#ವಿಲಾಸ್ಟ್ ಹೋಪ್ಸ್ ಆನ್ ಬಿಎಸ್ ವೈ. ನಮಗೆ ಬಿ.ಎಸ್ ಯಡಿಯೂರಪ್ಪನವರ ಮೇಲೆ ವಿಶ್ವಾಸ ಕಳೆದುಹೋಗಿದೆ ಎನ್ನುವ ಹ್ಯಾಶ್ ಟ್ಯಾಗ್ ಎಲ್ಲೆಡೆ ಸುದ್ದಿ ಮಾಡುತ್ತಿದೆ. ನಿಜಕ್ಕೂ ಯಡಿಯೂರಪ್ಪನವರಿಗೆ ವಯಸ್ಸಾಗಿದೆ. ಅವರು ರಾಜ್ಯವನ್ನು ನಡೆಸುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಅವರಿಗೆ 78 ರಲ್ಲಿ ಅರಳು ಮರಳು ಜೋರಾಗಿದೆ. ಬಿಜೆಪಿಯ ಹೈಕಮಾಂಡ್ 75 ವಯಸ್ಸು ದಾಟಿದವರಿಗೆ ಮುಖ್ಯಮಂತ್ರಿ ಮಾಡಲ್ಲ ಎಂದು ಯಾಕೆ ಆವತ್ತೇ ನಿರ್ಧಾರ ಮಾಡಿತ್ತು ಎನ್ನುವುದು ಇದೇ ಕಾರಣಕ್ಕೆ. ಅದನ್ನು ಮೀರಿ ಬಿಎಸ್ ವೈ ಹಟಕ್ಕೆ ಬಿದ್ದ ಕಾರಣ ಅವರಿಗೆ ಸಿಎಂ ಜವಾಬ್ದಾರಿ ನೀಡಲಾಗಿತ್ತು. ಆದರೆ ಇವತ್ತಿನ ದಿನಗಳಲ್ಲಿ ಯಡ್ಡಿಯವರ ಕೈಯಿಂದ ಸರಕಾರ ನಡೆಸುವುದು ಸಾಧ್ಯವಿಲ್ಲ ಎನ್ನುವುದು ಸಾಬೀತಾಗಿದೆ. ಈಗ ಏನಿದ್ದರೂ ಅವರ ಹೆಸರಿನಿಂದ ರಾಜ್ಯ ಸರಕಾರ ತೆವಳಿಕೊಂಡು ಸಾಗುತ್ತಿದೆ ಬಿಟ್ಟರೆ ಇಡೀ ಸರಕಾರದ ಸ್ಥಿತಿ ಸೂತ್ರ ಕಳೆದುಹೋದ ಗಾಳಿಪಟದ ಲೆವೆಲ್ಲಿಗೆ ಬಂದಿದೆ. ಹಿಂದೆ ಒಂದು ಮಾತಿತ್ತು. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡಗುತ್ತದೆ. ಅದು ಒಂದಿಷ್ಟು ಕಾಲ ನಿಜವೂ ಆಗಿತ್ತು. ಆದರೆ ಈಗ ಯಡ್ಡಿ ಮಾತನಾಡಿದರೆ ಜನ ಗಲಗಲ ನಗುವ ಪರಿಸ್ಥಿತಿ ಇದೆ. ಅಂದರೆ ಪ್ರತಿ ಒಂದು ವಸ್ತುವಿಗೂ ಎಕ್ಸಪೈರಿ ಡೇಟ್ ಎಂದು ಇರುತ್ತದೆ. ಅದರ ನಂತರ ಅದನ್ನು ಎಷ್ಟು ರಿಪೇರಿ ಮಾಡಿದರೂ ಅಷ್ಟೇ. ಹಾಗೆ ಯಡಿಯೂರಪ್ಪ ಗುಡುಗುವ ಕಾಲ ಮುಗಿದು ಹೋಗಿದೆ. ಈಗ ಏನಿದ್ದರೂ ಆ ಕ್ಷಣಕ್ಕೆ ಏನು ಅನಿಸುತ್ತದೆಯೋ ಅದು ವದರುವ ಕಾಲ. ಇನ್ನೊಂದು ಮೂರು ವರ್ಷ ಈ ಸರಕಾರ ಹೀಗೆ ಹೋದರೆ ನಂತರ ಗ್ಯಾರಂಟಿ ಮೂರಂಕೆಗೆ ಬಿಜೆಪಿ ಬರುವುದಿಲ್ಲ. ವಿಷಯ ಏನೆಂದರೆ ಯಡಿಯೂರಪ್ಪನವರು ಈಗ ಕೀ ಕೊಟ್ಟ ಗೊಂಬೆಯಂತೆ ಆಡುತ್ತಿರುವುದರಿಂದ ಅವರಿಗೆ ತಾವು ಏನು ಮಾತನಾಡುತ್ತೇವೆ ಎನ್ನುವುದು ಆ ಕ್ಷಣಕ್ಕೂ ಗೊತ್ತಿರುವುದಿಲ್ಲ. ಅಸಲಿಗೆ ಅವರು ಮುಂದಿನ ಮೂರು ವರ್ಷಗಳಲ್ಲಿ ಬಿಜೆಪಿಯ ತತ್ವ, ಸಿದ್ಧಾಂತವನ್ನು ಕಾವೇರಿಯಲ್ಲಿ ಮುಳುಗಿಸಿ ಬೂಕನಕೆರೆಗೆ ಹೊರಟು ಹೋಗಲಿದ್ದಾರೆ. ಅಷ್ಟರವರೆಗೆ ಯಾರು ಹಣದ ಮೇಲೆ “ವಿಜಯ”ದ ಇಂದ್ರನಾಗಿ ಮೆರೆಯುತ್ತಾರೋ ಮೆರೆಯಲಿದ್ದಾರೆ.
