ನಾಳೆ ಬೆಳಿಗ್ಗೆ ಭಾರತದ ಎಲ್ಲಾ ವೈದ್ಯರು ನಾವು ಮುಸ್ಲಿಮರಿಗೆ ಚಿಕಿತ್ಸೆ ಕೊಡಲು ಆಗಲ್ಲ, ಅವರು ಹಲ್ಲೆ ಮಾಡುತ್ತಾರೆ ಎಂದು ಹೇಳಿದರೆ ಏನಾಗುತ್ತದೆ. ಒಂದು ವೇಳೆ ಎಲ್ಲಾ ನರ್ಸಗಳು ನಾವು ಮುಸ್ಲಿಮ್ ರೋಗಿಗಳ ಆರೈಕೆ ಕೆಲಸ ಮಾಡಲ್ಲ ಎಂದರೆ ಏನಾಗುತ್ತದೆ. ಇನ್ನು ಆಶಾ ಕಾರ್ಯಕರ್ತೆಯರು ಮುಸ್ಲಿಮರೇ ಇರುವ ಗಲ್ಲಿಗಳಲ್ಲಿ ಕಾಲಿಡಲ್ಲ ಎಂದರೆ ಏನಾಗುತ್ತದೆ. ಪೊಲೀಸ್ ಇಲಾಖೆ ಮುಸ್ಲಿಮರ ರಕ್ಷಣೆಗೆ ನಾವಿಲ್ಲ ಎಂದರೆ ಏನಾಗುತ್ತದೆ. ಆಗ ಮುಸ್ಲಿಂ ಮುಖಂಡರು ಇದಕ್ಕೆಲ್ಲಾ ಮೋದಿಯೇ ಕಾರಣ ಎಂದು ಹೇಳಿ ಮೋದಿಯವರ ರಾಷ್ಟ್ರದಲ್ಲಿ ಮುಸ್ಲಿಮರಿಗೆ ಸ್ವಾತಂತ್ರ್ಯ ಇಲ್ಲ ಎಂದು ಬೊಬ್ಬೆ ಹೊಡೆಯುತ್ತಾರೆ.
ಮೋದಿಯವರು ಮುಸ್ಲಿಂ ವಿರೋಧಿ ಎಂದು ಹಣೆ ಪಟ್ಟಿಕಟ್ಟುತ್ತಾರೆ. ಜಾಗತಿಕವಾಗಿ ಮೋದಿ ಹೆಸರು ಹಾಳಾಗಲು ಏನೇನು ಮಾಡಬೇಕು ಅದೆಲ್ಲಾ ಮಾಡುತ್ತಾರೆ. ಈಗಲೂ ಕೆಲವರು ಮೋದಿ ಮುಸ್ಲಿಮರ ಒಗ್ಗಟ್ಟನ್ನು ಮುರಿಯಲು ಹೀಗೆ ಕೊರೊನಾ ನಾಟಕ ಆಡುತ್ತಿದ್ದಾರೆ ಎಂದು ವ್ಯಂಗ್ಯವಾಗಿ ಮಾತನಾಡುತ್ತಿದ್ದಾರೆ. ಈಗ ಕೊರೊನಾ ಸೊಂಕಿತರು ಅಥವಾ ಶಂಕಿತರು ವೈದ್ಯರು ತಮಗೆ ಚಿಕಿತ್ಸೆ ಮಾಡುತ್ತಿದ್ದರೆ ಕೆಟ್ಟ ಶಬ್ದಗಳಿಂದ ಬೈಯುತ್ತಿದ್ದಾರೆ. ಅವರ ಮೇಲೆ ಕಲ್ಲು ಬಿಸಾಡುತ್ತಿದ್ದಾರೆ. ತಮಗೆ ಆರೈಕೆ ಮಾಡುತ್ತಿರುವ ನರ್ಸ, ದಾದಿಯರನ್ನು ಅಶ್ಲೀಲ ಚಿಹ್ನೆಗಳ ಮೂಲಕ ಸನ್ನೆ ಮಾಡಿ ಮುಜುಗರ ಮಾಡುತ್ತಿದ್ದಾರೆ. ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಹುಬ್ಬಳ್ಳಿಯಲ್ಲಿಯೇ ಪೊಲೀಸರ ಮೇಲೆ ಮುಸ್ಲಿಮರ ಗುಂಪೊಂದು ಮಸೀದಿಯೊಳಗೆ ನೂರಾರು ಸಂಖ್ಯೆಯಲ್ಲಿ ಸೇರಿ ನಮಾಜ್ ಮಾಡಬಾರದು ಎಂದದ್ದಕ್ಕೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಇದೆಲ್ಲ ಏನನ್ನು ಸೂಚಿಸುತ್ತದೆ? ಒಬ್ಬ ವೈದ್ಯ, ನರ್ಸ, ಪೊಲೀಸ್, ಆಶಾ ಕಾರ್ಯಕರ್ತೆ ತಮ್ಮ ಪ್ರಾಣ ಒತ್ತೆ ಇಟ್ಟು ಕೆಲಸ ಮಾಡುತ್ತಿದ್ದಾರೆ. ಅವರ ಶ್ರಮಕ್ಕೆ ಬೆಲೆ ಕಟ್ಟುವ ಒಬ್ಬನೇ ಒಬ್ಬ ಮನುಷ್ಯ ಇನ್ನೂ ಹುಟ್ಟಿಲ್ಲ. ನಾವು ಮನೆಯಲ್ಲಿ ಮಲಗಿ ಚಿಪ್ಸ್ ತಿನ್ನುತ್ತಾ ಟಿವಿ ನೋಡಿ ಗಮ್ಮತ್ ಮಾಡುತ್ತಿದ್ದರೆ ಆ ಆರೋಗ್ಯ ಯೋಧರು ನಮಗಾಗಿ ಜೀವ ತೇಯುತ್ತಿದ್ದಾರೆ.
ಯಾರಾದರೂ ತಮ್ಮ ಫೇಸ್ ಬುಕ್ ನಲ್ಲಿ ದೆಹಲಿಯ ತಬ್ಲೀಕ್ ಬಗ್ಗೆ ಏನಾದರೂ ವಾಸ್ತವದ ವಿಡಿಯೋ, ಫೋಟೋ ಹಾಕಿದರೂ ಅಂತವರನ್ನು ಗುರಿ ಮಾಡಲಾಗುತ್ತದೆ. ಇಷ್ಟೆಲ್ಲಾ ಆದರೂ ಆ ಮೌಲ್ವಿ ಸಾದ್ ” ನಿಜಾಮುದ್ದಿನ್ ಮಸೀದಿಯಲ್ಲಿ ಬಂದು ಪ್ರಾಣ ಬಿಟ್ಟರೆ ಸ್ವರ್ಗ ಸಿಗುತ್ತದೆ” ಎಂದು ಹೇಳುತ್ತಾ ಇನ್ನಷ್ಟು ಜನರನ್ನು ಹುರಿದಂಬಿಸುತ್ತಾರೆ. ನಾನು ಹೇಳುವುದು ಏನೆಂದರೆ ಪ್ರತಿಯೊಬ್ಬರಿಗೂ ಅವರ ನಂಬಿಕೆ ಮುಖ್ಯ. ಮುಸ್ಲಿಮರಿಗೆ ಯಾರೂ ನಿಮ್ಮ ಧರ್ಮದ ಆಚರಣೆಯನ್ನು ಮಾಡಬೇಡಿ ಎಂದಿಲ್ಲ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ನಮಾಜ್ ಗೆ ಮಸೀದಿಗೆ ಗುಂಪು ಗುಂಪಾಗಿ ತೆರಳಿದರೆ ಆಗ ಕೊರೊನಾ ಎನ್ನುವ ಸಾಂಕ್ರಾಮಿಕ ರೋಗ ನಿಮ್ಮನ್ನು ಆಕ್ರಮಿಸಿಕೊಂಡರೆ ಇನ್ನಷ್ಟು ಸೊಂಕಿತರು ಹುಟ್ಟಿಕೊಳ್ಳುತ್ತಾರೆ ಎನ್ನುವ ಕಾರಣದಿಂದ ನಮಾಜನ್ನು ಮಾಡಲು ಮಸೀದಿಗೆ ಹೋಗಬೇಡಿ ಎಂದು ಹೇಳಲಾಗುತ್ತದೆ. ಆದರೆ ಕೆಲವರು ಇದು ನಮ್ಮ ಧರ್ಮದ ಮೇಲಿನ ಪ್ರಹಾರ ಎಂದು ಅಂದುಕೊಂಡು ಇನ್ನಷ್ಟು