• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ನಾನೊಬ್ಬ ಹಿಂದೂ, ಕ್ರಾಂತಿಕಾರಕ ಬದಲಾವಣೆ ತರಲು ಸರಕಾರವನ್ನು ಒತ್ತಾಯಿಸುತ್ತೇನೆ!

Hanumantha Kamath Posted On September 5, 2020
0


0
Shares
  • Share On Facebook
  • Tweet It

ದೇವಸ್ಥಾನಗಳ ಕಾಣಿಕೆ ಹುಂಡಿಯಲ್ಲಿ ಹಣ ಹಾಕಿದರೆ ಅದು ಸರಕಾರಕ್ಕೆ, ಅದೇ ತಟ್ಟೆಯಲ್ಲಿ ಹಾಕಿದರೆ ಅರ್ಚಕರಿಗೆ ಎನ್ನುವ ವಾಕ್ಯವನ್ನು ಹಿಂದೆಲ್ಲೋ ಸಾಮಾಜಿಕ ತಾಣಗಳಲ್ಲಿ ಓದಿದ ನೆನಪು. ನಾವು ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಹಾಕುವ ಹಣವನ್ನು ಸರಕಾರ ಮಸೀದಿಗಳಿಗೆ, ಹಜ್ ಯಾತ್ರೆಗೆ ಕೊಡುತ್ತದೆ, ಆದ್ದರಿಂದ ಡಬ್ಬಿಗೆ ಹಾಕಬೇಡಿ ಎಂದು ಕೆಲವರು ಹೇಳುತ್ತಿದ್ದರು. ಇದನ್ನು ಹೀಗೆ ಪ್ರಚಾರ ಮಾಡುತ್ತಿದ್ದವರು ಯಾವ ಧರ್ಮದವರು ಎಂದು ಮತ್ತೆ ಹೇಳಬೇಕಾಗಿಲ್ಲ.

