• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಎಲ್ಲಾ ಪ್ರಗತಿಪರ ಬುದ್ಧಿಜೀವಿಗಳು ಕೊರೋನಾದಿಂದ ಸತ್ತು ಹೋಗಿದ್ದಾರಾ?

Hanumantha Kamath Posted On August 13, 2020
0


0
Shares
  • Share On Facebook
  • Tweet It

ನಾವು ಹುಟ್ಟುವಾಗ ಇದೇ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕುವ ಅವಕಾಶ ಪಡೆದಿಲ್ಲ. ಹುಟ್ಟಿದ ಮೇಲೆ ಅಪ್ಪ, ಅಮ್ಮನನ್ನು ನೋಡಿ ಅವರ ಧರ್ಮವನ್ನು ಪಾಲಿಸುತ್ತಾ ಬರುತ್ತಿದ್ದೇವೆ. ಒಂದು ಕಾಲದಲ್ಲಿ ಭಾರತದಲ್ಲಿ ಸನಾತನ ಧರ್ಮ ಯಾವುದಿತ್ತು ಎನ್ನುವುದು ನಮಗೆ ಗೊತ್ತೇ ಇದೆ. ಆವಾಗ ಮುಸಲ್ಮಾನರು ಎಷ್ಟಿದ್ರು. ಹಿಂದುಗಳು ಎಷ್ಟಿದ್ರು, ಕ್ರೈಸ್ತರು ಎಷ್ಟು ಇದ್ದರು ಎನ್ನುವುದು ಇತಿಹಾಸದ ಸಂಶೋಧನೆ ಮಾಡಿದರೆ ಗೊತ್ತಾಗುತ್ತದೆ. ಆದರೂ ಧರ್ಮಗಳ ನಡುವೆ ಒಂದು ಸಹೋದರತ್ವ ಬಂದಾಗ ಮಾತ್ರ ಒಂದು ರಾಜ್ಯ, ದೇಶ ಸೌಹಾರ್ದಯುತವಾಗಿರುತ್ತದೆ. ಒಂದು ಧರ್ಮದಲ್ಲಿ ಕುಳಿತು ಮತ್ತೊಂದು ಧರ್ಮವನ್ನು ನಿಂದಿಸುವುದನ್ನು ಯಾವ ವ್ಯಕ್ತಿ ಮಾಡಿದ್ರು ಅದು ತಪ್ಪು. ಇತ್ತೀಚಿನ ವರ್ಷಗಳಲ್ಲಿ ಅದನ್ನು ಜಾಕೀರ್ ನೈಕ್ ಮಾಡುತ್ತಿದ್ದ. ಅವನು ಹಿಂದೂ ದೇವರನ್ನು ನಿಂದಿಸುವ, ತಮಾಷೆ ಮಾಡುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಇವೆ. ಅವನನ್ನು ಬಂಧಿಸಬೇಕು ಎಂದಾಗ ಆತ ದೇಶ ಬಿಟ್ಟು ಹೋದ. ಅವನು ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದ ಕಾರಣಕ್ಕೆ ಅವನ ಬ್ಯಾಂಕ್ ಖಾತೆಗಳಿಗೆ ಕೋಟ್ಯಾಂತರ ಹಣ ಬಂದು ಬೀಳುತ್ತಿತ್ತು. ಅವನ ಹಿಂದಿನ ತಲೆಮಾರು ಒಂದು ಕಾಲಕ್ಕೆ ಹಿಂದೂಗಳೇ ಆಗಿತ್ತು. ಈ ಮತಾಂತರ ಆಗುತ್ತಾರಲ್ಲ, ಅಂತವರಲ್ಲಿ ಕೆಲವರಿಗೆ ತಾವು ವಲಸೆ ಹೋದ ಧರ್ಮದವರನ್ನು ಅರ್ಜೇಂಟಾಗಿ ಒಲೈಸಬೇಕೆಂಬ ಹಪಾಹಪಿ ಇರುತ್ತದೆ. ಅದನ್ನು ಮಾಡಿದವರಿಗೆ ಹಣ ಕೊಟ್ಟು ತಮಾಷೆ ನೋಡುವ ಶ್ರೀಮಂತ ವರ್ಗವೇ ಗಲ್ಫ್ ರಾಷ್ಟ್ರಗಳಲ್ಲಿ ಇದೆ. ಆದರೆ ಶಾಂತಿಯುತ ಹಿಂದೂಗಳು ಜಾಕೀರ್ ನೈಕ್ ನ ಮನೆಯನ್ನು ಸುಟ್ಟು ಹಾಕುವ, ಅವನು ಇರುವ ಬೀದಿಯಲ್ಲಿ ಅದರ ಪಾಡಿಗೆ ಇದ್ದ ವಾಹನಗಳನ್ನು ಸುಟ್ಟು ಹಾಕಿಲ್ಲ. ಯಾವುದೇ ಪ್ರತಿಭಟನೆಗೆ ಅದರದ್ದೇ ಆಗಿರುವ ರೀತಿ ಇದೆ. ಒಂದು ವೇಳೆ ನಿಮ್ಮ ಧರ್ಮದಲ್ಲಿ ನೀವು ನಂಬುವ ಶಕ್ತಿಗಳಿಗೆ ಅವಹೇಳನಕಾರಿಯಾಗಿ ಯಾರಾದರೂ ಬರೆದರೆ ಅವರ ವಿರುದ್ಧ ದೂರು ಕೊಡಿ. ಹಾಗಂತ ಆರೋಪಿಯನ್ನು ನಮ್ಮ ವಶಕ್ಕೆ ಕೊಡಿ. ನಾವು ಬುದ್ಧಿ ಕಲಿಸುತ್ತೇವೆ ಎಂದು ಹೇಳುವುದು ಎಷ್ಟು ಸರಿ?

