• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಭಗವಾನಗೆ ಖರ್ಚು ಮಾಡುವ ಹಣದಲ್ಲಿ ಐವತ್ತು ರೈತರ ಸಾಲಮನ್ನಾ ಮಾಡಬಹುದಲ್ಲ ಸಿಎಂ!!

Tulunadu News Posted On December 28, 2018


  • Share On Facebook
  • Tweet It

ಯೋಗಿ ಆದಿತ್ಯನಾಥ ಅವರಂತಹ ಮುಖ್ಯಮಂತ್ರಿ ಕರ್ನಾಟಕಕ್ಕೆ ಬೇಕು ಎಂದು ಅನಿಸುವುದು ಇದೇ ಸಮಯದಲ್ಲಿ. ಒಂದು ವೇಳೆ ಆದಿತ್ಯನಾಥ ತರಹದ ಮುಖ್ಯಮಂತ್ರಿ ಕರ್ನಾಟಕದ ಜನರ ನಸೀಬಲ್ಲಿ ಇದ್ದಿದ್ರೆ ಭಗವಾನ್ ಅವರಂತವರು ಇಲ್ಲಿ ಇರುತ್ತಿದ್ದರಾ ಎನ್ನುವುದು ಪ್ರಶ್ನೆ. ಸಿದ್ಧರಾಮಯ್ಯನವರನ್ನು ಬಿಡಿ, ಅವರು ನಾಸ್ತಿಕವಾದಿ. ಅವರ ಆಡಳಿತದಲ್ಲಿ ದೇವರನ್ನು ಬೈದರೆ ವೇದಿಕೆಗಳಲ್ಲಿ ಅವರ ಪಕ್ಕ ಕುಳಿತು ಪ್ರಶಸ್ತಿ ಸಿಗುತ್ತಿತ್ತು. ಆದರೆ ಈಗ ಇರುವುದು ಕುಮಾರಸ್ವಾಮಿ ಸರಕಾರ. ಅವರ ತಂದೆ, ತಾಯಿ, ರೇವಣ್ಣ ಎಲ್ಲರೂ ದೇವರ ಭಕ್ತರು. ಹೀಗಿರುವಾಗ ಒಬ್ಬ ವ್ಯಕ್ತಿ ಶ್ರೀರಾಮಚಂದ್ರ ದೇವರನ್ನು ಹೀನಾಯವಾಗಿ ಟೀಕಿಸುತ್ತಿದ್ದರೆ ಕನಿಷ್ಟ ದೇವೆಗೌಡರಿಗಾದರೂ ಅಸಹ್ಯವಾಗಬಾರದೇ. ಅವರು ಕೋಪದಲ್ಲಿ ಭಗವಾನ್ ಅವರನ್ನು ಶೂಟೌಟ್ ಮಾಡಿ ಎಂದು ಹೇಳುವುದು ಬೇಡಾ, ಕನಿಷ್ಟ ಭಗವಾನ್ ಮೇಲೆ ಕೇಸು ದಾಖಲಿಸಿ ಎಂದು ಹೇಳಬಾರದೇ. ಇಲ್ಲ, ಇವರು ಹೇಳಲ್ಲ. ಯಾಕೆಂದರೆ ಹಾಗೆ ಭಗವಾನ್ ಮೇಲೆ ಕೇಸ್ ದಾಖಲಿಸಿ ಜೈಲೊಳಗೆ ತಳ್ಳಿದರೆ ಜೆಡಿಎಸ್ ಗೆ ಮುಸ್ಲಿಮರ ವೋಟ್ ತಪ್ಪಿ ಹೋಗುತ್ತದೆ. ಆ ಕಾರಣದಿಂದ ಅವರು ಸುಮ್ಮನಿದ್ದಾರೆ. ಯಾವಾಗ ಭಗವಾನ್ ವಿರುದ್ಧ ಮುಸ್ಲಿಮರೇ ಎದ್ದು ನಿಂತು “ಭಗವಾನ್ ನೀವು ಹೆಚ್ಚು ಬೊಗಳುವುದು ಬೇಡಾ, ವಿನಾಶ ಕಾಲೇ ವಿಪರೀತ ಬುದ್ಧಿ ಎನ್ನುತ್ತಾರೆ. ನೀವು ಹಾಗೆ ಹೇಳಿ ನಮಗೆ ಸಂತೋಷ ಆಗುತ್ತದೆ ಎಂದು ಅಂದುಕೊಳ್ಳುವುದು ಬೇಡಾ” ಎಂದು ಹೇಳಲಿ ನೋಡೋಣ. ಭಗವಾನಿದು ಎಲ್ಲವೂ ನಿಂತು ಬಿಡುತ್ತದೆ.

