• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕೇಂದ್ರ ನೀರಾವರಿ ಸಚಿವರಿಗೆ ಸಿಡ್ಲುಸಿ ನಿಯೋಗ ಎತ್ತಿನಹೊಳೆಗೆ ಕಳುಹಿಸಲು ನಳಿನ್ ಪತ್ರ…

Tulunadu News Posted On March 17, 2020
0


0
Shares
  • Share On Facebook
  • Tweet It

ಪಂಪ್ ವೆಲ್ ಪ್ಲೈ ಒವರ್ ಮುಗಿದ ನಂತರ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ, ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲ್ ಅವರನ್ನು ಯಾವ ವಿಷಯದಲ್ಲಿ ಹಣಿಯುವುದು ಎಂದು ಚಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿದ್ದ ಅವರ ವಿರೋಧಿಗಳಿಗೆ, ಹಿತಶತ್ರುಗಳಿಗೆ ಕೊನೆಗೂ ವಿಷಯವೊಂದು ಸಿಕ್ಕಿದೆ. ಅದು ಎತ್ತಿನಹೊಳೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಎತ್ತಿನಹೊಳೆ ಯೋಜನೆಯ ಕಾಮಗಾರಿಗೆ ಅನುದಾನವಾಗಿ ಈ ಬಾರಿಯ ಬಜೆಟಿನಲ್ಲಿ 1500 ಕೋಟಿ ರೂಪಾಯಿ ಮೀಸಲಿಟ್ಟಿರುವುದು ನಮಗೆಲ್ಲಾ ಗೊತ್ತೆ ಇದೆ. ಅದನ್ನೇ ಗುರಿಯಾಗಿಟ್ಟುಕೊಂಡು ಸಂಸದರನ್ನು ಟೀಕಿಸುವ ಪ್ರಕ್ರಿಯೆ ಶುರುವಾಗಿದೆ. ಹಿಂದೆ ಎತ್ತಿನಹೊಳೆ ತಿರುವು ಯೋಜನೆ ವಿರುದ್ಧವಾಗಿ ಪಾದಯಾತ್ರೆ ಮಾಡಿದ್ದ ಸಂಸದರು ಈಗ ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಲಾಗುತ್ತಿದೆ. ಹಾಗೇ ಪ್ರಶ್ನಿಸುವವರಲ್ಲಿ “ಬೇರೆ ಜಿಲ್ಲೆಗಳ ಜನರಿಗೆ ಕುಡಿಯುವ ನೀರಿನ ಕೊರತೆ ಇದ್ದಾಗ ಮಳೆಗಾಲದಲ್ಲಿ ಹೆಚ್ಚುವರಿ ನೀರನ್ನು ಇಲ್ಲಿಂದ ಅತ್ತ ಕಳುಹಿಸುವುದಾದರೆ ನಿಮ್ಮ ವಿರೋಧ ಇದೆಯಾ ಎಂದರೆ ಇಲ್ಲ” ಎನ್ನುತ್ತಾರೆ. ಹಾಗಾದರೆ ಹೋರಾಟಗಾರರಲ್ಲಿ ದ್ವಂದ್ವತೆ ಇರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

