ಪೊಲೀಸರ ಹಣೆಬರಹ ಚೆನ್ನಾಗಿತ್ತು, ಫಯಾಜ್ ಹೇಳಿರುವುದು ಜಾರಿಯಲ್ಲಿ ಬಂದಿದ್ದರೆ…!!
ಹೈದ್ರಾಬಾದ್ ನ ಸಂಸದ ಓವೈಸಿ ಹೇಳಿದ್ದು ಈಗ ಮತ್ತೆ ನೆನಪಾಗುತ್ತಿದೆ. ಭಾರತದ ಪೊಲೀಸರು 15 ನಿಮಿಷ ಸುಮ್ಮನೆ ಇದ್ದರೆ ನಾವು ಬಹುಸಂಖ್ಯಾತ ಹಿಂದೂಗಳನ್ನು ಏನೋ ಮಾಡ್ತೀವಿ ಎಂದು ಬಡಬಡಾಯಿಸಿದ್ದ ಹುಳ ಆ ವ್ಯಕ್ತಿ. ಅದರ ಅರ್ಥ ದೇಶವನ್ನು ಒಡೆಯಬೇಕು ಎನ್ನುವವರಿಗೆ, ಭಾರತವನ್ನು ಅಸ್ಥಿರ ಮಾಡಬೇಕು ಎಂದು ಸಂಚು ಹೂಡುವವರಿಗೆ ಪೊಲೀಸರೇ ಮೊದಲ ಅಡ್ಡಿಗಳು ಎನ್ನುವುದನ್ನು ಒವೈಸಿಯಂತವರೇ ಒಪ್ಪಿಕೊಂಡಿದ್ದಾರೆ ಎನ್ನುವುದು ಪ್ರತಿಯೊಬ್ಬ ಭಾರತೀಯನಿಗೆ ತಿಳಿದಿರುವ ಸಂಗತಿ. ಈ ಮಾತನ್ನು ಓವೈಸಿ ತನ್ನ ಐಷಾರಾಮಿ ಬಂಗ್ಲೆಯ ಎಸಿ ಕೋಣೆಯಲ್ಲಿ ತನ್ನ ಆಪ್ತರೊಂದಿಗೆ ಕುಳಿತು ಹೇಳಿದ್ದಲ್ಲ. ಆ ಮನುಷ್ಯ ಘಂಟಾಘೋಷವಾಗಿ ಮಾಧ್ಯಮಗಳ ಮುಂದೆ ಬಹಿರಂಗ ವೇದಿಕೆಯಲ್ಲಿ ಒದರಿದ್ದ. ಅದು ಅವನನ್ನು ಫಾಲೋ ಮಾಡುವ ಪ್ರತಿಯೊಬ್ಬ ಅವನ ಅನುನಾಯಿಗಳಿಗೂ ವೇದವಾಕ್ಯವಾಗಿದೆ. ಅದನ್ನು ಅವರು ಪಾಲಿಸಲು ಅವಕಾಶಕ್ಕಾಗಿ ಕಾಯುತ್ತಿದ್ದರು ಎನ್ನುವುದು ಸ್ಪಷ್ಟ.
ಅದಕ್ಕೆ ಅವರಿಗೆ ಅಂತಹ ಅವಕಾಶ ಒದಗಿಬಂದಿದ್ದು ಡಿಸೆಂಬರ್ 19 ರಂದು ಮಂಗಳೂರಿನ ರಾವ್ ಅಂಡ್ ರಾವ್ ಸರ್ಕಲ್ ಬಳಿ. ಸೆಕ್ಷನ್ 144 ಇದ್ದರೂ ಪ್ರತಿಭಟನೆಗೆ ಇಳಿದು, ಇಲ್ಲಿಂದ ತೆರಳಿ ಎಂದು ಪೊಲೀಸರು ವಿನಂತಿಸಿದರೂ ಕೇಳದೆ ಪ್ರತಿಭಟನಾಕಾರರ ವೇಷದಲ್ಲಿದ್ದ ನೀಚರು ಮಾಡಿದ ಕೃತ್ಯದಿಂದಲೇ ಅವರ ಜೊತೆಯಲ್ಲಿಯೇ ಇದ್ದ ಇಬ್ಬರು ಪ್ರಾಣ ಬಿಡಬೇಕಾಯಿತು. ಅಷ್ಟಕ್ಕೂ ಅದರ ನಂತರ ನಡೆದ ಅನೇಕ ಘಟನೆಗಳು ಎಲ್ಲರಿಗೂ ಗೊತ್ತಿದೆ. ಆದರೆ ನಾನೀಗ ಹೇಳಲು ಹೊರಟಿರುವುದು ಆ ಪ್ರತಿಭಟನಾಕಾರರ ವೇಷದಲ್ಲಿದ್ದ ಕೆಲವರು “ನಾವು ಪೊಲೀಸರನ್ನೆ ಕೊಲ್ಲಲು ಬಂದಿದ್ದೇವು” ಎಂದು ಬಾಯಿಬಿಟ್ಟಿರುವುದು.
