• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸುಳ್ಳು ಕೇಸು ರಾಘವೇಂದ್ರ!!

Hanumantha Kamath Posted On May 18, 2019


  • Share On Facebook
  • Tweet It

ಕಾಶೀಮಠದ ಪರಮಪೂಜ್ಯ ಶ್ರೀಮದ್ ಸಂಯಂಮೀಂದ್ರ ತೀರ್ಥ ಸ್ವಾಮೀಜಿಯವರ ಮೇಲೆ ಕಾಶೀಮಠದ ಪರಿತ್ಯಕ್ತ ಯತಿ ರಾಘವೇಂದ್ರರು ಹಾಕಿರುವ ಸುಳ್ಳು ದೂರನ್ನು ಕೇಳಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಸಜ್ಜನ ಬಂಧುಗಳಿಗೆ, ಅಪಾರ ಭಕ್ತಾದಿಗಳಿಗೆ ತುಂಬಾ ನೋವಾಗಿದೆ. ಪ್ರಾರಂಭದಲ್ಲಿಯೇ ಇದು ಅಪ್ಪಟ ಸುಳ್ಳು ದೂರು ಎನ್ನುವುದನ್ನು ನಾನು ಖಡಾಖಂಡಿತವಾಗಿ ಹೇಳಬಲ್ಲೆ.ಅದು ಹೇಗೆ ಎನ್ನುವುದನ್ನು ನಿನ್ನೆ ವಿವರಿಸಿದ್ದೇನೆ.

ಈಗ ಅದರ ಮುಂದಿನ ಹೆಜ್ಜೆಯಾಗಿ ನಾವು ಇದನ್ನು ಹೇಗೆ ಖಂಡಿಸುವುದು ಎನ್ನುವುದರ ಬಗ್ಗೆ ಚರ್ಚೆ ಆಗಲೇಬೇಕಿತ್ತು. ಅದು ಮಂಗಳೂರಿನ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ರಾಜಾಂಗಣದಲ್ಲಿ ನಡೆಯಿತು. ಕೇರಳ, ಮಹಾರಾಷ್ಟ್ರ ಸಹಿತ ಕರ್ನಾಟಕದ ವಿವಿಧ ಬಾಗಗಳಿಂದ ಭಕ್ತರು ಬಂದು ಈ ಧರ್ಮರಕ್ಷಾ ಸಭೆಯಲ್ಲಿ ಭಾಗವಹಿಸಿದರು. ನಾನು ಕೂಡ ಕಾಶೀಮಠದ ಭಕ್ತನಾಗಿ ಈ ಸಭೆಯಲ್ಲಿ ಭಾಗವಹಿಸಿದ್ದೇನೆ. ಆಲ್ ಇಂಡಿಯಾ ಟೆಂಪಲ್ ಎಸೋಸಿಯೇಶನ್ ಈ ಸಭೆಯ ಆಯೋಜನೆ ಮಾಡಿತ್ತು. ಏಕೆಂದರೆ ಜನರಿಗೆ ಸರಿಯಾದ ಮಾಹಿತಿ ಕೊಡಬೇಕಿತ್ತು. ನಮ್ಮ ಜಿಎಸ್ ಬಿ ಸಮಾಜದ ಜನರು ಪರಮಪೂಜ್ಯ ಕಾಶೀಮಠಾಧೀಶರ ಮೇಲೆ ಧರ್ಮದ್ರೋಹಿಗಳು ಹಾಕಿರುವ ಕೇಸಿನ ವಿಷಯ ಕೇಳಿ ತಮ್ಮ ಚಿತ್ತವನ್ನು ಚಂಚಲಗೊಳಿಸಬಾರದಾಗಿತ್ತು. ಅದಕ್ಕಾಗಿ ಸತ್ಯ ವಿವರವನ್ನು ಜನರ ಮುಂದೆ ಇಡಲಾಗಿದೆ. ಮೊದಲ ಆದ್ಯತೆ ಮುಂದೇನು ಎನ್ನುವುದೇ ಆಗಿತ್ತು. ಏಕೆಂದರೆ ಜಿಎಸ್ ಬಿಗಳು ಶಾಂತಿಪ್ರಿಯರು. ತಾಳ್ಮೆ ನಮ್ಮ ರಕ್ತದಲ್ಲಿಯೇ ಇದೆ. ಆದ್ದರಿಂದ ನಾವು ಎಲ್ಲವನ್ನು ಮೌನವಾಗಿಯೇ ಸಹಿಸಿಕೊಳ್ಳುತ್ತೇವೆ. ಹಾಗಂತ ನಮಗೆ ಹೋರಾಟ ಮಾಡುವ ಶಕ್ತಿ ಇಲ್ಲ ಎಂದಲ್ಲ. ಆದರೆ ಆದಷ್ಟು ನೋವುಗಳನ್ನು ನುಂಗಿಕೊಳ್ಳುವ ತಾಕತ್ತು ಇದೆ. ಆದರೆ ಪ್ರತಿ ಬಾರಿ ಕಾಶೀಮಠಾಧೀಶರಾಗಿರುವ ಶ್ರೀಮದ್ ಸಂಯಂಮೀದ್ರ ತೀರ್ಥ ಸ್ವಾಮೀಜಿಯವರಿಗೆ ಅನಾವಶ್ಯಕವಾಗಿ ಹೀಗೆ ಕಿರಿಕಿರಿ ಉಂಟು ಮಾಡುವವರ ವಿರುದ್ಧ ಒಂದು ಅಂತಿಮ ನಿರ್ಧಾರವನ್ನು ಕೈಗೊಳ್ಳಲೇಬೇಕಿತ್ತು.

Dharma Raksha Sabha

Dharma Raksha Sabha

ಆದರೆ ಹೇಗೆ?

ರಾಘವೇಂದ್ರ ನಮ್ಮ ಮೇಲೆ ಸುಳ್ಳು ಕೇಸು ಹಾಕಿದ ಹಾಗೆ ನಾವು ಕೂಡ ಆ ವ್ಯಕ್ತಿಯ ಮೇಲೆ ಸುಳ್ಳು ಕೇಸು ಹಾಕುವುದಾ? ನಮಗೆ ರಾಘವೇಂದ್ರರ ಮೇಲೆ ಕೇಸು ಹಾಕಲು ಯಾವುದೇ ಸುಳ್ಳು ಸಂಗತಿಯನ್ನು ಹುಡುಕುವ ಅವಶ್ಯಕತೆ ಇಲ್ಲ. ಯಾಕೆಂದರೆ ಆ ಮನುಷ್ಯನ ಮೇಲೆ ಕೇಸು ಹಾಕುವುದೇ ಆದರೆ ಒಂದು ಫೈಲ್ ಗೆ ಆಗುವಷ್ಟು ವಿಷಯಗಳು ಇವೆ. ಕಾಶೀಮಠಕ್ಕೆ ಸಂಬಂಧಪಟ್ಟ ಬಂಗಾರ, ಒಡವೆಗಳನ್ನು ಸಂಪೂರ್ಣವಾಗಿ ಹಿಂತಿರುಗಿಸಬೇಕು ಎಂದು ನ್ಯಾಯಾಲಯ ಹೇಳಿದ ಮೇಲೆಯೂ ಅದನ್ನು ಮುಚ್ಚಿಟ್ಟುಕೊಂಡಿರುವ ವ್ಯಕ್ತಿಗೆ ನೈತಿಕತೆ ಇದೆಯಾ? ಇನ್ನು ಮಠದಿಂದ ಹೊರಗೆ ಹಾಕಿದ ಮೇಲೆಯೂ ಹಿರಿಯ ಸ್ವಾಮೀಜಿಗಳಾಗಿರುವ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಫೋಟೋ ಹಾಕಿ, ಮಠದ ಲಾಂಛನ ಬಳಸಿ, ಬ್ಯಾಂಕ್ ಅಕೌಂಟ್ ತೆರೆದು ಟ್ರಸ್ಟ್ ಸ್ಥಾಪಿಸಿ ಕುಳಿತಿರುವ ವ್ಯಕ್ತಿಗೆ ಹಾಗೆ ಮಾಡಬಾರದು ಎಂದು ಹೇಳಿದ ಮೇಲೆಯೂ ಇನ್ನು ಮುಂದುವರೆಸಿದರೆ ಯಾವ ಭಾಷೆ ಇದೆ ಎಂದು ಹೇಳುವುದು?

