• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಜೀವ ಉಳಿಸುವುದಕ್ಕೂ ಧರ್ಮದ ಲೇಬಲ್ ಹಚ್ಚುವುದು ಬೇಕಾ!!

Hanumantha Kamath Posted On May 29, 2020
0


0
Shares
  • Share On Facebook
  • Tweet It

ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾದ ಯುವಕನನ್ನು ಕಲ್ಲಡ್ಕದ ಯುವಕರು ತಾವು ನದಿಗೆ ಧುಮುಕಿ ಮೇಲೆ ತಂದು ಬದುಕಿಸುವ ಪ್ರಯತ್ನ ಮಾಡಿದ್ರು. ಅವನಿಗೆ ಶ್ವಾಸ ನೀಡಲು ತಮ್ಮ ಬಾಯಿಯಿಂದ ಗಾಳಿ ನೀಡಿದ್ರು. ಈ ವಾಕ್ಯದಲ್ಲಿ ಮಾನವೀಯತೆಯ ಮುಖ ನಿಮಗೆ ಕಾಣುತ್ತದೆ. ಯುವಕರ ಕಾರ್ಯದ ಬಗ್ಗೆ ಮಾಹಿತಿ ಇದೆ. ಮನುಷ್ಯತ್ವ ಇದೆ. ಆದರೆ ಈ ವಾಕ್ಯವನ್ನು ಇನ್ನೊಂದು ರೀತಿಯಲ್ಲಿ ಬರೆಯಬಹುದು.
ಕಲ್ಲಡ್ಕದ ಮುಸ್ಲಿಂ ಯುವಕರು ಹಿಂದೂ ಯುವಕನೊಬ್ಬ ನೀರಿಗೆ ಹಾರಿ ಆತ್ಮಹತ್ಯೆಗೆ ಮುಂದಾದಾಗ ತಾವು ಕೂಡ ನೀರಿಗೆ ಧುಮುಕಿ ಉಳಿಸುವ ಪ್ರಯತ್ನ ಮಾಡಿದ್ರು.
ತಾವು ರಂಜಾನ್ ಉಪವಾಸದಲ್ಲಿ ಇದ್ರೂ ಕೂಡ ತಮ್ಮ ಬಾಯಿಯಿಂದ ಗಾಳಿ ಹಾಕಿ ಹಿಂದೂ ಯುವಕನನ್ನು ಉಳಿಸಲು ಯತ್ನಿಸಿದ್ರು. ಈ ವಾಕ್ಯ ಓದುವಾಗ ನಿಮಗೆ ಏನು ಅನಿಸುತ್ತದೆ. ಹಾರಿದವನ ಮತ್ತು ಬದುಕಿಸಲು ಯತ್ನಿಸಿದವರ ಧರ್ಮ ಗೊತ್ತಾಗುತ್ತದೆ. ಮನುಷ್ಯತ್ವ ಬ್ಯಾಕ್ ಸೀಟ್ ಗೆ ಹೋಗುತ್ತದೆ. ಮುಸ್ಲಿಮ್ ಯುವಕರು ಕಷ್ಟಕಾಲದಲ್ಲಿ ಧರ್ಮ ನೋಡಲ್ಲ ಎಂದು ಬಿಂಬಿಸಿದಂತೆ ಆಗುತ್ತದೆ. ಇದನ್ನು ಸಾಮಾಜಿಕ ಜಾಲತಾಣಗಳು, ಕೆಲವು ಟಿವಿ, ಪತ್ರಿಕೆಗಳು ಹೇಗೆ ರೂಪಿಸಿ ಚರ್ಚೆ ಮಾಡಿದವು ಎಂದರೆ ಮುಸ್ಲಿಂ ಯುವಕರ ಸಾಧನೆಯ ಬಗ್ಗೆ ಎಲ್ಲಾ ಕಡೆಯಿಂದ ಪ್ರಶಂಸೆಗಳ ಮಹಾಪೂರವೇ ಹರಿದುಬಂತು. ಮುಸ್ಲಿಂ ಯುವಕರಿಗೆ ಸನ್ಮಾನ್ಯ ಮಾಡಬೇಕು ಎಂದು ಒಂದು ಧರ್ಮವೇ ತಮ್ಮ ಪಕ್ಷವೆಂದು ಗುರುತಿಸಿಕೊಂಡ ಎಎಸ್ ಡಿಪಿ ಮತ್ತು ಕಾಂಗ್ರೆಸ್ ಪಕ್ಷ ಮುಂದಾದವು. ನಾನು