• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಗೋಪೂಜೆ ಆರಂಭಿಸಿರುವ ಕಾಂಗ್ರೆಸ್ಸಿಗರೇ ಸಂಪೂರ್ಣ ಗೋಹತ್ಯಾ ನಿಷೇಧಕ್ಕೆ ಬೆಂಬಲ ಕೋಡ್ತೀರಾ?

Hanumantha Kamath Posted On November 21, 2020


  • Share On Facebook
  • Tweet It

ಭಾರತೀಯ ಜನತಾ ಪಾರ್ಟಿಯ ಸರಕಾರ ರಾಜ್ಯ ಮತ್ತು ಕೇಂದ್ರದಲ್ಲಿದೆ. ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿಯೂ ಇದೆ. ಇಷ್ಟಾದ ಬಳಿಕವೂ ಇವರಿಗೆ ಮತ ಕೊಟ್ಟ ಮತದಾರ ಇವರು ಚುನಾವಣೆಗೆ ಮೊದಲು ನೀಡಿದ ಭರವಸೆಗಳನ್ನು ಈಡೇರಿಸಲು ಒತ್ತಾಯ ಮಾಡುವ ಪರಿಸ್ಥಿತಿ ಬಂದಿದೆ. ಈಗ ಕೊರೊನಾ ಇರುವುದರಿಂದ ಇವರು ಅನಗತ್ಯವಾದ ಯಾವುದೇ ಸಮಾವೇಶ ಮಾಡುತ್ತಿಲ್ಲ. ಇಲ್ಲದೆ ಹೋದರೆ ಇಷ್ಟೊತ್ತಿಗೆ ಬಜರಂಗದಳ-ವಿಶ್ವ ಹಿಂದೂ ಪರಿಷತ್ ನಿಂದ ಗೋಹತ್ಯಾ ನಿಷೇಧಕ್ಕೆ ಆಗ್ರಹಿಸಿ ಬೃಹತ್ ಸಮಾವೇಶ ಎಂದು ಮಾಡುತ್ತಿದ್ದರು. ಹೇಗೂ ಗ್ರಾಮ ಪಂಚಾಯತ್ ಚುನಾವಣೆ ಹತ್ತಿರದಲ್ಲಿದೆ. ಅದರಿಂದ ಪ್ರಯೋಜನ ಕೂಡ ಆಗುತ್ತಿತ್ತು. ನನಗೆ ಇಂತಹ ನಾಟಕಗಳೇ ಅರ್ಥವಾಗುತ್ತಿಲ್ಲ. ಈಗ ಜನ ನಿಮಗೆ ಈಗಾಗಲೇ ಮತ ಕೊಟ್ಟು ಗೆಲ್ಲಿಸಿ ಮೂರು ಅಧಿವೇಶನ ಆಗಿದೆ. ಪಕ್ಷ ಮತ್ತು ಸರಕಾರ ಗಟ್ಟಿಯಿದೆ. ಆದರೂ ಇನ್ಯಾಕೆ ತಡ? ಇದೇ ಕಾಂಗ್ರೆಸ್ಸಿನವರಾಗಿದ್ದರೆ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ತಮ್ಮ ಮತ ಬ್ಯಾಂಕ್ ಗೆ ವಿರೋಧ ಇದ್ದದ್ದನ್ನು ತೆಗೆದು ಬಿಸಾಡುತ್ತಿದ್ದರು. ಅದನ್ನು ಅವರು 2013 ರಲ್ಲಿ ಬಂದಿದ್ರಲ್ಲಾ, ಆಗಲೇ ಮಾಡಿ ತೋರಿಸಿದ್ದಾರೆ. ನಿಮಗೆ ನೆನಪಿರಬಹುದು. 2010 ರಲ್ಲಿ ಯಡಿಯೂರಪ್ಪನವರ ಸರಕಾರ ಕಠಿಣವಾದ ಗೋ ಹತ್ಯಾ ನಿಷೇಧ ಕಾಯ್ದೆ ತರಲು ಎಲ್ಲಾ ತಯಾರಿ ಮಾಡಿತ್ತು. ಆದರೆ ಆಗ ಕೇಂದ್ರದಲ್ಲಿ ಯುಪಿಎ- 2 ಅಧಿಕಾರದಲ್ಲಿತ್ತು. ಇವರು ಇಲ್ಲಿಂದ ಕಳುಹಿಸಿಕೊಟ್ಟಿದ್ದಕ್ಕೆ ರಾಷ್ಟ್ರಪತಿಗಳು ಸಹಿ ಹಾಕಲೇ ಇಲ್ಲ. ಅದರ ಬಳಿಕ ಸಿದ್ಧರಾಮಯ್ಯ ಸರಕಾರ ಬಂತು. ಯಡಿಯೂರಪ್ಪ ಮಾಡಿದ್ದ ಮಸೂದೆಯನ್ನು ಎತ್ತಿ ಕಸದ ಬುಟ್ಟಿಗೆ ಬಿಸಾಡಿತ್ತು. ಅದು ಕಾಂಗ್ರೆಸ್ಸಿಗೆ ಅಲ್ಪಸಂಖ್ಯಾತರ ಮೇಲಿರುವ ಅಪ್ರತಿಮ ಪ್ರೀತಿಗೆ ದ್ಯೋತಕ. ಅವರು ತಡ ಮಾಡುವುದಿಲ್ಲ. ತಡ ಮಾಡಿದರೆ ಅಹಿಂದ ಮತಗಳು ಬೇಸರಗೊಳ್ಳುತ್ತವೆಯೋ ಎನ್ನುವ ಆತಂಕದಲ್ಲಿ ಅವರಿಗೆ ನಿದ್ರೆ ಬರುವುದಿಲ್ಲ. ಆದರೆ ಬಿಜೆಪಿಗೆ ಹಾಗಲ್ಲ. ಹೇಗೂ ಮೋದಿ ಇದ್ದಾರೆ. ಇಲ್ಲಿ ಡಬಲ್ ಬೇಡ್ ಶೀಟ್ ಹಾಕಿ ಮಲಗಿ ಬಿಟ್ಟರೆ ನಂತರ ಮೋದಿ ಬಂದು ಎಬ್ಬಿಸಿಬಿಡುತ್ತಾರೆ ಎನ್ನುವ ಧೈರ್ಯ ಇದೆ. ಅದಕ್ಕಾಗಿ ಗೋಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತುವ ತನಕ ಮೌನವಾಗಿಯೇ ಇರುತ್ತಾರೆ. ಹಾಗಂತ ಇವರಿಗೆ ಏನೂ ಗೊತ್ತಿಲ್ವಾ? ಗೊತ್ತಿದೆ. ಮುಂದಿನ ತಿಂಗಳು ಎಲ್ಲಿಯಾದರೂ ಉಪಚುನಾವಣೆ ಇದೆ ಎಂದು ಗೊತ್ತಾದರೆ ಅಲ್ಲಿ ಏನೂ ಮಾಡಿದರೆ ಚೆಂದ ಎಂದು ನೋಡುತ್ತಾರೆ. ಹಾಗೆ ಹುಟ್ಟಿಕೊಂಡದ್ದೇ ಮರಾಠ ಅಭಿವೃದ್ಧಿ ನಿಗಮ. ಅದೆಲ್ಲ ಇವರಿಗೆ ಹೆಚ್ಚು ದಿನ ಬೇಕಾಗಿಲ್ಲ. ಅದೇ ಗೋಹತ್ಯಾ ನಿಷೇಧದ ಆಗ್ರಹ ದಶಕಗಳಿಂದ ಇದೆ. ಅದಕ್ಕೆ ತಾರ್ಕಿಕ ಅಂತ್ಯ ಹಾಡಲು ಇವರಿಗೆ ಪುರುಸೊತ್ತು ಇಲ್ಲ. ಬಹುಶ: ಈಗಲೇ ಮಾಡಿ ಮುಗಿಸಿಬಿಟ್ಟರೆ ಮುಂದಿನ ಚುನಾವಣೆ ಹತ್ತಿರ ಬರುವಾಗ ಏನು ಮಾಡುವುದು ಎನ್ನುವ ಚಿಂತೆ ಕೂಡ ಇರಬಹುದು.

