ಈ ಬಾರಿಯೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ನಾಮನಿರ್ದೇಶಿತ ಕಾರ್ಪೋರೇಟರ್ ಬಕೆಟ್ ಹಿಡಿಯುವವರಿಗೆ ಮಾತ್ರವೇ?

ಕೇವಲ ನರೇಂದ್ರ ಮೋದಿಯವರ ಹುಟ್ಟುಹಬ್ಬ ಆಚರಿಸಿದರೆ ಸಾಕಾಗುವುದಿಲ್ಲ. ಅವರ ಬಗ್ಗೆ ಭಾಷಣ ಮಾಡಿದರೆ ಮಾತ್ರ ಪ್ರಯೋಜನವಿಲ್ಲ. ಅವರ ಚಿಂತನೆಯ ನೂರನೇ ಒಂದು ಅಂಶವನ್ನಾದರೂ ಅಳವಡಿಸುವಲ್ಲಿ ಅವರದ್ದೇ ಪಕ್ಷದಿಂದ ಆಯ್ಕೆಗೊಂಡಿರುವ ಜನಪ್ರತಿನಿಧಿಗಳು ಯೋಚಿಸಬೇಕು. ಈಗ ನಮ್ಮ ಜಿಲ್ಲೆಯನ್ನೇ ತೆಗೆದುಕೊಂಡರೆ ಇನ್ನೊಂದು ತಿಂಗಳು ಕಳೆದರೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಯಾರಿಗೆ ಸಿಗುತ್ತದೆ ಎನ್ನುವುದು ಪಕ್ಕಾ ಆಗಿರುತ್ತದೆ. ಈಗಾಗಲೇ ಕೆಲವರು ಬಕೇಟು ಹಿಡಿದು ಶಾಸಕರ ಹಿಂದೆ ಮುಂದೆ ಸುತ್ತಾಡುತ್ತಿದ್ದಾರೆ. ಕೆಲವರು ಎರಡೂ ಕೈಗಳಲ್ಲಿ ಬೆಣ್ಣೆ ತಂದು ಹಚ್ಚುತ್ತಿದ್ದಾರೆ. ಖಾಲಿಯಾದರೆ ಮತ್ತೆ ತಂದು ಹಚ್ಚಲು ರೆಡಿ ಮಾಡಿದ್ದಾರೆ. ಅಷ್ಟಕ್ಕೂ ತಮ್ಮ ಕೆಲವು ಆಪ್ತರಿಗೆ ಖುಷಿ ಮಾಡಲು, ತಮಗೆ ಚುನಾವಣೆಗೆ ಕೆಲಸ ಮಾಡಿದವರಿಗೆ ಮತ್ತು ಮುಂದಿನ ಚುನಾವಣೆಯಲ್ಲಿ ಕೆಲಸ ಮಾಡಬಲ್ಲರು ಎಂದು ವೋಟ್ ಬ್ಯಾಂಕ್ ಆದವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕೊಡುವುದು
ಇಲ್ಲಿಯತನಕ ಪರಿಪಾಠವಾಗಿದೆ. ಒಂದು ಕಾಲೇಜನ್ನು ಕಟ್ಟಿ ಮಕ್ಕಳಿಂದ ಫೀಸು ವಸೂಲಿ ಮಾಡಿ ಎರಡೆರಡು ಬಿಲ್ಡಿಂಗ್ ಏರಿಸಿ ಇವತ್ತು ಸಮಾಜದಲ್ಲಿ ನಾಲ್ಕು ಕಾರ್ಯಕ್ರಮಗಳಿಗೆ ಸ್ವಲ್ಪ ಹಣ ಬಿಸಾಡಿದವರಿಗೆ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಮಹಾನ್ ಸೇವೆಗಾಗಿ ಪ್ರಶಸ್ತಿ, ಇನ್ನು ಇಂಜಿನಿಯರಿಂಗ್ ಅಥವಾ ಮೆಡಿಕಲ್ ಕಾಲೇಜು, ಆಸ್ಪತ್ರೆಯೋ ಕಟ್ಟಿ ವಿದ್ಯಾರ್ಥಿಗಳಿಂದ, ರೋಗಿಗಳಿಂದ ಸುಲಿಗೆ ಮಾಡಿದವರಿಗೆ ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲಿಸಿದ ಮಹಾನ್ ಸೇವೆಗಾಗಿ ಪ್ರಶಸ್ತಿ, ಪಾಪದವರು ಬಂದರೆ ಮುಖ ಎತ್ತಿ ಮಾತನಾಡದವರಿಗೆ ಸಮಾಜಸೇವೆಗಾಗಿ ಪ್ರಶಸ್ತಿ, ಪ್ರೆಸ್ ಮೀಟ್ ನಲ್ಲಿ ರಾಜಕಾರಣಿಗಳು ಹೇಳಿದ್ದನ್ನು ಅವರಿಗೆ ವಿವಾದ ಆಗದೇ ಚೆಂದ ಅಕ್ಷರಗಳನ್ನು ಹಾಕಿ ಬರೆಯುತ್ತಾರೆ ಎನ್ನುವುದಕ್ಕೆ ಮಾಧ್ಯಮ ಕ್ಷೇತ್ರದ ಪತ್ರಕರ್ತ ಪ್ರಶಸ್ತಿ ಹೀಗೆ ಪ್ರಶಸ್ತಿಗಳು ಶಾಸಕರ, ಸಚಿವರ, ಸಂಸದರ ಹಿಂಬಾಲಕರಿಗೆ ಸಿಗುವುದು ಒಂದು ಫ್ಯಾಶನ್. ಇದು ಜಿಲ್ಲಾ ಮಟ್ಟದಿಂದ ಕೇಂದ್ರದ ತನಕ ಇತ್ತು. ಇದನ್ನು ಮೊದಲು ಮುರಿದದ್ದೇ ನಮ್ಮ ಪ್ರಧಾನಿ ಮೋದಿ. ಅವರಿಂದಲೇ ಹಾಜಬ್ಬ, ಸಾಲುಮರದ ತಿಮ್ಮಕ್ಕ ಹಾಗೂ ಸಿದ್ಧಿ ಸಮುದಾಯದ ಹಿರಿಯ ಹೆಣ್ಣುಮಕ್ಕಳಿಗೆ ಪ್ರಶಸ್ತಿ ಬಂತು. ಇಲ್ಲದಿದ್ದರೆ ತಿಮ್ಮಕ್ಕ, ಹಾಜಬ್ಬ, ಸಿದ್ದಿ ಎಲ್ಲಿಯ ಪದ್ಮಶ್ರೀ ಪ್ರಶಸ್ತಿಗಳು.
ಇದನ್ನು ಈಗ ಸಾಧ್ಯವಾದರೆ ತುಳುನಾಡಿನಲ್ಲಿಯೂ ಮಾಡಿ ತೋರಿಸಲು ನಮ್ಮ ಶಾಸಕರುಗಳು ಮುಂದಾಗಬೇಕಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರೊಂದಿಗೆ ಚೆನ್ನಾಗಿ ಇರುವವರಿಗೆ ಸರದಿ ಮೇಲೆ ಪ್ರಶಸ್ತಿ ಕೊಡುವುದು ನಿಲ್ಲಿಸಬೇಕು. ಇದು ಎಲ್ಲಿಯ ತನಕ ಬಂದು ನಿಂತಿದೆ ಎಂದರೆ “ಆರ್ ಯೆನ್ನಾ ಒಟ್ಟು ಕ್ಲೋಸ್ ಉಲ್ಲೇರ್, ಈ ಸಲ ಆಪುಜಿ, ನೆಕ್ಟ್ ಗ್ಯಾರಂಟಿ ಪನ್ತೆರ್ ( ಅವರೊಂದಿಗೆ ನಾನು ಕ್ಲೋಸ್ ಇದ್ದೇನೆ, ಈ ಸಲ ಆಗದಿದ್ದರೂ ಮುಂದಿನ ಸಲ ಗ್ಯಾರಂಟಿ ಎಂದಿದ್ದಾರೆ)” ಎನ್ನುವ ಮಾತಿದೆ. ಈ ಬಾರಿ ನೈಜ ಕೆಲಸಗಾರರನ್ನು ಹುಡುಕಿ ನಮ್ಮ ಶಾಸಕರುಗಳು ಪ್ರಶಸ್ತಿ ಹುಡುಕಬೇಕು. ಸಿಕ್ಕಿದವರಿಗೆ ಆಶ್ಚರ್ಯ ಆಗಬೇಕು. ಅದು ಬಿಟ್ಟು ಶಾಸಕರುಗಳಿಗೆ ಧನ್ಯವಾದ ಹೇಳುವ ಫ್ಲೆಕ್ಸ್ ಅಥವಾ ಪತ್ರಿಕೆಗಳಿಗೆ ಅಭಿನಂದನೆಯ ಜಾಹೀರಾತು ಕೊಡುತ್ತಾರೆ ಎನ್ನುವ ಕಾರಣಕ್ಕೆ ಕೊಡಲೇಬಾರದು. ಹಾಜಬ್ಬನವರಿಗೆ ಮೋದಿ ಪದ್ಮಶ್ರೀ ಕೊಟ್ಟಾಗ ಅವರ ಬಳಿ ಎಷ್ಟು ಹೆಮ್ಮೆಯಿಂದ ನಿಂತು ಫೋಟ್ ತೆಗೆಸಿದ್ದೀರಿ. ಆ ಹೆಮ್ಮೆ ನಿಮಗೆ ಈ ಬಾರಿಯೂ ಆಗಬೇಕು ಎಂದರೆ ಅಂತವರನ್ನು ಹುಡುಕಬೇಕು. ನಿಮ್ಮ ಹಿಂಬಾಲಕರು ಹೇಳಿದವರಿಗೆ ಪ್ರಶಸ್ತಿ ಕೊಟ್ಟರೆ ನಿಮಗೆ ಅಂತವರೊಂದಿಗೆ ನಿಂತು ಫೋಟೋ ತೆಗೆಯುವಾಗ ಹೆಮ್ಮೆ ಅನಿಸುತ್ತಾ?

