ರಾಜೀವ್ ಗಾಂಧಿ ಫೌಂಡೇಶನ್ ಎನ್ನುವುದು ಸಮಾಜಸೇವೆ ಎಂಬ ಮುಖವಾಡ ಹೊತ್ತ ಸಂಸ್ಥೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವ್ಯಾವ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿ ಯಾವ ರೀತಿಯಲ್ಲಿ ದುರುಪಯೋಗಪಡಿಸುತ್ತಿತ್ತು ಎನ್ನುವುದು ಈಗ ಬಯಲಿಗೆ ಬಂದಿದೆ. ಕಾಂಗ್ರೆಸ್ 2004 ರಿಂದ 2014 ರ ತನಕ ಭರ್ತಿ ಹತ್ತು ವರ್ಷ ಯಾವುದೇ ಅಂಜಿಕೆ ಇಲ್ಲದೇ ಅಧಿಕಾರ ನಡೆಸಿಕೊಂಡು ಬಂದಿತ್ತು. ಆ ಸಮಯದಲ್ಲಿ ದೇಶದಿಂದ ಓಡಿ ಹೋಗಿರುವ ಧರ್ಮ ವಿರೋಧಿ ಜಾಕೀರ್ ನೈಕ್ ನಿಂದ 50 ಲಕ್ಷ ರೂಪಾಯಿ ಫೌಂಡೇಶನ್ ಗೆ ಬಂದಿದೆ ಎಂದರೆ ನೀವು ಅರ್ಥ ಮಾಡಿಕೊಳ್ಳಿ, ಕಾಂಗ್ರೆಸ್ ಯಾವ ಮನಸ್ಥಿತಿಯನ್ನು ಹೊಂದಿದೆ ಎಂದು ಅರ್ಥವಾಗುವುದಿಲ್ಲವೇ. ಹಿಂದೂ ದೇವರುಗಳನ್ನು ಅವಹೇಳನ ಮಾಡುವ ಮತಾಂತರಿ ಜಾಕೀರ್ ನೈಕ್ ಮೂಲಭೂತವಾದಿಗಳ ಆರಾಧ್ಯ ಮನುಷ್ಯ. ಅವನು ತನ್ನ ಸುರಕ್ಷತೆಗಾಗಿ ಗಾಂಧಿ ಕುಟುಂಬಕ್ಕೆ ಹೇಗೆ ಕಪ್ಪ ಕೊಡುತ್ತಿದ್ದ ಎಂದು ಇದರಿಂದ ಸ್ಪಷ್ಟವಾಗುತ್ತಿದೆ. ಇನ್ನು ರಿಪಬ್ಲಿಕ್ ಆಫ್ ಚೀನಾದಿಂದ 90 ಲಕ್ಷ ರೂಪಾಯಿ ಇದೇ ಫೌಂಡೇಶನ್ ಗೆ ಬಂದಿದೆ. ಅದರೊಂದಿಗೆ ಇದೇ ರಾಜೀವ್ ಮಗ{!) ರಾಹುಲ್ ಮತ್ತು ಚೀನಾದ ರಾಜಕೀಯ ಪಕ್ಷಗಳ ನಡುವೆ ಅಗತ್ಯ ಸಂದರ್ಭ ಬಂದಾಗ ಮಾಹಿತಿ ವಿನಿಮಯ ಮಾಡುವ ಔಪಚಾರಿಕ ಒಪ್ಪಂದ ಕೂಡ ಆಗಿದೆ ಎನ್ನುವ ವಿಚಾರ ಕೂಡ ಈಗೀಗ ಬಯಲಿಗೆ ಬರುತ್ತಿದೆ. ನಮ್ಮ ಶತ್ರು ರಾಷ್ಟ್ರದಿಂದ ಹಣ ಪಡೆದುಕೊಳ್ಳುವ ದರ್ದು ಕಾಂಗ್ರೆಸ್ಸಿಗೆ ಬಂದಿದ್ದೇ ಒಂದು ದುರಂತ. ಅದಕ್ಕಾಗಿ ಇವತ್ತು ಚೀನಾದ ವಿರುದ್ಧ ಗಡಿಯಲ್ಲಿ ನಾವು ರಕ್ಷಣಾ ವ್ಯೂಹ ರಚಿಸುತ್ತಿದ್ದರೆ ರಾಹುಲ್ ಆದಿಯಾಗಿ ಅವರ ಪರಿವಾರದವರಿಗೆ ಏನೋ ಕಸಿವಿಸಿಯಾಗುತ್ತಿರುವುದು. ಇನ್ನು ಪಂಜಾಬ್ ನ್ಯಾಶನಲ್ ಬ್ಯಾಂಕ್ ಸಹಿತ ಕೆಲವು ಬ್ಯಾಂಕುಗಳಿಗೆ ಉಂಡೆನಾಮ ತಿಕ್ಕಿ ದೇಶ ಬಿಟ್ಟು ಓಡಿ ಹೋಗಿರುವ ಚೌಕ್ಸಿ ಕೂಡ ಇದೇ ಫೌಂಡೇಶನ್ ಗೆ ದಾರಾಳವಾಗಿ ಹಣವನ್ನು ನೀಡಿರುವುದು ಯಾಕೆಂದರೆ ಇವರು ತನ್ನ ಪರವಾಗಿ ನಿಲ್ಲಲಿ ಎನ್ನುವುದಕ್ಕೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದವರು ಕೂಡ ಈ ಫೌಂಡೇಶನ್ ಗೆ ಹಣ ನೀಡಿದ್ದಾರೆ. ಇನ್ನು ರಾಹುಲ್ ಕುಟುಂಬದವರ ಅವಸ್ಥೆ ಎಲ್ಲಿಯ ತನಕ ಎಂದರೆ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದಲೂ ಇವರು ತಮ್ಮ ಫೌಂಡೇಶನ್ ಖಾತೆಗೆ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಬಹುಶ: ಸ್ಟ್ಯಾಂಪ್ ಪ್ರಧಾನಿ ಇದ್ದಾಗ ಇವರು ಸರಕಾರದ ಹಣವನ್ನು ಎನು ಮಾಡಲು ಕೂಡ ಹೇಸುವುದಿಲ್ಲ ಎನ್ನುವುದಕ್ಕೆ ಇದೇ ಉದಾಹರಣೆ. ಪಿಎಂ ರಿಲೀಫ್ ಫಂಡ್ ನಿಂದ ಹಣ ತೆಗೆದುಕೊಂಡಿರುವುದು ಹೌದು ಎನ್ನುವುದನ್ನು ಸ್ವತ: ಚಿದಂಬರಂ ಕೂಡ ಒಪ್ಪಿಕೊಂಡಿದ್ದಾರೆ. ಏಕೆಂದರೆ ಅಕ್ರಮ ಆಸ್ತಿ ಮತ್ತು ಸರಕಾರಿ ಸೇವೆ ದುರುಪಯೋಗದ ಸಹಿತ ಅನೇಕ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿರುವ ಪಿ ಚಿದಂಬರಂ ಇದೇ ಫೌಂಡೇಶನ್ ಇದರ ಸದಸ್ಯರು ಕೂಡ ಹೌದು. ಈ ಫೌಂಡೇಶನ್ ನಲ್ಲಿ ಐದು ಮಂದಿ ಟ್ರಸ್ಟಿಗಳಿದ್ದಾರೆ. ಒಬ್ಬರು ಸೋನಿಯಾ, ಇನ್ನೊಬ್ಬರು ರಾಜೀವ್ ಹೇರ್ ಕಟ್ಟಿನ ರಾಹುಲ್, ಇನ್ನೊಬ್ಬರು ಇಂದಿರಾ ಹೇರ್ ಸ್ಟೈಲ್ ನ ಪ್ರಿಯಾಂಕಾ ವಾದ್ರಾ, ಮತ್ತೊಬ್ಬರು ತೋರಿಸಿದ ಕಡೆ ಸಹಿ ಹಾಕುವ ಮನಮೋಹನ್ ಸಿಂಗ್ ಹಾಗೂ ಇಂತಹ ವಿಷಯಗಳಲ್ಲಿ ಹಣ ಲಪಟಾಯಿಸುವಲ್ಲಿ ನಿಪುಣರಾಗಿರುವ ಪಿ ಚಿದಂಬರಂ. ಅಷ್ಟಕ್ಕೂ ಚಿದಂಬರಂ ಹೇಳುವುದೇನೆಂದರೆ ನಾವು ಪಿಎಂ ರಿಲೀಫ್ ಫಂಡ್ ನಿಂದ ಹಣ ಪಡೆದುಕೊಂಡಿರುವುದು ನಿಜ. ಆದರೆ ಆ ಹಣವನ್ನು ಚೆನೈನಲ್ಲಿ ಪ್ರಕೃತಿ ವಿಕೋಪದಂತಹ ಯಾವುದೋ ಘಟನೆಗೆ ಖರ್ಚು ಮಾಡಿದ್ದೇವೆ ಎನ್ನುತ್ತಾರವರು. ಆದರೆ ನಾನು