ಕೊರೊನಾವನ್ನು ಕಂಟ್ರೋಲ್ ಮಾಡಲು ತಾವು ಏನು ಮಾಡಿದ್ದೇವೆ ಎಂದು ಬಿಎಸ್ ವೈ ಮಾಧ್ಯಮದೊಂದಿಗೆ ಮಾತನಾಡುತ್ತಾ ” ಮುಸಲ್ಮಾನ ಸಮುದಾಯದ ಶಾಸಕರನ್ನು, ವಿಧಾನ ಪರಿಷತ್ ಸದಸ್ಯರನ್ನು ಕರೆದು ನಿಮ್ಮ ಸಮುದಾಯದ ಜನರಿಗೆ ಮಸೀದಿಗಳಲ್ಲಿ ನಮಾಜ್ ಮಾಡದಂತೆ ವಿನಂತಿಸಿ. ಮನೆಯಲ್ಲಿ ಮಾಡಲು ಹೇಳಿ ಎಂದಿದ್ದೇನೆ” ಎಂದು ತಿಳಿಸಿದ್ದಾರೆ. ಹಾಗೇ ಮುಸಲ್ಮಾನರ ವಿರುದ್ಧ ಯಾರಾದರೂ ಏನಾದರೂ ಟೀಕೆ, ಆರೋಪ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಶಹಬ್ಬಾಶ್ ಯಡಿಯೂರಪ್ಪನವರೇ, ದಡ ಸೇರಿದ ಮೇಲೆ ಅಂಬಿಗನನ್ನು ಎಡಕಾಲಿನಲ್ಲಿ ಒದೆಯುವುದೆಂದರೆ ಇದು. ನೀವು ಕ್ರಮ ತೆಗೆದುಕೊಳ್ಳುವುದೇ ಆದರೆ ಮೊದಲು ಶೋಭಾ ಕರಂದ್ಲಾಜೆಯವರ ಮೇಲೆ ತೆಗೆದುಕೊಳ್ಳಿ. ಅವರು ಕಾಪುವಿನಲ್ಲಿ ನಿಂತು ಅಕ್ಕಿ ಕೊಡುವ ಫೋಟೋಗಳನ್ನು ತೆಗೆಯುತ್ತಾ ಇಡೀ ಊರಿಗೆ ಕೇಳಿಸುವಂತೆ ಬೈದದ್ದು ಅವರು. ಆದರೆ ಇವತ್ತು ಕೊರೊನಾ ಈ ಪರಿ ಹೆಚ್ಚಾಗಲು ಯಾರು ಕಾರಣ ಯಡ್ಡಿಜಿ. ಮುಸಲ್ಮಾನ ಶಾಸಕರನ್ನು ಕರೆದು ವಿನಂತಿ ಮಾಡಿದೆ ಎಂದು ಹೇಳುವ ನಿಮಗೆ ಅದರಿಂದ ಏನು ಉಪಯೋಗವಾಯಿತು ಎಂದು ಗೊತ್ತಿಲ್ಲ. ಯಾಕೆಂದರೆ ಮುಸಲ್ಮಾನ ಸಮಾಜದವರು ಕೇಳುವುದು ಅವರ ಧರ್ಮಗುರುಗಳ ಮಾತು. ಮೌಲ್ವಿಗಳನ್ನು ನೀವು ಮಾತನಾಡಿದಿದ್ದರೆ ಅದು ಬೇರೆ ವಿಷಯ. ಆದರೆ ಯಾರನ್ನಾದರೂ ಕರೆದು ಯಾಕೆ ವಿನಂತಿಸಬೇಕು ಎನ್ನುವುದು ನಾನು ಕೇಳುವ ಮಾತು. ನೀವು ಹಿಂದೂ ದೇವಾಲಯದ ಆಡಳಿತ ಮಂಡಳಿಯವರಿಗೆ ನಿಮ್ಮ ಕಚೇರಿಯಲ್ಲಿಯೇ ಕುಳಿತು ಫರ್ಮಾನ್ ಹೊರಡಿಸುತ್ತೀರಿ. ಅದೇ ಮುಸಲ್ಮಾನರನ್ನು ಕರೆದು ಧಮ್ಮಯ್ಯ ಹಾಕುತ್ತೀರಿ. ಆ ಮಟ್ಟಿಗೆ ಕ್ರೈಸ್ತರು ನೀವು ಹೇಳಿದ್ದನ್ನು ದೇಶದ ಬಗ್ಗೆ ಕೊಟ್ಟ ಕರೆ ಎನ್ನುವ ರೀತಿಯಲ್ಲಿ ಒಪ್ಪಿ ಅನುಸರಿಸಿದರು. ಆದರೆ ನಿಮಗೆ ಮುಸಲ್ಮಾನರ ಕೈ ಕಾಲು ಹಿಡಿದು ಅವರನ್ನು ಒಪ್ಪಿಸುವ ಅಗತ್ಯ ಏನಿದೆ. ಕಠಿಣ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿ.
