• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಜೈಲಿಗೆ ಹೋಗಿ ಬಂದವರನ್ನೇ ರಾಜ್ಯಾಧ್ಯಕ್ಷ ಮಾಡಿದ ಹೆಮ್ಮೆ ಕಾಂಗ್ರೆಸ್ಸಿಗರಿಗೆ!!

Hanumantha Kamath Posted On July 3, 2020
0


0
Shares
  • Share On Facebook
  • Tweet It

ಇನ್ನು ಸಿದ್ಧರಾಮಯ್ಯನವರು ಯಡಿಯೂರಪ್ಪನವರನ್ನು ಜೈಲಿಗೆ ಹೋಗಿ ಬಂದವರು ಎಂದು ಹೀಯಾಳಿಸುವಂತಿಲ್ಲ. ಇಲ್ಲಿಯ ತನಕ ಕಾಂಗ್ರೆಸ್ ಭತ್ತಳಿಕೆಯಲ್ಲಿದ್ದ ಅತೀ ದೊಡ್ಡ ಅಸ್ತ್ರ ಎಂದರೆ ಯಡಿಯೂರಪ್ಪನವರು ಜೈಲಿಗೆ ಹೋಗಿ ಬಂದವರು ಎಂದು ಟೀಕಿಸುವುದು, ವ್ಯಂಗ್ಯ ಮಾಡುವುದು ಮತ್ತು ಆ ಮೂಲಕ ಬಿಜೆಪಿಯನ್ನು ಭ್ರಷ್ಟಾಚಾರಿ ಎಂದು ಜರೆಯುವುದು. ಇನ್ನು ಮುಂದೆ ಜೈಲಿಗೆ ಹೋಗಿ ಬಂದವರು ಶಬ್ದ ಮಹತ್ವ ಕಳೆದುಕೊಳ್ಳುತ್ತದೆ. ಯಾಕೆಂದರೆ ಜೈಲಿಗೆ ಹೋಗಿ ಬಂದವರನ್ನೇ ಅವರು ತಮ್ಮ ಪಕ್ಷದ ರಾಜ್ಯದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಯಡಿಯೂರಪ್ಪನವರಾದರೂ ಬೆಂಗಳೂರಿನ ಜೈಲಿಗೆ ಹೋಗಿ ಬಂದವರು. ಅವರನ್ನು ರಾಜ್ಯಮಟ್ಟದ ಜೈಲಿಗೆ ಹೋದವರು ಎಂದು ಹೇಳಬಹುದೇನೋ, ಆದರೆ ಮಾನ್ಯ ಡಿಕೆ ಶಿವಕುಮಾರ್ ಸಾಹೇಬ್ರು ದೆಹಲಿಯ ತಿಹಾರ್ ಜೈಲಿಗೆ ಹೋಗಿ ಇದ್ದು ಬಂದವರು. ಆದ್ದರಿಂದ ಯಡಿಯೂರಪ್ಪನವರಿಗೆ ಹೋಲಿಸಿದರೆ ಡಿಕೆಶಿವಕುಮಾರ್ ರಾಷ್ಟ್ರೀಯ ಮಟ್ಟದ ಜೈಲಿಗೆ ಹೋದವರು. ದೊಡ್ಡ ನಾಯಕರು, ಆದ್ದರಿಂದ ದೆಹಲಿಯಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ಗೆ ಡಿಕೆಶಿಯವರದ್ದು ಸಾಧನೆ ದೊಡ್ಡದು ಎಂದು ಅನಿಸಿರಬಹುದು. ತಿಹಾರ್ ಜೈಲಿನ ಇತಿಹಾಸ ದೊಡ್ಡದಿರುವುದರಿಂದ ಜನಪಥ್ 10 ರಲ್ಲಿರುವ ಕಾಂಗ್ರೆಸ್ ಅಧಿನಾಯಕಿಗೆ ಡಿಕೆಶಿ ದೊಡ್ಡ ಮಟ್ಟದ ಸಾಧಕ ಎಂದು ಅನಿಸಿರಬಹುದು. ಒಟ್ಟಿನಲ್ಲಿ ಭ್ರಷ್ಟಾಚಾರದ ಆರೋಪದಲ್ಲಿ ಯಡ್ಡಿಜಿಯವರನ್ನು ಡಿಕೆಶಿಜಿ ಮೀರಿಸಿಬಿಟ್ಟಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ಭವಿಷ್ಯದಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳಬಲ್ಲ ವಿಷಯವಾಗಿದೆ.
