ಬುದ್ಧಿ’ವಂತೆ’ ದೀಪಿಕಾ ಜೆನ್ ಯು ಅಂಗಳದಿಂದ ದುಡಿದದ್ದು ಎಷ್ಟು?

ಮೇಡಂ, ಹೇಗೂ ನೀವು ದೆಹಲಿಯಲ್ಲಿ ಇದ್ದೀರಿ. ಸಿನೆಮಾ ಪ್ರೊಮೊಶನ್ ಮಾಡಲಿಕ್ಕೆ ಹೇಗೂ ಲಕ್ಷಗಟ್ಟಲೆ ಇಲ್ಲಿ ಖರ್ಚಾಗಿದೆ. ಇದರ ಮಧ್ಯದಲ್ಲಿ ನೀವು ಹತ್ತು ನಿಮಿಷ ನಾವು ಹೇಳಿದ ಕಡೆ ಬಂದು ನಿಂತರೆ ಸಾಕು, ನೀವು ಇಡೀ ರಾಷ್ಟ್ರದಲ್ಲಿ ಫ್ರೀ ಆಗಿ ಪಬ್ಲಿಸಿಟಿ ಪಡೆದುಕೊಳ್ಳಬಹುದು. ಟಿವಿ ಚಾನೆಲ್ ನವರು ನಿಮ್ಮ ಹಿಂದೆಯೇ ಬಂದು ಬಿಡುತ್ತಾರೆ. ಫೋಟೋಗ್ರಾಫರ್ಸ್ ನಿಮ್ಮ ಸುತ್ತಮುತ್ತ ನಿಂತಿರುತ್ತಾರೆ. ನೀವು ರಾತ್ರಿಯ ಪ್ರೈಮ್ ಟೈಮ್ ನಲ್ಲಿ ದೊಡ್ಡ ದೊಡ್ಡ ನ್ಯೂಸ್ ಚಾನೆಲ್ ಗಳಲ್ಲಿ ಸುದ್ದಿಯಾಗುತ್ತಿರಿ, ಹೇಗಿದೆ ಐಡಿಯಾ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ದೀಪಿಕಾ ಪಡುಕೋಣೆ ಎನ್ನುವ ಹೊಸ ನಿರ್ಮಾಪಕಿಗೆ ಕೇಳ್ತಾ ಇದ್ದರೆ ದೀಪಿಕಾಗೆ ಈ ಐಡಿಯಾ ಹೌದೆನಿಸಿದೆ. ಹೇಗೂ ತಮ್ಮ ಹೊಸ ಚಿತ್ರ ಚಪಕ್ ಗೆ ಸುರಿದಿರುವ ಕೋಟಿಗಟ್ಟಲೆ ಹಣ ವಾಪಾಸು ಬರಬೇಕಾದರೆ ತಾನು ಎಲ್ಲಿ ಪ್ರಚಾರ ಸಿಗುತ್ತೋ ಅಲ್ಲಿ ಹೋಗಲೇಬೇಕು. ಆದ್ದರಿಂದ ದೆಹಲಿಯಲ್ಲಿ ಇರುವ ಸ್ವಲ್ಪ ಹೊತ್ತು ಉಪಯೋಗಿಸೋಣ ಎಂದು ನಿರ್ಧರಿಸಿದ ದೀಪಿಕಾ ಜೆಎನ್ ಯು ಒಳಗೆ ಕಾಲಿಟ್ಟಿದ್ದಾರೆ. ಅವರು ಹೋಗುವಷ್ಟರಲ್ಲಿ ಅಲ್ಲಿ ಕನ್ನಯ್ಯ ಕುಮಾರ್ ಭಾಷಣ ಮುಗಿದಿತ್ತು. ಒಬ್ಬ ನಿರುದ್ಯೋಗಿ ಕನ್ನಯ್ಯ ಕುಮಾರ್ ತನ್ನ ತುಕಡೆ ತುಕಡೆ ಇನ್ಸಶಾ ಅಲ್ಲಾ ಭಾಷಣ ಮಾಡಿ ಇವತ್ತಿನ ದಿನಗಳಲ್ಲಿ ಎಷ್ಟು ಫೇಮಸ್ ಆಗಿದ್ದಾನೆ ಎಂದರೆ ಎರಡು ವರ್ಷದ ಅವನ ಆದಾಯ ಬಹುತೇಕ 9 ಲಕ್ಷ ರೂಪಾಯಿಯಂತೆ. ಪಾಪ, ಇನ್ನೂ ಕಲಿತು ಆಗಿಲ್ಲ. ಆದರೆ ರಾಷ್ಟ್ರದ್ರೋಹದ ಭಾಷಣ ಮಾಡಿಯೇ ಲಕ್ಷ ದುಡಿಯುತ್ತಿರುವ ಕನ್ನಯ್ಯನಿಗೆ ದೀಪಿಕಾ ಬರುತ್ತಿದ್ದಂತೆ ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕೆನಿತು.
