• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ವೀರಪ್ಪ ಮೊಯಿಲಿಗೆ ಬಕೆಟ್ ಹಿಡಿದ ಖಾನ್ ರಿಂದ ಎರಡನೇ ಬಾರಿ ರವೀಂದ್ರ ಕಲಾಭವನ ಉದ್ಘಾಟನೆ!!

Hanumantha Kamath Posted On February 25, 2019


  • Share On Facebook
  • Tweet It

ನೇರವಾಗಿ ಕೇಳಬಯಸುತ್ತೇನೆ. ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜು ಅಥವಾ ಹಿಂದಿನ ಗೌರ್ನಮೆಂಟ್ ಕಾಲೇಜಿನಲ್ಲಿರುವ ರವೀಂದ್ರ ಕಲಾಭವನವನ್ನು ಉದ್ಘಾಟಿಸಲು ಅವರು ಯಾರು? ಅವರು ಕೇಂದ್ರ ಸಚಿವರಾ, ಅವರು ಮುಖ್ಯಮಂತ್ರಿಗಳಾ ಅಥವಾ ಕನಿಷ್ಟ ನಮ್ಮ ಜಿಲ್ಲೆಯ ಸಂಸದರಾ? ಅಲ್ವಲ್ವಾ? ಅವರೀಗ ಏನೂ ಅಲ್ಲ. ಅವರು ಕೇಂದ್ರ ಸಚಿವ ಸ್ಥಾನದಿಂದ ಕೆಳಗಿಳಿದು ಐದು ವರ್ಷಗಳಾಗಿವೆ. ಮುಖ್ಯಮಂತ್ರಿಯಾದ ವರ್ಷ ಕಾಂಗ್ರೆಸ್ಸಿಗರಿಗೆ ನೆನಪಿರಲಿಕ್ಕೆ ಇಲ್ಲ. ಇನ್ನು ಅವರು ನಮ್ಮ ಜಿಲ್ಲೆಯ ಸಂಸದರಾಗಿ ಯಾವತ್ತೂ ಆಯ್ಕೆಯಾಗಿಲ್ಲ. ಹಾಗಿದ್ದರೂ ನಮ್ಮ ಜಿಲ್ಲೆಯ ಹೆಮ್ಮೆಯಾಗಿರುವ ಪಂಡಿತ್ ರವೀಂದ್ರನಾಥ ಠಾಗೋರ್ ಅವರು ಬಂದು ಹೋದ ಸವಿನೆನಪಿಗಾಗಿ ಇಟ್ಟ ಹೆಸರಿನ ಕಟ್ಟಡವೊಂದರ ಪುನಶ್ಚೇತನದ ಕಾರ್ಯಕ್ರಮಕ್ಕೆ ವೀರಪ್ಪ ಮೊಯಿಲಿ ಅವರನ್ನು ಕರೆಯುವ ಉದ್ದೇಶ ಏನಿದೆ? ಅವರಾದರೂ ನಾಚಿಕೆ ಬಿಟ್ಟು ಉದ್ಘಾಟನೆಗೆ ಬರುತ್ತಿದ್ದಾರಲ್ಲ, ಅವರಿಗಾದರೂ ತಮಗೆ ಬಕೆಟ್ ಹಿಡಿಯುವವರು ಮಾಡುತ್ತಿರುವುದು ಸರಿಯಲ್ಲ ಎಂದು ಅನಿಸುತ್ತಿಲ್ಲವೇ?

