• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸಿಂಧೂ ರೂಪೇಶ್ ಅವರೇ ನೀವು ಜಿಲ್ಲಾಧಿಕಾರಿ, ಹಾಗೆ ನಡೆದುಕೊಳ್ಳಿ!!

Hanumantha Kamath Posted On May 5, 2020
0


0
Shares
  • Share On Facebook
  • Tweet It

ಅನುಭವಿ, ಬುದ್ಧಿವಂತ, ತೀಕ್ಣ ಜ್ಞಾನದ ಜಿಲ್ಲಾಧಿಕಾರಿಯೊಬ್ಬರು ಭಾರತದ ಇವತ್ತಿನ ಪರಿಸ್ಥಿತಿಯಲ್ಲಿ ಯಾವ ಜಿಲ್ಲೆಯಲ್ಲಿ ಇದ್ದರೂ ಆ ಜಿಲ್ಲೆಗೆ ಅದೊಂದು ಭಾಗ್ಯವಿದ್ದಂತೆ. ಆದರೆ ಅಂತಹ ಸೌಭಾಗ್ಯವನ್ನು ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕರು ಪಡೆದುಕೊಂಡಿಲ್ಲ ಎನ್ನುವುದೇ ಈಗಿನ ದುರಂತ. ಕೊರೊನಾ ವಿರುದ್ಧದ ನಮ್ಮ ಹೋರಾಟದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮಗೊಬ್ಬ ಉತ್ತಮ ಜಿಲ್ಲಾಧಿಕಾರಿಯವರು ಇರಬೇಕಿತ್ತು ಎನ್ನುವುದು ಸಭ್ಯ ನಾಗರಿಕರಿಗೆ ಈಗ ಅನುಭವಕ್ಕೆ ಬರುತ್ತಾ ಇದೆ. ಹಾಗಾದರೆ ಸಿಂಧೂ ರೂಪೇಶ್ ಯೋಗ್ಯರಲ್ಲವಾ ಎಂದು ನೀವು ಕೇಳಬಹುದು. ಅವರು ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ಯಾವ ಖಡಕ್ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವುದು ಈಗ ಇರುವ ಪ್ರಶ್ನೆ. ಹೇಳಲು ಹೋದರೆ ಪುಟಗಟ್ಟಲೆ ಅವರು ತೆಗೆದುಕೊಳ್ಳುತ್ತಿರುವ ವಿಫಲ ನಿರ್ಧಾರಗಳನ್ನು ಹೇಳಬಹುದು. ಒಂದೊಂದೇ ನಿಮ್ಮ ಮುಂದೆ ಇಡಲಿದ್ದೇವೆ.

