ಇಂದಿರಾ ಆವತ್ತು 45 ಬಂದ್ ಮಾಡಿದ್ದ ಜೆನ್ ಯು ಈ ಬಾರಿ 2 ವರ್ಷ ಬಂದ್ ಮಾಡೋಣ!!
ದೆಹಲಿಯಲ್ಲಿರುವ ಜೆಎನ್ ಯು ಸಂಸ್ಥೆಯನ್ನು ಎರಡು ವರ್ಷಗಳ ತನಕ ಮುಚ್ಚಿಬಿಡಿ ಎಂದು ಸುಬ್ರಹ್ಮಣ್ಯ ಸ್ವಾಮಿ ಹೇಳಿರುವ ಮಾತಿಗೆ ಬಹುಶ: ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನ ಸಮ್ಮತಿ ಇರಬಹುದು ಎನ್ನುವ ಅನಿಸಿಕೆ ನನ್ನದು. ಯಾಕೆಂದರೆ ಅಲ್ಲಿ ವಿದ್ಯೆಗಿಂತ ನಮ್ಮ ದೇಶದ ವಿರೋಧಿ ಮನಸ್ಸಿನ ವ್ಯಕ್ತಿಗಳು ಜನ್ಮ ತೆಗೆದುಕೊಳ್ಳುವ ತಾಣವಾಗಿ ಅದು ಪರಿಣಮಿತಗೊಂಡಿದೆಯೇನೋ ಎಂದು ಅನಿಸುತ್ತದೆ.
ಕೆಲವು ದಿನಗಳ ಮೊದಲು ಫೀಸ್ ಹೆಚ್ಚಿಸಿದ್ದು ಸರಿಯಲ್ಲ, ನಮಗೆ ಮುಕ್ಕಾಲು ಆಣೆಗೆ ಐಷಾರಾಮಿ ಸೌಲಭ್ಯ ಸಿಗುತ್ತಿತ್ತು. ಇನ್ನು ಹತ್ತಿಪ್ಪತ್ತು ರೂಪಾಯಿ ಹೆಚ್ಚಳ ಮಾಡಿ ನಮ್ಮ ಮೇಲೆ ದೌರ್ಜನ್ಯ ಮಾಡಬೇಡಿ ಎಂದು ಕೈಯಲ್ಲಿ ಮೂವತ್ತು-ನಲ್ವತ್ತು ಸಾವಿರದ ಮೊಬೈಲು ಹಿಡಿದ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ರು. ನಮ್ಮ ಹೊಟ್ಟೆಯ ಮೇಲೆ ಹೊಡಿಬಿಡಿ ಎಂದು ಕಿರುಚುತ್ತಾ ಪಕ್ಕದ ಫೈಸ್ಟಾರ್ ಹೋಟೇಲಿನಲ್ಲಿ ಊಟ ಮಾಡಿದ್ರು. ಅದರ ನಂತರ ನಮಗೆ ನೀರಿಗೂ ಅಲ್ಲಿ ಗತಿಯಿಲ್ಲ ಎಂದು ಹೇಳಿ ಲೀಟರ್ ಗಟ್ಟಲೆ ಬಿಯರ್, ವಿಸ್ಕಿ ಕುಡಿದ್ರು. ನಮ್ಮ ನಿತ್ಯ ಜೀವನದ ಮೇಲೆ ಸವಾರಿ ಮಾಡಲಾಗುತ್ತಿದೆ ಎಂದು ಹೇಳಿ ರಾತ್ರಿಯ ಕತ್ತಲಿನಲ್ಲಿ ಹುಡುಗ ಹುಡುಗಿ ಮೈಮರೆತರು. ಇಷ್ಟೆಲ್ಲಾ ಆದ ನಂತರ ಈಗ ಅವರಿಗೆ ಸಿಎಎ ಸಿಕ್ಕಿತ್ತು. ಅದರ ವಿರುದ್ಧ ಹೋರಾಡಿದ್ರು. ಇನ್ನೇನೂ ಅದು ಮುಗಿಯಿತು ಎಂದ ತಕ್ಷಣ ಫ್ರೀ ಕಾಶ್ಮೀರ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಹೀಗೆ ಅವರು ಹೇಳುತ್ತಿದ್ದ ಹಾಗೆ ಅವರುಗಳ ಧ್ವನಿ ಕೇಳಲು ದೀಪಿಕಾ ಪಡುಕೋಣೆ ಧಾವಿಸಿ ಬಂದರು. ಯಾವ ಪಾಕಿಸ್ತಾನಿ ನಿರ್ಮಾಪಕ ಕಾಲ್ ಶೀಟ್ ಕೇಳಿದ್ದಾನೋ ಅಥವಾ ಮುಂದಿನ ಸಿನೆಮಾಕ್ಕೆ ಎಲ್ಲಿಂದ ಕಪ್ಪು ಹಣ ಬರಲು ತಯಾರಾಗಿದೆಯೋ ಅವಳಿಗೆ ಗೊತ್ತು. ಒಟ್ಟಿನಲ್ಲಿ ದೀಪಿಕಾ ಆಗಮನ ಅಲ್ಲಿನ ದೇಶದ್ರೋಹಿ ಹೇಳಿಕೆ ಕೊಡುತ್ತಿದ್ದವರಿಗೆ ನೂರು ಆನೆ ಬಂದಂತೆ ಆಯಿತು. ಆಕೆಯ ಬಗ್ಗೆ ಪ್ರತ್ಯೇಕವಾಗಿ ನಾಳೆ ಬರೆಯುತ್ತೇನೆ.
