• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸಮಾನ ನಾಗರಿಕ ಸಂಹಿತೆಯ ಮೊದಲು ಮೋದಿಯನ್ನು ಕಟ್ಟಿಹಾಕಲು ಈ ಪ್ರತಿಭಟನೆ!!

Hanumantha Kamath Posted On December 16, 2019


  • Share On Facebook
  • Tweet It

ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಹೆದರುವಂತದ್ದು ಏನೂ ಇಲ್ಲ ಎನ್ನುವುದು ಅದನ್ನು ವಿರೋಧಿಸುವವರಿಗೂ ಗೊತ್ತು. ಅವರು ವಿರೋಧ ಮಾಡುತ್ತಿರುವುದು “ಮೋದಿಯನ್ನು ಹೀಗೆ ಬಿಟ್ಟರೆ ಅವರು ನಮ್ಮ ಬುಡದ ತನಕ ಬಂದು ಅಲ್ಲಾಡಿಸಿ ಬಿಡುತ್ತಾರೆ” ಎನ್ನುವ ಕಾರಣಕ್ಕೆ ಮಾತ್ರ. ಪ್ರತಿಭಟನಾಕಾರರ ಇನ್ನೊಂದು ಉದ್ದೇಶ ಎಂದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮೋದಿ ವರ್ಚಸ್ಸು ಕುಗ್ಗಿಸುವುದು. ಭಾರತದಲ್ಲಿ ಆಂತರಿಕ ಗಲಭೆ ಶುರುವಾಗಿದೆ ಎಂದು ಜಪಾನ್ ಪ್ರಧಾನಮಂತ್ರಿ ಭಾರತ ಭೇಟಿಯನ್ನು ರದ್ದು ಮಾಡಿದರೆ ಅದು ಅಂತರಾಷ್ಟ್ರೀಯ ವಾಹಿನಿಗಳಲ್ಲಿ ಸುದ್ದಿಯಾಗುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಮೋದಿ ತರಲಿರುವ ದೊಡ್ಡ ಕಾಯ್ದೆಯ ಮೊದಲೇ ಮೋದಿ ಅವರನ್ನು ಈಗಲೇ ಕಟ್ಟಿ ಹಾಕಿ ಹೆದರಿಸಿ ಬಿಡಬೇಕು ಎನ್ನುವ ಕಾರಣಕ್ಕೆ ಪ್ರತಿಭಟನಾಕಾರರ ಹೋರಾಟ ಶುರುವಾಗಿದೆ. ಬೇಕಾದರೆ ನೀವು ಈಗ ಪ್ರತಿಭಟನೆ ಮಾಡುತ್ತಿರುವ ಮೂಲಭೂತವಾದಿಗಳನ್ನೇ ಕೇಳಿ. ಅವರು ಹೇಳುವುದು ನಮಗೆ ನಾಯಕರು ಹೇಳಿದ್ದಾರೆ. ಕಾಯ್ದೆ ಸರಿಯಾಗಿದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಪ್ರತಿಭಟನೆ ಮಾಡಲು ಹೇಳಿದ್ದಾರೆ, ಮಾಡುತ್ತೇವೆ ಎನ್ನುತ್ತಿದ್ದಾರೆ. ಹಾಗಾದರೆ ಬೀದಿಗಿಳಿಯಿರಿ ಎಂದು ಸೂಚನೆ ಕೊಟ್ಟಿರುವ ನಾಯಕರನ್ನೇ ಕೇಳಿ ನೋಡಿ. ಅವರು ಎದುರಿಗೆ ಮೋದಿ ಮಾಡಿದ್ದು ಸರಿಯಿಲ್ಲ ಎನ್ನುತ್ತಾರೆ, ಆದರೆ ಹಿಂದಿನಿಂದ ನಾವು ಪ್ರತಿಭಟನೆ ಮಾಡದಿದ್ದರೆ ಬಾಂಗ್ಲಾ, ಪಾಕಿಸ್ತಾನ, ಅಪಘಾನಿಸ್ತಾನದಿಂದ ಇಲ್ಲಿಗೆ ಬಂದು ನಮಗೆ ವೋಟ್ ಮಾಡಿದವರ ಋಣ ತೀರಿಸಿ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದು ಬೇಡ್ವಾ ಎನ್ನುತ್ತಾರೆ. ಒಟ್ಟಿನಲ್ಲಿ ಮೋದಿ ಸಮಾನ ನಾಗರಿಕ ಸಂಹಿತೆ ತರುವ ಮೊದಲು ಪರದೇಶಿ ಅಲ್ಪಸಂಖ್ಯಾತರನ್ನು ವೋಟ್ ಮಾಡಿಟ್ಟುಕೊಂಡಿರುವ ಕೆಲವು ಪಕ್ಷಗಳಿಗೆ ನಿದ್ರೆ ಬರದ ರಾತ್ರಿಗಳನ್ನು ಕರುಣಿಸಿದ್ದಾರೆ.

