• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

CILA, JYOTHI, GEEDEE, kalkura ಹೆಸರು ಮಾತ್ರ ದೊಡ್ಡದು..

Hanumantha Kamath Posted On August 28, 2020


  • Share On Facebook
  • Tweet It

ಇವತ್ತು ಈ ಹೋರ್ಡಿಂಗ್ಸ್ ಗೋಲ್ ಮಾಲ್ ನ ಮುಂದುವರಿದ ಕಥೆಯನ್ನು ನಿಮ್ಮ ಮುಂದೆ ಬಿಚ್ಚಿಡಲಿದ್ದೇನೆ. ಹೋರ್ಡಿಂಗ್ ನಲ್ಲಿ ಯಾವುದು ಅಕ್ರಮ ಯಾವುದು ಅಲ್ಲ ಎಂದು ನಿಮಗೆ ಮೊದಲು ತಿಳಿಯಲೇಬೇಕು. ಖಾಸಗಿ ಜಾಗದಲ್ಲಿ ಹೋರ್ಡಿಂಗ್ಸ್ ಅಳವಡಿಸುವ ಮುನ್ನ ಆ ಜಾಗದ ಮಾಲೀಕರೊಂದಿಗೆ ನೂರು ರೂಪಾಯಿ ಮುಖಬೆಲೆಯ ಸ್ಟಾಂಪ್ ಪೇಪರಿನಲ್ಲಿ ಒಪ್ಪಂದ ಮಾಡಿಕೊಳ್ಳಬೇಕು. ಅದರ ಬಳಿಕ ಆ ಸ್ಟಾಂಪ್ ಪೇಪರ್ ನೊಂದಿಗೆ ಜಾಹೀರಾತಿನ eye sketch ಮತ್ತು ಎಷ್ಟು ಸೈಜಿನ ಹೋರ್ಡಿಂಗ್, ದೀಪದ ಹೆಚ್ಚುವರಿ ಆಕರ್ಷಣೆ ಇರುವ ಹೋರ್ಡಿಂಗ್ ಹೌದಾ ಅಥವಾ ಅಲ್ಲವೇ ಎಲ್ಲವನ್ನು ಒಳಗೊಂಡ application ಮಂಗಳೂರು ಮಹಾನಗರ ಪಾಲಿಕೆಗೆ ಸಲ್ಲಿಸಬೇಕು. ನಂತರ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿ ಅಂದರೆ ರೆವಿನ್ಯೂ ಇನ್ಸ್ ಪೆಕ್ಟರ್ ಅದನ್ನು survey ಮಾಡಬೇಕು. ನಂತರ ಆ ಹೋರ್ಡಿಂಗ್ಸ್ ಹಾಕಲು ಅನುಮತಿ ಕೊಡಲಾಗಿದೆಯೊ ಇಲ್ಲವೊ ಎನ್ನುವ ವರದಿಯನ್ನು ಮನಪಾಗೆ ನೀಡಬೇಕು. ದೀಪ ಬೇಕಾಗುವ ಹೋರ್ಡಿಂಗ್ಸ್ ಆದರೆ ಅದಕ್ಕೆ ಇರುವ ದರ ಬೇರೆ, ಅದೇ ದೀಪ ಇಲ್ಲದ ಸಾಮಾನ್ಯ ಹೋರ್ಡಿಂಗ್ಸ್ ಆದರೆ ಅದಕ್ಕೆ ಕಟ್ಟಬೇಕಾದ ಶುಲ್ಕ ಬೇರೆ ಇರುತ್ತದೆ. ಹಾಗೆ ಖಾಸಗಿ ಜಾಗದಲ್ಲಿ ಹೋರ್ಡಿಂಗ್ಸ್ ಅಳವಡಿಸಿದರೆ ಶುಲ್ಕ ಮತ್ತು ಸಾರ್ವಜನಿಕ ಜಾಗದಲ್ಲಿ ಅದೇ ಹೋರ್ಡಿಂಗ್ಸ್ ನಿಲ್ಲಿಸುವಾಗ ಶುಲ್ಕ ಬೇರೆ ಇರುತ್ತದೆ. ಆದರೆ ಮನಪಾಗೆ ಆದಾಯ ಸೋರಿ ಹೋದರೂ ಪರವಾಗಿಲ್ಲ, ತಮ್ಮ ತಿಜೋರಿ ತುಂಬಿದರೆ ಸಾಕು ಎಂದು ಅಂದುಕೊಳ್ಳುವ ಕೆಲವು ಜಾಹೀರಾತು ಹೋರ್ಡಿಂಗ್ಸ್ ಅಳವಡಿಸುವ ಸಂಸ್ಥೆಗಳು ಮಂಗಳೂರಿನಲ್ಲಿವೆ. ಆ ಸಂಸ್ಥೆಗಳು ಸಾರ್ವಜನಿಕ ಜಾಗದಲ್ಲಿ ಹೋರ್ಡಿಂಗ್ ನಿಲ್ಲಿಸಿದ್ದರೂ ಕೂಡ ಅವು ಖಾಸಗಿ ಜಾಗ ಎಂದು ಸುಳ್ಳುಹೇಳಿ ಶುಲ್ಕವನ್ನು ಉಳಿಸುತ್ತವೆ. ಅದರಿಂದ ಪಾಲಿಕೆಗೆ ಆಗುವ ನಷ್ಟ ಕಡಿಮೆ ಏನಲ್ಲ.

