ಮುಂದಿನ ವಾರ ನಮ್ಮ ಪ್ರಧಾನಿಯವರು ಲಡಾಕ್ ನಲ್ಲಿ ಸೇನಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇಂತಹ ವಾಕ್ಯಗಳನ್ನು ನೀವು ನಾವು ನಮ್ಮ ಜೀವಮಾನದಲ್ಲಿ ಸಾಕಷ್ಟು ಪತ್ರಿಕೆಗಳಲ್ಲಿ ಓದಿರುತ್ತೇವೆ. ಅದೇ ರೀತಿಯಲ್ಲಿ ಪ್ರಧಾನಿಯವರ ಆ ಕಾರ್ಯಕ್ರಮದ ನಂತರ ಪೂರ್ವ ನಿರ್ಧಾರಿತವಾಗಿ ಪ್ರಧಾನಿಯವರು ಲಡಾಕ್ ನಲ್ಲಿ ಸೇನೆಯ ಉನ್ನತ ಅಧಿಕಾರಿಗಳನ್ನು ಮಾತನಾಡಿಸಿದರು ಎನ್ನುವ ವಾಕ್ಯವನ್ನು ಕೂಡ ಓದಿರುತ್ತೀರಿ. ಆದರೆ ಎಲ್ಲಿಯಾದರೂ ನೀವು ಬೆಳಿಗ್ಗೆ ಎದ್ದು ಹಲ್ಲು ತಿಕ್ಕಿ, ಕಾಫಿ ಸೇವಿಸುತ್ತಾ ಆವತ್ತಿನ ಬೆಳಗ್ಗಿನ ಪೇಪರ್ ಓದುತ್ತಾ ಇರುವಾಗ ರಾಷ್ಟ್ರದ ಪ್ರಧಾನಿ 11 ಸಾವಿರ ಕಿ.ಮೀ ಎತ್ತರದ ಪರ್ವತ ಶಿಖರದಲ್ಲಿ ಯೋಧರನ್ನು ಭೇಟಿಯಾಗಲು ಹೋಗುತ್ತಿದ್ದಾರೆ ಎಂದು ಟಿವಿಗಳಲ್ಲಿ ಸುದ್ದಿ ಬಿತ್ತರವಾಗುವುದನ್ನು ನೋಡಿದ್ದೀರಾ. ನೀವು ಇನ್ನೇನೂ ಬೆಳಗ್ಗಿನ ತಿಂಡಿ ಸೇವಿಸಿ, ಸ್ನಾನಕ್ಕೆ ಹೊರಡುವಾಗ ಟಿವಿಯಲ್ಲಿ ಲೇಹ್ ಪ್ರಾಂತ್ಯದಲ್ಲಿರುವ ಸೇನಾ ಆಸ್ಪತ್ರೆಯಲ್ಲಿ ಪ್ರಧಾನಿಯವರು ಗಾಯಾಳು ಸೈನಿಕರ ಯೋಗಕ್ಷೇಮ ವಿಚಾರಿಸುತ್ತಿರುವುದನ್ನು ಕಂಡಿದ್ದೀರಾ. ನೀವು ಕಚೇರಿ ತಲುಪುವಷ್ಟರಲ್ಲಿ ಯೋಧರನ್ನು ಉದ್ದೇಶಿಸಿ ಪ್ರಧಾನಿ ಸ್ಫೂರ್ತಿಯ ಮಾತುಗಳನ್ನು ಆಡುವುದು ಕೇಳಿದ್ದೀರಾ? ಇಲ್ಲ, ಇಷ್ಟು ವರ್ಷ ಇದು ಆಗಿರಲಿಲ್ಲ. ಆದರೆ ಈಗಿನ ಭಾರತದಲ್ಲಿ ಇದು ಆಗುತ್ತಿದೆ. ಯಾಕೆಂದರೆ ಇದು ಆಗುತ್ತಿರುವುದಕ್ಕೆ ಕಾರಣ ನರೇಂದ್ರ ದಾಮೋದರದಾಸ ಮೋದಿ.