ನಾನು ಹೇಳುವುದು ಏನೆಂದರೆ…

ನಾವು ನಮ್ಮ ಸ್ವಾಮೀಜಿಗಳಿಗೆ ಸುಳ್ಳು ಕೇಸಿನ ಮೂಲಕ ಮಾನಸಿಕ ಕಿರಿಕಿರಿ ಮಾಡುವವರಿಗೆ ತಕ್ಕಪಾಠ ಕಲಿಸಬೇಕು. ಈಗ ಏನಾಗಿದೆ ಎಂದರೆ ರಾಘವೇಂದ್ರ ಸುಳ್ಳು ಕೇಸು ಹಾಕಿ ನಮ್ಮ ಚಿತ್ತಕ್ಕೆ ದಾಳಿ ಇಟ್ಟಾಗ ನಾವು ಒಟ್ಟು ಆಗಿ ಹೀಗೆ ಸಭೆ ಸೇರುವುದು ನಾಲ್ಕು ಮಾತುಗಳನ್ನು ಆಡುವುದು ನಂತರ ಅದನ್ನು ಇಲ್ಲಿಗೆ ಬಿಡುವುದು ಹೀಗೆ ಮಾಡಿರುವುದರಿಂದ ಈ ಸಮಸ್ಯೆ ಪರಿಹಾರವಾಗಲ್ಲ. ಅದಕ್ಕೆ ಒಂದೇ ದಾರಿ. ಒಂದು ಧೃಡ ನಿರ್ಧಾರ ತೆಗೆದುಕೊಂಡು ಕಾನೂನಾತ್ಮಕವಾಗಿ ಹೋರಾಡಲೇಬೇಕಿದೆ. ಅದು ಆಗದಿದ್ದರೆ ಈ ವೇದಿಕೆಯಲ್ಲಿರುವವರು ಜವಾಬ್ದಾರಿ ಎಂದು ಹೇಳಿ ಮೈಕ್ ಕೆಳಗಿಟ್ಟೆ. ನಾನು ಮಾತನಾಡಿದ ವಿಡಿಯೋ ಕ್ಲಿಪ್ ಅನ್ನು ಯಾರೋ ವೈರಲ್ ಮಾಡಿದ್ದಾರೆ. ತುಂಬಾ ಜನ ನೋಡಿ ಚೆನ್ನಾಗಿ ಮಾತನಾಡಿದ್ದಿರಿ ಎಂದು ಕಮೆಂಟ್ ಮಾಡಿದ್ದಾರೆ. ಚೆನ್ನಾಗಿ ಮಾತನಾಡುವುದು ಮುಖ್ಯವಲ್ಲ. ಸಮಸ್ಯೆ ಪರಿಹಾರವಾಗುವುದು ಮುಖ್ಯ. ಖಡಾಂಡಿತವಾಗಿ ಮಾತನಾಡದಿದ್ದರೆ ಯಾರೂ ಬಗ್ಗುವುದಿಲ್ಲ. ಅದಕ್ಕೆ ಧೃಡವಾದ ಸ್ವರದಲ್ಲಿ ಹೇಳಿದೆ, ನನ್ನದೇ ಶೈಲಿಯಲ್ಲಿ, ಇಷ್ಟವಾದವರಿಗೆ ನಾನು ಹೇಳಿದ್ದರಲ್ಲಿ ಸತ್ಯ ಇದೆ ಎಂದು ಅನಿಸಿದರೆ ಸಾಕು. ಪ್ರಯತ್ನ ಸಾರ್ಥಕ!

  • Share On Facebook
  • Tweet It


- Advertisement -


Trending Now
ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
Hanumantha Kamath June 2, 2023
ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
Hanumantha Kamath June 1, 2023
Leave A Reply

  • Recent Posts

    • ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
    • ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
  • Popular Posts

    • 1
      ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
    • 2
      ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • 3
      ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • 4
      ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • 5
      ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search