ಇಂತಹ ಪ್ರಕರಣಗಳಲ್ಲಿ ಅನೇಕ ಬಾರಿ ಅಭಿವ್ಯಕ್ತಿ ಸ್ವಾತಂತ್ತ್ಯ ಎನ್ನುವ ಹೆಸರಿನಲ್ಲಿ ಪ್ರಕರಣಗಳು ದಾಖಲಾಗುವುದೇ ಇಲ್ಲ. ಇನ್ನು ಕೆಲವು ಬಾರಿ ಅವಹೇಳನಕಾರಿಯಾಗಿ ಫೇಸ್ ಬುಕ್ಕಿನಲ್ಲಿ ಬರೆದವರು ನಮ್ಮ ದೇಶದಲ್ಲಿ ಇರುವುದೇ ಇಲ್ಲ. ಕೋರ್ಟಿಗೆ ಹೋಗಿ ಖಾಸಗಿ ದೂರು ದಾಖಲಿಸಬೇಕಾಗುತ್ತದೆ. Cyber Law 66 (A) ಎನ್ನುವ ಕಾನೂನು ಇಂತಹ ಪ್ರಕರಣಗಳಲ್ಲಿ ಉಲ್ಲೇಖವಾಗುತ್ತದೆ. ಆದರೆ ಕೆ.ಜಿ. ಹಳ್ಳಿ, ಡಿಜೆ ಹಳ್ಳಿ ವಿಷಯದಲ್ಲಿ ಆರೋಪಿ ನವೀನನನ್ನು ಪೊಲೀಸರು ಕೂಡಲೇ ಬಂಧಿಸಿದ್ದಾರೆ. ಆದರೆ ಪೊಲೀಸರು ಆರೋಪಿಯನ್ನು ತಮ್ಮ ಕೈಗೆ ಕೊಡಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಪುಲಕೇಶಿನಗರ ಒಂದು ರಾತ್ರಿ ಒಳಗೆ ಪಾಕಿಸ್ತಾನದ ರೂಪ ತಾಳಿತ್ತು. ಪೊಲೀಸ್ ಠಾಣೆಗೆ ನುಗ್ಗಿ ಕನ್ನಡಿ ಒಡೆಯುವುದು ಎಂದರೆ ಆ ಮತಾಂಧ ಯುವಕರು ಅದೆಷ್ಟು ಅಮಲಿನ ಗಾಂಜಾ ತಿಂದಿರಬೇಕು ಎಂದು ನೀವೆ ಊಹಿಸಿ. ಪೊಲೀಸರ ವಸತಿ ಗೃಹದ ಆವರಣದ ಗೇಟ್ ಮುರಿದು ಒಳಗಿದ್ದ ಮಕ್ಕಳು, ಮಹಿಳೆಯರನ್ನು ಕಾಡಿದ್ದು ಅಕ್ಷರಶ: ನರ ರಕ್ಕಸರು. ಇಷ್ಟಾದರೂ ಪ್ರಗತಿಪರರು, ಬುದ್ಧಿಜೀವಿಗಳು ಮಾತನಾಡುವುದಿಲ್ಲ. ಭಗವಾನ್ ಎನ್ನುವ ಬುದ್ಧಿಜೀವಿಯಿಂದ ಹಿಡಿದು ಎಷ್ಟೋ ಗತಿಸಿ ಹೋದ ಪ್ರಗತಿಪರರು ಹಿಂದೂ ದೇವರನ್ನು ನಿಂದಿಸುವ ಧೈರ್ಯ ಮಾಡಿದ್ದಾರೆ ಬಿಟ್ಟರೆ ಬೇರೆ ಧರ್ಮದವರ ಬಗ್ಗೆ ಸಣ್ಣ ಕೆಮ್ಮು ಕೂಡ ತೆಗೆದಿಲ್ಲ. ನಾನು ಬೇರೆ ಧರ್ಮದವರನ್ನು ಅವಹೇಳನ ಮಾಡಬೇಕು ಎಂದು ಹೇಳುತ್ತಿಲ್ಲ. ಭಾಸ್ಕರ್ ಪ್ರಸಾದ್ ತರಹದ ಕೆಲವರಿಗೆ ಅವಹೇಳನ ಮಾಡುವುದು ಒಂದು ಚಾಳಿಯೇ ಆಗಿದೆ. ಆದ್ದರಿಂದ ಈ ನಿಂದನೆ, ಟೀಕೆಯನ್ನು ಹಿಂದೂ ಸಮಾಜ ತುಂಬಾ ನೋಡಿದೆ. ಹಾಗೇ ಆದಾಗ ನಾವು ದೇವರಿಗೆ ಬೇಡಿಕೊಂಡಿದ್ದೇವೆ. ಪಾದಯಾತ್ರೆ ಮಾಡಿದ್ದೇವೆ. ಆರೋಪಿಗಳನ್ನು ನೀನೆ ನೋಡು ತಂದೆ ಎಂದು ದೈವಗಳಿಗೆ ಬಿಟ್ಟಿದ್ದೇವೆ. ಆದರೆ ಹೀಗೆ ಬೆಂಕಿ ಹಚ್ಚುವ ಕಾರ್ಯ ಯಾವತ್ತೂ ಮಾಡಿಲ್ಲ.