ಪಚ್ಚನಾಡಿಯ ತಪ್ಪು ಹೆಜ್ಜೆ…

ಮೊದಲನೇಯದಾಗಿ ಇಡೀ ರಾಜ್ಯದಲ್ಲಿ ಸುದ್ದಿಯಾದ ಪಚ್ಚನಾಡಿ ಸ್ಮಶಾನದ ಪ್ರಕರಣ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೂಡ ಬೆಂಗಳೂರಿನಲ್ಲಿ ಕುಳಿತು ಟ್ವಿಟ್ ಮಾಡಿ ನಮ್ಮ ಜಿಲ್ಲೆಯ ಜನಪ್ರತಿನಿಧಿಗಳನ್ನು ಟೀಕಿಸುವಂತಾಯಿತು. ಇಲ್ಲಿ ಮಂಗಳೂರು ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿಯವರ ತಪ್ಪಾದರೂ ಏನು ಇದೆ ಎಂದು ರಾಜ್ಯದ ಕಾಂಗ್ರೆಸ್ ಮುಖಂಡರಾಗಲೀ, ಜಿಲ್ಲಾ ಕಾಂಗ್ರೆಸ್ಸಿಗರಾಗಲೀ ನೋಡೇ ಇಲ್ಲ. ಪಚ್ಚನಾಡಿಯ ವಿವಾದದ ಸೃಷ್ಟಿಯಾಗಲು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರೇ ಕಾರಣ ಎಂದು ಯಾರಿಗೂ ಗೊತ್ತೆ ಆಗಲಿಲ್ಲ. ಬೇಕಾದರೆ ಒಂದು ಕ್ಷಣ ನೀವೆ ಯೋಚಿಸಿ. ಒಬ್ಬ ಕೋವಿಡ್ ಪಾಸಿಟಿವ್ ರೋಗಿ ವೆನಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಾಗ ಮೊದಲು ಅಧಿಕೃತ ಸುದ್ದಿ ಗೊತ್ತಾಗುವುದು ಜಿಲ್ಲಾ ಆರೋಗ್ಯಾಧಿಕಾರಿಗೆ ಮತ್ತು ಅವರಿಂದ ಜಿಲ್ಲಾಧಿಕಾರಿಗೆ. ಆಗ ಜಿಲ್ಲಾಧಿಕಾರಿಯವರು ಸಾಮಾನ್ಯವಾಗಿ ಏನು ಮಾಡಬೇಕು ಎಂದರೆ ಈ ಸಂದರ್ಭದಲ್ಲಿ ಜನ ಆತಂಕಕ್ಕೆ ಒಳಗಾಗದಂತೆ ಒಂದೊಂದು ಗಂಭೀರ ಹೆಜ್ಜೆ ಇಡಬೇಕು. ಆಸ್ಪತ್ರೆಯಿಂದ ಹತ್ತಿರದಲ್ಲಿರುವ ಸ್ಮಶಾನ ಅಥವಾ ವಿದ್ಯುತ್ ಚಿತಾಗಾರದ ವ್ಯವಸ್ಥೆ ಇರುವ ಸ್ಮಶಾನವನ್ನು ಗುರುತಿಸಿ ಸ್ಥಳೀಯ ಶಾಸಕರಿಗೆ ಮಾಹಿತಿ ನೀಡಿ ಅಲ್ಲಿ ಶವವನ್ನು ತೆಗೆದುಕೊಂಡು ಹೋಗುವಾಗ ವಿಜೃಂಭಿಸದೆ ಸಾಮಾನ್ಯ ಪರಿಸ್ಥಿತಿಯಲ್ಲಿ ಹೇಗೆ ತೆಗೆದುಕೊಂಡು ಹೋಗಲಾಗುತ್ತದೆಯೋ ಹಾಗೆ ಸಾಗಿಸಿ ಅಂತಿಮ ಕಾರ್ಯ ಮುಗಿಸಬೇಕು. ಆದರೆ ನಮ್ಮ ಸಿಂಧೂ ರೂಪೇಶ್ ಅತೀ ಬುದ್ಧಿವಂತಿಕೆ ತೋರಿಸಿಬಿಟ್ಟರು. ಜನಸಾಮಾನ್ಯರಿಗಿಂತ ಇವರೇ ಹೆಚ್ಚು ಹೆದರಿಬಿಟ್ಟರು. ಕೋವಿಡ್ 19 ಶವ ಉರಿಸಿದರೆ ಏನೂ ಆಗುವುದಿಲ್ಲ ಎಂದು ಒಂದಿಷ್ಟು ವಿದ್ಯೆ ಇರುವವರಿಗೆ ಗೊತ್ತೆ ಇರುತ್ತದೆ. ಸುಡುವಾಗ ಹೊರಬರುವ ಹೊಗೆಯಿಂದ ವೈರಾಣು ಸೊಂಕು ಹರಡುವುದಿಲ್ಲ ಎಂದು ಯಾರು ಬೇಕಾದರೂ ಹೇಳಬಹುದು. ಆದರೆ ನಮ್ಮ ಜಿಲ್ಲಾಧಿಕಾರಿಯವರು ಏನು ಮಾಡಿದರು ಎಂದರೆ ಸ್ಮಶಾನಕ್ಕೆ ಹೆಣ ಸಾಗಿಸುವಾಗ ಅಕ್ಷರಶ: ಕೊರೊನಾ ವೈರಾಣು ತುಂಬಿ ತುಳುಕುತ್ತಿರುವ ಟ್ಯಾಂಕರ್ ಸಾಗಿಸುತ್ತಿರುವಂತೆ ಬಿಂಬಿಸಿದರು. ಒಂದು ವೇಳೆ ಆ ಟ್ಯಾಂಕರ್ ಸೋರಿಕೆ ಆಗಿ ಹೋದರೆ ಅಕ್ಕಪಕ್ಕದ ಜನರಿಗೆ ಸೊಂಕು ತಪ್ಪಿದ್ದಲ್ಲ ಎಂದು ಜನರೇ ಭ್ರಮಿಸುವಂತೆ ಸೀನ್ ಕ್ರಿಯೆಟ್ ಮಾಡಿದರು. ಬೋಳೂರಿನ ಸ್ಮಶಾನದ ಅಕ್ಕಪಕ್ಕದ 25-30 ಮನೆಗಳ ಜನರ ಮನಸ್ಸಿನಲ್ಲಿ ತಾವು ಇಂಡಿಯಾ-ಪಾಕಿಸ್ತಾನದ ಗಡಿಯಲ್ಲಿ ಇದ್ದೇವೆನೋ ಎನ್ನುವ ವಾತಾವರಣ ಮೂಡಿಸಿದರು. ಕಿಟಕಿ, ಬಾಗಿಲು ಸರಿಯಾಗಿ ಮುಚ್ಚುವಂತೆ ಆ ಮನೆಯವರಿಗೆ ಸೂಚನೆ ಹೋಯಿತು. ಯಾರೂ ಮನೆಯಿಂದ ಹೊರಗೆ ಬರಬೇಡಿ ಎಂದು ಹೇಳಲಾಯಿತು. ಪೊಲೀಸ್ ಜೀಪುಗಳ ಮೆರವಣಿಗೆ ಬೋಳಾರಕ್ಕೆ ಹೊರಡಿತ್ತು. ಇದೆಲ್ಲಾ ನೋಡಿದಾಗ ಅಲ್ಲಿನ ಜನರು ಹೆದರಿದ್ದಲ್ಲಿ ತಪ್ಪಿಲ್ಲ. ಆದರೆ ಈ ಸೀನ್ ಕ್ರಿಯೇಟ್ ಮಾಡಿದ ಮಹಾನುಭವರು ಯಾರು? ಬೇರೆ ಯಾರೂ ಅಲ್ಲ, ನಮ್ಮ ಜಿಲ್ಲಾಧಿಕಾರಿಯವರು. ಕೊನೆಗೂ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರ ಸಕಾಲಿಕ ಪ್ರವೇಶ ಮತ್ತು ಜನರಲ್ಲಿ ವಿಶ್ವಾಸ ಮೂಡಿಸಿದ ಪರಿಣಾಮವಾಗಿ ಜನ ಒಪ್ಪಿದರು. ಅಂತಿಮಕಾರ್ಯ ನಡೆಯಿತು.

