ಭಾರತ ತಂಡಕ್ಕೆ ಕೇಸರಿ ಜರ್ಸಿ ತೊಡಲು ಮೋದಿ ಫೋನ್ ಮಾಡಿದ್ರಾ ಕಾಂಗ್ರೆಸ್ಸಿಗರೇ!
ಮುಂದಿನ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಭಾರತೀಯ ಕ್ರಿಕೆಟ್ ಕಲಿಗಳು ಮೈದಾನದಲ್ಲಿ ಇಳಿಯುವಾಗ ಕೇಸರಿ ಬಣ್ಣದ ಜರ್ಸಿ ಧರಿಸಲಿದ್ದಾರೆ. ಇದು ಯಾವಾಗ ಕಿವಿಯ ಮೇಲೆ ಬಿತ್ತೋ ಕಾಂಗ್ರೆಸ್ಸಿಗರಿಗೆ ಮತ್ತು ಸಮಾಜವಾದಿ ಪಕ್ಷಕ್ಕೆ ಹಾಗೂ ಇವರ ಕಸಿನ್ಸ್ ಗಳಿಗೆ ಇದರ ಹಿಂದೆ ನಮ್ಮ ಪ್ರಧಾನಿ ನರೇಂದ್ರ ಮೋದಿಯರ ಹಸ್ತಕ್ಷೇಪ ಕಾಣುತ್ತಿದೆ. ಅದರೊಂದಿಗೆ ಮೋದಿ ಭಾರತ ಕ್ರಿಕೆಟ್ ತಂಡವನ್ನು ಕೂಡ ಕೇಸರಿಮಯ ಮಾಡಿದ್ರು ಎಂದು ಪುಕಾರು ಎಬ್ಬಿಸುತ್ತಿದ್ದಾರೆ. ಅವರಿಗೆ ಗೊತ್ತಿಲ್ಲದ ಒಂದು ಸಂಗತಿ ಏನೆಂದರೆ ಯಾವ ಬಣ್ಣದ ಉಡುಗೆ ಧರಿಸಿ ಆಡಬೇಕು ಎನ್ನುವುದು ಮೋದಿಯೇ ನಿರ್ಧಾರ ಮಾಡುವುದಾದರೆ ಇಷ್ಟೊತ್ತಿಗೆ ಇಡೀ ರಾಷ್ಟ್ರದಲ್ಲಿ ನಡೆಯುವ ಎಲ್ಲಾ ದೇಶಿಯ ಕ್ರಿಕೆಟ್, ಕಬಡ್ಡಿ ಸಹಿತ ಪ್ರತಿ ಪಂದ್ಯದಲ್ಲಿ ಆಡುವ ಕ್ರೀಡಾಳು ಕೇಸರಿಯನ್ನೇ ಧರಿಸಿ ಆಡಬೇಕು ಎಂದು ರೂಲ್ಸ್ ತರುತ್ತಿದ್ದರು. ಆದರೆ ಕಾಂಗ್ರೆಸ್ಸಿಗರಿಗೆ ಅಥವಾ ಅವರ ಸಹೋದರ ಪಕ್ಷಗಳಿಗೆ ಗೊತ್ತಿಲ್ಲದ ಸಂಗತಿ ಏನೆಂದರೆ ಇದು ಮೋದಿಯ ಕೈಯಲ್ಲಿ ಇಲ್ಲ. ಯಾಕೆಂದರೆ ಐಸಿಸಿ ನಿಯಮಾವಳಿಯ ಪ್ರಕಾರ ವಿಶ್ವಕಪ್ ಆಡುವಾಗ ಒಂದೇ ಬಣ್ಣದ ಎರಡು ತಂಡಗಳು ಪರಸ್ಪರ ಸಂಧಿಸಿದಾಗ ಮೈದಾನದಲ್ಲಿ ಸುತ್ತಲೂ ಕುಳಿತು ದೂರದಿಂದ ಕ್ರಿಕೆಟ್ ನೋಡುವ ಪ್ರೇಕ್ಷಕರಿಗೆ ಅದು ಗೊಂದಲವನ್ನು ಉಂಟು ಮಾಡುತ್ತದೆ. ಆದ್ದರಿಂದ ಬಣ್ಣಗಳು ಬೇರೆ ಬೇರೆ ಇರಬೇಕು ಎನ್ನುವ ನಿಯಮ ಇದೆ. ಸದ್ಯ ಭಾರತ ನೆವಿಬ್ಲೂ ಬಣ್ಣದ ಜರ್ಸಿಯನ್ನು ಬಳಸುತ್ತಿದೆ. ಅತ್ತ ಇಂಗ್ಲೆಂಡ್ ಡಾರ್ಕ್ ಬ್ಲೂ ಧರಿಸಿ ಆಡುವಾಗ ಸ್ಟ್ಯಾಂಡಿನಲ್ಲಿ ಕುಳಿತ ಪ್ರೇಕ್ಷಕನಿಗೆ ಅದು ಗೊಂದಲ ತರಬಹುದು. ನೀವು ಟಿವಿಯ ಎದುರು ಕುಳಿತಾಗ ಒಂದೇ ರೀತಿಯ ಬಣ್ಣಗಳನ್ನು ನೋಡಿದರೆ ಅದರಲ್ಲಿ ಆಟದ ಮಜಾ ಸಿಗುವುದು ಕಡಿಮೆ. ಅದಕ್ಕಾಗಿ ಒಂದು ಪರ್ಯಾಯ ಬಣ್ಣದ ಉಡುಗೆಯನ್ನು ಪ್ರತಿ ತಂಡ ಹೊಂದಿರಬೇಕು. ಹಾಗೇ ಭಾರತ ತಂಡ ಆರೆಂಜ್ ಬಣ್ಣದ ಜರ್ಸಿ ಹೊಂದಿದೆ. ಇನ್ನು ಯಾವ ಬಣ್ಣದ ಜರ್ಸಿಯನ್ನು ಆಡಬೇಕೆನ್ನುವುದು ಆಯಾ ತಂಡದ ಆಡಳಿತ ಮಂಡಳಿಗೆ ಬಿಟ್ಟಿದ್ದು. ಭಾರತ ತಂಡದ ಈ ನಿರ್ಣಾಯವನ್ನು ಕೈಗೊಳ್ಳುವುದು ಬಿಸಿಸಿಐ. ಅವರು ಕೇಸರಿ ಬಣ್ಣದ ಜರ್ಸಿಯನ್ನು ಪರ್ಯಾಯ ಬಣ್ಣವನ್ನಾಗಿ ಮೊದಲೇ ಆಯ್ಕೆ ಮಾಡಿಕೊಂಡಿರಬಹುದು. ಇನ್ನು ಪಾಕಿಸ್ತಾನ, ಬಾಂಗ್ಲಾ, ಅಪಘಾನಿಸ್ತಾನಗಳು ಹಸಿರನ್ನು ತಮ್ಮ ಜರ್ಸಿಯ ಬಣ್ಣವನ್ನಾಗಿ ಹೊಂದಿವೆ. ಇನ್ನು ಅತಿಥೇಯ ರಾಷ್ಟ್ರದ ಆಟಗಾರರ ಜರ್ಸಿಯ ಬಣ್ಣ ಮತ್ತು ಎದುರಾಳಿಯ ಜರ್ಸಿಯ ಬಣ್ಣ ಒಂದೇ ಆಗಿದ್ದಲ್ಲಿ ಅತಿಥೇಯ ತಂಡ ತನ್ನ ಬಣ್ಣವನ್ನು ಬದಲಾಯಿಸುವ ಅಗತ್ಯ ಇಲ್ಲ.
ಸದ್ಯ ಕಾಂಗ್ರೆಸ್ಸಿಗರು ಮತ್ತು ಸಮಾನ ಮನಸ್ಥ ಪಕ್ಷಗಳು ಎಲ್ಲದರಲ್ಲಿಯೂ ಸೋತು ಸುಣ್ಣವಾಗಿದೆ. ಆದ್ದರಿಂದ ಅಲ್ಪಸಂಖ್ಯಾತರನ್ನು ಖುಷಿ ಮಾಡಲು ಅವರು ಏನು ಬೇಕಾದರೂ ಮಾಡುವ ಲೆವೆಲ್ಲಿಗೆ ಬಂದಿದ್ದಾರೆ. ಅಲ್ಪಸಂಖ್ಯಾತರನ್ನು ಅತೀ ಹೆಚ್ಚು ಒಲೈಕೆ ಮಾಡಿದ ಪರಿಣಾಮ ಇವತ್ತು ಆ ಪಕ್ಷಗಳು ಎಲ್ಲಿಗೆ ಬಂದು ಮುಟ್ಟಿವೆ ಎನ್ನುವುದು ಅವುಗಳ ಪರಿಸ್ಥಿತಿ ನೋಡುವಾಗ ಗೊತ್ತಾಗುತ್ತದೆ. ಅದರಿಂದಲೇ ಇವತ್ತು ಬಹುಸಂಖ್ಯಾತ ಮತಗಳು ಒಟ್ಟಾಗಿ ಬಿಜೆಪಿ 300 ರ ಗಡಿಯನ್ನು ಆರಾಮವಾಗಿ ದಾಟಿ ಎನ್ ಡಿಎಯಲ್ಲಿ ಹಿರಿಯಣ್ಣನ ಸ್ಥಾನದಲ್ಲಿ ನಿಂತಿರುವುದು. ಎಲ್ಲದರಲ್ಲಿ ಹುಳುಕು ಹುಡುಕುವುದು ಸರಿಯಲ್ಲ. ಕಳೆದ ಪಂದ್ಯದಲ್ಲಿ ಪಾಕ್ ವಿರುದ್ಧ ದಕ್ಷಿಣ ಆಫ್ರಿಕಾದ ಆಟಗಾರರ ಜರ್ಸಿ ಬಣ್ಣ ಒಂದೇ ಆಗಿದ್ದಾಗ ಆಫ್ರಿಕಾದವರು ಗ್ರೀನ್ ನಿಂದ ಹಳದಿಗೆ ಶಿಫ್ಟ್ ಆಗಿದ್ದರು. ಅದನ್ನು ಈಗ ಭಾರತ ಮಾಡಿದೆ ಅಷ್ಟೇ, ಅಷ್ಟಕ್ಕೂ ಇದರಲ್ಲಿಯೂ ಮೋದಿಯ ಕೈವಾಡ ವಿಪಕ್ಷಗಳಿಗೆ ಕಾಣುತ್ತಾ ಇದೆ ಎಂದರೆ ಮೋದಿ ಮತ್ತು ಭಾರತ ಸರಿಯಾದ ದಿಕ್ಕಿನಲ್ಲಿಯೇ ನಡೆಯುತ್ತಿದೆ ಎಂದರ್ಥ!
Leave A Reply