• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ದೇಶಪಾಂಡೆ ನಾಟಕದ ಅಂಕದ ಪರದೆ ಎತ್ತಲು ನಿಂತವರು ಖಾದರ್, ಐವನ್!!

Tulunadu News Posted On June 19, 2019
0


0
Shares
  • Share On Facebook
  • Tweet It

ಒಂದೋ ಅವರೇ ಸರಿ ಮಾಡಬೇಕು ಅಥವಾ ಸರಿ ಮಾಡುವವರ ಬಳಿ ಕೇಳಬೇಕು. ಎರಡೂ ಇಲ್ಲದಿದ್ದರೆ ಜನ ಅನುಭವಿಸುವುದು ತಪ್ಪುವುದಿಲ್ಲ. ಸಾಮಾನ್ಯವಾಗಿ ನಮ್ಮ ರಾಜ್ಯದ ಸಚಿವರುಗಳು ಯಾವುದಾದರೂ ಜಿಲ್ಲೆಗೆ ಪ್ರಗತಿ(!)ಪರಿಶೀಲನಾ ಸಭೆ ಎಂದು ಹೋಗುತ್ತಾರೆ. ಅಲ್ಲಿ ಅಧಿಕಾರಿಗಳು ಕೊಟ್ಟಿರುವುದನ್ನು ನೋಡುತ್ತಾರೆ. ಅದನ್ನೇ ಓದುತ್ತಾರೆ. ಅದು ಮರುದಿನದ ಪತ್ರಿಕೆಗಳಲ್ಲಿ ಬರುತ್ತದೆ. ಸಚಿವರಿಗೆ ಡಿಎ, ಟಿಎ ಸಿಗುತ್ತದೆ. ಆ ಊರಿನ ಅವರ ಪಕ್ಷದವರು ಕರೆದು ಮಧ್ಯಾಹ್ನ ಭರ್ಜರಿ ಮೀನು ತಿನ್ನುವವರಾದರೆ ತರಹೇವಾರಿ ಮೀನುಗಳನ್ನು ತಂದು ಗುಡ್ಡೆ ಹಾಕಿ ತಿನ್ನಿಸುತ್ತಾರೆ. ತಮ್ಮ ಯಾವುದಾದರೂ ಕಡತಗಳಿಗೆ ಸಹಿ ಹಾಕಿಸುತ್ತಾರೆ. ಅದೇ ಕ್ಷೇತ್ರದಲ್ಲಿ ರಾತ್ರಿ ಸಚಿವರು ಉಳಿಯುವುದಾದರೆ ಇನ್ನೇನೋ ರೆಡಿ ಮಾಡಿರುತ್ತಾರೆ. ಸಚಿವರು ಅಲ್ಲಿರುವ ತಮ್ಮ ಪಕ್ಷದ ಶಾಸಕರ(ಇದ್ದರೆ) ಜೊತೆ ಹರಟೆ ಹೊಡೆದು ಟೈಂಪಾಸ್ ಮಾಡಿ ಹೋಗುತ್ತಾರೆ. ಮಂಗಳವಾರ ಕಂದಾಯ ಸಚಿವ ಆರ್ ವಿ ದೇಶಪಾಂಡೆಯವರು ಮಂಗಳೂರಿಗೆ ಬರುವಾಗ ಅದೇ ಅಧಿಕಾರಿಗಳು ಕೊಡುವ ಸಣಕಲು, ಸುಳ್ಳು, ಪೊಳ್ಳು ಅಂಕಿಸಂಖ್ಯೆಗಳನ್ನು ಓದುತ್ತಾರೆ ಎನ್ನುವುದು ನನಗೆ ಗೊತ್ತಿತ್ತು. ಅದಕ್ಕೆ ನಾನೊಂದು ಪ್ರತಿ ಬಾಣವನ್ನು ತಯಾರು ಮಾಡಿಟ್ಟುಕೊಂಡಿದ್ದೆ.