ನಾನೊಬ್ಬ ಹಿಂದೂ ಧರ್ಮದವನಾಗಿ ಹೇಳುವುದಾದರೆ ನಾವು ಕೊಡುವ ಹಣ ಆ ದೇವಸ್ಥಾನದ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದು ಬಯಸುವುದು ತಪ್ಪಲ್ಲ. ಈಗ ಉದಾಹರಣೆಗೆ ಸುಬ್ರಹ್ಮಣ್ಯ, ಕಟೀಲು, ಕೊಲ್ಲೂರು ದೇವಸ್ಥಾನಗಳಲ್ಲಿ ದೇವಳದ ನಿತ್ಯ ಖರ್ಚು ಹೋಗಿ ಕೋಟಿಗಟ್ಟಲೆ ಹಣ ಇಡೀ ವರ್ಷ ಉಳಿಯುತ್ತದೆ. ಅಂತಹ ಹಣ ದೇವಸ್ಥಾನದ ಹೊರಗೆ ಕೂಡ ಪ್ರಯೋಜನವಾಗಬೇಕು. ಅದು ಹೇಗೆಂದರೆ ಮೊದಲು ಆ ದೇವಸ್ಥಾನಕ್ಕೆ ಬರುವ ರಸ್ತೆಗಳು ಸರಿಯಾಗಬೇಕು. ಹೌದು,ನಿಜ,ದೇವಸ್ಥಾನದ ಸುತ್ತಳತೆಯಲ್ಲಿ ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ರಸ್ತೆಗಳನ್ನು ಮೊದಲ ಹಂತದಲ್ಲಿ ಸರಿ ಮಾಡುವ ಕ್ರಮಕ್ಕೆ ಮುಂದಾಗಬೇಕು. ಆ ರಸ್ತೆಗಳನ್ನು ಚತುಷ್ಪಥ ಮಾಡಿ ಕಾಂಕ್ರೀಟ್ ಹಾಕುವ ಮೂಲಕ ಅಲ್ಲಿ ಸಂಚರಿಸುವ ವಾಹನಗಳಿಗೆ, ಪ್ರಯಾಣಿಕರಿಗೆ ನೆಮ್ಮದಿಯ ವಾತಾವರಣ ನೀಡಬಹುದು.ಇನ್ನೊಂದು ಏನು ಮಾಡಬಹುದು ಎಂದರೆ ಆ ದೇವಸ್ಥಾನದ ಹತ್ತು ಕಿಲೋ ಮೀಟರ್ ಸುತ್ತಳತೆಯಲ್ಲಿ ಇರುವ ಸರಕಾರಿ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಊಟ, ಎರಡು ಜೊತೆ ಸಮವಸ್ತ್ರ, ಪಾದರಕ್ಷೆ, ಪುಸ್ತಕ, ಬ್ಯಾಗ್ ಮತ್ತು ಆ ಶಾಲೆಯ ಪೀಠೋಪಕರಣಗಳನ್ನು ಒಳ್ಳೆಯ ಗುಣಮಟ್ಟದಲ್ಲಿ ಇಟ್ಟುಕೊಳ್ಳಲು ವ್ಯವಸ್ಥೆ ಮಾಡಬೇಕು. ನಮಗೆ ಗೊತ್ತಿದೆ, ಒಂದು ಶಾಲೆಯನ್ನು ದೂರದಿಂದಲೇ ಅದು ಸರಕಾರಿಯೋ, ಖಾಸಗಿಯೋ ಎಂದು ನಾವು ಹೇಳುವ ಪರಿಸ್ಥಿತಿ ಇದೆ. ಅದರ ಬದಲು ಇದೇ ಹಣದಲ್ಲಿ ಸರಕಾರಿ ಶಾಲೆಯಲ್ಲಿ ಯಾಕೆ ಗುಣಮಟ್ಟದ ವ್ಯವಸ್ಥೆ ಮಾಡಬಾರದು. ಇದರಿಂದ ಆ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪಾಲಕರು ಕೂಡ ಮುಂದೆ ಬರುತ್ತಾರೆ. ಶಾಲೆಗಳು ಕೇವಲ ಗೋಡೆಯ ಮೇಲೆ “ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ” ಎಂದು ಬರೆದರೆ ಸಾಕಾಗುವುದಿಲ್ಲ.ಸರಕಾರ ಶಾಲೆಯ ವಿದ್ಯಾರ್ಥಿಗಳ ಲೆಕ್ಕದಲ್ಲಿ ಅಧ್ಯಾಪಕ ರನ್ನು ಕೊಡುತ್ತಾರೆ 7 ತರಗತಿಗಳಿಗೆ 3 ಅದ್ಯಾಪಕರಿರುತ್ತಾರೆ ಕಡಿಮೆ ಇರುವ ಮುರೊ ನಾಲ್ಕೊ ಅಧ್ಯಾಪಕ ರನ್ನು ದೇವಸ್ಥಾನದ ವತಿಯಿಂದ ನೇಮಿಸಬೇಕು.ಸರಕಾರಿ ಶಾಲೆಗಳು ನೋಡುವುದರಲ್ಲಿಯೂ ಮಾದರಿಯಾಗಬೇಕು. ಅದಕ್ಕಾಗಿ ಈ ಹಣ ಬಳಕೆಯಾಗಬೇಕು.ಇನ್ನೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟೋ ದೇವಸ್ಥಾನಗಳಲ್ಲಿ ನಿತ್ಯ ವಿನಿಯೋಗಕ್ಕೆ ಆರ್ಥಿಕ ತೊಂದರೆ ಇದೆ. ಈ ಶ್ರೀಮಂತ ದೇವಸ್ಥಾನದಿಂದ ಬೇರೆ ದೇವಸ್ಥಾನಗಳಿಗೆ ಎಣ್ಣೆ, ಬತ್ತಿ, ಹೂನಿಂದ ಹಿಡಿದು ಪುರೋಹಿತರ ಸಂಬಳದ ತನಕ ಅಗತ್ಯ ಕಾರ್ಯಗಳನ್ನು ಮಾಡಬಹುದು. ಇಷ್ಟೆಲ್ಲಾ ಮಾಡಲು ಆಗುತ್ತಾ? ಖಂಡಿತ ಸಾಧ್ಯವಿದೆ. ಆದರೆ ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳಲ್ಲಿ ಇದಕ್ಕೊಂದು ಕಾನೂನುಬದ್ಧ ಬದಲಾವಣೆ ಮಾಡಬೇಕು. ಆಗ ಮುಂದೆ ಯಾರೂ ಅಧಿಕಾರಕ್ಕೆ ಬಂದರೂ ವ್ಯವಸ್ಥೆ ಹಾಗೆ ಮುಂದುವರೆಯುತ್ತದೆ. ಅದು ಬಿಟ್ಟು ಹಿಂದೂಗಳ ಹಣ ಸರಕಾರ ಮಸೀದಿಗಳಿಗೆ ಕೊಡುತ್ತದೆ ಎಂದು ಫೇಸ್ ಬುಕ್ಕಿನಲ್ಲಿ ಬೊಬ್ಬೆ ಹೊಡೆದರೆ ಆಗಲ್ಲ. ಅಷ್ಟಕ್ಕೂ ಹೀಗೆ ಬರೆಯುವ ಬಿಜೆಪಿ ಪರ ನಿಲುವಿನ ವ್ಯಕ್ತಿಗಳೇ ನಿಮ್ಮ ಸರಕಾರಕ್ಕೆ ಇನ್ನು ಮೂರು ವರ್ಷ ಇದೆಯಲ್ಲ, ಈಗ ಈ ನಿಯಮ ಮಾಡಬಹುದಲ್ಲ.ಅದುಬಿಟ್ಟುಕಾಂಗ್ರೆಸ್ ಮಾಡಲಿ ಎಂದು ನಿರೀಕ್ಷೆ ಇಡುವುದು ಸರಿಯಾ? ಹೋಗಲಿ, ಆದದ್ದು ಆಗಿ ಹೋಯಿತು.ಈಗ ಬಿಜೆಪಿ ಸರಕಾರ ಇದೆಯಲ್ಲ ಮಾಡಿಸಿಕೊಳ್ಳಿ ಬೀಡಬೇಡಿ ಯ್ಯಾಡಿಯುರಪ್ಪರನ್ನು ಅಥವಾ ಅಲ್ಪಸಂಖ್ಯಾತರ ವೋಟ್ ಬ್ಯಾಂಕಿಗೆ ಹೆದರಿ ಮಾಡದೇ ಕೂರುತ್ತೀರಾ. ನನ್ನ ಯೋಜನೆ ಮುಸ್ಲಿಮರಿಗೂ ಹಿಡಿಸುತ್ತದೆ.

0
Shares
  • Share On Facebook
  • Tweet It




Trending Now
ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
Hanumantha Kamath January 1, 2026
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Hanumantha Kamath December 27, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
  • Popular Posts

    • 1
      ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • 2
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search