ಹೆಚ್ಚು ಸಂಖ್ಯೆಯಲ್ಲಿ ಮಸೀದಿಗೆ ಹೋಗುತ್ತಿದ್ದಾರೆ. ಅವರನ್ನು ತಡೆಯಲು ಪೊಲೀಸರು ಹೋದಾಗ ಘರ್ಷಣೆಯಾಗುತ್ತಿದೆ. ಅಷ್ಟಕ್ಕೂ ಆಶಾ ಕಾರ್ಯಕರ್ತೆಯರು ನಿಮ್ಮ ಮೂಲ ದಾಖಲೆ ಕೇಳಲು ಬರುತ್ತಿಲ್ಲ ತಾನೆ, ಮತ್ತೆ ಯಾಕೆ ಅವರ ಮೇಲೆ ಹಲ್ಲೆ. “ನಮಗೆ ಅಲ್ಲಾ ರಕ್ಷಿಸುತ್ತಾನೆ” ಎಂದು ಹೇಳುವ ನೀವು ಕೊರೊನಾ ಸೊಂಕಿತರಾದ್ದಲ್ಲಿ ಗುಣವಾಗುವ ತನಕ ಆಸ್ಪತ್ರೆಯಿಂದ ಹಿಡಿದು ವೈದ್ಯ, ನರ್ಸಗಳನ್ನು ಸೇರಿಸಿ ಔಷಧಗಳನ್ನು ನಮ್ಮ ದೇಶದಲ್ಲಿಯೇ ಪೂರೈಸಬೇಕಲ್ಲ. ಅದಕ್ಕಾಗಿ ಎಷ್ಟೋ ವೈದ್ಯರು, ಅವರ ಸಹಾಯಕರು, ಅಧಿಕಾರಿಗಳು, ಜನಪ್ರತಿನಿಧಿಗಳು ನಿದ್ದೆ ಬಿಡಬೇಕಾದ ಪರಿಸ್ಥಿತಿ ಇದೆ ಎನ್ನುವುದು ಗೊತ್ತಾ?
ಹಾಗೆ ನೋಡಿದರೆ ಮಾರ್ಚ್, ಏಪ್ರಿಲ್, ಮೇಯಲ್ಲಿ ಹಿಂದುಗಳ ಅತೀ ಹೆಚ್ಚು ಧಾರ್ಮಿಕ ನಡೆಯುವ ಹೊತ್ತು. ಆದರೆ ಎಲ್ಲಾ ದೇವಸ್ಥಾನಗಳಲ್ಲಿ ಅದನ್ನು ಒಂದೋ ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ ಅಥವಾ ನಾಲ್ಕೈದು ಜನರೊಳಗೆ ಸಾಮಾಜಿಕ ಅಂತರ ಇಟ್ಟು ಮಾಡಿ ಮುಗಿಸಲಾಗಿದೆ. ಸರಾಸರಿ 80 ಶೇಕಡಾ ಇರುವ ಹಿಂದೂಗಳೇ ಇಷ್ಟು ಸಹಕಾರ ನೀಡುವಾಗ ನಿಮ್ಮದು ಏನ್ರೀ ಹೊಸ ರಗಳೆ? ಈಗ ದೆಹಲಿಯ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ನೂರಾರು ಜನ ಅಲ್ಲಿಂದ ತಮ್ಮ ಊರಿಗೆ ಹೋಗುವಾಗ ಅದೆಷ್ಟು ಸಾವಿರ ಜನರ ಸಂಪರ್ಕಕ್ಕೆ ಬಂದಿರಬಹುದು. ಇತನನ್ನು ಪತ್ತೆ ಹಚ್ಚಿ ಆಸ್ಪತ್ರೆಗೆ ತರುವಾಗಲೇ ಪೊಲೀಸರಿಗೆ ಸಾಕು ಸಾಕಾಗಿರುತ್ತದೆ. ಇನ್ನು ಈತನಿಂದ ಸಂಪರ್ಕ ಬಂದವರು ಯಾರು, ಎಲ್ಲಿದ್ದಾರೆ ಎಂದು ಹುಡುಕುವುದು ಹೇಗೆ?
Leave A Reply