ಅವರನ್ನು ಪ್ರಶಂಸಿಸಬಾರದು, ಸನ್ಮಾನಿಸಬಾರದು ಎಂದು ಹೇಳುತ್ತಿಲ್ಲ. ಆದರೆ ಮುಸ್ಲಿಂ ಯುವಕರು ಹಿಂದೂ ಹುಡುಗನನ್ನು ಉಳಿಸಲು ಯತ್ನಿಸಿದ್ರು ಎನ್ನುವ ಕಾರಣಕ್ಕೆ ಹೊಗಳುವುದು ಅಸಹ್ಯ ತರುತ್ತದೆ. ಯಾಕೆಂದರೆ ಹಿಂದೂ-ಮುಸ್ಲಿಂ ಸೌಹಾರ್ದತೆ ಎನ್ನುವುದು ನಮ್ಮ ಕರಾವಳಿಯ ಮಣ್ಣಿಗೆ ಹೊಸದಲ್ಲ. ನಾವು ಒಂದೇ ತಾಯಿಯ ಮಕ್ಕಳಂತೆ ಬದುಕಿ ತೋರಿಸಿದವರು. ಆದ್ದರಿಂದ ಇದೆಲ್ಲ ವಿಪರೀತ ಏನಿಸುವುದು. ಯಾಕೆಂದರೆ ನಂತರದ ದಿನಗಳಲ್ಲಿ ನಾವು ಇದೇ ಪ್ರಕಾರ ಎಲ್ಲವನ್ನು ಧರ್ಮದ ಕನ್ನಡಕದಿಂದಲೇ ನೋಡಬೇಕಾದ ಪ್ರಸಂಗ ಬರಬಹುದು.
ಅಷ್ಟರಲ್ಲಿ ಮತ್ತೊಂದು ಘಟನೆ ನಡೆದಿದೆ. ಇವತ್ತು ಉಳ್ಳಾಲದ ಸಮೀಪ ಯುವತಿಯೊಬ್ಬಳು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಮುಂದಾದಾಗ ಜೀವರಕ್ಷಕ ಸಂಘಟನೆಯ ಇಬ್ಬರು ಯುವಕರು ತಾವು ಸಮುದ್ರಕ್ಕೆ ಧುಮುಕಿ ಬದುಕಿಸಿದ್ದಾರೆ. ಆದರೆ ಯಾವಾಗ ಮೊನ್ನೆ ಮುಸ್ಲಿಂ ಯುವಕರು ಹಿಂದೂ ಯುವಕನ ಪ್ರಾಣ ಉಳಿಸಲು ಮುಂದಾದರು ಎನ್ನುವ ಸಂಗತಿ ವೈರಲ್ ಆಗಿದ್ದ ಕಾರಣ ಈಗ ಮುಸ್ಲಿಂ ಯುವತಿಯ ಪ್ರಾಣ ಉಳಿಸಲು ಹಿಂದೂ ಯುವಕರು ಮುಂದಾದರು ಎಂದು ಕೆಲವರು ಅನಿವಾರ್ಯವಾಗಿ ಹೇಳಬೇಕಾಗಿದೆ. ನನ್ನ ಪ್ರಕಾರ ಒಂದು ಜೀವ ಉಳಿಸುವ ವಿಷಯ ಬಂದಾಗ ಅದಕ್ಕೆ ಜಾತಿ, ಮತ, ಧರ್ಮದ ಲೇಬಲನ್ನು ಹಚ್ಚುವುದು ಅಕ್ಷಮ್ಯ ತಪ್ಪು. ಯಾಕೆಂದರೆ ಒಬ್ಬನ ಪ್ರಾಣ ಉಳಿಸುವುದು ಇನ್ನೊಬ್ಬನ ಕರ್ತವ್ಯ. ಅದಕ್ಕಾಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುವ ರೋಗಿಯನ್ನು ಬದುಕಿಸುವ ವೈದ್ಯರನ್ನು ದೇವರು ಎಂದು ಕರೆಯುತ್ತೆವೆ. ವೈದ್ಯೋ ನಾರಾಯಣೋ ಹರಿ ಎಂದು ಹೇಳಲಾಗುತ್ತದೆ. ಬದುಕಿಸುವ ವೈದ್ಯರು ಹಿಂದೂ, ಮುಸ್ಲಿಂ ಎಂದು ಲೇಬಲ್ ಹಚ್ಚುವ ಪ್ರಮೇಯ ಇಲ್ಲಿಯ ತನಕ ಬಂದಿಲ್ಲ. ಅಷ್ಟಕ್ಕೂ ಮನುಷ್ಯನ ಕೂಡ ಪ್ರಾಣಿ. ಪ್ರಾಣಿಗಳಲ್ಲಿ ಜಾತಿ, ಧರ್ಮ ಹೇಗೆ ಇಲ್ಲವೋ ಹಾಗೆ ನಮ್ಮಲ್ಲಿಯೂ ಮಾಡಿದರೆ ರಗಳೆ ಇರಲಿಲ್ಲ. ಆದರೆ ಬೇರೆ ಬೇರೆ ಕಾರಣಕ್ಕೆ ಧರ್ಮಗಳು ಹುಟ್ಟಿವೆ. ಅದನ್ನು ಮನೆಯ ಗೋಡೆಗಳ ನಡುವೆ ಇಟ್ಟರೆ ಸಾಕು. ಬೀದಿಯಲ್ಲಿ ಬೇಡಾ.