ಜಾಗೃತಿ ಮೂಡಿಸಬೇಕಾಗಿದ್ದ ಡಿಸಿ ಹರಟೆ ಹೊಡೆಯುತ್ತಿದ್ದರಾ?

ಇದರ ನಂತರ ಮರುದಿನದಿಂದಲೇ ಅಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ಜನರಲ್ಲಿ ಜಾಗೃತಿ ಮೂಡಿಸಿದರು. ಜನರಲ್ಲಿ ಒಂದಿಷ್ಟು ಧೈರ್ಯ ಬಂತು. ಕೋವಿಡ್ 19 ಶವ ಸುಟ್ಟರೆ ಏನೂ ಆಗುವುದಿಲ್ಲ ಎಂದು ಜನರಲ್ಲಿ ಭರವಸೆ ಮೂಡಿತು. ಅಷ್ಟಿರುವಾಗ ದುರಾದೃಷ್ಟವಶಾತ್ ಮತ್ತೊಬ್ಬರು ಕೊರೊನಾದಿಂದ ಮೃತಪಟ್ಟರು. ಈ ಸಂದರ್ಭದಲ್ಲಿ ಸಿಂಧೂ ರೂಪೇಶ್ ಏನು ಮಾಡಬೇಕಿತ್ತು. ಬೋಳೂರಿನ ಜನರನ್ನು ಶಾಸಕರು ಈ ಮೊದಲೇ ವಿಶ್ವಾಸಕ್ಕೆ ತೆಗೆದುಕೊಂಡಾಗಿತ್ತಲ್ಲ, ಅಲ್ಲಿಯೇ ಮತ್ತೊಂದು ಹೆಣದ ಅಂತ್ಯಸಂಸ್ಕಾರ ಮಾಡಬೇಕಿತ್ತು. ಆದರೆ ಜಿಲ್ಲಾಧಿಕಾರಿಯವರು ಅರೆಬೆಂದ ತಮ್ಮ ಜ್ಞಾನವನ್ನು ಪ್ರದರ್ಶಿಸಿಬಿಟ್ಟರು. ಶವವನ್ನು ಪಚ್ಚನಾಡಿ ಸ್ಮಶಾನದಲ್ಲಿ ಸುಡೋಣ ಎಂದುಬಿಟ್ಟರು. ಯಾಕೆ ಮೇಡಂ, ಬೋಳೂರಿನಲ್ಲಿ ಎಲ್ಲವೂ ಸರಿಯಾಗಿದೆಯಲ್ಲ, ಅಲ್ಲಿಂದ ಬೇರೆ ಕಡೆ ಶಿಫ್ಟ್ ಮಾಡಿದರೆ ಜನರಿಗೆ ತಪ್ಪು ಸಂದೇಶ ಹೋಗುತ್ತದೆ. ಸಾರ್ವಜನಿಕರು ಅಪಾರ್ಥ ಭಾವಿಸುತ್ತಾರೆ ಎಂದು ಹೇಳಿದರೂ ಮೇಡಂಗೆ ವಿಷಯದ ಸೂಕ್ಷ್ಮತೆ ಅರ್ಥವಾಗಲೇ ಇಲ್ಲ.