ಪೊಲೀಸರು ಬಂಧಿಸಿದ ಕೆಲವರಲ್ಲಿ ಫಯಾಜ್ ಎನ್ನುವಾತ ಬಾಯಿ ಬಿಟ್ಟಿರುವ ವಿಷಯಗಳನ್ನು ನೋಡುವಾಗ ಒಮ್ಮೆ ಎದೆ ಝಲ್ ಎನ್ನುತ್ತದೆ. ಆತ ಹೇಳಿರುವ ಒಂದೊಂದೇ ಮಾತುಗಳನ್ನು ನೋಡೋಣ. ಮೊದಲನೇಯದಾಗಿ “ಮಂಗಳೂರಿನಲ್ಲಿ ಗಲಭೆ ನಡೆಸಲು ನಾವು ಪೂರ್ವ ತಯಾರಿ ನಡೆಸಿದ್ದೇವು”. ಎರಡನೇಯದಾಗಿ ಆತ ಹೇಳುವುದು “ಮಾರಕಾಸ್ತ್ರಗಳಿಂದ ಹೊಡೆದು ಪೊಲೀಸರ ಕೊಲೆಗೆ ಪ್ಲ್ಯಾನ್ ಮಾಡಿದ್ವಿ”. ಮೂರನೇಯದಾಗಿ “ಕರ್ತವ್ಯ ನಿರತ ಪೊಲೀಸರ ಕೊಲೆ ಯತ್ನ, ಪೊಲೀಸ್ ಠಾಣೆ ಸುಡಲು ಪ್ರಯತ್ನ ಮಾಡಿದ್ವಿ” ಈ ಮೂರು ವಿಷಯಗಳು ಸಾಕು, ಆವತ್ತು ಮಂಗಳೂರು ಯಾವ ಸ್ವರೂಪವನ್ನು ಪಡೆದುಕೊಳ್ಳುವ ಸಾಧ್ಯತೆ ಇತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಅದರೊಂದಿಗೆ ಪೊಲೀಸರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಬಂದಿದ್ದವರ ಫೋಟೋಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಮಂಗಳೂರಿನ ಕಣ್ಣೂರು ನಿವಾಸಿ 30 ವರ್ಷದ ಮೊಹಮ್ಮದ್ ಶಾಕೀರ್, ತೊಕ್ಕೊಟ್ಟುವಿನ 26 ವರ್ಷದ ತಂಜೀಲ್, ಉಡುಪಿ ಶಿರ್ವದ 21 ವರ್ಷದ ಆಸೀಫ್, ಕೈಕಂಬದ 30 ವರ್ಷದ ಅರ್ಜಾನ್, ಕಾವೂರಿನ 27 ವರ್ಷದ ಫಯಾಜ್ ಮೊಹಮ್ಮದ್, ಕಸಬಾ ಬೆಂಗ್ರೆಯ 20 ವರ್ಷದ ಮೊಹಮ್ಮದ್ ಸೊಹೈಲ್, ಕುದ್ರೋಳಿಯ 28 ವರ್ಷದ ಅಬ್ದುಲ್ ಜಲೀಲ್, ವಿದ್ಯಾನಗರದ 20 ವರ್ಷದ ಅಬ್ದುಲ್ ಹಫೀಜ್, ಬಂಟ್ವಾಳದ 24 ವರ್ಷದ ನಜೀಮ್ ಬಂಧಿತರಲ್ಲಿ ಪ್ರಮುಖರಾಗಿದ್ದಾರೆ.
