ಜನವರಿ 26 ರಂದು ಮಂಗಳೂರಿನಲ್ಲಿ ಮಿಸ್ಟರ್ ಮತ್ತು ಮಿಸ್ ಜಿ.ಎಸ್.ಬಿ ಸ್ಪರ್ಧೆ
ದೇಶ ವಿದೇಶದಲ್ಲಿರುವ ಜಿ.ಎಸ್.ಬಿ ಸಮಾಜ ಬಾಂಧವರಿಗಾಗಿ ಮಿಸ್ಟರ್ ಜಿ.ಎಸ್.ಬಿ, ಮಿಸ್ ಜಿ.ಎಸ್.ಬಿ ಹಾಗೂ ಅಮೇಜ್ಹಿಂಗ್ ಕಪಲ್ ಸ್ಪರ್ಧೆ ಇದೇ ಜನವರಿ 26 ರಂದು ಬೆಳಿಗ್ಗೆ 9 ರಿಂದ ಅಂದು ರಾತ್ರಿಯವರೆಗೆ ಮಂಗಳೂರು ಕೊಡಿಯಾಲ್ ಬೈಲ್ ಸಮೀಪದ ರಮಣ ಪೈ ಸಭಾಂಗಣದಲ್ಲಿ ನಡೆದಿದೆ.
ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ ರೇಂಪ್ ವಾಕ್, ಅಡುಗೆ ಇನ್ನಿತರ ಟಾಸ್ಕ್ ಇರಲಿವೆ.ವಿಜೇತರಿಗೆ ಕಿರೀಟ, ಎಸ್ ಎಲ್ ಶೇಟ್ ಸಂಸ್ಥೆಯಿಂದ ಬಂಗಾರದ ಆಭರಣ,ಅನಘಾ ಸುಜ್ಹುಕಿ ಸಂಸ್ಥೆಯಿಂದ ಆಕರ್ಷಕ ಬೈಕ್ ಹಾಗೂ ಸ್ಪರ್ಧಾಳುಗಳೆಲ್ಲರಿಗೂ ವಿವಿಧ ಸಂಸ್ಥೆಗಳಿಂದ ಡಿಸ್ಕೌಂಟ್ ಕೂಪನ್ ಇತ್ಯಾದಿ ಅನೇಕ ಬಹುಮಾನಗಳಿವೆ. ಇದೇ ವೇದಿಕೆಯಲ್ಲಿ ಸಂಜೆ ಜಿ.ಪಿ.ಎಲ್ ಕ್ರಿಕೆಟ್ ಪಂದ್ಯಾಟದ ಜೆರ್ಸಿ ಬಿಡುಗಡೆ ಸಮಾರಂಭ ನಡೆಯಲಿದ್ದು ವೀಕ್ಷಕರಿಗೆ ಉಚಿತ ಪಾಸ್ ವ್ಯವಸ್ಥೆ ಮಾಡಲಾಗಿದೆ.ಪಾಸ್ ಪಡೆದು ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರಿಗೆ ಉಚಿತ ಊಟ,ಉಪಹಾರದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.
ಈ ಕಾರ್ಯಕ್ರಮದ ಪ್ರಧಾನ ಪ್ರಾಯೋಜಕರು ಪುಜ್ಹೊಲಾನಾ ಹೈದರಾಬಾದ್,ಲೋಟಸ್ ಚಾಕೊಲೇಟ್, ಪೈ ಸ್ವೀಟ್ಸ್ ಸಹ ಪ್ರಾಯೋಜಕರು ರಾಮದಾಸ ಕಾಮತ್ ಇನ್ಫೋಸಿಸ್, ವಿ ಬಜ್ಹಾರ್, ಜ್ಹೂಯಿಸ್ ಜಿಮ್, ಫಿನ್ ಪವರ್, ಹಾಂಗ್ಯೋ ಐಸ್ ಕ್ರೀಮ್, ಐಡಿಯಲ್ ಐಸ್ ಕ್ರೀಮ್, ದೇವಗಿರಿ ಚಾ.
ಯೂಥ್ ಆಫ್ ಜಿ.ಎಸ್.ಬಿ ಕಾರ್ಯಕ್ರಮ ಆಯೋಜಿಸುತ್ತಿದ್ದು ಕಾರ್ಯಕ್ರಮದ ಉಚಿತ ಪಾಸ್ ನಗರದ ಬಲ್ಮಠದಲ್ಲಿರುವ ಯುನೈಟೆಡ್ ಟೆಲಿಕಮ್ಯೂನಿಕೇಶನ್ ನಲ್ಲಿ ದೊರೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
Leave A Reply