• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಎಚ್ಡಿಕೆ ಶ್ರೀಲಂಕಾ ಭೇಟಿ ಹೊರಬೀಳುತ್ತಿದ್ದಂತೆ ಸಿಎಂ ಜೊತೆ “ಮಾತುಕತೆ!!”

Hanumantha Kamath Posted On September 13, 2020


  • Share On Facebook
  • Tweet It

ದಿನಕ್ಕೊಂದು ರೀತಿಯಲ್ಲಿ ಶಾಸಕ ಜಮೀರ್ ಅಹ್ಮದ್ ಮಾತನಾಡುತ್ತಿರುವುದು ನೋಡಿದರೆ ಇದೊಂದು ಅಪ್ಪಟ ಧಾರಾವಾಹಿಯಂತೆ ಕಾಣುತ್ತಿದೆ. ಅವರು ಧಾರಾವಾಹಿ ನಟರಾಗಿದ್ದರೆ ನಿಜಕ್ಕೂ ವೀಕ್ಷಕರಿಗೆ ಅತ್ಯಂತ ಖುಷಿ ಕೊಡುತ್ತಾ ನಟನೆಗೆ ಅವರಿಗೆ ಪ್ರಶಸ್ತಿ ಬರುತ್ತಿತ್ತು. ಬಿಸಿಯಾಗದೇ ಬೆಣ್ಣೆ ಕರಗದು ಎನ್ನುವಂತೆ ಎಷ್ಟು ಬಿಸಿ ಇರುತ್ತದೆಯೋ ಅಷ್ಟು ಬೇಗ ಮತ್ತು ಜಾಸ್ತಿ ಬೆಣ್ಣೆ ಕರಗುತ್ತದೆ ಎನ್ನುವುದು ಕೂಡ ನಿಜ. ಮೊದಲನೇಯದಾಗಿ ಜಮೀರ್ ಯಾವಾಗ ಏನು ಮಾತನಾಡಿದ್ರು ಎನ್ನುವುದನ್ನು ನೋಡೋಣ. ಮೊನ್ನೆ ಶ್ರೀಲಂಕಾಕ್ಕೆ ಹೋಗಿಯೇ ಇಲ್ಲ ಎಂದಿದ್ರು. ನಿನ್ನೆಯಿಂದ ಹೋಗಿದ್ದೆ ಎನ್ನುತ್ತಿದ್ದಾರೆ. ಇವತ್ತು ನನ್ನ ಜೊತೆ ಕುಮಾರಸ್ವಾಮಿಯವರು ಕೂಡ ಬಂದಿದ್ರು ಎಂದು ಹೇಳುತ್ತಿದ್ದಾರೆ. ಇನ್ನು ಕೆಲವು ದಿನಗಳ ಬಳಿಕ ಇನ್ಯಾರದ್ದೋ ಹೆಸರುಗಳು ಕೂಡ ಬಂದರೂ ಬರಬಹುದು. ಜಮೀರ್ ಹೀಗೆ ಹೇಳಿದ ಕೂಡಲೇ ಕುಮಾರಣ್ಣ ಎಚ್ಚರಗೊಂಡಿದ್ದಾರೆ. ಈಗ ಸದ್ಯ ಕುಮಾರಸ್ವಾಮಿಯವರು “ತಾವು ಶ್ರೀಲಂಕಾಕ್ಕೆ ಹೋಗಿರುವುದು ನಿಜ. ತಮ್ಮೊಂದಿಗೆ 39 ಶಾಸಕರು ಕೂಡ ಇದ್ದರು. ಅದರಲ್ಲಿ ಜಮೀರ್ ಕೂಡ ಸೇರಿದ್ರು. ನಾನು ಅವರೊಂದಿಗೆ ಹೋಗಿಲ್ಲ. ಅವರು ನನ್ನೊಂದಿಗೆ ಬಂದಿದ್ರು” ಎಂದು ಹೇಳಿಕೆ ಕೊಟ್ಟಿದ್ದಾರೆ. ಯಾರು ಯಾರ ಜೊತೆಗೆ ಹೋಗಿದ್ರೂ ಖರ್ಚು ಮಾತ್ರ ಜಮೀರ್ ಅವರೇ ಕೊಟ್ಟಿರಬಹುದು ಎನ್ನುವುದರಲ್ಲಿ ಸಂಶಯವಿಲ್ಲ. ಯಾಕೆಂದರೆ ಇಂತಹ ಹಲವು ಗಟ್ಟಿಕುಳಗಳನ್ನು ಜಿಡಿಎಸ್ ತನ್ನ ಜೊತೆ ಇಟ್ಟುಕೊಂಡಿರುವುದರಿಂದ ಪಕ್ಷದ ತಿಂಡಿ, ತೀರ್ತ, ತಿರುಗಾಟದ ಖರ್ಚು ಅದರಲ್ಲಿಯೇ ಹೋಗುತ್ತದೆ. ಅಂತಹ ಶ್ರೀಮಂತರು ಮುಂದೆ ಶಾಸಕರು, ಮಂತ್ರಿಗಳು ಅವರ ಪಕ್ಷದಲ್ಲಿ ಆಗುತ್ತಾರೆ. ಒಟ್ಟಿನಲ್ಲಿ 2014 ರಲ್ಲಿ ಕುಮಾರಣ್ಣ ಹೋಗಿದ್ದು ಹೌದಾದರೆ ಯಾಕೆ ಎನ್ನುವ ಪ್ರಶ್ನೆ ಕೂಡ ಮೂಡುತ್ತೆ. ಅವರ ಪ್ರಕಾರ ಪಕ್ಷದ ಕಾರ್ಯಚಟುವಟಿಕೆಗಳನ್ನು ಚರ್ಚಿಸಲು ಹೋಗಿದ್ದೆ ಎನ್ನುತ್ತಾರೆ. ಬಹುಶ: ಬೆಳಿಗ್ಗೆ ಪಕ್ಷ ಬಲಪಡಿಸಲು ಚರ್ಚಿಸಿ ನಂತರ ಸಂಜೆ ಅವರು ಜಮೀರ್ ಹೇಳಿದ ಕಡೆ ಸುತ್ತಾಡಿರಲೂಬಹುದು. ಅಲ್ಲಿ ಅವರಿಗೆ ಬೇರೆ ಬೇರೆ ರೀತಿಯ ಖುಷಿ ಸಿಕ್ಕಿರಲೂ ಸಾಕು. ಹಾಗಂತ ಕುಮಾರಸ್ವಾಮಿಯವರಿಗೆ ಸಂಜನಾ ಅವರಂತವರನ್ನು ಭೇಟಿಯಾಗಲು ಕೊಲಂಬೊಗೆ ಹೋಗಬೇಕೆಂದೆನಿಲ್ಲ. ಅವರು ಆ ವಿಷಯದಲ್ಲಿ ಬಿಂದಾಸ್.
ಆದರೆ ಜಮೀರ್ ಹೀಗೆ ತಮ್ಮ ಹೆಸರನ್ನು ಹೇಳುತ್ತಿದ್ದಂತೆ ಕುಮಾರಣ್ಣ ನೇರವಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿದ್ದಾರೆ. 25 ನಿಮಿಷ ಮಾತನಾಡಿದ್ದಾರೆ. ಅಷ್ಟು ಹೊತ್ತು ಮಾತನಾಡಲು ಇದ್ದ ವಿಷಯವಾದರೂ ಏನು? ಒಂದನೇಯದಾಗಿ “ಸಿಎಂ ಅವರೇ, ಈ ತನಿಖೆ ಇನ್ನೂ ಗಂಭೀರವಾಗಿ ನಡೆದು ಅದು ನನ್ನ ಬುಡಕ್ಕೆ ಬಂದಾಗ ನನಗೆ ರಕ್ಷಣೆ ಕೊಡಿ. ಜಮೀರ್ ಅವನು ಮುಳುಗುವಾಗ ಒಂದಿಬ್ಬರನ್ನು ಹಿಡಿದೇ ಮುಳುಗುತ್ತಾನೆ. ಆ ಸಂದರ್ಭದಲ್ಲಿ ನೀವು ನನ್ನನ್ನು ಉಳಿಸಬೇಕು” ಎಂದು ಮಾಜಿ ಸಿಎಂ ಹೇಳಿರಬಹುದಾ ಎಂದು ರಾಜಕೀಯ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. “ಹೇಗೂ ತಿಂಗಳ ಅಂತ್ಯದಲ್ಲಿ ವಿಧಾನಸಭಾ ಅಧಿವೇಶನ ಬರುತ್ತದೆ. ನೀವು ನನ್ನ ಕಾಳಜಿ ಇಟ್ಟುಕೊಂಡರೆ ನಾನು ಅಧಿವೇಶನದಲ್ಲಿ ನಿಮ್ಮ ವಿರುದ್ಧ ಅಪಸ್ವರ ಎತ್ತುವುದಿಲ್ಲ. ಎತ್ತಿದರೂ ಅದು ಕಾಟಾಚಾರಕ್ಕೆ. ಹೇಗೂ ಕಾಂಗ್ರೆಸ್ ನಿಮ್ಮ ವಿರುದ್ಧ ಈ ಬಾರಿ ಸ್ಟ್ರಾಂಗ್ ಹೋರಾಟ ಮಾಡಲಿದೆ. ಅಂತಹ ಸಂದರ್ಭದಲ್ಲಿ ನನ್ನ ಬೆಂಬಲ ನಿಮಗೆ ಇದ್ದರೆ ನೀವು ಸೇಫ್ ” ಎಂದು ಹೇಳಿರಬಹುದಾ ಎಂದು ವಿಧಾನಸಭಾ ಪಡಸಾಲೆಯಲ್ಲಿ ಗುಸುಗುಸು ಕೇಳಿಬರುತ್ತಿದಂತೆ. ಇನ್ನು 2019 ರಲ್ಲಿ ಜೂನ್ 8,9,10 ರಂದು ಜಮೀರ್ ಕೊಲಂಬೊದಲ್ಲಿ ಇದ್ರು ಎನ್ನುವುದು ಸಂಬರಗಿ ವಾದ. ಅದು ಗಟ್ಟಿಯಾದರೆ ಆರ್ತಿಕ ವ್ಯವಹಾರಗಳ ತನಿಖಾ ಸಂಸ್ಥೆ ಫೀಲ್ಡಿಗೆ ಬರಲಿದೆ. 