ಬೇಕಾದರೆ ಈ ಪ್ರತಿಭಟನೆ ಎಲ್ಲೆಲ್ಲಿ ನಡೆಯುತ್ತಿದೆ ಎನ್ನುವುದನ್ನು ಒಮ್ಮೆ ಗಮನಿಸಿ. ಅಸ್ಸಾಂ ಅನ್ನು ಒಳಗೊಂಡು ಸೆವೆನ್ ಸಿಸ್ಟರ್ಸ್ ಎಂದೇ ಕರೆಯಲಾಗುವ ಇಶಾನ್ಯ ರಾಜ್ಯಗಳಲ್ಲಿ ಮತ್ತು ಪಶ್ಚಿಮ ಬಂಗಾಲದಲ್ಲಿ ಹಾಗೂ ದೆಹಲಿಯ ಜಾಮೀಯಾ ವಿಶ್ವವಿದ್ಯಾನಿಲಯದಂತಹ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅಲ್ಲಿ ಯಾಕೆ ನಡೆಯುತ್ತಿದೆ ಎಂದರೆ ಆ ರಾಜ್ಯಗಳಲ್ಲಿ ಪ್ರತಿಭಟನೆ ಮಾಡುತ್ತಿರುವ ಪಕ್ಷಗಳಿಗೆ ಹೆದರಿಕೆ ಶುರುವಾಗಿದೆ. ಅಷ್ಟಕ್ಕೂ ಈ ಪ್ರತಿಭಟನೆಯನ್ನು ಮುಸ್ಲಿಮರು ಮಾತ್ರ ಮಾಡುತ್ತಿಲ್ಲ, ಎಲ್ಲಾ ಧರ್ಮದವರು ಇದ್ದಾರೆ ಎಂದು ಬಿಂಬಿಸುವ ಪ್ರತಿಭಟನೆ ನಡೆಯುತ್ತಿದೆ. ಅದು ಹೇಗೆ ಎಂದು ಕೇಳಿದರೆ ಮುಂದಿನ ದಿನಗಳಲ್ಲಿ ಬುಡಕಟ್ಟು ಸಹಿತ ಭಾರತದ ಮೂಲ ನಿವಾಸಿಗಳು ಇಲ್ಲಿನವರೇ ಎಂದು ಸಾಬೀತುಪಡಿಸಲು ದಾಖಲೆ ತನ್ನಿ ಎಂದರೆ ಅವರ ಬಳಿ ದಾಖಲೆ ಇಲ್ಲದಿದ್ದರೆ ಅವರು ಏನು ಮಾಡುವುದು, ಅವರನ್ನು ಯಾವ ದೇಶಕ್ಕೆ ಕಳುಹಿಸುವುದು ಎಂದು ವ್ಯಂಗ್ಯವಾಗಿ ಎಡಪಕ್ಷಗಳ ಮುಖಂಡರು ಪ್ರಶ್ನಿಸುತ್ತಿದ್ದಾರೆ. ಈ ಮೂಲಕ ಇದು ದೇಶವ್ಯಾಪಿ ಸಮಸ್ಯೆ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಅಷ್ಟಕ್ಕೂ ಪೌರತ್ವ ತಿದ್ದುಪಡಿ ಕಾಯ್ದೆ ಎನ್ನುವುದು ಭಾರತದ ಯಾವುದೇ ಹಿಂದೂ, ಮುಸ್ಲಿಂ, ಕ್ರೈಸ್ತ್ರ ಸಹಿತ ಯಾವುದೇ ಜಾತಿ, ಧರ್ಮದವರಿಗೆ ತೊಂದರೆಯನ್ನು ಕೂಡ ಕೊಡುವುದಿಲ್ಲ. ಇದು ಬಾಂಗ್ಲಾ, ಪಾಕಿಸ್ತಾನ, ಅಪಘಾನಿಸ್ತಾನದಲ್ಲಿ ಅಲ್ಲಿರುವ ಬಹುಸಂಖ್ಯಾತರ ಮುಸ್ಲಿಮರ ದೌರ್ಜನ್ಯದಿಂದ ತೊಂದರೆಗೆ ಒಳಗಾಗಿ ಸಂಕಷ್ಟವನ್ನು ಅನುಭವಿಸಿದ ಅನೇಕ ಜನ ಹಿಂದೂಗಳು, ಸಿಖ್, ಬೌದ್ಧರು, ಜೈನ್, ಕ್ರಿಶ್ಚಿಯನ್ಸ್ ಭಾರತಕ್ಕೆ ಆಶ್ರಯ ಅರಸಿ ಬಂದು ಇಲ್ಲಿ 5 ವರ್ಷಕ್ಕಿಂತ ಹೆಚ್ಚು ವರ್ಷ ಇದ್ದರೆ ಅವರಿಗೆ ಭಾರತದ ನಾಗರಿಕತೆಯ ಗುರುತು ಚೀಟಿ ನೀಡುತ್ತದೆ. ಒಂದು ವೇಳೆ ಇಂತವರನ್ನು ಬಿಟ್ಟು ಉಳಿದವರು ಅಕ್ರಮವಾಗಿ ಇಲ್ಲಿ ನೆಲೆಸಿದ್ದರೆ ಅವರಿಗೆ ಅಂತವರಿಗೆ ನಿರಾಶ್ರಿತ ಕ್ಯಾಂಪ್ ಗಳು ತಯಾರಾಗುತ್ತಿವೆ. ಇದರಲ್ಲಿ ತಪ್ಪೇನಿದೆ. ಭಾರತ ಸ್ವಾತಂತ್ರ್ಯಗೊಂಡಾಗ ಪಾಕಿಸ್ತಾನ ಮತ್ತು ನಂತರ ಬಾಂಗ್ಲಾ ದೇಶ ಜನ್ಮ ತಾಳಿತು. ಅವೆರಡೂ ಇಸ್ಲಾಂ ರಾಷ್ಟ್ರಗಳೆಂದೇ ಕರೆಸಿಕೊಂಡವು. ಭಾರತ ಜಾತ್ಯಾತೀತ ರಾಷ್ಟ್ರ ಎನಿಸಿಕೊಂಡಿದೆ. ಯಾವಾಗ ಆ ರಾಷ್ಟ್ರದಲ್ಲಿ ಅಲ್ಲಿದ್ದ ಅಲ್ಪಸಂಖ್ಯಾತ ಹಿಂದೂ ಮತ್ತು ಇತರ ಸಣ್ಣಸಣ್ಣ ಸಮುದಾಯದವರ ಮೇಲೆ ಅತ್ಯಾಚಾರ, ಕೊಲೆ ನಡೆಯಿತೋ ಅವರು ಇಲ್ಲಿ ಬಂದರು. ಇಲ್ಲಿ ಅತಂತ್ರ ಬದುಕನ್ನು ಬಾಳಬೇಕಾಯಿತು. ಅಂತವರಿಗೆ ಭಾರತೀಯ ನಾಗರಿಕ ಎನ್ನುವ ಐಡೆಂಟಿಫೀಕೇಶನ್ ಕೊಟ್ಟರೆ ತಪ್ಪೇನು? ಇದರಿಂದ ಮುಸ್ಲಿಮರಿಗೆ ತೊಂದರೆಯಾಗುತ್ತದೆ ಎಂದು ಅವರನ್ನು ಕೇಂದ್ರದ ವಿರುದ್ಧ ಎತ್ತಿಕಟ್ಟುವುದು ಯಾಕೆ?

