಹತ್ತು ಪರ್ಮಿಟನ್ನು ಸ್ಥಳೀಯರಿಗೆ ಕೊಡಲೇ ಬೇಕು. ಉಳಿದ ಹದಿನಾರು ಪರ್ಮಿಟನ್ನು ಬೇರೆ ಜಿಲ್ಲೆಯವರಿಗೆ ಕೊಡಬಹುದು. ಒಂದು ಪರ್ಮಿಟ್ ನಲ್ಲಿ ಮೂರು ಯೂನಿಟ್ ಮರಳನ್ನು ಮರಳನ್ನು ಮಾತ್ರ ತೆಗೆಯುವ ಅವಕಾಶವಿದೆ. ಆದರೆ ಯಾರೂ ಕೂಡ ಲೆಕ್ಕ ಪ್ರಕಾರ ನಿಯಮಬದ್ಧವಾಗಿ ಮರಳು ತೆಗೆಯಲೇ ಇಲ್ಲ. ತಮಗೆ ತೋಚಿದ್ದು ದೋಚಿದರು. ಇದಕ್ಕೆ ಒಂದಿಷ್ಟು ಪರಿಸರವಾದಿಗಳು ಧ್ವನಿ ಎತ್ತಿದರು. ಇದರ ಪರಿಣಾಮವಾಗಿ ಜಿಲ್ಲಾಡಳಿತ ಈಗ ಕಠಿಣವಾಗಿದೆ. ಆದರೆ ಯಾರೋ ಮಾಡಿದ ತಪ್ಪಿಗೆ ಈಗ ಪಡಬಾರದ ಕಷ್ಟ ಅನುಭವಿಸುತ್ತಿರುವವರು ಮಧ್ಯಮ ವರ್ಗದ ಜನ ಮತ್ತು ಬಡ ಕೂಲಿ ಕಾರ್ಮಿಕರು. ಉತ್ತರ ಕರ್ನಾಟಕದಿಂದ ಇಲ್ಲಿ ಕೆಲಸ ಹುಡುಕಿ ಬರುವ ಕಾರ್ಮಿಕರಿಗೆ ಈಗ ಕರಾವಳಿಯಲ್ಲಿ ಕೆಲಸ ಇಲ್ಲ.

ಇದರಿಂದ ಅವರು ನಿರುದ್ಯೋಗಿಗಳಾಗಿದ್ದಾರೆ. ಇವತ್ತು ಸರಿಯಾಗಬಹುದು, ನಾಳೆ ಸರಿಯಾಗಬಹುದು ಎಂದು ಕಾಯುತ್ತಿದ್ದಾರೆ. ಮರಳನ್ನು ಅವ್ಯಾಹತವಾಗಿ ತೆಗೆಯದೇ ಕಾನೂನು ಪ್ರಕಾರವಾಗಿ ತೆಗೆಯುವ ಹಾಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಅದು ಬಿಟ್ಟು ಮರಳನ್ನೇ ತೆಗೆಯುವುದು ಬೇಡಾ ಎಂದು ಹಟಕ್ಕೆ ಕುಳಿತರೆ ನಿರ್ಮಾಣ ಕಾರ್ಯಗಳ ಗತಿ ಏನು? ಇದನ್ನೆಲ್ಲ ಸರಿ ಮಾಡಬೇಕಾಗಿರುವುದು ನಮ್ಮ ಉಸ್ತುವಾರಿ ಸಚಿವರು. ಅವರು ಪಕ್ಷದ ಗೊಂದಲಗಳಲ್ಲಿ ಬ್ಯುಸಿಯಾಗಿದ್ದಾರೆ. ನಾಗರಿಕರು ವಿಪಕ್ಷ ಬಿಜೆಪಿಗೆ ಈ ಬಗ್ಗೆ ಧ್ವನಿ ಎತ್ತಲು ಒತ್ತಾಯ ಮಾಡುತ್ತಿದ್ದಾರೆ. ಬಿಜೆಪಿ ಕಡೆಯಿಂದ ಈ ಬಗ್ಗೆ ಪ್ರತಿಭಟನೆ ಹಲವು ಬಾರಿ ನಡೆದಿದೆ. ಚಳಿಗಾಲದ ಅಧಿವೇಶನ ಮುಗಿಯುವ ಒಳಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಗುಡುಗಿದ್ದಾರೆ. ಶಾಸಕರಿಗೆ ಉಪವಾಸ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ರಾಜ್ಯ ಸರಕಾರ ತಂದು ಒಡ್ಡುತ್ತದಾ!!ನೋಡಬೇಕು.

  • Share On Facebook
  • Tweet It


- Advertisement -


Trending Now
ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
hanumantha kamath March 31, 2023
ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
hanumantha kamath March 30, 2023
Leave A Reply

  • Recent Posts

    • ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
    • ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
  • Popular Posts

    • 1
      ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
    • 2
      ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • 3
      ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • 4
      ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • 5
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search