ಪಂಪ್ವೆಲ್ ಮೇಲ್ಸೆತುವೆ ವಿಳಂಬದ ವಿಷಯದಲ್ಲಿ ನಳಿನ್ ಮಾಡಿದ್ದು ಒಂದೇ ತಪ್ಪು!!
Hanumantha Kamath
Posted On January 1, 2020
ಜಾಗೃತ ಅಂಕಣದ ಪ್ರತಿಯೊಬ್ಬ ಓದುಗರಿಗೂ ಹೊಸ ಕ್ಯಾಲೆಂಡರ್ 2020 ರ ಶುಭಾಶಯಗಳು. ಎಲ್ಲರೂ ಒಟ್ಟಾಗಿ ಈ ವರ್ಷವೂ ಜವಾಬ್ದಾರಿಯುತ ನಾಗರಿಕರಾಗಿ ನಮ್ಮ ಕೈಲಾದಷ್ಟು ಊರಿಗೆ, ದೇಶಕ್ಕೆ ಒಳ್ಳೆಯದು ಮಾಡಲು ಪ್ರಯತ್ನಿಸೋಣ. ಇವತ್ತು ಬೆಳಗ್ಗೆಯಿಂದಲೇ ತಲಪಾಡಿ ಟೋಲ್ ಬಳಿ ಟೋಲ್ ಕಟ್ಟದಿರುವ ವಾಹನ ಚಾಲಕರ ನಿಲುವಿಗೆ ಬಿಜೆಪಿ ಮುಖಂಡರು ಬೆಂಬಲವಾಗಿ ನಿಂತಿದ್ದಾರೆ. ಈ ಮೂಲಕ ಪಂಪ್ವೆಲ್ ಮೇಲ್ಸೆತುವೆ ಆಗಿ ಜನರ ಉಪಯೋಗಕ್ಕೆ ಸಿಗುವ ತನಕ ಟೋಲ್ ಇಲ್ಲ ಎನ್ನುವುದು ಅವರ ವಾದ. ಈ ಮೂಲಕ ನಿಜವಾಗಿಯೂ ನವಯುಗ ಕಂಪೆನಿಯವರಿಗೆ ಬಿಸಿ ಮುಟ್ಟುತ್ತದೆ. ಆದರೆ ಈ ಬಿಸಿ ಮುಟ್ಟಿಸುವ ಕೆಲಸ ಯಾವಾಗಲೋ ಆಗಬೇಕಿತ್ತು.
ಇವತ್ತಿಗೂ ಆಶ್ಚರ್ಯ ಎಂದರೆ ಈ ಇಡೀ ವಿಳಂಬ ಪ್ರಕರಣದಲ್ಲಿ ನಳಿನ್ ಕುಮಾರ್ ಕಟೀಲ್ ಒಬ್ಬರನ್ನೇ ಗುರಿಯಾಗಿ ಇಟ್ಟುಕೊಂಡು ಬಾಣ ಬಿಡಲಾಗುತ್ತಿದೆ. ನಾನು ನಳಿನ್ ಪರವಾಗಿ ಬರೆಯುತ್ತಿದ್ದೇನೆ ಎಂದು ತಿಳಿದುಕೊಳ್ಳಬೇಕಿಲ್ಲ. ಆದರೆ ಒಂದು ಫ್ಲೈ ಒವರ್ ಆಗುವಾಗ ಅದನ್ನು ದೆಹಲಿಯಲ್ಲಿ ನಿರ್ಮಿಸಿ ಇಲ್ಲಿ ತಂದು ಇಟ್ಟುಹೋಗುವುದಲ್ಲ. ಅದಕ್ಕೆ ಅದರದ್ದೇ ಪ್ರಕ್ರಿಯೆಗಳಿವೆ. ಮೊದಲನೇಯದಾಗಿ ಪ್ಲೈ ಒವರ್ ಆಗುವ ಸ್ಥಳವನ್ನು ಗುರುತಿಸಿ ಅಲ್ಲಿ ಪ್ಲೈ ಒವರ್ ನಿರ್ಮಾಣದ ನಕ್ಷೆಯಿಂದ ಹಿಡಿದು, ಭೂಸ್ವಾಧೀನವನ್ನು ಕೂಡ ಸೇರಿಸಿ, ಅಡಚಣೆ ಬರುವ ಹಂತದಲ್ಲಿ ಇರುವ ಎಲ್ಲವನ್ನು ನಿವಾರಿಸುವುದು ಸ್ಥಳೀಯಾಡಳಿತ. ಸಂಸದರಾಗಿ ನಳಿನ್ ಪ್ಲೈ ಒವರ್ ಮಂಜೂರು ಮಾಡಿಸಿ ತರಬಹುದು ಎನ್ನುವುದು ಬಿಟ್ಟರೆ ಉಳಿದ ಮುಕ್ಕಾಲು ಭಾಗ ಜವಾಬ್ದಾರಿ ಸ್ಥಳೀಯಾಡಳಿತಕ್ಕೆ ಇದೆ. ಕಳೆದ ಏಳೆಂಟು ವರ್ಷಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಇದ್ದ ಸರಕಾರ ಯಾರದ್ದು?
