• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಅನ್ನಭಾಗ್ಯದ ಅಕ್ಕಿ ಕದಿಯುವ ಅಧಿಕಾರಿಗಳೇ ನಿಮಗೆ ಬಡವರ ಶಾಪ ತಟ್ಟಲ್ವಾ!!

Tulunadu News Posted On August 31, 2020
0


0
Shares
  • Share On Facebook
  • Tweet It

ಅನ್ನಭಾಗ್ಯದ ಅಕ್ಕಿಯನ್ನು ಕದಿಯುವವರ ವಿಷಯ ಆಗಾಗ ಮಾಧ್ಯಮಗಳಲ್ಲಿ ಬರುತ್ತದೆ. ಮೊನ್ನೆ ಕೂಡ ಕುಂದಾಪುರದಲ್ಲಿ ಇಂತಹ ಒಂದು ಪ್ರಕರಣ ದಾಖಲಾಗಿದೆ. ಆದರೆ ಯಾರಿಗೂ ಶಿಕ್ಷೆಯಾಗುವುದಿಲ್ಲವಾದ ಕಾರಣ ಇಂತಹುಗಳು ಹೀಗೆ ನಡೆಯುತ್ತಲೇ ಇರುತ್ತವೆ. ಪೊಲೀಸರು ಕೂಡ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲವಾದ ಕಾರಣ ಅನ್ನಭಾಗ್ಯ ಅಕ್ಕಿಯ ಮೂಟೆಗಳು ಲಾರಿಯಲ್ಲಿ ಬಿಂದಾಸ್ ಆಗಿ ಕಳ್ಳತನವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತವೆ. 2004 ರಲ್ಲಿ ಕೂಡ ಮಂಗಳೂರಿನ ಸರಕಾರಿ ಗೋಡೌನ್ ನಿಂದ ಲಾರಿಗಟ್ಟಲೆ ಅಕ್ಕಿ ಕದ್ದೊಯ್ದ ಕೇಸ್ ಆಗಿತ್ತು. ಏನೂ ಆಗಲಿಲ್ಲ. ಅದರ ನಂತರ ಈಗ ಮೇಯರ್ ಆಗಿರುವ ದಿವಾಕರ ಪಾಂಡೇಶ್ವರ್ ಹಾಗೂ ನಾವು ಬೊಂದೇಲ್ ನಲ್ಲಿ ಹೀಗೆ ಲಾರಿಯೊಂದನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೆವು. ಇದೇ ಸೆಪ್ಟೆಂಬರ್ 7 ಕ್ಕೆ ಅದಾಗಿ ಭರ್ತಿ ಎರಡು ವರ್ಷಾಗಳಾಗುತ್ತವೆ. ಏನು ಆಯಿತು ಗೊತ್ತಾ?

ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಯಿತು. ಆಹಾರ ಇಲಾಖೆಯ ಶಕ್ತಿನಗರದ ಡಿಪೋದಿಂದ ಕಳ್ಳತನದಿಂದ ಅಕ್ಕಿ ಸಾಗಾಟವಾಗುತ್ತಿದ್ದ ಕಾರಣ ಡಿಪೋ ಸೂಪರ್ ವೈಸರ್ ಆಗಿದ್ದ ರಾಜನ್ ನಾಯರ್ ಆರು ತಿಂಗಳ ಕಾಲ ಸಸ್ಪೆಂಡ್ ಒಳಗಾಗಬೇಕಾಯಿತು. ನಂತರ ವಿಚಾರಣೆ ಬಾಕಿ ಉಳಿಯಿತು. ಈಗ ನೋಡಿದರೆ ಅದೇ ರಾಜನ್ ನಾಯರ್ ಪುತ್ತೂರಿನ ಡಿಪೋ ಮ್ಯಾನೇಜರ್ ಆಗಿ ಮತ್ತೆ ಸರಕಾರಿ ಕೆಲಸದಲ್ಲಿ ಮುಂದುವರೆದಿದ್ದಾರೆ. ಹೀಗೆ ಅಪರೂಪಕ್ಕೆ ಸಿಕ್ಕಿ ಬೀಳುವವರಿಗೆನೆ ಶಿಕ್ಷೆ ಆಗದಿದ್ದರೆ ಕಳ್ಳರಿಗೆ ಹೆದರಿಕೆ ಆಗುತ್ತಾ? ಅಷ್ಟಕ್ಕೂ ಸರಕಾರಿ ಗೋಡೌನ್ ನಿಂದ ಇವರು ರಾಜಾರೋಷವಾಗಿ ಅಕ್ಕಿ ಕದಿಯುವುದಕ್ಕೆ ಸರಕಾರಿ ಅಧಿಕಾರಿಗಳ ಭರಪೂರ ಸಹಕಾರ ಇರುತ್ತದೆ. ಹಾಗೆ ಇಲ್ಲದಿದ್ದರೆ ಅಕ್ಕಿ ಕಳ್ಳತನ ಆಗಲು ಸಾಧ್ಯವೇ ಇಲ್ಲ. ಹೀಗೆ ಅಕ್ಕಿ ಕದ್ದು ಅದನ್ನು ಬ್ರಾಂಡೆಂಡ್ ಗೋಣಿ ಚೀಲದಲ್ಲಿ ಪ್ಯಾಕ್ ಮಾಡಿ ನಂತರ ಅದನ್ನು ಬೇರೆಡೆ ಸಾಗಿಸಿ ಮಾರಾಟ ಮಾಡುವುದೇ ಬಹಳ ದೊಡ್ಡ ಜಾಲ. ಇಂತಹ ಗೋಲಮಾಲ್ ವ್ಯವಹಾರದಲ್ಲಿ ಎಲ್ಲರಿಗೂ ಪಾಲಿದೆ. ಇದೊಂದು ಕೋಟ್ಯಾಂತರ ರೂಪಾಯಿಯ ಬಹಳ ದೊಡ್ಡ ವಹಿವಾಟು. ಯಾಕೆಂದರೆ ಸಾಗಿಸುವವ ಟೆಂಪೋ ಅಥವಾ ಆಟೋ ರಿಕ್ಷಾದಲ್ಲಿ ಕೆಲವು ಗೋಣಿ ಮಾತ್ರ ಕದಿಯುವುದಿಲ್ಲ. ಅವನು ಯಮಗಾತ್ರದ ಲಾರಿಗಳಲ್ಲಿ ಕದಿಯುತ್ತಾನೆ. ಸಾಮಾನ್ಯ ಜನ ಇಂತಹ ಲಾರಿಗಳನ್ನು ನಿಲ್ಲಿಸುವ ಉಸಾಬರಿಗೆ ಹೋಗಲು ಸಾಧ್ಯವೇ ಇಲ್ಲ. ಯಾಕೆಂದರೆ ನಿಮ್ಮ ಎದುರು ಅಕ್ಕಿ ಗೋಣಿ ತುಂಬಿದ ಕಳ್ಳ ಲಾರಿಯೊಂದು ಹಾದು ಹೋದರೂ ನಿಮಗೆ ಅದರಲ್ಲಿರುವುದು ಕದ್ದ ಅಕ್ಕಿ ಎಂದು ಗೊತ್ತಾಗಲು ಚಾನ್ಸೇ ಇಲ್ಲ. ಒಂದು ವೇಳೆ ಗೊತ್ತಾದರೂ ನಿಲ್ಲಿಸುವಂತಹ ಧೈರ್ಯ ಯಾವ ವ್ಯಕ್ತಿ ಕೂಡ ಮಾಡುವುದಿಲ್ಲ. ನಾವು ಎರಡು ವರ್ಷಗಳ ಹಿಂದೆ ಹಿಡಿದಿದ್ದರೂ ಯಾರಿಗೂ ಶಿಕ್ಷೆ ಆಗದೇ ಇದ್ದಾಗ ನಮಗೂ ಬೇಸರವಾಗುವುದು ಸಹಜ. ಇನ್ನು 2004 ರಿಂದ 2018 ರ ತನಕ ನನಗೆ ಗೊತ್ತಿರುವಂತೆ ಅನೇಕ ಬಾರಿ ಹೀಗೆ ಕಳ್ಳತನವಾಗಿರಬಹುದು. 2018-20 ರ ನಡುವೆ ಉಡುಪಿ ಜಿಲ್ಲೆಯಲ್ಲಿಯೇ ಪೊಲೀಸರು ಹನ್ನೊಂದು ಪ್ರಕರಣಗಳನ್ನು ಈ ಕುರಿತು ದಾಖಲಿಸಿದ್ದಾರೆ. ಹೆಚ್ಚೆಂದರೆ ಒಂದು ಡಿಪೋದಿಂದ ಮತ್ತೊಂದಕ್ಕೆ ಟ್ರಾನ್ಸಫರ್ ಆಗಬಹುದು ಎನ್ನುವುದು ಗೊತ್ತಿದ್ದರಿಂದ ಆಹಾರ ಇಲಾಖೆಯ ಯಾವ ಹೆಗ್ಗಣ ಕೂಡ ಕದಿಯಲು ಹಿಂದೆ ಮುಂದೆ ನೋಡಲ್ಲ.