ಮೋದಿಯವರಿಗೆ ಮಾತ್ರ ಇದು ಸಾಧ್ಯ, ಟಿವಿ ಮಾಧ್ಯಮಗಳಿಗೆ ಈ ಸುದ್ದಿ ಬೆಳಿಗ್ಗೆ ಮುಟ್ಟಲು ತಡವಾಗಬಹುದು, ಆದರೆ ಮೋದಿಯವರು ಸೈನಿಕರನ್ನು ಮಾತನಾಡಿಸಲು ತಡ ಮಾಡುವುದಿಲ್ಲ. ಎಷ್ಟೋ ಟಿವಿಗಳ ಪ್ರೈಮ್ ಟೈಮ್ ನಿರೂಪಕರು ರಾತ್ರಿಯ ಡ್ಯೂಟಿ ಮುಗಿಸಿ ಬೆಳಗ್ಗೆ ಏಳುವಷ್ಟರಲ್ಲಿ ಮೋದಿ ಅಂತವರಿಗೆ ಶಾಕ್ ಕೊಟ್ಟಿರುತ್ತಾರೆ. ಅಂತಹ ನಿರೂಪಕರು ಎದ್ದು ತಯಾರಾಗಿ ಸ್ಟುಡಿಯೋ ತಲುಪುವಷ್ಟರಲ್ಲಿ ಮೋದಿ ಲೇಹ್ ನಿಂದ ದೆಹಲಿಗೆ ಬಂದಾಗಿರುತ್ತದೆ. ರಾಷ್ಟ್ರೀಯ ವಾಹಿನಿಗಳ ನಿರೂಪಕರೇ ಈ ಪರಿ ದಂಗಾಗಿರುವಾಗ ಶತ್ರು ರಾಷ್ಟ್ರದ ಸೇನಾಧಿಕಾರಿಗಳ ಕಥೆ ಹೇಗಿರಬಹುದು. ಪಾಕಿ ಪ್ರಧಾನಿ ಇಮ್ರಾನ್ ಖಾನ್ ತಣ್ಣನೆ ಎಸಿ ಹಾಕಿ ತನ್ನ ನಾಲ್ಕನೇ ಹೆಂಡತಿಯೊಂದಿಗೆ ಬೆಚ್ಚಗೆ ಮಲಗಿರುವಾಗ ತನ್ನ ಪಕ್ಕದ ರಾಷ್ಟ್ರದ ಪ್ರಧಾನಿ ಗಡಿಯಲ್ಲಿ ಸೇನಾಧಿಪತಿಗಳೊಂದಿಗೆ ಮಾತನಾಡಿ ಅವರನ್ನು ಮಾನಸಿಕವಾಗಿ ಸಿದ್ಧಗೊಳಿಸುವ ಸುದ್ದಿ ಕೇಳಿದರೆ ಇದೇ ಇಮ್ರಾನ್ ಖಾನ್ ಗೆ ಎಸಿಯಲ್ಲಿಯೂ ಬೆವರುವುದು ಮಾತ್ರ ಬಾಕಿ. ಅತ್ತ ಸಣ್ಣ ಬಾಲವಾದರೂ ಚೀನಾದ ಸಹಾಯದಿಂದ ಅಲ್ಲಾಡಿಸುತ್ತಿದ್ದ ನೇಪಾಳಕ್ಕೆ ಮೋದಿ ದೇಶದ ಮುಕುಟದಲ್ಲಿ ನಿಂತು ಯೋಧರೊಂದಿಗೆ ಮಾತನಾಡುತ್ತಿದ್ದರೆ ಅವರ ಕಥೆ ಹೇಗಾಗಬೇಡಾ. ಇತ್ತ ಚೀನಾ ವೈರಸ್ ತಯಾರಿಸಿ ಅಣುಬಾಂಬಿನಂತೆ ಬೇರೆ ದೇಶಗಳ ಮೇಲೆ ಬಿಸಾಡುವ ತಂತ್ರದಲ್ಲಿ ಬಿಝಿಯಾಗಿದ್ದರೆ “ನಮ್ಮ ಸುದ್ದಿಗೆ ಬಂದರೆ ಹುಶಾರ್, ಇರುವ ಎರಡು ಸಣ್ಣ ಕಣ್ಣುಗಳನ್ನು ಕೂಡ ಕಿತ್ತಾಕಿಬಿಡುತ್ತೇವೆ” ಎನ್ನುವಷ್ಟು ರೋಷ ನಮ್ಮ ಸೈನಿಕರಲ್ಲಿ ರಾಷ್ಟ್ರದ ನಾಯಕ ತುಂಬುತ್ತಿದ್ದರೆ ಚೀನಿಯರ ಕಥೆ ಏನಾಗಬೇಡಾ?