ಇದೊಂದು ಅಪಾಯಕಾರಿ ಗೀಳು…

ಅಷ್ಟಕ್ಕೂ ಭಗವಾನ್ ಯಾಕೆ ಹಾಗೆ ಬರೆಯುತ್ತಾರೆ. ಇದೊಂದು ಗೀಳು. ತಾನು ಪ್ರಚಾರದಲ್ಲಿ ಇರಬೇಕು ಎನ್ನುವ ಹಂಬಲ. ತಾನು ಏನು ಹೇಳಿದರೂ ಸುದ್ದಿಯಾಗುತ್ತೆ ಎನ್ನುವ ಚಪಲ. ಎಲ್ಲಕ್ಕಿಂತ ಹೆಚ್ಚಾಗಿ ತಾನು ಹಾಗೆ ಹೇಳಿ, ಹೀಗೆ ಬರೆದರೆ ಯಾರಾದರೂ ನಾಲ್ಕು ಬಿಸ್ಕಿಟ್ ಬಿಸಾಡುತ್ತಾರೆ ಎನ್ನುವ ಹಂಬಲ. ಒಂದು ವೇಳೆ ದೇವರ ಬಗ್ಗೆ ವಿಶ್ಲೇಷಣೆ ಮಾಡುವುದೇ ಆದರೆ ಎಲ್ಲಾ ಧರ್ಮದವರದ್ದು ಆಗಿ ಬಿಡಲಿ. ಒಂದು ದಿನದ ಒಂದು ಕಾರ್ಯಕ್ರಮ ಇಡೋಣ. ಅಲ್ಲಿ ಎಲ್ಲಾ ಧರ್ಮದ ಪಂಡಿತರು ಬರಲಿ. ಅವರು ತಮ್ಮ ಧರ್ಮ, ಇನ್ನೊಂದು ಧರ್ಮದ ಬಗ್ಗೆ ವಿಶ್ಲೇಷಣೆ ಮಾಡಲಿ. ಅದು ಮುಗಿದ ಬಳಿಕ ಮುಂದಿನ ದಿನಗಳಿಂದ ಯಾರೂ ಯಾವ ಧರ್ಮದ ಬಗ್ಗೆ ಕೀಳಾಗಿ ಮಾತನಾಡಬಾರದು ಎನ್ನುವ ಫರ್ಮಾನು ಹೊರಡಿಸಲಿ. ನಂತರ ಎಲ್ಲರೂ ಅವರಷ್ಟಕ್ಕೆ ಹೋಗಲಿ. ಆದರೆ ಈ ಭಗವಾನ್ ನಂತವರು ತಮ್ಮ ಮನೆಯ ಕೋಣೆಯಲ್ಲಿ ನಾಲ್ಕು ಗೋಡೆಯ ಮಧ್ಯೆ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿಯೋ, ಪತ್ರಿಕೆಗಳಲ್ಲಿಯೋ ಬರುವಂತೆ ಮಾಡುತ್ತಾರೆ. ಟಿವಿಗಳ ಕ್ಯಾಮೆರಾದೆದುರಿಗೆ ಮಾತನಾಡುತ್ತಾರೆ. ನಂತರ ಮನೆಯಲ್ಲಿ ಕುಳಿತು ತಮಾಷೆ ನೋಡುತ್ತಾರೆ. ಇವರನ್ನು ಇದಕ್ಕಾಗಿಯೇ ಬಳಸಲಾಗುತ್ತದೆ. ಒಂದು ವೇಳೆ ಭಗವಾನ್ ತಾವು ಹೇಳುವುದು ಸತ್ಯ. ಒಂದು ವೇಳೆ ತಮಗೆ ಈ ಬಗ್ಗೆ ಯಾರಾದರೂ ಸವಾಲು ಹಾಕಬಹುದು. ಬಹಿರಂಗವಾಗಿ ವೇದಿಕೆಯಲ್ಲಿ ಚರ್ಚೆಗೆ ಬರಲಿ ಎಂದು ಹೇಳಲಿ ನೋಡೋಣ. ಅವರಿಗಿಂತ ಎಷ್ಟೋ ಪಟ್ಟು ಹೆಚ್ಚು ಜ್ಞಾನವಿರುವ ಹಿಂದೂ ಪಂಡಿತರು ಬಂದು ಅವರನ್ನು ನಿಮಿಷಗಳೊಳಗೆ ಸೋಲಿಸಬಲ್ಲರು. ಒಂದು ವೇಳೆ ಭಗವಾನ್ ಸೋತರೆ ಮತ್ತೆಂದೂ ಹಿಂದೂ ದೇವರ ಬಗ್ಗೆ ಮಾತನಾಡಬಾರದು ಎನ್ನುವ ಚರ್ಚೆ ಇಟ್ಟುಕೊಂಡೇ ಕಾರ್ಯಕ್ರಮ ನಡೆಯಬೇಕು.