ಇನ್ನು ನಾಮನಿರ್ದೇಶಿತ ಕಾರ್ಪೋರೇಟರ್ ವಿಷಯಕ್ಕೆ ಬರೋಣ. ಜೆಡಿಎಸ್, ಕಾಂಗ್ರೆಸ್ ಚೌಚೌ ಸರಕಾರ ಇದ್ದಾಗ ಅವರ ನಡುವಿನ ಮುಸುಕಿನ ಗುದ್ದಾಟದಿಂದ ಅದು ಆಗಲೇ ಇಲ್ಲ ಬಿಡಿ. ಈಗ ಭಾರತೀಯ ಜನತಾ ಪಾರ್ಟಿ ಸರಕಾರ ಇದೆ. ದಕ್ಷಿಣಕ್ಕೆ ಮೂರು, ಉತ್ತರಕ್ಕೆ ಇಬ್ಬರನ್ನು ನಾಮ ನಿರ್ದೇಶಿತ ಸದಸ್ಯರನ್ನಾಗಿ ಮಾಡಬಹುದು. ನೀವು ಯಥಾವತ್ತಾಗಿ ಅದೇ ನಿಮಗೆ ಬಕೇಟು ಹಿಡಿದವರನ್ನು ಮಾಡಿದರೆ ಇನ್ನೊಬ್ಬ ಚೇಲಾ ನಿಮ್ಮ ಬಾಲದಂತೆ ಬರಬಹುದೇ ವಿನ: ಪಕ್ಷಕ್ಕೆ, ಸಮಾಜಕ್ಕೆ ಒಂದು ಪೈಸೆಯ ಲಾಭವಿಲ್ಲ. ಅದರ ಬದಲು ಸರ್ ಫ್ರೈಸ್ ಆಗಿ ಐದು ಮಂದಿಯನ್ನು ಆಯ್ಕೆ ಮಾಡಿ. ಅವರು ಬೇಕಾದರೆ ನಿಮ್ಮ ಪಕ್ಷದವರೇ ಆಗಬೇಕಿಲ್ಲ. ಸಮಾಜದ ವಿವಿಧ ಸ್ತರಗಳಲ್ಲಿ ನೈಜವಾಗಿ ಜನಸೇವೆ ಮಾಡಲು ಮನಸ್ಸಿರುವ, ಪಾಲಿಕೆಯ ವ್ಯಾಪ್ತಿಯಲ್ಲಿ ಅಭಿವೃದ್ಧಿಯ ಬಗ್ಗೆ ಯೋಚಿಸುವ ಮತ್ತು ನಿಮ್ಮ ಇಮೇಜ್ ವೃದ್ಧಿಸುವವರನ್ನು ಆಯ್ಕೆ ಮಾಡಿ. ನೀವು ಮಾಡುತ್ತೀರಿ ಎನ್ನುವ ನಂಬಿಕೆ ಇಲ್ಲ. ಆದರೂ ನಿಮ್ಮದು ಪಾರ್ಟಿ ವಿದ್ ಡಿಫರೆನ್ಸ್ ಆಗಿರುವುದರಿಂದ ಮತ್ತು ನಿಮಗೆ ಒಂದು ಅವಕಾಶ ಸಿಕ್ಕಿರುವುದರಿಂದ ಈ ಸಲಹೆ ಕೊಟ್ಟಿದ್ದೇನೆ. ಅನುಸರಿಸುವುದು ಬಿಡುವುದು ನಿಮಗೆ ಬಿಟ್ಟಿದ್ದು. ಅಲ್ಲಿ ಮೋದಿ ರಾಜಕೀಯ ತಪಸ್ವಿಯಂತೆ ರಾಜಕೀಯವನ್ನು ಶುದ್ಧ ಮಾಡಲು ಹೊರಟಿರುವುದರಿಂದ ಅವರಿಗೆ ಹಾಜಬ್ಬ, ತಿಮ್ಮಕ್ಕ ಅಂತವರು ಕಣ್ಣಿಗೆ ಬೀಳುತ್ತಾರೆ.
- Advertisement -
Trending Now
ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
Tulunadu News
March 31, 2023
ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
Tulunadu News
March 30, 2023
Leave A Reply