ಅಷ್ಟಕ್ಕೂ ಸಿಎಎ ವಿರುದ್ಧ ಮಾತನಾಡುತ್ತಾ ಪ್ರತಿಭಟನೆ ಮಾಡುತ್ತಿರುವ ಈ ಕುತಂತ್ರಿಗಳಿಗೆ ಕಾಶ್ಮೀರದ ವಿಷಯ ಯಾಕೆ? ಜೆಎನ್ ಯು ನಲ್ಲಿ ಬಿಟ್ಟಿ ತಿನ್ನಲು ಸಾಕಾಗಲಿಲ್ಲ ಎಂದು ಈಗ ಫ್ರೀ ಕಾಶ್ಮೀರ ಎಂದು ಅರಚುತ್ತಾರಲ್ಲ, ಅವರಿಗೆ ಕಾಶ್ಮೀರ ಫ್ರೀ ಆದ್ರೆ ಏನು ಲಾಭ? ಅಷ್ಟಕ್ಕೂ ಕಾಶ್ಮೀರ ಫ್ರೀ ಆದರೆ ನೋಡಿಕೊಳ್ಳುವವರು ಯಾರು? ಅಬ್ಬೇಪಾರಿ ಇಮ್ರಾನ್ ಖಾನಾ? ಆ ಮನುಷ್ಯ ತನ್ನ ಹೊಟ್ಟೆ ತುಂಬಿಸಲು ಭಿಕ್ಷಾಪಾತ್ರೆ ಹಿಡಿದು ವಿದೇಶಗಳಲ್ಲಿ ಅಲೆದಾಡಿ ಧನ ಸಂಗ್ರಹಿಸುತ್ತಿದ್ದಾನೆ. ಒಂದು ಲೀಟರ್ ಹಾಲಿಗೆ ಪಾಕಿಸ್ತಾನದಲ್ಲಿ ನೂರಾರು ರೂಪಾಯಿ ಇದೆ. ಅಲ್ಲಿನ ಅರ್ಥ ವ್ಯವಸ್ಥೆ ಹೇಗಿದೆ ಎಂದರೆ ಕಳೆದ ಬಾರಿ ವಿದೇಶ ಪ್ರವಾಸ ಮಾಡಿದ ಇಮ್ರಾನ್ ಖಾನ್ ಹೋದ ಕಡೆ ಹೋಟೇಲಿನಲ್ಲಿ ನಿಲ್ಲಲು ಹಣದ ತೊಂದರೆ ಇದೆ ಎಂದು ತನ್ನ ದೇಶದ ರಾಯಭಾರ ಕಚೇರಿಯಲ್ಲಿ ಕಾಲು ಮುದುಡಿಕೊಂಡು ಮಲಗಿದ್ದ. ಅವನ ಜೋಳಿಗೆಗೆ ಕಾಶ್ಮೀರ ಹಾಕಬೇಕಾ? ಅಥವಾ ತಮ್ಮ ಊಟಕ್ಕೆ ಮೂರು ರೂಪಾಯಿಯಿಂದ ಎಂಟು ರೂಪಾಯಿ ಮಾಡಿದ್ರು ಎಂದು ಬೊಬ್ಬೆ ಹೊಡೆಯುವ ಪಾಕಿಸ್ತಾನಕ್ಕೆ ಹುಟ್ಟಿದವರಂತೆ ಆಡುತ್ತಿರುವ ಜೆಎನ್ ಯುನಲ್ಲಿ ಮುದುಕರಾದರೂ ಕಲಿಯುತ್ತಿದ್ದೇನೆ ಎಂದು ಸುಳ್ಳು ಹೇಳುತ್ತಿರುವವರ ಮಡಿಲಿಗೆ ಹಾಕಬೇಕಾ? ಒಟ್ಟಿನಲ್ಲಿ ದೆಹಲಿಯಿಂದ ಮೈಸೂರಿನ ತನಕ ಬೊಬ್ಬೆ ಹಾಕುತ್ತಿರುವ ಈ ಭಾರತ ವಿರೋಧಿ ಗುಂಪು ಮೋದಿ ವಿರುದ್ಧ ಮಾತನಾಡಬೇಕು ಎನ್ನುವ ಒಂದೇ ಹಟಕ್ಕೆ ಕಾಶ್ಮೀರವನ್ನು ಫ್ರೀ ಮಾಡಲು ಹೊರಟಿರುವುದು ಅವರನ್ನು ಹುಟ್ಟಿಸಿದವರ ಬಗ್ಗೆ ಸಂಶಯ ಬರುವಂತೆ ಮಾಡುತ್ತಿದೆ!
Leave A Reply