ಮಂಗಳೂರಿನಲ್ಲಿ ಪ್ರಸಿದ್ಧ ಜಾಹೀರಾತು ಸಂಸ್ಥೆಗಳಾಗಿರುವ CILA, JYOTHI, GEEDEE,kalkura ಇವರಿಗೂ ಪಾಲಿಕೆಯ ಕಂದಾಯ ವಿಭಾಗಕ್ಕೂ ಗಳಸ್ಯ ಕಂಠಸ್ಯ. ಇಂತಹ ಕಂಪೆನಿಗಳಿಗೆ ಪಾಲಿಕೆಯ ಹೋರ್ಡಿಂಗ್ಸ್ ನ ಯಾವ ನೀತಿ ನಿಯಮಗಳು ತಟ್ಟುವುದೇ ಇಲ್ಲ. ಇವರು ಸಾರ್ವಜನಿಕ ಸ್ಥಳಗಳಲ್ಲಿ ರಾಜಾರೋಷವಾಗಿ ಹೋರ್ಡಿಂಗ್ಸ್ ನಿಲ್ಲಿಸುತ್ತಾರೆ. ಪಾಲಿಕೆ ಅದು ಖಾಸಗಿ ಜಾಗದಲ್ಲಿದೆ ಎಂದು ದಾಖಲೆ ಕೊಡುತ್ತದೆ. ಖಾಸಗಿಯವರ ಜಾಗದಲ್ಲಿ ಹೋರ್ಡಿಂಗ್ಸ್ ಅಳವಡಿಸುವ ಒಪ್ಪಂದ ಆದರೆ ಅದನ್ನು ಸ್ಟಾಂಪ್ ಪೇಪರಿನಲ್ಲಿಯೇ ಆಗಬೇಕು ಎನ್ನುವ ನಿಯಮ ಇದೆ. ಇವರು ತಮ್ಮ ಕಚೇರಿಯ ಲೆಟರ್ ಹೆಡ್ ನಲ್ಲಿ ಒಪ್ಪಂದ ಮಾಡಿಕೊಳ್ಳುತ್ತಾರೆ. ಪಾಲಿಕೆಗೆ ಅದರಲ್ಲಿ ತಪ್ಪೇ ಕಾಣಿಸುವುದಿಲ್ಲ. ಯಾಕೆಂದರೆ ಕಾನೂನುಗಳನ್ನು ಸರಿಯಾಗಿ ನಿಯಮಬದ್ಧವಾಗಿ ಪಾಲಿಸಿಕೊಂಡರೆ ಹಣ ಮಾಡುವುದು ಯಾವಾಗ ಎನ್ನುವ ಮನಸ್ಥಿತಿಯಿಂದಲೇ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ನೀತಿ ನಿಯಮಗಳ ಬಗ್ಗೆ ಯೋಚಿಸುತ್ತಾರೆಯೇ? ಚಿಂತಿಸಿದರೂ ಅವರಿಗೆ ಸರಿಯಾಗಿ ಅಧಿಕಾರ ನಿರ್ವಹಿಸಲು ಜನರಿಂದ ಆಯ್ಕೆ ಆಗಿ ಹೋದ ಮಂಗಳೂರಿನ ನಿಮ್ಮ ಹೆಮ್ಮೆಯ ಜನಪ್ರತಿನಿಧಿಗಳು ಬಿಡುತ್ತಾರೆಯೇ?
ಇಲ್ಲಿ ಕೇವಲ ಕಂದಾಯ ಅಧಿಕಾರಿಗಳು, ಹೋರ್ಡಿಂಗ್ಸ್ ಸಂಸ್ಥೆಯವರು ಮಾತ್ರ ಒಡಹುಟ್ಟಿದವರಂತೆ ವತಿರ್ಸುವುದಲ್ಲ. ಇವರೊಂದಿಗೆ ಇನ್ನೊಂದು ಇಲಾಖೆ ಕೂಡ ಇದೆ. ಅದರ ಅಧಿಕಾರಿಗಳು ತಮ್ಮ ನಿರ್ಲಕ್ಷ್ಯದಿಂದ ತಮ್ಮ ಇಲಾಖೆಯ ಲೈನ್ ಮೇನ್ ಗಳ ಸಾವಿಗೆ ತಾವೇ ಷರಾ ಬರೆದುಬಿಟ್ಟರೂ ಈ ಹೋರ್ಡಿಂಗ್ಸ್ ಗೆ ದೀಪ ಹಾಕುವ ವಿಷಯದಲ್ಲಿ ಮಾತ್ರ ಎಲ್ಲಾ ಮಾನ ಮರ್ಯದೆಯನ್ನು ಗಾಳಿಗೆ ತೂರಿ ಅಕ್ರಮ ಹೋರ್ಡಿಂಗ್ಸ್ ಗೆ ದೀಪ ಬಿಡಲು ತಯಾರಾಗುತ್ತವೆ. ಈಗ ಗೊತ್ತಾಯಿತಲ್ಲ ಯಾವ ಇಲಾಖೆ ಅಂತ. ಅದೇ ಮೆಸ್ಕಾಂ. ಈ ಒಟ್ಟು ಅವ್ಯವಹಾರದಲ್ಲಿ ಮೆಸ್ಕಾಂ ಕೂಡ ಸಮ ಪ್ರಮಾಣದಲ್ಲಿ ಪಾಲುದಾರ. ಹೋರ್ಡಿಂಗ್ಸ್ ಕಂಪೆನಿಯವರು ಖಾಸಗಿ ಜಾಗದ ಮಾಲೀಕರೊಂದಿಗೆ ಮಾಡಿದ ಒಪ್ಪಂದದ ಸ್ಟಾಂಪ್ ಪೇಪರ್ ಪ್ರತಿ ಮತ್ತು ಮನಪಾ ಹೋರ್ಡಿಂಗ್ಸ್ ಅಳವಡಿಸಲು ನೀಡಿದ ಕಾರ್ಯಾದೇಶದ ಪ್ರತಿ ಇದ್ದರೆ ಮಾತ್ರ ಅಂತಹ ಹೋರ್ಡಿಂಗ್ಸ್ ಗೆ ವಿದ್ಯುತ್ ಸರಬರಾಜು ಮಾಡಬಹುದು. ಆದರೆ ಮೆಸ್ಕಾಂ ಕೂಡ ತಿನ್ನಲೆಂದೇ ಕುಳಿತಿರುವ ಕಂದಾಯ ವಿಭಾಗದ ಸಹೋದರನಂತಿರುವುದರಿಂದ ಅದಕ್ಕೂ ಯಾವುದೇ ಕಾನೂನು, ನಿಯಮಗಳು ಡೊಂಟ್ ಕೇರ್. ಇದನ್ನು ನಾನು ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆದ ಹಾಗೆ ಹೇಳುತ್ತಿಲ್ಲ. ಗಾಳಿಯಲ್ಲಿ ಗುಂಡು ಹೊಡೆಯುವ ಕೆಲವು ಹೋರಾಟಗಾರರಿದ್ದಾರೆ. ಅವರಿಗೆ ಶಬ್ದವಾದರೆ ಸಾಕು, ಯಾರಿಗೂ ತಾಗುವುದು ಬೇಡಾ, ಬದಲಾವಣೆ ಆಗದಿದ್ದರೂ ಪರವಾಗಿಲ್ಲ, ತಾನು ಮಿಂಚಿದರೆ ಸಾಕು ಎಂಬ ಧೋರಣೆ. ಆದರೆ ನಾನು ಜಾಹೀರಾತು ಹೋರ್ಡಿಂಗ್ಸ್ ಸಂಸ್ಥೆಗಳಿಂದ ಪಾಲಿಕೆಗೆ ಸೋರಿಕೆ ಆಗುತ್ತಿರುವ ಆದಾಯವನ್ನು ಪಾಲಿಕೆಗೆ ಹಿಂತಿರುಗಿಸಲೇಬೇಕೆಂಬ ಹಟದಿಂದ ಕುಳಿತಿರುವುದರಿಂದ ನನಗೆ ಅಂತಿಮ ಫಲಶ್ರುತಿ ಮುಖ್ಯ. ಅದಕ್ಕಾಗಿ ಹೋರ್ಡಿಂಗ್ಸ್ ಕಂಪೆನಿಗಳ, ಕಂದಾಯ ಅಧಿಕಾರಿಗಳ ಮತ್ತು ಮೆಸ್ಕಾಂ ವಿರುದ್ಧ ಆರೋಪ ಮಾಡುವಾಗ ಸಾಕ್ಷಿ ಹಿಡಿದೇ ಕುಳಿತಿದ್ದೇನೆ.
