• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಕೆಲಸಕ್ಕೆ ಬಾರೋ ಮಲ್ಲ ಎಂದರೆ ಮೈಕೈ ನೋವು ಅಮ್ಮಾ ಎನ್ನುವ ಸ್ಥಿತಿ ಆಂಟೋನಿಯದ್ದು!!

Hanumantha Kamath Posted On October 9, 2019
0


0
Shares
  • Share On Facebook
  • Tweet It

ನಾವು ಚಿಕ್ಕದಿರುವಾಗ ಒಂದು ಪದ್ಯ ರೂಪದ ಗದ್ಯ ಇತ್ತು. ಕೆಲಸಕ್ಕೆ ಬಾರೋ ಮಲ್ಲ ಎಂದರೆ ಮೈಕೈ ನೋವು ಅಮ್ಮಾ, ಊಟಕ್ಕೆ ಬಾರೋ ಮಲ್ಲ ಎಂದರೆ ತಯಾರಾಗಿದ್ದೀನಿ ಅಮ್ಮ ಎನ್ನುವ ವಾಕ್ಯ ಅದು. ಅದನ್ನು ನೀವು ಕೇಳಿರಬಹುದು. ಅದನ್ನು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಸ್ವಚ್ಚತೆಯ ಗುತ್ತಿಗೆ ವಹಿಸಿಕೊಂಡಿರುವ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರಿಗೆ ಸರಿಯಾಗಿ ಅನ್ವಯಿಸಬಹುದು.
ಕೆಲಸ ಮಾಡ್ರೋ ಎಂದರೆ ಅವರ ಬಳಿ ಸರಿಯಾಗಿ ಜನ ಇಲ್ಲ, ವಾಹನಗಳಿಲ್ಲ. ಅದೇ ತಿಂಗಳಿಗೆ ಎರಡು ಕೋಟಿ ತೆಗೆದುಕೊಂಡು ಹೋಗಿ ಎಂದರೆ ಬೇಕಾದರೆ ಉಟ್ಟ ಬಟ್ಟೆಯಲ್ಲಿಯೇ ಅದರ ಅಧಿಕಾರಿಗಳು ಓಡಿ ಬರುತ್ತಾರೆ. ಮಂಗಳಾ ಕ್ರೀಡಾಂಗಣದ ಪಾಶ್ವದಲ್ಲಿ ಕೆನರಾ ಹಿರಿಯ ಪ್ರಾರ್ಥಮಿಕ ಶಾಲೆ ಉರ್ವಾ ಇದೆ. ಮಂಗಳೂರಿನಲ್ಲಿ ಇರುವವರಿಗೆ ಗೊತ್ತೆ ಇದೆ. ಅಲ್ಲಿ ಶಾಲೆಯಲ್ಲಿ ಮಕ್ಕಳಿಗೆ ಜಾಗೃತಿ ಉಂಟು ಮಾಡುವ ದೃಷ್ಟಿಯಿಂದ ಸ್ವಚ್ಚತೆಯ ಪರಿಪಾಲನೆಯ ಬಗ್ಗೆ ಶಿಕ್ಷಕರು ಒಳಗೆ ಭೋದಿಸುತ್ತಾ ಇದ್ದರೆ ಶಾಲೆಯ ಆವರಣ ಗೋಡೆಯ ಹೊರಗೆ ನಾಲ್ಕು ದಿಕ್ಕಿನಲ್ಲಿ ಕಸ ಸಾಕಷ್ಟು ಬಿದ್ದಿರುತ್ತದೆ. ಒಳಗೆ ಶಿಕ್ಷಕರಿಂದ ಸ್ವಚ್ಚತೆಯ ಪಾಠ ಹೇಳಿಸಿಕೊಳ್ಳುವ ಮಕ್ಕಳು ಹೊರಗೆ ಬಂದು ನೋಡಿದರೆ ಏನು ಅಂದುಕೊಳ್ಳಬೇಕು. ಹಾಗಂತ ಇದು ಶಾಲೆಯ ತಪ್ಪಲ್ಲ. ರಸ್ತೆಯಲ್ಲಿ ಬಿದ್ದಿರುವ ಕಸವನ್ನು ಗುಡಿಸುವುದು ಶಾಲೆಯವರ ಕೆಲಸ ಅಲ್ಲವೇ ಅಲ್ಲ. ಅದನ್ನು ಮಾಡಬೇಕಿರುವುದು ನಮ್ಮ ನಗರದ ಸ್ವಚ್ಚತೆಯ ಗುತ್ತಿಗೆಯನ್ನು