ಆಧುನಿಕ ಸಾಫ್ಟವೇರ್ ಮೂಲಕ GPL 2020 ಏಲಂ!!
ಗೌಡ ಸಾರಸ್ವತ ಬ್ರಾಹ್ಮಣ್ ಪ್ರೀಮಿಯರ್ ಲೀಗ್ 2020 ಇದರ ಆಟಗಾರರ ಏಲಂ ಪ್ರಕ್ರಿಯೆ ಇದೇ ಅಗಸ್ಟ್ 11 ರಂದು ನಡೆಯಲಿದೆ. ಮಂಗಳೂರಿನ ಡೊಂಗರಕೇರಿಯಲ್ಲಿರುವ ಟಿವಿ ರಮಣ್ ಪೈ ಆಡಿಟೋರಿಯಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಒಟ್ಟು 16 ತಂಡಗಳ ಮಾಲೀಕರು, ಸಹಮಾಲೀಕರು, ಐಕಾನ್ ಪ್ಲೇಯರ್ಸ್ ಭಾಗವಹಿಸಲಿದ್ದಾರೆ. ಭಾರತದ ಪ್ರಮುಖ ನಗರಗಳಾದ ಹೈದ್ರಾಬಾದ್, ಮುಂಬೈ, ಕೊಚ್ಚಿನ್, ಬೆಂಗಳೂರು, ಮೈಸೂರ್ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ತಂಡಗಳು ಪ್ರತಿಷ್ಟಿತ ಜಿಪಿಎಲ್ 2020 ಟ್ರೋಫಿಗಾಗಿ ಸೆಣಸಾಡಲಿವೆ.
ಫೆಬ್ರವರಿ 14,15,16 ರಂದು ಅರ್ಹನಿಶಿಯಾಗಿ ನಡೆಯುವ ಪಂದ್ಯಾಟಗಳಿಗಾಗಿ ಸೂಕ್ತ ತಂಡವನ್ನು ರಚಿಸಲು ಪ್ರತಿಯೊಂದು ತಂಡದ ಮಾಲೀಕರು ಉತ್ಸುಕರಾಗಿದ್ದು, ಭಾರತದ ವಿವಿದೆಡೆಯಿಂದ 500 ಕ್ಕೂ ಮಿಕ್ಕಿ ಆಟಗಾರರು ತಮ್ಮ ಹೆಸರನ್ನು ಆನ್ ಲೈನ್ ಮೂಲಕ ಈಗಾಗಲೇ ನೋಂದಾಯಿಸಿದ್ದಾರೆ. ಈ ಬಾರಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಏಲಂ ನಡೆಯಲಿದ್ದು, ಅದು ಇತಿಹಾಸ ಸೃಷ್ಟಿಸಲಿದೆ. ನುರಿತ ತಂತ್ರಜ್ಞಾನ ಪರಿಣತರು ನಿರ್ಮಿಸಿರುವ ವಿಶೇಷ ಸಾಫ್ಟ್ ವೇರ್ ಮೂಲಕ ಏಲಂ ನಡೆಯಲಿದ್ದು ಇದರ ಸಂಪೂರ್ಣ ವೀಕ್ಷಣೆಯನ್ನು ಯೂತ್ ಆಫ್ ಜಿಎಸ್ ಬಿ ಅಪ್ಲಿಕೇಶನ್ ಹಾಗೂ ಯೂತ್ ಆಫ್ ಜಿಎಸ್ ಬಿ ಪೇಜ್ ನಲ್ಲಿಯೂ ವೀಕ್ಷಿಸಬಹುದು .
Leave A Reply