ಒಮ್ಮೆ ಭೈರಪ್ಪ ಮಾಡಿದ್ದು ಈಗ ಮತ್ತೊಮ್ಮೆ…

ಅಷ್ಟಕ್ಕೂ ರವೀಂದ್ರ ಕಲಾಭವನ ಈಗಾಗಲೇ ಉದ್ಘಾಟನೆಯಾಗಿದೆ. ಆದರೆ ವೀರಪ್ಪ ಮೊಯಿಲಿಯವರಿಂದ ಉದ್ಘಾಟನೆ ಆಗಿರಲಿಲ್ಲ ಎನ್ನುವ ಕಾರಣಕ್ಕೆ ಮತ್ತೊಮ್ಮೆ ಉದ್ಘಾಟನೆಗೊಳ್ಳುತ್ತಿದೆ. ಮಂಗಳೂರು ವಿವಿ ಕಾಲೇಜು ಸುಮಾರು ನೂರು ವರ್ಷಕ್ಕೂ ಹಿಂದಿನ ಕಾಲೇಜು. ಪಾರಂಪರಿಕ ಕಟ್ಟಡಗಳ ಶೈಲಿಯಲ್ಲಿ ಇರುವುದರಿಂದ ಆಕರ್ಷಣೆ ಉಳಿಸಿಕೊಂಡಿದೆ. ಈ ಕಾಲೇಜಿನ ಆವರಣದಲ್ಲಿರುವ ರವೀಂದ್ರ ಕಲಾಭವನ ಕೂಡ ಕಾಲೇಜಿನ ಹಾಗೆ ತೀರಾ ವಯಸ್ಸಾದ ಕಾರಣ ವಯೋಸಹಜವಾಗಿ ಶಿಥಿಲವಾಗಿದೆ. ಆ ಕಾರಣದಿಂದ ಅದನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರಕಾರದ ಯುಜಿಸಿ ಅನುದಾನ ಎರಡೂವರೆ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಆ ಹಣದಲ್ಲಿ 2017 ರ ಫೆಬ್ರವರಿಯಲ್ಲಿ ಪುನಶ್ಚೇತನ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಈ ನಡುವೆ ಏನಾಯಿತು ಎಂದರೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ, ಹಗರಣಗಳ ಸರದಾರ ಪ್ರೋ.ಕೆ.ಭೈರಪ್ಪ ಅವರು ನಿವೃತ್ತಿ ಆಗುವ ದಿನ ಹತ್ತಿರ ಬರುತ್ತಿತ್ತು. ತಾವು ನಿವೃತ್ತಿಯಾಗುವ ಒಳಗೆ ಉದ್ಘಾಟನೆ ನಡೆಯದಿದ್ದರೆ ಮಾರ್ಬಲ್ ಕಲ್ಲಿನಲ್ಲಿ ತಮ್ಮ ಹೆಸರು ಕೆತ್ತಲಾಗುವುದಿಲ್ಲ. ಹೇಗಾದರೂ ಮಾಡಿ ತಮ್ಮ ಹೆಸರು ಶಾಶ್ವತವಾಗಿ ರವೀಂದ್ರ ಕಲಾಭವನದ ಗೋಡೆಗೆ ಅಚ್ಚೊತ್ತುವ ಮಾರ್ಬಲ್ ಕಲ್ಲಿನಲ್ಲಿ ಉಳಿಯಬೇಕಾದರೆ ತಾವು ಇರುವಾಗಲೇ ಉದ್ಘಾಟನೆ ಆಗಬೇಕು ಎಂದು ಅವರು ನಿರ್ಧರಿಸಿಬಿಟ್ಟಿದ್ದರು. ಅದಕ್ಕೆ ದಿನಾಂಕವನ್ನು ಫಿಕ್ಸ್ ಮಾಡಿಬಿಟ್ಟಿದ್ದರು. ಉದ್ಘಾಟಕರಾಗಿ ಸ್ವತ: ಭೈರಪ್ಪನವರೇ ತಯಾರಾಗಿ ನಿಂತಿದ್ದರು. ಪರಮಪೂಜ್ಯ ನಿರ್ಮಲಾನಂದನಾಥ ಮಹಾಸ್ವಾಮಿಗಳ ಆರ್ಶೀವಾದ ಎಂದು ಬರೆಯಲಾಗಿತ್ತು. 2018ರ ಜೂನ್ 2 ಕ್ಕೆ ಉದ್ಘಾಟನೆಯ ದಿನ ನಿಗದಿಯಾಗಿತ್ತು. ಅದರ ಫೋಟೋವನ್ನು ಈ ಜಾಗೃತ ಅಂಕಣದೊಂದಿಗೆ ಪೋಸ್ಟ್ ಮಾಡುತ್ತಿದ್ದೇನೆ. ಬೇಕಾದರೆ ಆ ಫೋಟೋವನ್ನು ಯಾರೂ ಬೇಕಾದರೂ ಝೂಮ್ ಮಾಡಿ ನೋಡಬಹುದು. ಆವತ್ತು ಉದ್ಘಾಟನೆಯಾದ ನಂತರ ಈಗ ಅದೇ ಕಟ್ಟಡ ಮತ್ತೆ ಎಂಟು ತಿಂಗಳೊಳಗೆ ಉದ್ಘಾಟನೆಗೆ ತಯಾರಾಗಿದೆ. ಈ ಬಾರಿ ಉದ್ಘಾಟನೆಗೆ ಸಿದ್ಧರಾಗಿರುವವರು ವೀರಪ್ಪ ಮೊಯಿಲಿ. ಅದಕ್ಕೆ ನಾನು ಪ್ರಾರಂಭದಲ್ಲಿಯೇ ಹೇಳಿದ್ದು ವೀರಪ್ಪ ಮೊಯಿಲಿ ಅವರು ಉದ್ಘಾಟನೆಗೆ ಮಾಡಲು ಯಾರು?