ಇನ್ನು ದೆಹಲಿಯ ಜಾಮೀಯಾ ವಿಶ್ವವಿದ್ಯಾನಿಲಯದಲ್ಲಿ ಮೂರು ಸರಕಾರಿ ಬಸ್ಸಿಗೆ ಬೆಂಕಿ ಹಾಕಿ ಸುಡಲಾಗಿದೆ. ಅದಕ್ಕಿಂತ ಮೊದಲು ಪಶ್ಚಿಮ ಬಂಗಾಲದ ಮುರ್ಸಿರಾಬಾದ್ ನಲ್ಲಿ ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ. ರೈಲ್ವೆ ನಿಲ್ದಾಣಗಳ ಸೊತ್ತುಗಳನ್ನು ಧ್ವಂಸಗೊಳಿಸಲಾಗಿದೆ. ಪ್ರತಿಭಟನೆ ಮಾಡುವುದನ್ನು ನಾನು ವಿರೋಧಿಸುವುದಿಲ್ಲ. ಆದರೆ ಪ್ರತಿಭಟನೆಯ ಹೆಸರಿನಲ್ಲಿ ರೈಲುಗಳಿಗೆ, ಬಸ್ಸುಗಳಿಗೆ, ಸರಕಾರಿ ಸೊತ್ತುಗಳಿಗೆ ಹಾನಿ ಉಂಟು ಮಾಡುವುದು ಅಕ್ಷಮ್ಯ ಅಪರಾಧ. ಯಾಕೆಂದರೆ ಕೇಂದ್ರದ ಅಡಿಯಲ್ಲಿ ಬರುವ ರೈಲುಗಳು, ರೈಲು ನಿಲ್ದಾಣಗಳನ್ನು ಸುಡುವುದರಿಂದ ಪ್ರತಿಭಟನಾಕಾರರು ಸಾಧಿಸುವುದು ಏನು?

  • Share On Facebook
  • Tweet It


- Advertisement -


Trending Now
ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
Hanumantha Kamath February 3, 2023
ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
Hanumantha Kamath February 2, 2023
Leave A Reply

  • Recent Posts

    • ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
  • Popular Posts

    • 1
      ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • 2
      ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • 3
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • 4
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • 5
      ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search