ಇನ್ನು ಇಡೀ ಡಿಕೆಶಿ ಬಳಗ ತಮ್ಮ ನಾಯಕನ ಪದಗ್ರಹಣಕ್ಕೆ ಅನುವು ಮಾಡಿಕೊಟ್ಟಿರುವುದಕ್ಕೆ ಮುಖ್ಯಮಂತ್ರಿ ಯಡ್ಡಿಯವರಿಗೆ ಧನ್ಯವಾದ ಹೇಳಲೇಬೇಕು. ಇದೇ ಯಡ್ಡಿ ಪಾಪದವರ ಮದುವೆಯಾದರೆ 50 ಜನ ಮಾತ್ರ ಸೇರಬೇಕು ಎಂದು ನೋಟಿಸ್ ಬಿಡುತ್ತಾರೆ. ಅದೇ ಡಿಕೆಶಿ ಪದಗ್ರಹಣದ ಸಭಾಂಗಣ ನೀವು ಟಿವಿಯಲ್ಲಿ ಪ್ರಸಾರವಾಗುವಾಗ ನೋಡಿರಬಹುದು. ತುಂಬಿ ತುಳುಕುತ್ತಿತ್ತು. ಹಾಗೆ ಅವಕಾಶ ಮಾಡಿಕೊಡಲು ಸಾಧ್ಯವಿರುವುದು ಸ್ವತ: ಮುಖ್ಯಮಂತ್ರಿ ಅವರಿಗೆ ಮಾತ್ರ. ಸಾಮಾಜಿಕ ಅಂತರ ಎಲ್ಲಿತ್ತು. ಎಷ್ಟೇ ಮಧ್ಯಮ ವರ್ಗದವರ ಮದುವೆಯಾದರೂ ನೂರಿನ್ನೂರು ಜನರು ಮಾಮೂಲಿ. ಆದರೆ ಮದುವೆಗಳಿಗೆ 50 ಜನ ಮಾತ್ರ ಎಂದು ಹೇಳುವಾಗ ಯಡ್ಡಿ ಸರಕಾರಕ್ಕೆ ಯಾವುದೇ ಬೇಸರವಿಲ್ಲ. ಅದೇ ಡಿಕೆಶಿ ತಮ್ಮ ಕಾರ್ಯಕ್ರಮವನ್ನು 50 ಜನರೊಂದಿಗೆ ಮಾತ್ರ ಮಾಡಬಹುದಿತ್ತಲ್ಲ. ಮಾಡಿಲ್ಲ. ಯಾಕೆಂದರೆ ಅವರು ಸರಕಾರದ ನಿಯಮಗಳನ್ನು ಕ್ಯಾರ್ ಮಾಡುವುದಿಲ್ಲ. ಕೇಸು ಹಾಕಿದರೆ “ಥೂ, ಹೋಗಯ್ಯ, ಯಡ್ಡಿ ನಿನ್ನ ಕೇಸಿಗೆ ಯಾವ ನನ್ಮಗ ಹೆದರುತ್ತಾನೆ” ಎಂದು ಹೇಳಿಬಿಡುತ್ತಾರೆ. ಅಂತವರ ಮೇಲೆ ಕೇಸು ಹಾಕುವ ಮೀಟರ್ ಈಗಿನ ಬಿಜೆಪಿ ಸರಕಾರಕ್ಕೆ ಇಲ್ಲ. ಕೇಸು ಜಡಿಯುವ ತಾಕತ್ತು ಯಡ್ಯೂರಪ್ಪ ಸರಕಾರಕ್ಕೆ ಇದ್ದರೆ ಅದನ್ನು ಮಾಡಿ ತೋರಿಸಲಿ. ಅಲ್ಲಿ ನೆರೆದಿದ್ದ ಎಷ್ಟು ಮಂದಿಯ ಬಳಿ ಮಾಸ್ಕ್ ಇತ್ತು. ವಿಡಿಯೋ ನೋಡುವಾಗ ಯುಟಿ ಖಾದರ್ ಮಾಸ್ಕ್ ಮುಖಕ್ಕೆ ಹಾಕದೇ ಕುಳಿತಿದ್ದರು. ಆದ್ದರಿಂದ ಊರಿನವರಿಗೆ ಯುಟಿ ಖಾದರ್ ಅಲ್ಲಿರುವುದು ಗೊತ್ತಾಯಿತು. ಖಾದರ್ ಅಕ್ಕಪಕ್ಕ ಇಬ್ಬರು ಎಷ್ಟು ಒತ್ತೊತ್ತಾಗಿ ಕುಳಿತಿದ್ದರು ಎಂದರೆ ಖಾದರ್ ಮಂಗಳೂರಿಗೆ ಬಂದ ನಂತರ ಅವರ ಬಳಿ ಹೋಗುವವರು ಸ್ವಲ್ಪ ಎಚ್ಚರಿಕೆ ವಹಿಸಿಕೊಂಡರೆ ಒಳ್ಳೆಯದು.