2017 ರಲ್ಲಿ ಜಮೀರ್ ಮತ್ತು ಸಂಜನಾ ಒಂದೇ ಭರ್ತಡೇ ಪಾರ್ಟಿಯಲ್ಲಿ ಇದ್ರು ಎಂದು ಕೂಡ ಸಂಬರಗಿ ಹೇಳುತ್ತಿದ್ದಾರೆ. ಇಬ್ಬರೂ ಒಂದು ರೀತಿಯಲ್ಲಿ ಸೆಲೆಬ್ರಿಟಿಗಳೇ ಆಗಿರುವಾಗ ಒಂದೇ ಭರ್ತಡೇ ಪಾರ್ಟಿಯಲ್ಲಿ ಇದ್ದರೆ ಪರಿಚಯ ಆಗಿಯೇ ಆಗುತ್ತದೆ. ಹಾಗಿದ್ದೂ ಸಂಜನಾ ಯಾರೆಂದು ಗೊತ್ತಿಲ್ಲ ಎಂದು ಹೇಳುತ್ತಿರುವ ಜಮೀರ್ ನಾಳೆ ಹೊಸ ಹೇಳಿಕೆ ಕೊಟ್ಟು ಸಂಜನಾ ಗೊತ್ತಿದೆ, ಆದರೆ ಸ್ನೇಹ ಇಲ್ಲ. ನಾಡಿದ್ದು ಗೆಳೆತನ ಇದೆ, ಕ್ಲೋಸ್ ಇಲ್ಲ. ಅದರ ಆಚೆ ನಾಡಿದ್ದು ಕ್ಲೋಸ್ ಇದ್ದೇವೆ. ಅದರ ಮುಂದೆ ಏನೂ ಇಲ್ಲ ಎನ್ನುವ ಚಾನ್ಸ್ ಇದೆಯಾ.
ಈ ಮಧ್ಯೆ ವೀರೆನ್ ಖನ್ನಾ ತಂದೆ ತನ್ನ ಮಗ ಬಂಗಾರದಂತವನು. ಕೇವಲ ಪಾರ್ಟಿ ಆಯೋಜಿಸುತ್ತಿದ್ದ. ಡ್ರಗ್ಸ್ ವಿಷಯವೇ ಅವನಿಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ. ಇದು ಫಿಕ್ಸ್ ಹೇಳಿಕೆ. ಅದರಲ್ಲಿ ಹೊಸತೇನಿಲ್ಲ ಬಿಡಿ. ಪ್ರತಿ ಭಯೋತ್ಪಾದಕನ ತಂದೆ, ತಾಯಿ ಕೂಡ ಹೀಗೆ ಹೇಳುವುದು. ಇದು ಡ್ರಗ್ಸ್ ವಿಷಯ. ಹೇಳದೇ ಇರುತ್ತಾರಾ. ಎಲ್ಲ ತಂದೆ, ತಾಯಿಯರಿಗೆ ತಮ್ಮ ಮಕ್ಕಳು ಮುದ್ದು. ವಿಪರೀತ ಮುದ್ದು ಮಾಡಿದಾಗ ಅವರು ಸಮಾಜದ್ರೋಹಿ ಆಗುತ್ತಾರಾ!
  • Share On Facebook
  • Tweet It


- Advertisement -


Trending Now
ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?
Hanumantha Kamath July 5, 2022
ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
Hanumantha Kamath July 4, 2022
Leave A Reply

  • Recent Posts

    • ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?
    • ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
    • ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
  • Popular Posts

    • 1
      ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?
    • 2
      ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
    • 3
      ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • 4
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 5
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search