ಮಂಗಳೂರಿನಲ್ಲಿ ಬ್ಯಾರಿಕೇಡ್ ಬರೆಯುವವರ ಪ್ರಮಾದದಿಂದ ಘನತೆಗೆ ಧಕ್ಕೆ!
ಹ್ಯಾಂಗ್ ಹಿಮ್, ನಾಟ್ ಲಿವ್ ಹಿಮ್ ಎಂದು ನ್ಯಾಯಾಧೀಶರು ಒಬ್ಬ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದರು. ಆದರೆ ಕೆಳಗೆ ಅವರ ಮಾತುಗಳನ್ನು ಟೈಪ್ ಮಾಡುತ್ತಿದ್ದ ಕ್ಲಾರ್ಕ್ ಟೈಪ್ ಮಾಡುವಾಗ ಒಂದು ಕೊಮಾ ಹಾಕುವುದು ಒಂದು ಶಬ್ದ ಆಚೀಚೆ ಆದ ಕಾರಣ ಅವನನ್ನು ಗಲ್ಲಿಗೇರಿಸಬೇಕಿದ್ದ ಜೈಲಿನವರು ಆರೋಪಿಯನ್ನು ಬಿಟ್ಟು ಕಳುಹಿಸಿದರು. ನಂತರ ಆರೋಪಿ ಯಾರ ಕೈಗೂ ಸಿಗಲಿಲ್ಲ. ಅಷ್ಟಕ್ಕೂ ಕ್ಲಾರ್ಕ್ ಮಾಡಿದ್ದು ಹ್ಯಾಂಗ್ ಹಿಮ್ ನಾಟ್, ಲಿವ್ ಹಿಮ್.
ಆದ್ದರಿಂದ ಒಂದು ಕೊಮಾ ಹೇಗೆ ಆಂಗ್ಲಭಾಷೆಯಲ್ಲಿ ಆಚೀಚೆ ಆಗಿ ಒಬ್ಬನ ಪ್ರಾಣವನ್ನು ಉಳಿಸಲೂಬಹುದು, ಅದೇ ರೀತಿಯಲ್ಲಿ ಕೊನೆಗಾಣಿಸಲೂ ಬಹುದು. ಒಂದು ವೇಳೆ ನ್ಯಾಯಾಧೀಶರು ಆ ಆರೋಪಿಯನ್ನು ಬಿಟ್ಟುಬಿಡಬೇಕೆಂದು ನಿರ್ಧರಿಸಿ ಹ್ಯಾಂಗ್ ಹಿಮ್ ನಾಟ್, ಲಿವ್ ಹಿಮ್ ಎಂದು ಹೇಳಿದ್ದಲ್ಲಿ, ಅದೇ ಕ್ಲಾರ್ಕ್ ಕೊಮಾ ಆಚೀಚೆ ಮಾಡಿದ್ದಲ್ಲಿ ಏನಾಗುತ್ತಿತ್ತು. ಆದ್ದರಿಂದ ನಾವು ಬರೆಯುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಆದರೆ ಯಾವನೋ ಒಬ್ಬ ಪೇಂಟರ್ ಮಾಡಿದ ತಪ್ಪಿನಿಂದಾಗಿ ಮಂಗಳೂರಿನ ಪೊಲೀಸರ ಘನತೆಗೆ ದಕ್ಕೆ ಬರುವಂತಹ ಕೆಲಸ ನಡೆದು ಹೋಗಿದೆ. ನೀವು ಎಂಪಾಯರ್ ಮಾಲ್ ಮತ್ತು ಟಿಎಂಎ ಪೈ ಹಾಲ್ ಮಧ್ಯದ ರಸ್ತೆಯಿದೆಯಲ್ಲ, ಅಲ್ಲಿ ಕೆಲವು ಬ್ಯಾರಿಕೇಡ್ ಗಳನ್ನು ಇಡಲಾಗಿದೆ. ಅಂದರೆ ಅಲ್ಲಿ ಟಿಎಂಎ ಪೈ ಹಾಲ್ ನ ಗೋಡೆಗೆ ತಾಗಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡಬಾರದು ಎನ್ನುವ ಉದ್ದೇಶ. ಆದರೆ ಅಲ್ಲಿರುವ ಬ್ಯಾರಿಕೇಡ್ ನಲ್ಲಿ ಬರೆದಿರುವ ಅಕ್ಷರಗಳನ್ನು ಸೂಕ್ಷ್ಮವಾಗಿ ನೋಡಿ. ಮಂಗಳೂರು ನಗರ ಪೋಲಿಸ್ ಎಂದಾಗಿದೆ. ಇದರ ಅರ್ಥ ಏನು ಎಂದರೆ ಮಂಗಳೂರು ನಗರ ಪೋಲಿಗಳು. ಅಂದರೆ ಆ ಬ್ಯಾರಿಕೇಡ್ ಹಾಕಿರುವುದು ಮಂಗಳೂರು ನಗರ ಪೋಲಿಗಳು ಎಂದು ಆಗಿರುವುದರಿಂದ ಪೊಲೀಸರೆಲ್ಲಿ, ಪೋಲಿಗಳೆಲ್ಲಿ. ಪೊಲೀಸರ ಘನತೆಗೆ ಕುಂದು ತರುವ ಕೆಲಸ ಇದು ಹೌದಾ, ಅಲ್ಲವಾ? ಪೋಲಿಗಳ ಮೈಚಳಿ ಬಿಡಿಸುವ ಪೊಲೀಸ್ ಶಬ್ದದಲ್ಲಿ “” ಆಚೀಚೆ ಆದ ಕಾರಣ ಅದರ ಅರ್ಥವೇ ಬದಲಾಗಿ ಹೋಗಿದೆ.