ಹೇಳುವುದೇನೆಂದರೆ ಸರಕಾರದ ಹಣವನ್ನು ಇವರು ತಮ್ಮ ಫೌಂಡೇಶನ್ ಗೆ ವರ್ಗಾಯಿಸಿ ಸಮಾಜಸೇವೆಯ ಹೆಸರಿನಲ್ಲಿ ನಾಟಕ ಮಾಡಲು ಇವರಿಗೆ ಅನುಮತಿ ಕೊಟ್ಟವರ್ಯಾರು. ಇವರು ಚೆನೈನಲ್ಲಿ ಹಣವನ್ನು ಸದುಪಯೋಗಪಡಿಸಿದ್ದಾರೆ ಎಂದರೆ ನಂಬಲು ಭಾರತದಲ್ಲಿ ಯಾವ ಮೂರ್ಖರು ಇನ್ನು ಇಲ್ಲ. ಜನರು ಪಿಎಂ ರಿಲೀಫ್ ಫಂಡ್ ಗೆ ಹಣ ಸಹಾಯ ಮಾಡುವುದು ಅದರಿಂದ ನೈಜ ಫಲಾನುಭವಿ ಬಡವರಿಗೆ ಸೂಕ್ತ ದಾರಿಯಲ್ಲಿ ಹಣ ಹೋಗುತ್ತದೆ ಎನ್ನುವ ಕಾರಣಕ್ಕೆ ಮಾತ್ರ. ಯಾಕೆಂದರೆ ಹೃದಯ ಮತ್ತು ಕ್ಯಾನರ್ಸ್ ಶಸ್ತ್ರಚಿಕಿತ್ಸೆಗೆ ನಮ್ಮಲ್ಲಿ ಖರ್ಚು ಜಾಸ್ತಿ ಇರುವುದರಿಂದ ಅದು ಬಡವರಿಗೆ ಕೈಗೆ ಎಟುಕದ ಚಿಕಿತ್ಸೆಯಾಗಿದೆ. ಈಗ ಪ್ರಧಾನಿ ಮೋದಿಯವರು ಆಯುಷ್ಮಾನ್ ಭಾರತ್ ಯೋಜನೆ ಮಾಡಿ ಬಡ, ಮಧ್ಯಮ ವರ್ಗಕ್ಕೆ ಸಹಾಯ ಮಾಡುತ್ತಿದ್ದಾರಲ್ಲ, ಆ ಸೌಲಭ್ಯವನ್ನು ಜನ ಪಡೆಯುತ್ತಿರುವುದು ಇಂತಹುದೇ ಹಣದಿಂದ. ಆಸ್ಪತ್ರೆಗೆ ನೀವು ಸೂಕ್ತ ದಾಖಲೆ ಒದಗಿಸಿದರೆ ಅದಕ್ಕೆ ಹಣದ ನೆರವು ಕೇಂದ್ರ ನೀಡುತ್ತದೆ. ಯಾವಾಗ ಈ ಗಾಂಧಿ(!) ಕುಟುಂಬ ಸರಕಾರದ ಹಣವನ್ನು ಹೀಗೆ ಬಳಸುತ್ತಾರೆ ಎಂದ ಕೂಡಲೇ ಮೋದಿ ಈ ಬಾರಿ ಪಿಎಂ ಕೇರ್ಸ್ ಫಂಡ್ ಎನ್ನುವ ಬೇರೆ ವ್ಯವಸ್ಥೆ ಮಾಡಿ ಆ ಹಣವನ್ನು ಸೂಕ್ತವಾಗಿ ಬಳಸಲು ಯೋಜನೆ ರೂಪಿಸಿರುವುದು.
ಈ ರಾಜೀವ್ ಗಾಂಧಿ ಫೌಂಡೇಶನ್ ಯಾರದ್ದೋ ಹಣ, ಯಾವುದೋ ಇಲಾಖೆಯಿಂದ ತನಗೆ ಬೇಕಾದ ರೀತಿಯಲ್ಲಿ ತನ್ನ ಖಾತೆಗೆ ವರ್ಗಾಯಿಸಿ ದುರುಪಯೋಗ ಮಾಡುತ್ತಿದೆ ಎಂದು ರಾಜ್ಯಸಭಾ ಸುಬ್ರಹ್ಮಣ್ಯ ಸ್ವಾಮಿಯವರು ಬಹಳ ಹಿಂದೆಯೇ ಹೇಳಿದ್ದಾರೆ. ಅದಕ್ಕೆ ದಾಖಲೆಗಳು ಕೂಡ ಇದೆ ಎಂದು ಅವರು ಹೇಳುತ್ತಲೇ ಬಂದಿದ್ದಾರೆ. ಈ ಫೌಂಡೇಶನ್ ಜನರ ಆರೋಗ್ಯಕ್ಕಾಗಿ ತೆಗೆದಿಟ್ಟಿದ್ದ ಹಣಕ್ಕೂ ಕೈ ಹಾಕುತ್ತದೆ ಎಂದರೆ ಆ ಪಕ್ಷದಲ್ಲಿ ಇರುವ ಕಾರ್ಯಕರ್ತರಿಗೆ ಇನ್ನು ತಮ್ಮ ಪಕ್ಷದ ಬಗ್ಗೆ ಹೆಮ್ಮೆ ಇದೆಯಾ?
Leave A Reply