ಆದರೆ ಇಂತವರನ್ನು ಹೀಗೆ ಬಿಟ್ಟರೆ ಏನಾಗುತ್ತೆ. ಇವರು ಸಮಾಜ ವಿದ್ರೋಹಿಗಳಾಗುತ್ತಾರೆ. ಅವರಿಗೆ “ಚೆನ್ನಾಗಿ” ಬುದ್ಧಿ ಹೇಳಬೇಕು. ಅವರು ಮುಂದೆ ಯಾವತ್ತೂ ಹೀಗೆ ಮಾಡದ ರೀತಿಯಲ್ಲಿ “ಪಾಠ” ಪೊಲೀಸರು ಮಾಡಬೇಕು. ಅವರ ಆಸ್ತಿ ಮುಟ್ಟುಗೋಲು ಹಾಕಿ ಬೀದಿಯಲ್ಲಿ ಭಿಕ್ಷೆಗೆ ಬಿಡಬೇಕು. ಇದೆಲ್ಲಾ ಈಗ ರಾಜ್ಯದಲ್ಲಿ ಆಳುತ್ತಿರುವ ಬಿಜೆಪಿ ಸರಕಾರ ಮಾಡಿಬಿಡಬೇಕು. ಕಿಡಿಗೇಡಿಗಳ ಹಿಂದಿರುವ ಅವರ ಅಪ್ಪಂದಿರನ್ನು ಹುಡುಕಿ ಅವರಿಗೆ ತಕ್ಕ ಶಾಸ್ತ್ರಿ ಮಾಡಬೇಕು. ಇನ್ನು ನಮ್ಮ ರಾಜ್ಯದಲ್ಲಿ ಒಬ್ಬ ದಲಿತ ಶಾಸಕನನ್ನು ಮುಟ್ಟುವ ಧೈರ್ಯ ಯಾರಿಗೂ ಬರಬಾರದು. ಇನ್ನು ಇಷ್ಟಾದರೂ ನಾವು ಆ ಏರಿಯಾದ ದೇವಸ್ಥಾನಕ್ಕೆ ದುಷ್ಕರ್ಮಿಗಳು ಪ್ರವೇಶಿಸದಂತೆ ಮಾನವ ಸರಪಳಿ ಮಾಡಿದ್ದೇವೆ ಎಂದು ಕೆಲವರು ಹೇಳುತ್ತಾರೆ. ಆದರೆ ಶಾಸಕರ ಮನೆ, ಅಕ್ಕಪಕ್ಕದ ಹಿಂದೂಗಳ ಮನೆಗೆ ಬೆಂಕಿ ಕೊಟ್ಟು ದೇವರ ಕೋಣೆಯನ್ನು ನಾಶ ಮಾಡಲಾಗಿದೆಯಲ್ಲ, ಯಾಕೆ ಒಬ್ಬನೇ ಒಬ್ಬ ಪ್ರಗತಿಪರ ಮಾತನಾಡುತ್ತಿಲ್ಲ. ಯಾಕೆಂದರೆ ಹೊಡೆದವರು ಮುಸ್ಲಿಮರು!!

0
Shares
  • Share On Facebook
  • Tweet It




Trending Now
ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
Hanumantha Kamath July 15, 2025
ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
Hanumantha Kamath July 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
  • Popular Posts

    • 1
      ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • 2
      ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • 3
      ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • 4
      ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • 5
      ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!

  • Privacy Policy
  • Contact
© Tulunadu Infomedia.

Press enter/return to begin your search