ಮೋದಿ ಸರ್ಪ್ರೈಜ್ ವಿಸಿಟ್ ಕೊಟ್ಟಿರುವುದೇ ಹೌದಾದರೆ ಅವರ ಬಳಿ ಅಷ್ಟು ಕೂಡಲೇ ಯೋಧರ ಸಮವಸ್ತ್ರ ಎಲ್ಲಿಂದ ಬಂತು ಎಂದು ಕೆಲವು ಅವಿವೇಕಿಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ. ಅಂತವರಿಗೆ ಏನು ಹೇಳುವುದೇಂದರೆ ಮೋದಿ ಇದು ಪ್ರಥಮ ಬಾರಿ ಸೇನಾ ನೆಲೆಗಳಲ್ಲಿ ಹೋಗುವುದಲ್ಲ. ಈ ಆರು ವರ್ಷಗಳಲ್ಲಿ ಅನೇಕ ಬಾರಿ ಹೋಗಿ ಬಂದಿದ್ದಾರೆ. ಹಾಗಿರುವಾಗ ಅವರ ಬಳಿ ಸಮವಸ್ತ್ರ ಎಲ್ಲಿಂದ ಬಂತು ಎಂದು ಕೇಳುವ ಮೂರ್ಖ ಶಿಖಾಮಣಿಗಳನ್ನು ನಾನು ಮೊದಲಬಾರಿ ಕೇಳಿದ್ದು. ನೀವು ಯಾವುದೋ ಅಪಘಾತದಲ್ಲಿ ಗಾಯಾಳಾಗಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವಾಗ ನಿಮಗೆ ನಿಮ್ಮ ವಾರ್ಡಿನ ಕಾರ್ಪೋರೇಟರ್ ಅಥವಾ ಶಾಸಕರು ಬಂದು ಹೇಗಿದ್ದೀರಿ, ಹೆದರಬೇಡಿ, ನಾನಿದ್ದೇನೆ ಎಂದು ಹೇಳಿ ಧೈರ್ಯ ತುಂಬಿದರೆ ಹೇಗಾಗುತ್ತದೆ. ಹಾಗಿರುವಾಗ ದೇಶಕ್ಕಾಗಿ ಕೆಚ್ಚೆದೆಯಿಂದ ಹೋರಾಡುತ್ತಾ, ಶತ್ರುಗಳ ಕುಟಿಲ ನೀತಿಯಿಂದ ಗಾಯಾಳಾಗಿರುವ ಯೋಧರಿಗೆ ಈ ದೇಶದ ಪ್ರಧಾನಿಯೇ ಸ್ವತ: ಬಂದು “ಹೇಗಿದ್ದೀರಿ, ನಿಮ್ಮೊಂದಿಗೆ ಇಡೀ ದೇಶ ಇದೆ” ಎಂದರೆ ಹೇಗಾಗಬೇಡಾ. ಅದನ್ನು ಮೋದಿ ಮಾಡಿ ತೋರಿಸಿದ್ದಾರೆ. ಹಾಗಂತ ಇದು ಅಂತಹ ದೊಡ್ಡ ಕಷ್ಟದ ಕೆಲಸವೂ ಅಲ್ಲ. ಒಂದು ವೇಳೆ ಭವಿಷ್ಯದಲ್ಲಿ ಬೇರೆ ಯಾರಾದರೂ ಪ್ರಧಾನಿಯಾಗಿ ಹೀಗೆನೆ ಮಾಡಿದರೂ ನಾವು ಬೆಂಬಲಿಸಬೇಕು. ಆದರೆ ವ್ಯತ್ಯಾಸ ಏನೆಂದರೆ ಮೋದಿ ಹೀಗೆ ಮಾಡುವುದು ಹೃದಯದಿಂದ. ಅಲ್ಲಿ ಕಲ್ಮಶವಿಲ್ಲ. ಇದನ್ನು ನೋಡಿ ಬೇರೆಯವರು ಮಾಡಿದರೆ ಅದು ನಾಟಕವೆನಿಸುತ್ತದೆ. ಮೋದಿಗೆ ರಾಷ್ಟ್ರಭಕ್ತಿ, ಸೈನಿಕರ ಮೇಲೆ ಗೌರವ ಹೃದಯಾಂತರಾಳದಿಂದ ಬರುತ್ತದೆ. ಕೆಲವರಿಗೆ ಫೋಟೋ, ವಿಡಿಯೋಗೆ ಮಾತ್ರ ಬರುತ್ತದೆ. ಅಷ್ಟೇ ವ್ಯತ್ಯಾಸ!
Leave A Reply