ಸಿಂಧೂ ರೂಪೇಶ್ ಅವರ ಮೂಲ ಸಮಸ್ಯೆ ಏನೆಂದರೆ ಅವರು ಸೂಕ್ಷ್ಮ ವಿಷಯದಲ್ಲಿಯೂ ತಮ್ಮ ಐಎಎಸ್ ಜ್ಞಾನವನ್ನು ಪ್ರದರ್ಶಿಸುವುದೇ ಇಲ್ಲ. ಎಷ್ಟೋ ಸಂದರ್ಭಗಳಲ್ಲಿ ಹತ್ತನೆ ತರಗತಿಯ ಹುಡುಗಿಯಂತೆ ವರ್ತಿಸಿಬಿಡುತ್ತಾರೆ. ಇದರಿಂದಲೇ ಅಧಿಕಾರಿಗಳು ಸಂಕಷ್ಟಕ್ಕೆ ಬೀಳುತ್ತಾರೆ. ಯಾಕೆಂದರೆ ಒಂದು ಕೋವಿಡ್ 19 ಹೆಣವನ್ನು ಆಸ್ಪತ್ರೆಯಲ್ಲಿಟ್ಟು ಏನು ಮಾಡದೇ ಸುಮ್ಮನೆ ಕುಳಿತುಬಿಟ್ಟರೆ, ಅನಾವಶ್ಯಕ ಸಮಯ ವ್ಯರ್ಥ ಮಾಡಿದರೆ ಅಥವಾ ಏನೇನೋ ನಿರ್ಧಾರ ತೆಗೆದುಕೊಂಡರೆ ಕೆಳಗಿನ ಅಧಿಕಾರಿಗಳು ಜಿಲ್ಲಾಧಿಕಾರಿಯವರನ್ನು ಪ್ರಶ್ನಿಸುವ ಹಾಗಿಲ್ಲ. ಆದರೆ ಜಿಲ್ಲಾಧಿಕಾರಿಯವರು ಏನೇನೋ ನಿರ್ಧಾರ ತೆಗೆದುಕೊಂಡು ಎಡವಟ್ಟು ಮಾಡಿಕೊಂಡರೆ ಅದರ ಹೊಣೆಯನ್ನು ಹೊತ್ತುಕೊಳ್ಳಬೇಕಾದವರು ಜನಪ್ರತಿನಿಧಿಗಳು. ಬೋಳೂರು ಅಥವಾ ಪಚ್ಚನಾಡಿಯ ಉದಾಹರಣೆಯನ್ನೇ ತೆಗೆದುಕೊಂಡರೆ ಎಲ್ಲಿಯಾದರೂ ಜಿಲ್ಲಾಧಿಕಾರಿಯ ಹೆಸರು ಬಂದಿದೆಯಾ? ಸಮರ್ಥನೆ ಕೊಟ್ಟು ಓಡಾಡಬೇಕಾದದ್ದು ಶಾಸಕರು ಮತ್ತು ಅವರ ಪಕ್ಷದ ಮುಖಂಡರು.
ಇವತ್ತಿನ ಪರಿಸ್ಥಿತಿಯಲ್ಲಿ ಕೊರೊನಾ ಹೇಗೆ ಎದುರಿಸುವುದು ಎನ್ನುವುದಕ್ಕಿಂತ ನಮ್ಮ ಜಿಲ್ಲಾಧಿಕಾರಿಯವರು ಯಾವ ಸಂದರ್ಭದಲ್ಲಿ ಯಾವ ಎಡವಟ್ಟು ನಿರ್ಧಾರ ತೆಗೆದುಕೊಂಡು ಏನು ಡ್ಯಾಮೇಜ್ ಮಾಡುತ್ತಾರೆ ಎಂದು ಆತಂಕದಲ್ಲಿ ಅವರ ಕೈಕೆಳಗಿನ ಅಧಿಕಾರಿಗಳು ಇದ್ದಾರೆ. ಕೆಲವು ಸಂದರ್ಭಗಳಲ್ಲಿ ಡಿಸಿ ಸಿಂಧೂ ರೂಪೇಶ್ ಎಷ್ಟು ನೀರಿಗೆ ಬಿದ್ದಂತೆ ವರ್ತಿಸುತ್ತಾರೆ ಎಂದರೆ ಅದರಿಂದ ಕೊರೊನಾ ಮಂಗಳೂರಿನಲ್ಲಿ ಹೆಚ್ಚಾಗುತ್ತದೆ ಎನ್ನುವ ಆತಂಕ ಇದೆ. ಅದು ಯಾವ ಸಂದರ್ಭ ಎನ್ನುವುದನ್ನು ನಾಳೆ ಉದಾಹರಣೆಯೊಂದಿಗೆ ವಿವರಿಸೋಣ !!

0
Shares
  • Share On Facebook
  • Tweet It




Trending Now
ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
Hanumantha Kamath July 30, 2025
ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
Hanumantha Kamath July 29, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!
    • ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ
    • 6 ಡ್ರೋನ್ ಗಳಲ್ಲಿ ಪಾಕ್ ನಿಂದ ಪಿಸ್ತೂಲ್, ಹೆರಾಯಿನ್ ಸಾಗಾಟ: ಧರೆಗುರುಳಿಸಿದ ಬಿಎಸ್ ಎಫ್..
    • ಶಿವದೂತ ಗುಳಿಗೆ ನಾಟಕದ "ಭೀಮರಾವ್" ರಮೇಶ್ ಕಲ್ಲಡ್ಕ ನಿಧನ!
    • ನೂರಾರು ಜನರಿಗೆ ಸಾಲಕೊಡಿಸುವ ನೆಪದಲ್ಲಿ ವಂಚನೆ: ರೋಶನ್ ಸಲ್ದಾನಾ ಪ್ರಕರಣ ಸಿಐಡಿಗೆ
    • ಕರ್ನಾಟಕದಲ್ಲಿ "ಮನೆಮನೆಗೆ ಪೊಲೀಸ್" ಏನು ಕಥೆ!
  • Popular Posts

    • 1
      ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • 2
      ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • 3
      ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • 4
      SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • 5
      ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!

  • Privacy Policy
  • Contact
© Tulunadu Infomedia.

Press enter/return to begin your search