ಅದಕ್ಕಿಂತ ಮೊದಲು ಇನ್ನೊಂದು ವಿಷಯ ನಿಮ್ಮ ಗಮನಕ್ಕೆ ಇರಲಿ. ನವಯುಗದವರಿಗೆ ಕೇಂದ್ರ ಸರಕಾರ ಈ ಕೆಲಸ ಒಪ್ಪಿಸುವಾಗ 2009 ರಲ್ಲಿ ಕೇಂದ್ರದಲ್ಲಿ ಇದ್ದದ್ದು ಯುಪಿಎ ಸರಕಾರ. ನವಯುಗ ಯಾರ ಕಂಪೆನಿ ಎಂದು ಬೇಕಾದರೆ ಪರಿಶೀಲಿಸಿ. ಅವರಿಗೆ ಆ ಸಂದರ್ಭದಲ್ಲಿ ಕೇಂದ್ರದಲ್ಲಿ ಎಷ್ಟು ಸಂಪರ್ಕಗಳಿದ್ದವು? ಕೇಂದ್ರದ ಯುಪಿಎ ಸರಕಾರ ಪಂಪ್ವೆಲ್ ಮೇಲ್ಸೆತುವೆಯನ್ನು ಸೇರಿಸಿ ಉಳಿದ ಬೃಹತ್ ಯೋಜನೆಗಳನ್ನು ನೀಡುವಾಗ ಸ್ವತ: ತಮ್ಮ ಕುಟುಂಬದವರಿಗೆ ಗುತ್ತಿಗೆಯನ್ನು ನೀಡುತ್ತಿದೆಯೇನೋ ಎನ್ನಿಸುವಷ್ಟು ಔದಾರ್ಯವನ್ನು ತೋರಿಸಿತ್ತು. ಒಪ್ಪಂದವನ್ನು ಕಂಪೆನಿಗೆ ಅನುಕೂಲಕರವಾಗಿ ಮಾಡಲಾಗಿತ್ತು. ಈಗ ರಾಜಕೀಯ ಲೆಕ್ಕಾಚಾರಗಳು ಬದಲಾಗಿದೆ ಎನ್ನುವುದು ಬೇರೆ ವಿಷಯ. ಈ ನಡುವೆ ಪರಮ ಶ್ರೀಮಂತರಾಗಿದ್ದ ನವಯುಗದ ಧಣಿಗಳು ಜೈಲು ಪಾಲಾಗಿ ಅವರ ಬ್ಯಾಂಕು ಖಾತೆಗಳು ಸಿಝ್ ಆಗಿ ಅವರು ಆರ್ಥಿಕ ಸಂಕಷ್ಟವನ್ನು ಅನುಭವಿಸಿದರು. ಕಾಮಗಾರಿ ಮಾಡಲು ಬೇಕಾಗುವ ಯಂತ್ರೋಪಕರಣಗಳನ್ನು ಚಲಾಯಿಸಲು ಡಿಸೀಲ್ ಕೂಡ ತರಲಾರದ ಸಂಕಷ್ಟ ಅನುಭವಿಸಿದರು. ಆಗ ಸ್ವತ: ಇದೇ ನಳಿನ್ ಕುಮಾರ್ ಡಿಸೀಲ್ ನಿಂದ ಹಿಡಿದು ಬ್ಯಾಂಕುಗಳಿಂದ ಕೋಟಿಗಟ್ಟಲೆ ಸಾಲ ಕೂಡ ಕೊಡಿಸಿ ಒಮ್ಮೆ ಕೆಲಸ ಮುಗಿಸಿ ಬಿಡ್ರಿ, ಕ್ಷೇತ್ರದಲ್ಲಿ ಕುಳಿತುಕೊಳ್ಳಲು ಆಗಲ್ಲ ಎಂದು ಹೇಳಿಬಿಟ್ಟರು. ಆದರೆ ನವಯುಗದವರು ನಳಿನ್ ಕೊಡಿಸಿದ ಡಿಸೀಲ್ ಕುಡಿದು, ಬ್ಯಾಂಕ್ ಸಾಲ ತಿಂದು ಮುಗಿಸಿದರೋ ಏನು ಕಥೆಯೋ ಕೆಲಸ ಮುಗಿಯಲೇ ಇಲ್ಲ.

ಅದರೊಂದಿಗೆ ಸಂಸದರ ಗ್ರಹಚಾರವೋ ಏನೋ ಕಾಂಗ್ರೆಸ್ಸ್ ಸರಕಾರದ ನಮ್ಮ ಮಾಜಿ ಉಸ್ತುವಾರಿ ಸಚಿವರುಗಳು ಮತ್ತು ಹಿಂದಿನ ಮಂಗಳೂರು ನಗರ ದಕ್ಷಿಣ ಶಾಸಕರು ತಮ್ಮ ವಿಪರೀತ ಬುದ್ಧಿಮತ್ತೆ ಪ್ರದರ್ಶಿಸಿ ಪ್ಲೈ ಒವರ್ನಕ್ಷೆ ಬದಲಾವಣೆಗೆ ಹಟ ಹಿಡಿದು ಕುಳಿತರು. ನಕ್ಷೆ ಬದಲಾವಣೆ ಎಂದರೆ ಪೆನ್ನು, ಪೇಪರ್, ಸ್ಕೆಲ್ ತಂದುಕೊಡಿ, ಇಲ್ಲಿಯೇ ಮಾಡಿಬಿಡೋಣ ಎಂದು ಹೇಳುವಷ್ಟು ಸುಲಭವಲ್ಲ. ಅದಕ್ಕೆ ವರ್ಷಗಳ ತನಕ ಹಿಡಿಯುತ್ತೆ ಅಥವಾ ನಳಿನ್ ಇಮೇಜ್ ಹಾಳು ಮಾಡಲು ವರ್ಷಗಟ್ಟಲೆ ಹಿಡಿಸಲಾಯಿತು. ಅದರೊಂದಿಗೆ ಪ್ಲೈ ಒವರ್ ಆಗುವಾಗ ನಡುವಿನಲ್ಲಿದ್ದ ಮಂಗಳೂರಿನ ಕಲಶವನ್ನು ತೆಗೆದು ಜಾಗ ಖಾಲಿ ಮಾಡಬೇಕಲ್ಲ. ಅದಕ್ಕೆ ಆಗಿನ ಪಾಲಿಕೆಯ ಕಾಂಗ್ರೆಸ್ ಆಡಳಿತ ಇನ್ನೊಂದಿಷ್ಟು ವರ್ಷ ತೆಗೆಯಿತು. ಇದರ ನಡುವೆ ಗುತ್ತಿಗೆದಾರರು ಸೇತುವೆಯ ಎತ್ತರ ಕಡಿಮೆ ಮಾಡಿ ಅವಾಂತರ ಸೃಷ್ಟಿಸಿದರು. ಹೀಗೆ ಅತ್ತ ಕಡೆಯಿಂದ ನವಯುಗ ಕಂಪೆನಿಯ ನಿರಂತರ ಸಮಸ್ಯೆ ಮತ್ತು ಇತ್ತ ಕಡೆಯಿಂದ ಕಾಂಗ್ರೆಸ್ಸಿನ ಹಟಮಾರಿ ಧೋರಣೆಯಿಂದ ನಳಿನ್ ಹೈರಾಣಾಗಿ ಹೋದರು. ಅಧಿಕಾರಿಗಳನ್ನು ಮುಂದಿಟ್ಟು ಮಾಧ್ಯಮಗಳ ಎದುರು ಉದ್ಘಾಟನೆಯ ಡೇಟ್ ಕೊಡುತ್ತಾ ಹೋದರು. ಅದು ಅವರು ಮಾಡುತ್ತಿದ್ದ ಏಕೈಕ ತಪ್ಪು. ಬಹುಶ: ನಳಿನ್ ಅವರ ಸಲಹೆಗಾರರ ತಂಡ ಸರಿಯಿದ್ದರೆ ಈ ಪರಿಸ್ಥಿತಿ ಬರದಂತೆ ತಡೆಯಬಹುದಾಗಿತ್ತು. ಆದರೆ ಚುನಾವಣೆಯಲ್ಲಿ ಗೆಲುವಿಗೆ ಇದು ಅಡ್ಡಿಯಾಗಲ್ಲ ಎನ್ನುವ ನಿಲುವು ಮತ್ತು ಡೇಟ್ ಕೊಟ್ಟು ಗುತ್ತಿಗೆದಾರರ ಮೇಲೆ ಒತ್ತಡ ತನ್ನಿ ಎನ್ನುವ ಸಲಹೆಗಿಂತ ಪ್ರತಿ ಬಾರಿ ಲೇಟ್ ಆದಾಗಲೂ ಯಾಕೆ ಲೇಟಾಯಿತು. ಕಾಂಗ್ರೆಸ್ಸಿನ ಸಚಿವರು, ಶಾಸಕರು ಯಾಕೆ ನಕ್ಷೆ ಬದಲಾವಣೆಗೆ ಹಟ ಹಿಡಿದಿದ್ದಾರೆ, ಕಲಶ ಸ್ಥಳಾಂತರಕ್ಕೆ ಯಾಕೆ ಸಹಕರಿಸುತ್ತಿಲ್ಲ, ಭೂಸ್ವಾಧೀನ ಯಾಕೆ ನಡೆಯುತ್ತಿಲ್ಲ ಎಂದೆಲ್ಲ ಹೇಳುತ್ತಾ ಬಂದಿದ್ದರೆ ಆವಾಗಾವಾಗ ಜನರಿಗೆ ವಿಷಯ ಗೊತ್ತಾಗುತ್ತಿತ್ತು. ಟ್ರೋಲ್ ಕೂಡ ನಳಿನ್ ವಿರುದ್ಧ ಆಗುತ್ತಿರಲಿಲ್ಲ!
- Advertisement -
Leave A Reply