ಎತ್ತಿನಹೊಳೆ ನೀರನ್ನು ಇಲ್ಲಿಂದ ಬಯಲುಸೀಮೆಗೆ ಕಳುಹಿಸುವುದು ವಾಸ್ತವಿಕವಾಗಿ ಸಾಧ್ಯವಾ ಎನ್ನುವುದು ಬೇರೆ ವಿಷಯ. ಅದಕ್ಕೆ ಬೀದಿಬದಿಯಲ್ಲಿ ನಿಂತು ಉತ್ತರಿಸಲು ಸಾಧ್ಯವಿಲ್ಲ. ಆದರೆ ನಮ್ಮ ರಾಜ್ಯವನ್ನೇ ಒಂದು ಕುಟುಂಬ ಎಂದು ಪರಿಗಣಿಸುವುದಾದರೆ ಆಗ ನಮ್ಮ ರಾಜ್ಯದ ಇನ್ನೊಂದು ಭಾಗದಲ್ಲಿ ವಾಸಿಸುವ ಸಹೋದರ, ಸಹೋದರಿಯರಿಗೆ, ಹಿರಿಯ ಜೀವಗಳಿಗೆ, ಪುಟಾಣಿಗಳಿಗೆ ಕುಡಿಯಲು ನೀರಿನ ಕೊರತೆ ಇದ್ದಾಗ ನಾವು ಕೈ ಎತ್ತಿ ನೀರು ಕೊಡುವ ಅವಕಾಶ ಸಿಕ್ಕಿದರೆ ಅದು ನಮ್ಮ ಭಾಗ್ಯ ಎಂದು ಅಂದುಕೊಂಡ ಸಂಸ್ಕೃತಿ ನಮ್ಮದು. ಹಾಗಿರುವಾಗ ನೀರು ಕೊಡುವುದು ಬೇಡಾ ಎನ್ನುವುದಕ್ಕೆ ಯಾರೂ ತಯಾರಿಲ್ಲ. ಆದರೆ ಕೊಡಲು ಸಾಧ್ಯವಿಲ್ಲ ಎನ್ನುವುದೇ ಎಲ್ಲರ ಸಮಜಾಯಿಷಿಕೆ. ನಳಿನ್ ಕುಮಾರ್ ಕಟೀಲ್ ಸಂಸದರಾಗಿ, ಭಾಜಪಾ ರಾಜ್ಯಾಧ್ಯಕ್ಷರಾಗಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ವಸುದೈವ ಕುಟುಂಬಕಂ ಎಂದು ಬೋಧಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಟ್ಟಾಳುವಾಗಿ ಈ ವಿಷಯವನ್ನು ಸ್ವೀಕರಿಸಿದ್ದಾರೆ. ಅವರು ಕೇಂದ್ರ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಶುದ್ಧಿಕರಣ ಇಲಾಖೆಯ ಸಚಿವರಾಗಿರುವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ವೈಯಕ್ತಿಕ ಪತ್ರ ಬರೆದಿದ್ದಾರೆ. ಅದರಲ್ಲಿ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಯಾಗಿರುವ ಎತ್ತಿನಹೊಳೆ ಯೋಜನೆಯಿಂದ ವಾಸ್ತವವಾಗಿ ಎಷ್ಟು ಜನರಿಗೆ ಕುಡಿಯುವ ನೀರು ಲಭ್ಯವಾಗಲಿದೆ ಮತ್ತು ಈ ಯೋಜನೆಯ ಒಟ್ಟು ಯೋಜನಾಗಾತ್ರ ಎಷ್ಟು ಎನ್ನುವುದನ್ನು ತಿಳಿಸಬೇಕು ಎಂದು ಮನವಿ ಮಾಡಿದ್ದಾರೆ. ಇನ್ನು ಸೆಂಟ್ರಲ್ ವಾಟರ್ ಕಮೀಷನ್ ಇದರ ನಿಯೋಗವನ್ನು ಯೋಜನಾ ಸ್ಥಳಕ್ಕೆ ಕಳುಹಿಸಿ ಅದರ ಸಮಗ್ರ ವರದಿ ತಯಾರಿಸಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಶೀಘ್ರದಲ್ಲಿ ಸಲ್ಲಿಸಲು ತಾವು ನಿರ್ದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದು ಸಂಸದರ ನಿಜವಾದ ಕಳಕಳಿ. ನಳಿನ್ ಕುಮಾರ್ ಕಟೀಲ್ ಅವರು ಸಂಸದರಾಗಿ ಹನ್ನೊಂದು ವರ್ಷ ಪೂರೈಸುತ್ತಿದ್ದಾರೆ. ಅವರು ಇಲ್ಲಿಯ ತನಕ ಪ್ರಚಾರಕ್ಕಾಗಿ ಹಂಬಲಿಸಿದವರಲ್ಲ. ಅವರು ಮನಸ್ಸು ಮಾಡಿದರೆ ತಿಂಗಳಿಗೆ ನಾಲ್ಕು ಚಾನೆಲ್ ಗಳಲ್ಲಿ ಕುಳಿತು ಪ್ರಚಾರ ಪಡೆಯಬಹುದಿತ್ತು. ಆದರೆ ಅವರು ಹಾಗೆ ಮಾಡಿಲ್ಲ. ಪತ್ರಿಕಾಗೋಷ್ಟಿಗಳನ್ನು ಬೆರಳೆಣಿಕೆಯಷ್ಟು ಮಾಡಿದ್ದಾರೆ. ಅದಕ್ಕೆ ಕಾರಣ ಕೆಲಸ ಗರಿಷ್ಟ, ಪ್ರಚಾರ ಕನಿಷ್ಟ ಎನ್ನುವ ನಿಲುವು. ನಳಿನ್ ಅವರು ಮನವಿ ಮಾಡಿದಂತೆ ಸಿಡ್ಲುಸಿ ನಿಯೋಗ ಬಂದು ವರದಿ ಸಲ್ಲಿಸಿದ ನಂತರ ಎಲ್ಲವೂ ಸ್ಪಷ್ಟವಾಗಲಿದೆ. ಅದನ್ನು ಬಿಟ್ಟು ಸಂಸದರು ಎತ್ತಿನಹೊಳೆಗೆ ಪರ ಇದ್ದಾರೆ ಎಂದು ರಸ್ತೆಯಲ್ಲಿ ನಿಂತು, ಸಾಮಾಜಿಕ ಜಾಲತಾಣಗಳಲ್ಲಿ ಬೊಬ್ಬೆ ಹಾಕಿದರೆ ಏನೂ ಪ್ರಯೋಜನವಿಲ್ಲ. ಜಿಲ್ಲೆಯ ಜನ ಅವರನ್ನು ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯಲ್ಲಿಯೇ ಅತ್ಯಧಿಕ ಅಂತರದಿಂದ ಗೆಲ್ಲಿಸಿದ್ದಾರೆ. ಅವರ ಮತಗಳಿಕೆ ಚುನಾವಣೆಯಿಂದ ಚುನಾವಣೆಗೆ ದುಪ್ಪಟ್ಟಾಗುತ್ತಿದೆ. ಪಂಪ್ ವೆಲ್ ಪ್ಲೈ ಒವರ್ ನಿಧಾನಗತಿಯಲ್ಲಿಯೂ ನಳಿನ್ ಕುಮಾರ್ ಕಟೀಲ್ ತಪ್ಪಿರಲಿಲ್ಲ. ಹಾಗೆ ನಮ್ಮ ಜೀವ ನದಿಯ ವಿಷಯದಲ್ಲಿಯೂ ಅವರು ತಪ್ಪು ಮಾಡುವ ಸಾಧ್ಯತೆ ಇಲ್ಲ.

0
Shares
  • Share On Facebook
  • Tweet It




Trending Now
ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
Tulunadu News March 2, 2026
ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
Tulunadu News March 2, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
    • ಕೇರಳ ಇನ್ನು ಮುಂದೆ ಕೇರಳಂ!
    • ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
  • Popular Posts

    • 1
      ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • 2
      ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • 3
      ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • 4
      ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • 5
      ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!

  • Privacy Policy
  • Contact
© Tulunadu Infomedia.

Press enter/return to begin your search