ಇದಕ್ಕೆ ಇರುವ ಒಂದೇ ಪರಿಹಾರ ಎಂದರೆ ಗಂಧದ ಮರವನ್ನು ಒಂದು ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋದರೂ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ವಾಹನವನ್ನು ಸೀಝ್ ಮಾಡುತ್ತಾರಲ್ಲ. ಹಾಗೇ ಸರಕಾರಿ ಅಕ್ಕಿ ಕದ್ದು ಹೋಗುವಾಗಲೂ ಹಿಡಿದು ಆ ವಾಹನವನ್ನು ಸೀಝ್ ಮಾಡಬೇಕು. ಹಾಗೆ ಮಾಡಿದರೆ ಯಾವ ಲಾರಿ ಮಾಲೀಕ ಕೂಡ ಇಂತಹ ಕೆಲಸಕ್ಕೆ ಲಾರಿ ಕೊಡಲ್ಲ. ಎರಡನೇಯನೇದಾಗಿ ಇಂತಹ ಪ್ರಕರಣಗಳನ್ನು ನಿರ್ದಿಷ್ಟ ಅವಧಿಯೊಳಗೆ ವಿಚಾರಣೆ ನಡೆದು ಅಪರಾಧಿಗೆ ಶಿಕ್ಷೆ ವಿಧಿಸಬೇಕು. ಸರಕಾರಿ ಅಧಿಕಾರಿಗಳಲ್ಲಿ ಹೀಗೆ ಮಾಡುವವರು ಸಿಕ್ಕಿಬಿದ್ದು ಶಿಕ್ಷೆಗೆ ಒಳಗಾದರೆ ಉಳಿದವರು ಮಾನಮರ್ಯಾದೆಗೆ ಅಂಜಿ ಮಾಡಲಿಕ್ಕಿಲ್ಲ. ಕುಂದಾಪುರದಲ್ಲಿ ಸಿಕ್ಕಿಬಿದ್ದ ಆರೋಪಿಗಳು ಏನು ಹೇಳುವುದೇನೆಂದರೆ ನಾವು ಮನೆಮನೆಗಳಿಗೆ ಹೋಗಿ ಅಕ್ಕಿ ಸಂಗ್ರಹಿಸಿ ತೆಗೆದುಕೊಂಡು ಹೋಗುತ್ತಿದ್ದೆವು. ಒಂದು ಆಟೋ ರಿಕ್ಷಾದಲ್ಲಿ ಆದರೆ ನಾಲ್ಕು ಗೋಣಿ ಸಿಕ್ಕಿದರೆ ನಾವು ಪಕ್ಕದ ಬೀದಿಯಲ್ಲಿ ನಾಲ್ಕು ಮನೆಯವರು ಮಾರುತ್ತೇವೆ ಎಂದು ಹೇಳಿದ್ದಕ್ಕೆ ಖರೀದಿಸಲು ಬಂದಿದ್ದೇವು ಎಂದು ಇವರು ಸುಳ್ಳು ಹೇಳಬಹುದು. ಆದರೆ ಬರೋಬ್ಬರಿ 55 ಟನ್ ಅಂದರೆ 55 ಸಾವಿರ ಕಿಲೋ ಅಕ್ಕಿಯನ್ನು ಮನೆಮನೆಗೆ ಹೋಗಿ ಸಂಗ್ರಹಿಸಲು ಆಗುತ್ತಾ? ಕೆಲವು ಗೋಣಿಗಳನ್ನು ಅದರ ಕುತ್ತಿಗೆಗೆ ಮಾತ್ರ ಕಟ್ಟಿ ಮನೆಯಿಂದ ಸಂಗ್ರಹಿಸಿದ್ದು ಎಂದು ಕಾಣುವ ಹಾಗೆ ಮಾಡಿದ್ದಾರೆ. ಹೆಚ್ಚಿನವು ಸೀಲ್ಡ್ ಆಗಿದ್ದವು. ಅಷ್ಟಕ್ಕೂ ರೇಶನ್ ಕಾರ್ಡ್ ನಲ್ಲಿ ಪಡಿತರ ಅಂಗಡಿಯಲ್ಲಿ ಖರೀದಿಸಿದ ಎಲ್ಲರೂ ಒಂದು ಊರಿನಲ್ಲಿ ಸರದಿಯಲ್ಲಿ ನಿಂತು ಇವರಿಗೆ ಮಾರಿದರೆ ಅದು ಸುದ್ದಿಯಾಗಲ್ವಾ? ಕದ್ದು ಸಿಕ್ಕಿ ಬಿದ್ದ ಇಂತವರಿಗೆ ಘೋರ ಶಿಕ್ಷೆ ಆದರೆ ಅನ್ನದಲ್ಲಿಯೂ ಮೋಸ ಮಾಡುವವರಿಗೆ ಬುದ್ಧಿ ಬರುತ್ತದೆ!
0
Shares
  • Share On Facebook
  • Tweet It




Trending Now
ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
Tulunadu News December 9, 2025
ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
Tulunadu News December 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
  • Popular Posts

    • 1
      ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • 2
      ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!

  • Privacy Policy
  • Contact
© Tulunadu Infomedia.

Press enter/return to begin your search