ದೇಶಪಾಂಡೆಯವರು ತಾಳ್ಮೆ ಕಳೆದುಕೊಂಡರೆ…

ದೇಶಪಾಂಡೆಯವರು ಅಧಿಕಾರಿಗಳು ಕೊಟ್ಟ ಸುಳ್ಳು ಅಂಕಿಅಂಶ ಓದಿದ ಕೂಡಲೇ ಅದು ತಪ್ಪು ಲೆಕ್ಕ ಎಂದು ಸಾಬೀತುಪಡಿಸುವುದು ನನ್ನ ಪ್ಲಾನ್ ಆಗಿತ್ತು. ಆದರೆ ಆರ್ ವಿ ದೇಶಪಾಡೆ ರಾಜಕೀಯದ ಹಳೆಹುಲಿ. ಅವರು ಕೊನೆಯ ಕ್ಷಣದಲ್ಲಿ ಸಾರ್ವಜನಿಕರೊಂದಿಗಿನ ಸಂವಾದವನ್ನು ರದ್ದುಗೊಳಿಸಿದರು. ಸುಮ್ಮನೆ ಮರ್ಯಾದೆ ಕಳೆದುಕೊಳ್ಳುವುದು ಯಾಕೆ? ಮೊದಲೇ ಮಾಧ್ಯಮದವರು ಇಂತಹ ವಿಷಯಗಳಿಗೆ ಕಾಯುತ್ತಿರುತ್ತಾರೆ. ಹಾಗಿರುವಾಗ ಸಾರ್ವಜನಿಕರಿಗೆ ಮಾತಿಗೆ ಅವಕಾಶ ಕೊಟ್ಟರೆ ಚಪ್ಪಲಿ ಕೊಟ್ಟು ಪೆಟ್ಟು ತಿನ್ನುವ ರಿಸ್ಕ್ ಬೇಡಾ ಎಂದು “ನಿಮ್ಮ ನಿಮ್ಮ ಮನವಿ ಪತ್ರಗಳನ್ನು ಕೊಟ್ಟು ಹೋಗಿ” ಎಂದು ಹೇಳಿಬಿಟ್ಟರು. ಅದನ್ನೇ ಕಾಯುತ್ತಿದ್ದ ಖಾದರ್ ಸಾಹೇಬ್ರು ಎಲ್ಲರ ಲಿಖಿತ ಪತ್ರಗಳನ್ನು ತೆಗೆದುಕೊಳ್ಳಲು ನಿಂತುಬಿಟ್ಟರು. ನನಗೆ ಗೊತ್ತಿದೆ, ಖಾದರ್ ಕೈಯಲ್ಲಿ ಕೊಡುವುದೂ ಒಂದೇ, ಹೊರಗೆ ಜಿಲ್ಲಾಧಿಕಾರಿ ಕಚೇರಿಯ ಕಸದ ಡಬ್ಬಿಯಲ್ಲಿ ಹಾಕುವುದು ಒಂದೇ. ತಕ್ಷಣ ನಾನು ಖಾದರ್ ಸನಿಹದಿಂದ ತಪ್ಪಿಸಿಕೊಂಡು ದೇಶಪಾಂಡೆ ಬಳಿಗೆ ಹೋದೆ. ಸ್ವಭಾವತ: ದೇಶಪಾಂಡೆ ಕೆಟ್ಟವರಲ್ಲ. ಒಂದು ವೇಳೆ ಕುಮಾರಸ್ವಾಮಿಯವರನ್ನು ಬದಲಿಸುವುದಾದರೆ ದೇಶಪಾಂಡೆಯನ್ನು ಮುಖ್ಯಮಂತ್ರಿ ಮಾಡಿ ಎಂದು ದೇವೇಗೌಡರು ಹೇಳಿದ್ದಾರೆ ಎನ್ನುವ ವದಂತಿ ಇದೆ. ಯಾಕೆಂದರೆ ಮೂಲತ: ಜೆಡಿಎಸ್ ನ ದೇಶಪಾಂಡೆ ಕಾಂಗ್ರೆಸ್ ನಿಂದ ಮುಖ್ಯಮಂತ್ರಿಯಾದರೆ ಎರಡೂ ಕಡೆ ಬ್ಯಾಲೆನ್ಸ್ ಇರುತ್ತದೆ ಎಂದು ದೇವೇಗೌಡರಿಗೆ ಅನಿಸಿರಬಹುದು. ಆದರೆ ರಾಜಕೀಯವನ್ನು ತುಂಬಾ ಹತ್ತಿರದಿಂದ ನೋಡಿದ ಪರಿಣಾಮವೋ, ವಯಸ್ಸಿನ ಕಾರಣವೋ ಅಥವಾ ಇಂತಹ ಸಭೆಗಳು ಕಾಟಾಚಾರಕ್ಕೆ ನಡೆಯುವುದು ಎಂದು ಮೊದಲೇ ಗೊತ್ತಿದ್ದದ್ದರಿಂದ ನಾನು ಮನವಿ ಪತ್ರ ಹಿಡಿದು ಅವರ ಬಳಿ ಹೋಗಿ ವಿವರಿಸುತ್ತಿದ್ದಂತೆ ದೇಶಪಾಂಡೆ ತಾಳ್ಮೆ ಕಳೆದುಕೊಂಡರು. ತಮ್ಮ ಆಪ್ತ ಸಹಾಯಕರ ಬಳಿ ಪತ್ರ ಕೊಟ್ಟು ಹೊರಡಿ ಎಂದು ಸೂಚ್ಯವಾಗಿ ಹೇಳಿಬಿಟ್ಟರು. ದೇಶಪಾಂಡೆಯವರಿಗೆ ಇದು ಹತ್ತರಲ್ಲಿ ಹನ್ನೊಂದು ಎನ್ನುವಂತಹ ಸಭೆ ಇರಬಹುದು. ಆದರೆ ನನ್ನ ಊರಿನವರಿಗೆ ಪಾಪರ್ಟಿ ಕಾರ್ಡ್ ಸಮಸ್ಯೆಯೇ ದೊಡ್ಡದು. ಅಷ್ಟಕ್ಕೂ ನಾನು ನನಗಾಗಿ ದೇಶಪಾಂಡೆಯವರ ಬಳಿ ಹೋಗುವುದಾ? ಎಲ್ಲರಂತೆ ನಾನು ಕೂಡ ಬೇರೆಯವರಿಗೆ ಏನು ಆಗುತ್ತದೆಯೋ ಅದೇ ನನಗೆ ಆಗುತ್ತದೆ ಎಂದುಕೊಂಡು ಸುಮ್ಮನೆ ಕೂರಬಹುದಿತ್ತು. ಆದರೆ ಕಂದಾಯ ಸಚಿವ ದೇಶಪಾಂಡೆಯವರು ಆಡಿದ ರೀತಿ ನೋಡಿ ನನಗೆ ಒಂದು ಸ್ಪಷ್ಟವಾಯಿತು, ಇದು ಅಪ್ಪಟ ನಾಟಕ.