ಇನ್ನು ಈ ವರ್ಚುವಲ್ ರ್ಯಾಲಿಯನ್ನು ಕಾಂಗ್ರೆಸ್ಸಿಗರಿಗೆ ಹೇಳಿಕೊಟ್ಟಿದ್ದೇ ಬಿಜೆಪಿ. ಕೆಲವು ದಿನಗಳ ಹಿಂದೆ ಕೇಂದ್ರ ಗೃಹಸಚಿವ ಅಮಿತ್ ಶಾ ಇಂತಹುದೇ ವರ್ಚುವಲ್ ರ್ಯಾಲಿ ಮೂಲಕವೇ ಬಿಹಾರ ಚುನಾವಣೆಗೆ ಚಾಲನೆ ನೀಡಿದ್ದರು. ಆಗ ಕಾಂಗ್ರೆಸ್ ಪಕ್ಷ ಕೊರೊನಾ ಸಮಯದಲ್ಲಿ ಇಂತಹ ರ್ಯಾಲಿಗಳು ಬೇಕಾ ಎಂದು ಬಿಜೆಪಿಯನ್ನು ಹಂಗಿಸಿತ್ತು. ಈಗ ಕೊರೊನಾ ಮುಗಿಲು ಮುಟ್ಟುತ್ತಿರುವಾಗ ಅರ್ಜೆಂಟಾಗಿ ದೊಡ್ಡವನಾದ ಮದುಮಗ ಗಡಿಬಿಡಿಯಲ್ಲಿ ಹಸೆಮಣೆಗೆ ಏರಲು ಒದ್ದಾಡುವವನಂತೆ ಡಿಕೆಶಿ ಅಧ್ಯಕ್ಷ ಸ್ಥಾನವನ್ನು ಏರಿಬಿಟ್ಟಿದ್ದಾರೆ. ಅವರು ಇನ್ನೆರಡು ತಿಂಗಳು ಬಿಟ್ಟು ಈ ಕಾರ್ಯಕ್ರಮ ಇಟ್ಟುಕೊಂಡಿದ್ದರೆ ಕಳೆದುಕೊಳ್ಳುವುದು ಏನೂ ಇರಲಿಲ್ಲ. ಆದರೆ ಡಿಕೆಶಿಗೆ ತಕ್ಷಣ ತಮ್ಮ ಸ್ಥಾನವನ್ನು ಆಕ್ರಮಿಸಿ ತಮ್ಮದೇ ಪಕ್ಷದ ಮುಖಂಡರ ಎದುರು ತಮ್ಮ ಪವರ್ ತೋರಿಸಬೇಕಿತ್ತು. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ನಾವು ಕೂಡ ಉಪಯೋಗಿಸಿ ಅಧಿಕಾರಕ್ಕೆ ಬರುತ್ತೇವೆ ಎಂದು ಸೂಕ್ಷ್ಮವಾಗಿ ಕಾಂಗ್ರೆಸ್ ನಿನ್ನೆ ತೋರಿಸಿಕೊಟ್ಟಿದೆ. ಇದರೊಂದಿಗೆ ರಾಜ್ಯ  ಬಿಜೆಪಿಗೆ ಇನ್ನು ಸವಾಲು ಹೆಚ್ಚಾಗಲಿವೆ. ಅದೇನೆಂದರೆ ಸಿದ್ಧರಾಮಯ್ಯ ಕೇವಲ ಹುಂಬತನದಿಂದ ಅಧಿಕಾರಕ್ಕೆ ಏರಿದವರು. ಅಂತವರನ್ನು ಹೇಗಾದರೂ ನಿಭಾಯಿಸಬಹುದಿತ್ತು. ಆದರೆ ಡಿಕೆಶಿಗೆ ಹುಂಬತನದೊಂದಿಗೆ ಪಕ್ಕಾ ಪ್ಲಾನಿಂಗ್ ಮಾಡಿ ಫೀಲ್ಡಿಗೆ ಇಳಿಯುವ ಶೈಲಿ ಗೊತ್ತಿದೆ. ಯಾರು ತುಂಬಾ ಪ್ಲಾನಿಂಗ್ ಮಾಡಿ, ಹೋಂವರ್ಕ್ ಮಾಡಿ, ಫೀಲ್ಡರ್ ಗಳನ್ನು ಸೆಟ್ ಮಾಡಿ, ದೂರದೃಷ್ಟಿ ಇಟ್ಟು ಬೇಕಾದ ಆಯುಧಗಳನ್ನು ಒಟ್ಟು ಮಾಡಿಯೇ ರಣಭೂಮಿಗೆ ಇಳಿಯುತ್ತಾರೋ ಅವರಲ್ಲಿ ಗೆಲ್ಲುವ ಛಲ ಜಾಸ್ತಿಯೇ ಇರುತ್ತದೆ. ಸಿದ್ದು ಅವರಲ್ಲಿ ಅದು ಇರಲಿಲ್ಲ. ಡಿಕೆಶಿಗೆ ಅದೇ ವರದಾನ. ಆದ್ದರಿಂದಲೇ ಅವರು ಜಿಲ್ಲಾ ಪಂಚಾಯತ್ ಸದಸ್ಯನಿಂದ ರಾಜ್ಯಾಧ್ಯಕ್ಷನ ತನಕ ಬಂದಿರುವುದು!