ಪಡೆದುಕೊಂಡಿರುವ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರು. ಈಗ ವಸಂತ ಮಾಸ. ಶಾಲೆಯ ಹೊರಭಾಗದಲ್ಲಿ ನಾಲ್ಕು ಕಡೆಗಳಲ್ಲಿಯೂ ದೊಡ್ಡ ದೊಡ್ಡ ಮರಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಎಲೆಗಳು ಉದುರಿ ಬಿದ್ದು ರಾಶಿಗೊಂಡಿರುತ್ತವೆ. ಆದರೆ ಅದನ್ನು ತೆಗೆಯುವುದಕ್ಕೆ ಆಂಟೋನಿ ವೇಸ್ಟ್ ನವರಿಗೆ ಸೊಂಟ ಬಗ್ಗುವುದಿಲ್ಲ. ಯಾಕೆಂದರೆ ಅವರ ಬಳಿ ಷರತ್ತಿನ ಪ್ರಕಾರ ಎಷ್ಟು ಜನ ರಸ್ತೆ ಗುಡಿಸುವವರು ಇರಬೇಕೋ ಅಷ್ಟು ಜನ ಇಲ್ಲ. 200 ಜನ ಗುಡಿಸುವವರು ಇರಬೇಕು ಎಂದು ಷರತ್ತು ಇದ್ದರೆ ಇವರ ಬಳಿ ಇರುವವರು ಕೆಲವೇ ಕೆಲವು ಜನ ಮಾತ್ರ.
ಇವತ್ತು ನೋಡಿ. ಎಂಜಿ ರಸ್ತೆಯಲ್ಲಿ ಸಾಕಷ್ಟು ತ್ಯಾಜ್ಯ ಇತ್ತು. ಯಾಕೆಂದರೆ ನಿನ್ನೆ ಆ ರಸ್ತೆಯಲ್ಲಿ ಕುದ್ರೋಳಿ ಶಾರದಾ ಮಾತೆಯ ಶೋಭಾಯಾತ್ರೆ ಹೋಗಿತ್ತು. ಸಹಜವಾಗಿ ಅಸಂಖ್ಯಾತ ಜನ ನಿನ್ನೆ ಸಂಜೆಯಿಂದ ಬೆಳಗ್ಗಿನ ಜಾವದ ತನಕ ಆ ರಸ್ತೆಯಲ್ಲಿ ಹೋಗಿದ್ದಾರೆ. ಚರುಂಬುರಿಯಿಂದ ಹಿಡಿದು ಐಸ್ ಕ್ರೀಂ ತನಕ ಅಲ್ಲಿ ಕಸದ ರಾಶಿ ಬಿದ್ದಿದೆ. ಬೆಳಿಗ್ಗೆ ಅದನ್ನು ಆಂಟೋನಿ ವೇಸ್ಟ್ ನ ಕೆಲವರು ಗುಡಿಸಿ ಒಂದು ಕಡೆ ಒಟ್ಟು ಮಾಡಿ ಹೋಗಿದ್ದಾರೆ. ಆದರೆ ಕಸ ಅಲ್ಲಿಂದ ಎತ್ತಿಕೊಂಡು ಹೋಗಲು ಇವರ ಡಂಪರ್ ಫ್ಲೆಜರ್ ಎನ್ನುವ ವಾಹನವೇ ಇಲ್ಲ. ಅದಿಲ್ಲದಿದ್ದರೆ ಇವರು ಕಸವನ್ನು ತೆಗೆದುಕೊಂಡು ಹೋಗಲು ಲಾರಿಗಳನ್ನು ತರುತ್ತಾರೆ. ಅದಕ್ಕೆ ಜಿಪಿಎಸ್ ಇರುವುದಿಲ್ಲ. ಅಷ್ಟರಲ್ಲಿ ಆ ಒಟ್ಟು ಮಾಡಿದ ಕಸ ಗಾಳಿಯಲ್ಲಿ ಹಾರಿ ಪಕ್ಕದ ಚರಂಡಿಗಳನ್ನು ಸೇರುತ್ತದೆ. ಇವರು ಎಂಜಿ ರಸ್ತೆಯನ್ನು ಹೇಗೋ ಅನಿವಾರ್ಯವಾಗಿ ಇವತ್ತು ಗುಡಿಸಿದರು. ಲೆಕ್ಕ ಪ್ರಕಾರ ಮಣ್ಣಗುಡ್ಡೆಯಂತೆ ಈ ರಸ್ತೆಯನ್ನು ಕೂಡ ನಿತ್ಯ ಗುಡಿಸಬೇಕು. ಆದರೆ ಗುಡಿಸಲು ಇವರ ಬಳಿ ಜನ ಬೇಕಲ್ಲ. ಇವತ್ತು ಎಂಜಿ ರಸ್ತೆ ಗುಡಿಸುವ ಗಡಿಬಿಡಿಯಲ್ಲಿ ಇವರ ಗುಡಿಸುವವರು ರಥಬೀದಿಯನ್ನು ಇವತ್ತು ಗುಡಿಸಿಲ್ಲ. ಆ ದಾರಿಯಲ್ಲಿ ಇವತ್ತು ವೆಂಕಟರಮಣ ದೇವಸ್ಥಾನದ ಶಾರದಾ ಮಾತೆಯ ಶೋಭಾ ಯಾತ್ರೆ ಬರುತ್ತದೆ. ಇವರು ಗುಡಿಸದೇ ಇರುವುದರಿಂದ ಯಾವ ಸಂದೇಶ ಹೋಗುತ್ತದೆ ನಾಗರಿಕರಿಗೆ? ಜನ ಏನು ಯೋಚಿಸುತ್ತಾರೆ ಎಂದು ಆಂಟೋನಿಯವರು ತಲೆಕೆಡಿಸಿಕೊಳ್ಳುವುದೇ ಇಲ್ಲ. ಒಂದು ವೇಳೆ ಅವರಿಗೆ ಮಂಗಳೂರಿನ ಸ್ವಚ್ಚತೆಯ ಬಗ್ಗೆ ಅಷ್ಟು ಪ್ರೀತಿ ಇದ್ದರೆ ರಥಬೀದಿ ಹೂವಿನ ಮಾರುಕಟ್ಟೆಯ ಹಿಂದಿರುವ ದೊಡ್ಡ ಕಸದ ಡಬ್ಬಿಯಿಂದ ಐದು ದಿನ ತನಕ ಕಸ ತೆಗೆದುಕೊಂಡು ಹೋಗದೇ ಇರುತ್ತಿರಲಿಲ್ಲ. ಇವತ್ತು ಅದರ ಫೋಟೋ ಪೋಸ್ಟ್ ಮಾಡಿದ್ದೇನೆ. ಕಣ್ತುಂಬಿಕೊಳ್ಳುವ ಭಾಗ್ಯ ಕರುಣಿಸಿದ್ದು ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್!
0
Shares
  • Share On Facebook
  • Tweet It




Trending Now
ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
Hanumantha Kamath February 12, 2026
ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
Hanumantha Kamath February 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್
    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
  • Popular Posts

    • 1
      ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • 2
      ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 3
      'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • 4
      ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • 5
      ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್

  • Privacy Policy
  • Contact
© Tulunadu Infomedia.

Press enter/return to begin your search