ಇನ್ನು ಆ ಜಮೀರ್ ಅಹ್ಮದ್ ತಮ್ಮ ಕ್ಷೇತ್ರದಲ್ಲಿ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆಯಾದದ್ದನ್ನು ಸಮರ್ಥಿಸುತ್ತಾರೆ. ತಮಗೆ ಹೇಳದೇ ಯಾಕೆ ಬರಬೇಕಿತ್ತು ಎನ್ನುತ್ತಾರೆ. ಹೇಳಿ ಬರಲು ಇವರೇನು ದೊಣ್ಣೆ ನಾಯಕರೇ? ಇನ್ನು ಆಶಾ ಕಾರ್ಯಕರ್ತೆಯರು ಸಿಎಎ ಬಗ್ಗೆ, ದಾಖಲೆಯ ಬಗ್ಗೆ ಕೇಳಲು ಬಂದದ್ದು ಎಂದು ಜನ ತಪ್ಪಾಗಿ ತಿಳಿದುಕೊಂಡು ಹಲ್ಲೆ ಮಾಡಿದ್ದಾರೆ ಎಂದು ಹೇಳುವ ಜಮೀರ್ ಅವರೇ ಯಾವ ದೇಶದಲ್ಲಿ ಹೀಗೆ ಹಲ್ಲೆ ಮಾಡುವ ಸ್ವಾತಂತ್ರ್ಯ ಇದೆ. ಒಟ್ಟಿನಲ್ಲಿ ಯಡ್ಡಿ ಈ ಜನ್ಮದಲ್ಲಿ ಯೋಗಿ ಆದಿತ್ಯನಾಥ ಆಗಲ್ಲ. ನಮ್ಮ ರಾಜ್ಯ ಏನಿದ್ದರೂ ಒಳ್ಳೆಯ ಮಾತು ಕೇಳದವರ ದಮ್ಮಯ್ಯ ಹಾಕುತ್ತಾ ಅಂತವರ ಕಾಲ ಕೆಳಗೆ ತೂರುವ ಕಾರ್ಯಕ್ಕೆ ಫಿಟ್ ಆಗಲಿದೆ!
ಇನ್ನು ಆ ಜಮೀರ್ ಅಹ್ಮದ್ ತಮ್ಮ ಕ್ಷೇತ್ರದಲ್ಲಿ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆಯಾದದ್ದನ್ನು ಸಮರ್ಥಿಸುತ್ತಾರೆ. ತಮಗೆ ಹೇಳದೇ ಯಾಕೆ ಬರಬೇಕಿತ್ತು ಎನ್ನುತ್ತಾರೆ. ಹೇಳಿ ಬರಲು ಇವರೇನು ದೊಣ್ಣೆ ನಾಯಕರೇ? ಇನ್ನು ಆಶಾ ಕಾರ್ಯಕರ್ತೆಯರು ಸಿಎಎ ಬಗ್ಗೆ, ದಾಖಲೆಯ ಬಗ್ಗೆ ಕೇಳಲು ಬಂದದ್ದು ಎಂದು ಜನ ತಪ್ಪಾಗಿ ತಿಳಿದುಕೊಂಡು ಹಲ್ಲೆ ಮಾಡಿದ್ದಾರೆ ಎಂದು ಹೇಳುವ ಜಮೀರ್ ಅವರೇ ಯಾವ ದೇಶದಲ್ಲಿ ಹೀಗೆ ಹಲ್ಲೆ ಮಾಡುವ ಸ್ವಾತಂತ್ರ್ಯ ಇದೆ. ಒಟ್ಟಿನಲ್ಲಿ ಯಡ್ಡಿ ಈ ಜನ್ಮದಲ್ಲಿ ಯೋಗಿ ಆದಿತ್ಯನಾಥ ಆಗಲ್ಲ. ನಮ್ಮ ರಾಜ್ಯ ಏನಿದ್ದರೂ ಒಳ್ಳೆಯ ಮಾತು ಕೇಳದವರ ದಮ್ಮಯ್ಯ ಹಾಕುತ್ತಾ ಅಂತವರ ಕಾಲ ಕೆಳಗೆ ತೂರುವ ಕಾರ್ಯಕ್ಕೆ ಫಿಟ್ ಆಗಲಿದೆ!
- Advertisement -
Leave A Reply