0
Shares
  • Share On Facebook
  • Tweet It


- Advertisement -


Trending Now
ಸ್ಮೃತಿ ಇರಾನಿ ಸಾಸ್ ಬಿ ಕಬಿ ಭಹೂ ತೀ - 2 ನಿಂದ ಮತ್ತೆ ಕಿರುತೆರೆಗೆ ವಾಪಾಸ್!
Hanumantha Kamath May 31, 2025
ದುಬೈಯಲ್ಲಿ ಕೇರಳ ಸಮಾಜದ ಕಾರ್ಯಕ್ರಮಕ್ಕೆ ಅಫ್ರಿದಿ ಅತಿಥಿ!
Hanumantha Kamath May 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸ್ಮೃತಿ ಇರಾನಿ ಸಾಸ್ ಬಿ ಕಬಿ ಭಹೂ ತೀ - 2 ನಿಂದ ಮತ್ತೆ ಕಿರುತೆರೆಗೆ ವಾಪಾಸ್!
    • ದುಬೈಯಲ್ಲಿ ಕೇರಳ ಸಮಾಜದ ಕಾರ್ಯಕ್ರಮಕ್ಕೆ ಅಫ್ರಿದಿ ಅತಿಥಿ!
    • ದಯವಿಟ್ಟು 500 ರೂಪಾಯಿ ನೋಟ್ ಬ್ಯಾನ್ ಮಾಡಿ - ಮೋದಿಗೆ ಚಂದ್ರಬಾಬು ನಾಯ್ಡು ಮತ್ತೆ ಮನವಿ!
    • ಅಯೋಧ್ಯೆಯಲ್ಲಿ ಇನ್ನು ಮಾಂಸಹಾರ, ಮದ್ಯ ಸಂಪೂರ್ಣ ನಿಷೇಧ!
    • ಪೊಲೀಸ್ ಕಮೀಷನರ್, ಎಸ್ಪಿ ವರ್ಗಾವಣೆ ಮಾಡಿ ಡ್ಯಾಮೇಜ್ ಕಂಟ್ರೋಲ್ ಮಾಡಿದ ಸರಕಾರ!
    • ಜಬ್ಬಾರ್ ನಿಂದ ರಹೀಂ ತನಕ, ದಕ್ಷಿಣ ಕನ್ನಡದ ಅಧ್ಯಾಯದಲ್ಲಿ ರಕ್ತದ ಸಹಿ ಕಂಡ ಪುಟಗಳು!
    • ಹುಬ್ಬಳ್ಳಿ ಕ್ರಿಮಿನಲ್ ಪ್ರಕರಣ ಹಿಂದೆಗೆದುಕೊಳ್ಳುವಂತಿಲ್ಲ - ಹೈಕೋರ್ಟ್ ಆದೇಶ... ರಾಜ್ಯ ಸರಕಾರಕ್ಕೆ ಮುಖಭಂಗ!
    • ಹನಿಮೂನಿಗೆ ಶಿಲ್ಲಾಂಗಿಗೆ ಹೋದ ನವಜೋಡಿ ಕಣ್ಮರೆ! ನಾಪತ್ತೆಯಾದ ಪ್ರದೇಶ ತುಂಬಾ ಡೇಂಜರ್!
    • ತಮಿಳಿನಿಂದಲೇ ಕನ್ನಡ ಹುಟ್ಟಿದ್ದು- ಕಮಲ್ ಹಾಸನ್ ಹೇಳಿಕೆಗೆ ಕರ್ನಾಟಕದಲ್ಲಿ ವಿರೋಧ..
    • ಬೆಂಗಳೂರಿನಲ್ಲಿ ಟ್ರೋಯಿಂಗ್ ಶುರು, ಮಂಗಳೂರಿನಲ್ಲಿಯೂ ಆರಂಭವಾಗಬೇಕಾ?

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search