ಮುಸ್ಲಿಮರಲ್ಲಿ ಒಬ್ಬರು ಉಪವಾಸದ ದಿನಗಳಲ್ಲಿ ರಕ್ತದಾನ ಮಾಡಿದ್ರು ಎನ್ನುವುದು ನಿಜಕ್ಕೂ ಗ್ರೇಟ್. ಆದರೆ ಅವರು ಮುಸ್ಲಿಮರು ಎನ್ನುವ ಕಾರಣಕ್ಕೆ ಗ್ರೇಟ್ ಆಗಬಾರದು. ಉಪವಾಸದ ಸಂದರ್ಭದಲ್ಲಿಯೂ ರಕ್ತ ನೀಡಿದ್ದಕ್ಕೆ ಗ್ರೇಟ್ ಎನಿಸಿಕೊಳ್ಳಬೇಕು. ಇನ್ನು ಹಿಂದೂಗಳ ಶೋಭಾಯಾತ್ರೆಗೆ ಮುಸ್ಲಿಮರು ಪಾನಕ ನೀಡುವುದು, ಮುಸ್ಲಿಮರ ಮಸೀದಿಗೆ ಹಿಂದೂಗಳು ಜಾಗ ಕೊಡುವುದು ಎಲ್ಲಾ ಮಾನವೀಯತೆ ಮುಖಗಳಾಗಬೇಕೆ ಹೊರತು ಹಿಂದೂ, ಮುಸ್ಲಿಂ ಎನ್ನುವ ಕಾರಣಕ್ಕೆ ವಿಶೇಷಣಗಳನ್ನು ಪಡೆದುಕೊಳ್ಳಬಾರದು!!
0
Shares
  • Share On Facebook
  • Tweet It




Trending Now
ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
Hanumantha Kamath January 23, 2026
ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
Hanumantha Kamath January 20, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
  • Popular Posts

    • 1
      ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • 2
      ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • 3
      ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • 4
      ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!

  • Privacy Policy
  • Contact
© Tulunadu Infomedia.

Press enter/return to begin your search