ಗನ್ ಮ್ಯಾನ್ ಯಾಕೆ…

ಇನ್ನು ತಮ್ಮ ಪಕ್ಷದ ಮುಖಂಡರೊಬ್ಬರು ಕೊಲೆಯಾದಾಗ ಶೂಟೌಟ್ ಮಾಡಿ ಎಂದು ಯಾರಿಗೋ ಫೋನ್ ಮಾಡಿ ಹೇಳುವಾಗ ಆಕ್ರೋಶ ಇತ್ತೆ ವಿನ: ಬೇರೆ ಏನೂ ಅಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಹಾಗಾದರೆ ನಿಮ್ಮ ಮನೆಯಲ್ಲಿಯೂ ಶ್ರೀ ರಾಮಚಂದ್ರ, ಸೀತಾಮಾತೆಯ ಫೋಟೋ ನೀವು ದೇವರ ಕೋಣೆಯಲ್ಲಿ ಇಟ್ಟಿದ್ದೀರಿ, ತಾನೆ. ಆ ದೇವರುಗಳನ್ನು ಭಗವಾನ್ ಎಂದು ಹೆಸರಿಟ್ಟುಕೊಂಡವನೊಬ್ಬ ಶ್ರೀರಾಮ ಕಳ್ಳು ಕುಡಿಯುತ್ತಾನೆ, ಸೀತೆಗೂ ಕಳ್ಳು ಕುಡಿಸಿದ್ದಾನೆ. ಅವನ ಎದುರು ಡ್ಯಾನ್ಸ್ ಮಾಡುವವರು ಇರುತ್ತಿದ್ದರು ಎಂದು ಹೇಳುವಾಗ ನಿಮಗೆ ಏನೂ ಅನಿಸುತ್ತಿಲ್ಲವೇ ಅಥವಾ ದೇವರಿಗಿಂತ ನಿಮಗೆ ವೋಟ್ ಬ್ಯಾಂಕ್ ಮುಖ್ಯವಾಯಿತಾ ಮುಖ್ಯಮಂತ್ರಿಗಳೇ?
ಮುಖ್ಯಮಂತ್ರಿಗಳೇ ನೀವು ಕಡೆ ಪಕ್ಷ ಒಂದು ಕೆಲಸ ಮಾಡಬಹುದು. ಅದೇನೆಂದರೆ ಭಗವಾನ್ ಅವರಿಗೆ ಪತ್ರ ಬರೆದು “ನೀವು ಹೀಗೆ ಅಸಭ್ಯವಾಗಿ ಮಾತನಾಡಿದ ಕಾರಣ ಸಮಾಜದಲ್ಲಿ ಶಾಂತಿ ಹಾಳಾಗುತ್ತದೆ. ನೀವು ನಿಮಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದೀರಿ. ಅದು ಹೀಗೆ ಅಸಂಬದ್ಧವಾಗಿ ಮಾತನಾಡಿದ ಕಾರಣ ಬಂದಿದೆ. ಇಸ್ಲಾಂ ಧರ್ಮದ ಬಗ್ಗೆ ವಿಶ್ಲೇಷಣೆ ಮಾಡಿದವರನ್ನು ನಾವು ರಾತ್ರೋರಾತ್ರಿ ಬಂಧಿಸುತ್ತೇವೆ. ನಿಮ್ಮನ್ನು ಬಂಧಿಸುವುದಕ್ಕೆ ಮನಸ್ಸು ಬರುವುದಿಲ್ಲ. ಯಾಕೆಂದರೆ ಅದು ನಮ್ಮ ಪಕ್ಷದ ಸಿದ್ಧಾಂತ. ಆದರೆ ನನ್ನ ಒಳಮನಸ್ಸು ನಿಮ್ಮ ಬರವಣಿಗೆ, ಹೇಳಿಕೆಯಿಂದ ನೊಂದಿದೆ. ಆದ್ದರಿಂದ ನಿಮಗೆ ಕೊಟ್ಟಿರುವ ಗನ್ ಮ್ಯಾನ್ ಮತ್ತು ಪೊಲೀಸರ ಸರಣಿಯಲ್ಲಿ ಕಾವಲು ಹಿಂದಕ್ಕೆ ಪಡೆದುಕೊಳ್ಳುತ್ತೇನೆ. ನಿಮಗೆ ರಕ್ಷಣೆ ಕೊಡುವ ವಿಚಾರದಲ್ಲಿ ನಮ್ಮ ಸರಕಾರ ಇಲ್ಲಿಯ ತನಕ ಖರ್ಚು ಮಾಡಿದ ಹಣದಲ್ಲಿ ಇಪ್ಪತ್ತು ಮಂದಿ ರೈತರ ಸಾಲ ಬರಿಸಬಹುದಿತ್ತು. ಇನ್ನು ನಾವು ಹಣ ವೇಸ್ಟ್ ಮಾಡುವುದಿಲ್ಲ. ನಿಮಗೆ ರಕ್ಷಣೆ ಬೇಕಾದರೆ ನೀವೆ ಹಣ ಪಾವತಿಸಿ ಗನ್ ಮ್ಯಾನ್ ತರಿಸಿಕೊಳ್ಳಿ” ಎಂದು ಸಿಎಂ ಹೇಳಲಿ ನೋಡೋಣ. ಭಗವಾನಿದ್ದು ಎಲ್ಲವೂ ನಿಂತುಬಿಡುತ್ತದೆ. ಆತನಿಗೆ ಗೊತ್ತಿದೆ. ತಾನು ದೇವರಿಗೆ ಬೈಯದಿದ್ದರೆ ತನಗೆ ಜೀವ ಬೆದರಿಕೆ ಯಾರೂ ಹಾಕಲ್ಲ. ಜೀವ ಬೆದರಿಕೆ ಇರದಿದ್ದರೆ ಗನ್ ಮ್ಯಾನ್ ಇರಲ್ಲ. ಗನ್ ಮ್ಯಾನ್ ಇಲ್ಲದಿದ್ದರೆ ಖದರ್ ಕಡಿಮೆಯಾಗುತ್ತದೆ. ಖದರ್ ಕಡಿಮೆಯಾದರೆ ಹೊಟ್ಟೆಪಾಡಿಗೆ ಏನು ಮಾಡುವುದು, ಉಪವಾಸ ಮಲ್ಕೊಳ್ಳುವುದಾ

  • Share On Facebook
  • Tweet It


- Advertisement -


Trending Now
ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
Tulunadu News March 30, 2023
ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
Tulunadu News March 29, 2023
Leave A Reply

  • Recent Posts

    • ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
  • Popular Posts

    • 1
      ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • 2
      ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • 3
      ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • 4
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • 5
      ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search