ಮೇಲ್ನೋಟಕ್ಕೆ ಇದು ತಕ್ಷಣ ಮನಸ್ಸಿಗೆ ಹೋಗುವುದಿಲ್ಲವಾದರೂ ಕನ್ನಡದ ಬಗ್ಗೆ ಒಂದಿಷ್ಟು ಗೊತ್ತಿದ್ದವರಿಗೆ ಈ ಬೋರ್ಡ ನೋಡಿದರೆ ನಗು ಬರದೇ ಇರುವುದಿಲ್ಲ. ಹಾಗಂತ ಮಂಗಳೂರಿನ ಎಲ್ಲಾ ಕಡೆ ಬೋರ್ಡ್ ಬರೆಯುವವರು ಒಬ್ಬರೇ ಇಲ್ಲದ ಕಾರಣ ಸಾರಾಸಗಟಾಗಿ ಈ ಪರಿ ಅಪಾರ್ಥ ಆಗುವುದು ತಪ್ಪಿದೆ. ಇಲ್ಲದೆ ಹೋದರೆ ಮಂಗಳೂರಿನ ಅಷ್ಟೂ ಪೋಲಿಸ್ ಎಂದು ಇದ್ದ ಕಡೆ ಪೊಲೀಸ್ ಎಂದು ಬದಲಾಯಿಸಬೇಕಿತ್ತು. ಆದರೆ ಸದ್ಯಕ್ಕಂತೂ ನಮ್ಮ ಕಣ್ಣಿಗೆ ಬಿದ್ದದ್ದು ಈ ಬೋರ್ಡ ಮಾತ್ರ. ಆದಷ್ಟು ಬೇಗ ಈ ಬೋರ್ಡನ್ನು ಬದಲಾಯಿಸುವುದು ಒಳಿತು ಮತ್ತು ಆ ಬೋರ್ಡನ್ನು ಬರೆದವನಿಗೆ ಕರೆದು ಬುದ್ಧಿವಾದ ಹೇಳುವುದು ಒಳಿತು. ಇಲ್ಲದಿದ್ರೆ ತಾನು ಮಾಡಿದ್ದೆ ಸರಿ ಎಂದು ಅವನು ಬೇರೆ ಕಡೆ ಹಾಗೆ ಬರೆಯುತ್ತಾ ಹೋದರೆ ಅದರಿಂದ ಆಗುವುದು ಓದುವವರಿಗೆ ಪುಕ್ಕಟೆ ಮನೋರಂಜನೆ ವಿನ: ಬೇರೆ ಏನೂ ಅಲ್ಲ. ಇನ್ನು ಈ ಪ್ಲೆಕ್ಸ್, ಬ್ಯಾನರ್ ಮತ್ತು ಬ್ಯಾರಿಕೇಡ್ ಪೇಂಟ್ ಮಾಡುವ, ಡಿಸೈನ್ ಮಾಡುವ ಜನರಿಗೆ ಕನ್ನಡದ ಹಿಡಿತ ಚೆನ್ನಾಗಿರಬೇಕು. ಆದರೆ ಇತ್ತೀಚೆಗೆ ಈ ಕ್ಷೇತ್ರ ಮಾತ್ರವಲ್ಲ, ಮಾಧ್ಯಮರಂಗಕ್ಕೂ ಕಾಲಿಡುವ ಯುವ ಜನಾಂಗ ಇಂತಹ ಅನೇಕ ತಪ್ಪುಗಳನ್ನು ಮಾಡಿ ಮುಜುಗರಕ್ಕೆ ಈಡು ಮಾಡುತ್ತದೆ. ಆ ನಿಟ್ಟಿನಲ್ಲಿ ಕಾಪಿ ರೈಟರ್ ಅವರ ಜವಾಬ್ದಾರಿ ದೊಡ್ಡದು. ಸದ್ಯಕ್ಕಂತೂ ಈ ಬ್ಯಾರಿಕೇಡ್ ಹಾಗೆ ನಿಂತಿದೆ. ಮುಂದಿನ ಬಾರಿ ಪೇಂಟ್ ಮಾಡುವಾಗ ಗಮನವಿಟ್ಟು ಕೆಲಸ ಮಾಡುವಂತಹ ಸದ್ಭುದ್ಧಿ ಆ ಪೆಂಟರ್ ಗೆ ಬರಲಿ ಎಂದು ಹಾರೈಕೆ
Leave A Reply