ಅಷ್ಟಕ್ಕೂ ದೀಪಿಕಾ ಯಾರ ಪರವಾಗಿ ಅಲ್ಲಿ ನಿಂತಿದ್ದಾಳೆ ಎಂದರೆ ಇಡೀ ದೇಶದಲ್ಲಿರುವ ಸಂವಿಧಾನ ವಿರೋಧಿ, ರಾಷ್ಟ್ರವಿರೋಧಿ ಎರಡು ಶೇಕಡಾ ಜನರ ಒಟ್ಟಿಗೆ ನಿಲ್ಲಲು ಹೋಗಿದ್ದಾಳೆ. ಅದರ ಅರ್ಥ ಆಕೆ 98% ಜನರನ್ನು ವಿರೋಧಿಸುತ್ತಿದ್ದಾಳೆ ಎಂದೇ ಆಗಿಲ್ಲವೇ. ದೀಪಿಕಾ ಪಾಪ ಜೆಎನ್ ಯುವಿಗೆ ಕತ್ತಲಾದ ನಂತರ ಎಂಟ್ರಿ ಕೊಟ್ಟಿದ್ದರಿಂದ ಮತ್ತು ಅವಳಿಗೆ ಕೇವಲ ಕ್ಯಾಮೆರಾ ಲೈಟ್ ಗಳ ಬೆಳಕಿನಲ್ಲಿ ಕಂಡದ್ದು ಮಾತ್ರ ನಿಜ ಎಂದು ಅನಿಸಿರುವುದರಿಂದ ಆಕೆಯಿಂದ ಬೇರೆ ಏನು ನಿರೀಕ್ಷಿಸಲು ಸಾಧ್ಯವಿಲ್ಲ. ತನ್ನ ಈ ನಡೆಯಿಂದ ಸಿನೆಮಾ ಚಪಕ್ ಗೆ ಈಗ ದಂಡಿಯಾಗಿ ಲಾಭ ಆಗುತ್ತದೆ ಎಂದು ದೀಪಿಕಾಗೆ ಅನಿಸುತ್ತಿರಬಹುದು. ಆದರೆ ವಾಸ್ತವ ಗೊತ್ತಿಲ್ಲದೆ ಅವಳು ಮಾಡಿದ ಕೆಲಸದಿಂದ ಆಕೆ ಲಕ್ಷಾಂತರ ದೇಶಪ್ರೇಮಿ ಅವಳ ಅಭಿಮಾನಿಗಳಲ್ಲಿ ನಿರಾಸೆ ಉಂಟು ಮಾಡಿದ್ದಾಳೆ.
ಇದರಿಂದ ದೀಪಿಕಾಳಿಗೆ ಆದ ಲಾಭ ಏನು? ಎಲ್ಲೆಲ್ಲಿ ಕಾಂಗ್ರೆಸ್ ಸರಕಾರ ಇದೆಯೋ ಅಲ್ಲೆಲ್ಲಾ ಆಕೆಯ ಸಿನೆಮಾಗೆ ತೆರಿಗೆ ಮಾಫಿಯಾಗಿದೆ. ಬಹುಶ: ನನಗೆ ಈಗ ಅನಿಸುತ್ತಿರುವುದು ದೀಪಿಕಾ ಪ್ರಾರಂಭದಲ್ಲಿ ಮೋದಿಯವರಿಂದ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ತಮ್ಮ ನಿರ್ಮಾಣದ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೇಳಿದ್ದಾರೆ. ಆದರೆ ಈಗ ನರೇಂದ್ರ ಮೋದಿಯವರು ಬಾಲಿವುಡ್ ನ ಪ್ರತಿಯೊಬ್ಬ ನಿರ್ಮಾಪಕ, ನಿರ್ದೇಶಕ, ಸ್ಟಾರ್ ಗಳೊಂದಿಗೆ ಚೆನ್ನಾಗಿರುವುದರಿಂದ ರಾಷ್ಟ್ರದ ಬೆಳವಣಿಗೆಗೆ ಕೈ ಜೋಡಿಸಬೇಕು ಎಂದು ಆಗಾಗ ಕರೆದು ಮೀಟಿಂಗ್ ಮಾಡುತ್ತಿರುವುದರಿಂದ ಯಾರಾದರೂ ಒಬ್ಬರು ತೆರಿಗೆ ವಿನಾಯಿತಿ ಕೇಳಿದ ತಕ್ಷಣ ಕೊಟ್ಟರೆ ನಾಳೆ ಇನ್ನೊಬ್ಬ ಬಂದು ತೆರಿಗೆ ವಿನಾಯಿತಿ ಕೇಳಬಹುದು. ಚಪಾಕ್ ಬಳಿಕ ತಾನಾಜಿ ಸೇನಾನಿಯ ಸಿನೆಮಾ ಬಿಡುಗಡೆಯಾಗುತ್ತಿದೆ. ಅವರು ಬಂದು ಕೇಳಬಹುದು. ಮುಂದಿನ ವಾರ ಇನ್ನೊಂದು ಐತಿಹಾಸಿಕ ಸಿನೆಮಾ ಬರಲಿದೆ. ಮುಂದೆ ಅಕ್ಷಯ್ ಕುಮಾರ್ ಸಹಿತ ಎಲ್ಲರೂ ತಮ್ಮ ಸಿನೆಮಾಗಳಿಗೆ ತೆರಿಗೆ ವಿನಾಯಿತಿ ಕೊಡಿ ಎಂದರೆ ಆಯಾ ರಾಜ್ಯಗಳ ಪ್ರಮುಖ ಆದಾಯ ಸೋರಿಕೆಯಾಗುತ್ತದೆ. ಆದ್ದರಿಂದ ಬಹುಶ: ಇವರ ಮನವಿಗೆ ಸ್ಪಂದನೆ ಸಿಕ್ಕಿರಲಿಕ್ಕಿಲ್ಲ. ಬಹುಶ: ಆ ಕೋಪದೊಂದಿಗೆ ಮೋದಿಗೆ ಬುದ್ಧಿ ಕಲಿಸಲು ದೀಪಿಕಾ ಜೆಎನ್ ಯು ಅಂಗಳಕ್ಕೆ ಕಾಲಿಟ್ಟು ತುಕಡೆ ಗ್ಯಾಂಗ್ ಜೊತೆಗೆ ನಿಂತಿದ್ದಾರೆ. ಆಕೆ ನಿಂತ ವಿಡಿಯೋ ನೋಡಿದ ತಕ್ಷಣ ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳು ಜೊಲ್ಲು ಸುರಿಸುತ್ತಾ ಆಕೆಯ ಸಿನೆಮಾಕ್ಕೆ ತೆರಿಗೆ ಫುಲ್ ಫ್ರೀ ಘೋಷಣೆ ಮಾಡಿವೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಮೊದಲ ವಾರದ ಎಲ್ಲಾ ಟೆಕೆಟ್ ಖರೀದಿಸಿದ್ದು ಲಕ್ನೋ ವಿದ್ಯಾರ್ಥಿಗಳು ಐಡಿ ತೋರಿಸಿದರೆ ಸಿನೆಮಾ ಫ್ರೀಯಾಗಿ ನೋಡಬಹುದಾಗಿದೆ.
ಅದರೊಂದಿಗೆ ದೀಪಿಕಾ ಕೇಂದ್ರ ಸರಕಾರದ ಕೆಲವು ಯೋಜನೆಗಳ ರಾಯಭಾರಿಯಾಗಿದ್ದು ಅದರ ವಿಡಿಯೋ ಶೂಟ್ ಎಲ್ಲಾ ಮುಗಿದಿತ್ತು. ಈಗ ಅದನ್ನು ಬಳಸದೇ ಇರಲು ಕೇಂದ್ರ ಸರಕಾರ ನಿರ್ಧರಿಸಿದೆ. ಕೆಲವರು ಕ್ಯಾಮೆರಾದ ಮುಂದೆ ಮಾತ್ರ ಚೆಂದ. ನಿರ್ದೇಶಕ ಹೇಳಿದ್ದನ್ನು ಚಾಚು ತಪ್ಪದೆ ಒಪ್ಪಿಸುವಲ್ಲಿ ದೀಪಿಕಾ ಬುದ್ಧಿವಂತೆ ಇರಬಹುದು. ಅದಕ್ಕಾಗಿ ಮೇಘನಾ ಗುಲ್ಜಾರ್ ಅವರಂತಹ ನಿರ್ಧೇಶಕರನ್ನು ಇಟ್ಟು ಸಿನೆಮಾ ಮಾಡಿರಬಹುದು. ಆದರೆ ದೆಹಲಿಯ ಜೆಎನ್ ಯು ಒಟ್ಟು ಕಥೆಗೆ ನಿರ್ಧೇಶಕ ಕನ್ನಯ್ಯಾ ಕುಮಾರ್. ಆತನ ನಿರ್ಧೇಶನಕ್ಕೆ ಕನ್ನಡದ ಹುಡುಗಿ ಕುಣಿಯಬಾರದಿತ್ತು!
Leave A Reply