ಹಿಂದಿನ ಮಾರ್ಬಲ್ ನಾಮಫಲಕ ಎಲ್ಲಿ ಬಿಸಾಡಿದ್ದಾರೆ…

ಇದು ಅಪ್ಪಟ ಬಕೆಟ್ ಹಿಡಿಯುವ ಕೆಲಸ. ಮಾಡುತ್ತಿರುವವರು ಎ.ಎಂ.ಖಾನ್ ಎಂಬ ಮನುಷ್ಯ. ಈ ವ್ಯಕ್ತಿಯ ಮೇಲೆ ಮಂಗಳೂರು ವಿವಿಯಲ್ಲಿ ಅನೇಕ ಭ್ರಷ್ಟಾಚಾರದ ಆರೋಪಗಳಿವೆ. ಈ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ. ಹಾಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಹಾಗೂ ಎಂಎಲ್ ಸಿ ಫಾರೂಕ್ ಅವರ ಶಿಫಾರಸ್ಸಿನಿಂದ ಖಾನ್ ಮಂಗಳೂರು ವಿವಿಯಲ್ಲಿ ಕುಲಸಚಿವರಾಗಿದ್ದಾರೆ. ಅದಕ್ಕೆ ಅವರಿಗೆ ಈಗ ಅರ್ಜೆಂಟಾಗಿ ತಮ್ಮನ್ನು ಕುಲಸಚಿವರನ್ನಾಗಿ ಮಾಡಿದ “ಕೈ”ಗಳ ಋಣ ತೀರಿಸಬೇಕಾಗಿದೆ. ಅದಕ್ಕಾಗಿ ಅವರು ವೀರಪ್ಪ ಮೊಯಿಲಿಯವರನ್ನು ಒಲೈಸುವ ಮೂಲಕ ಋಣಸಂದಾಯ ಮಾಡುತ್ತಿದ್ದಾರೆ. ಅದಕ್ಕಾಗಿ ಮಂಗಳೂರಿಗೆ ಸಂಬಂಧವೇ ಇರದ ಒಬ್ಬ ವ್ಯಕ್ತಿಯಿಂದ ಉದ್ಘಾಟನೆ ಮಾಡಿಸುತ್ತಿದ್ದಾರೆ. ಹಾಗಿದ್ದರೆ ಹಿಂದಿನ ನಾಮಫಲಕವನ್ನು ಇವರು ಎಲ್ಲಿ ಬಿಸಾಡುತ್ತಾರೋ ನೋಡಬೇಕು? ಅದರಲ್ಲಿ ಪರಮಪೂಜ್ಯ ಸ್ವಾಮೀಜಿಯವರ ಹೆಸರಿದೆ. ಇವರು ತಮ್ಮ ವರ್ಚಸ್ಸು, ಪ್ರತಿಷ್ಟೆ, ಹೆಸರಿಗಾಗಿ ಯಾರ ಹೆಸರನ್ನು ಕೂಡ ಮುಲಾಜಿಲ್ಲದೇ ಮೂಲೆಗೆ ಬಿಸಾಡುತ್ತಾರೆ ಎನ್ನುವುದು ಇದರಿಂದ ಗೊತ್ತಾಗುತ್ತದೆ. ಯಾವ ಸರಕಾರಿ ಕಟ್ಟಡವನ್ನು ಕೂಡ ವಿನಾಕಾರಣ ಎರಡೆರಡು ಬಾರಿ ಉದ್ಘಾಟನೆ ಮಾಡುವ ಸಂಪ್ರದಾಯ ಇಲ್ಲ. ಕೆಲವು ಬಾರಿ ರಾಜಕೀಯ ಕಾರಣಗಳಿಗಾಗಿ ಸೇತುವೆ, ರಸ್ತೆಗಳು ಶಿಲಾನ್ಯಾಸ, ಗುದ್ದಲಿಪೂಜೆ ಎರಡೆರಡು ಬಾರಿ ಕಾಣುವುದು ಇದೆ. ಆದರೆ ಸರಕಾರಿ ಕಾಲೇಜು ಎಂದರೆ ರಾಜಕೀಯ ಅಂಗಣ ಅಲ್ಲ. ಇಂತಹ ಕಾರ್ಯಕ್ರಮಗಳಿಗೆ ಸ್ಥಳೀಯ ಲೋಕಸಭಾ ಸದಸ್ಯರೇ ಬಾಸ್. ಅವರನ್ನು ಕಡೆಗಣಿಸಿ ಚಿಕ್ಕಬಳ್ಳಾಪುರದ ಸಂಸದರನ್ನು ಆಮದು ಮಾಡುವುದು ಎಷ್ಟು ಸಮಂಜಸ. ಯಾಕೋ, ಇತ್ತೀಚೆಗೆ ವೀರಪ್ಪ ಮೊಯಿಲಿ ಆಗಾಗ ಇತ್ತ ಕಾಣಿಸಿಕೊಳ್ಳುತ್ತಿದ್ದಾರೆ. ಅಪ್ಪಿತಪ್ಪಿ ಚಿಕ್ಕಬಳ್ಳಾಪುರ ಜೆಡಿಎಸ್ ಗೆ ಬೇಕೇ ಬೇಕು ಎಂದು ದೇವೆಗೌಡರು ಹಟ ಹಿಡಿದರೆ ಯಾವುದಕ್ಕೂ ಇರಲಿ ಎಂದು ಮಂಗಳೂರು ವಿಮಾನ ಹತ್ತುತ್ತಿರುತ್ತಾರಾ !!!

  • Share On Facebook
  • Tweet It


- Advertisement -


Trending Now
ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
Hanumantha Kamath March 30, 2023
ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
Hanumantha Kamath March 29, 2023
Leave A Reply

  • Recent Posts

    • ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
  • Popular Posts

    • 1
      ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • 2
      ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • 3
      ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • 4
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • 5
      ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search