ಇಲ್ಲಿ ನೋಡಬೇಕಾದ ಪ್ರಮುಖ ಅಂಶವೆಂದರೆ ಇವರನ್ನೆಲ್ಲ ಒಂದು ವರ್ಷ ಒಂದು ಕೋಣೆಯೊಳಗೆ ಹಾಕಿ ಸಿಎಎ ಬಗ್ಗೆ ನಿತ್ಯ ಪಾಠ ಮಾಡಿದರೂ ಅದು ಇವರ ತಲೆಗೆ ಹತ್ತುವ ಚಾನ್ಸ್ ಇಲ್ಲ. ಹಾಗಿರುವಾಗ ಇವರು ಮುಖಕ್ಕೆ ಬಟ್ಟೆ ಕಟ್ಟಿ ಕೈಯಲ್ಲಿ ಪೆಟ್ರೋಲ್ ಬಾಂಬ್ ಹಿಡಿದು ಪೊಲೀಸ್ ಠಾಣೆಯೊಳಗೆ ದೀಪಾವಳಿ ಆಚರಿಸಲು ಬಂದಿದ್ದರು ಎಂದು ಕಾಂಗ್ರೆಸ್ಸಿಗರು ಹೇಳಿದರೆ, ಸುಮಾರಸ್ವಾಮಿ ಸಿಡಿ ಬಿಡುಗಡೆ ಮಾಡಿದರೆ ಅದನ್ನು ನಂಬುವ ಸ್ಥಿತಿಯಲ್ಲಿ ಮಂಗಳೂರಿನ ಜನರು ಖಂಡಿತ ಇಲ್ಲ. ಈ ಗಲಭೆಯಿಂದ ಮಂಗಳೂರು 20 ವರ್ಷ ಹಿಂದಕ್ಕೆ ಹೋಯಿತು ಎಂದು ಮಾಜಿ ಶಾಸಕ ಮೊಯ್ದೀನ್ ಬಾವ ಸಹೋದರ ಹಾಲಿ ಎಂಎಲ್ ಸಿ ಫಾರೂಕ್ ಹೇಳುತ್ತಿದ್ದಾರೆ. ಹಾಗಾದರೆ 20 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋದದ್ದು ಯಾರೆಂದು ಪೊಲೀಸರು ಬಿಡುಗಡೆ ಮಾಡಿರುವ ಆರೋಪಿಗಳ ಪಟ್ಟಿ ಇದೆಯಲ್ಲ, ಅದನ್ನು ನಿಮ್ಮ ಬಂಗ್ಲೆಯ ಗೋಡೆಗೆ ಫ್ರೇಮ್ ಹಾಕಿಸಿ ಇಡಿ. ನಿಮಗೆ ಆಗಾಗ ನೋಡುವಾಗ ಈ ಹೆಸರುಗಳು ನೆನಪಿಗೆ ಬರುತ್ತದೆ. ಪ್ರತಿಭಟನೆ ಮಾಡಬೇಕು ನಿಜ, ಆದರೆ ಪೊಲೀಸರನ್ನು ಕೊಂದು ಪ್ರತೀಕಾರ ತೀರಿಸುವ ಪ್ರತಿಭಟನೆಯನ್ನು ಹೋರಾಟ ಎನ್ನುತ್ತಾರಾ? ಅಷ್ಟಕ್ಕೂ ಸಿಎಎ ಪೊಲೀಸರು ಜಾರಿಗೆ ತರುವುದಾ? ಅದರಲ್ಲಿ ಒಬ್ಬನೇ ಒಬ್ಬ ಭಾರತೀಯ ಮುಸಲ್ಮಾನನಿಗೆ ತೊಂದ್ರೆ ಇಲ್ಲ ಎಂದು ಬಂಗಾರದ ಹಾಳೆಯಲ್ಲಿ ಬರೆದು ಕೊಟ್ಟರೂ ನೀವು ನಂಬಲ್ಲ ಎಂದರೆ ಕಾಂಗ್ರೆಸ್, ಜೆಡಿಎಸ್ ನಾಯಕರು ಇದೇ ಮೇಲಿನ ಯುವಕರನ್ನು ದಾರಿ ತಪ್ಪಿಸಿರುವುದು ಗ್ಯಾರಂಟಿಯಾಗಿದೆ ಎನ್ನುವುದರಲ್ಲಿ ನನಗೆ ಸಂಶಯ ಕಾಣುವುದಿಲ್ಲ!!
Leave A Reply