ಸಮಸ್ಯೆ ಕಂಟಿನ್ಯೂ…

ಈ ನಾಟಕದ ಅಂಕದ ಪರದೆ ಎತ್ತಲು ಒಂದು ಕಡೆ ಖಾದರ್ ನಿಂತಿದ್ದರೆ ಮತ್ತೊಂದು ಕಡೆ ದೇಶಪಾಂಡೆಯ ಗರಡಿಯಲ್ಲಿ ಪಳಗಿದ ದೇಶಪಾಂಡೆಯವರ ಮಾತೃಪಕ್ಷದ ಐವನ್ ಡಿಸೋಜಾ ನಿಂತಿದ್ದರು. ಇಬ್ಬರೂ ಪೈಪೋಟಿಗೆ ಬಿದ್ದವರಂತೆ ದೇಶಪಾಂಡೆಯವರನ್ನು ತಮ್ಮ ಸೋದರಸಂಬಂಧಿಯೇ ಎನ್ನುವಂತೆ ರಕ್ಷಿಸುತ್ತಿದ್ದರು. ಕೊನೆಗೂ ಯಾವುದೇ ಪರಿಹಾರ ಕಾಣದೇ ಪ್ರಾಪರ್ಟಿ ಕಾರ್ಡ್ ಸಮಸ್ಯೆ ಹಾಗೆಯೇ ಉಳಿಯಿತು. ದೇಶಪಾಂಡೆಯವರು ಮುಂದಿನ ಊರಿಗೆ ಹೋದರು. ಖಾದರ್, ಐವನ್ ರಂಗಸ್ಥಳದಲ್ಲಿ ನಲಿದು ಸುಸ್ತಾದವರಂತೆ ವೇಷ ಕಳಚಲು ತಮ್ಮ ಚೇಂಬರ್ ಗಳಿಗೆ ಹಿಂತಿರುಗಿದರು. ಜಿಲ್ಲೆಯ ಏಳು ಜನ ಶಾಸಕರು ಬಂದ ದಾರಿಗೆ ಸುಂಕವಿಲ್ಲದೇ ವಾಪಾಸಾದರು. ಮಿನಿ ವಿಧಾನಸೌಧದ ಹೊರಗೆ ಬ್ರೋಕರ್ ಗಳು, ಒಳಗೆ ಸರ್ವೇಯರ್ ಗಳು ವೇಷ ಹಾಕಿ ನಾಳಿನ ಆಟಕ್ಕೆ ರೆಡಿಯಾಗುತ್ತಿದ್ದರು!

0
Shares
  • Share On Facebook
  • Tweet It




Trending Now
ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
Tulunadu News March 20, 2026
ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
Tulunadu News March 17, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
  • Popular Posts

    • 1
      ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • 2
      ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.

  • Privacy Policy
  • Contact
© Tulunadu Infomedia.

Press enter/return to begin your search