ಇನ್ನೂ unipoll ಎನ್ನುವ ಜಾಹೀರಾತು ಫಲಕಗಳಿವೆ. ಅದರಲ್ಲಿ ಹೋರ್ಡಿಂಗ್ ನ ಎರಡು ಕಡೆ ಜಾಹೀರಾತು ಅಂಟಿಸಬಹುದು. ಆದರೆ ಜಾಹೀರಾತು ಸಂಸ್ಥೆಯವರು ಪುನ: ಹೆಚ್ಚುವರಿ ಶುಲ್ಕ ಕಟ್ಟಬೇಕು ಎನ್ನುವ ಕಾರಣಕ್ಕೆ ಒಂದು ಬದಿಯಲ್ಲಿ ಮಾತ್ರ ಹೋರ್ಡಿಂಗ್ ಹಾಕುತ್ತೇವೆ ಎಂದು ಅನುಮತಿ ತೆಗೆದುಕೊಳ್ಳುತ್ತಾರೆ. ಕೆಲವು ಸಮಯದ ಬಳಿಕ unipoll ಎರಡು ಕಡೆ ಜಾಹೀರಾತು ಬಿದ್ದಿರುತ್ತದೆ. ಇದರಲ್ಲಿ ಇನ್ನೊಂದು ಗೋಲ್ ಮಾಲ್ ಕೂಡ ಇದೆ. ಅನುಮತಿ ಕೇಳುವುದು 10*20 ಅಳತೆಯ ಹೋರ್ಡಿಂಗ್ ಗಾಗಿ ಆದರೆ ವಾಸ್ತವದಲ್ಲಿ ಹೋರ್ಡಿಂಗ್ ಬಂದು ಬೀಳುವಾಗ ಅದು 40*30 ಆಗಿರುತ್ತದೆ. ಇಂತಹ ಅಕ್ರಮಗಳನ್ನು ಕಂಡು ಕಣ್ಣು ಮುಚ್ಚಿ ಕುಳಿತುಕೊಳ್ಳುವ ಬದಲು ಪಾಲಿಕೆಯ ಆಯುಕ್ತರು ಏನಾದರೂ ಮಾಡಬಹುದಲ್ಲ ಎಂದು ಕೇಳುತ್ತಿದ್ದಿರಾ? ಅದೊಂದು ದೊಡ್ಡ ಕಥೆ.

  • Share On Facebook
  • Tweet It


- Advertisement -


Trending Now
ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
Hanumantha Kamath February 1, 2023
ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
Hanumantha Kamath January 31, 2023
Leave A Reply

  • Recent Posts

    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
  • Popular Posts

    • 1
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • 2
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • 3
      ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • 4
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 5
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search