ಮೊತ್ತ ಮೊದಲಿಗೆ ಇಂತಹ ಕಾನೂನು ಮಾಡಲು ಬೇಕಾಗಿರುವುದು ಇಚ್ಚಾಶಕ್ತಿ. ಫ್ಯೂಸ್ ತೆಗೆದ ಮೀಟರ್ ಬೋರ್ಡ್ ತರಹ ಸರಕಾರ ಇದ್ರೆ ಅದರಿಂದ ಏನೂ ಪ್ರಯೋಜನವಿಲ್ಲ. ಈ ಮುಖ್ಯಮಂತ್ರಿಯ ಈ ಬಾರಿಯ ಅಧಿಕಾರಾವಧಿ ಉಪಚುನಾವಣೆ, ಕಾಂಗ್ರೆಸ್ಸಿನಿಂದ ಬಂದವರನ್ನು ಗೆಲ್ಲಿಸುವುದು, ಸೋತವರನ್ನು ಸಮಾಧಾನ ಮಾಡುವುದು, ಅವರಿಗೆ ಎಂಎಲ್ ಸಿ ಮಾಡುವುದು, ಅವರಿಗೆ ಮಂತ್ರಿಗಿರಿ ಕೊಡುವುದು, ಮರಾಠ ಅಭಿವೃದ್ಧಿಯಂತಹುದು ಮಾಡುವುದು, ದೆಹಲಿಗೆ ಹೋಗಿ ಮಂತ್ರಿ ಆಗಬೇಕಾದವರ ಪಟ್ಟಿ ನೀಡುವುದು ಹೀಗೆ ನಡೆಯುತ್ತಲೇ ಇದೆ. ಈ ನಡುವೆ ಎಲ್ಲಿಯಾದರೂ ಹಿಂದೂ ಯುವತಿ, ಮುಸ್ಲಿಂ ಯುವಕನೊಂದಿಗೆ ಓಡಿ ಹೋದರೆ ಲವ್ ಜಿಹಾದ್ ಗೆ ಕಡಿವಾಣ ತರುತ್ತೇವೆ ಎಂದು ಬೊಬ್ಬೆ ಹೊಡೆಯುವುದು, ಇದೇ ಸವಕಲು ನಾಣ್ಯ ಹಿಡಿದು ಇನ್ನು ಏನೂ ಮಾಡದಿದ್ದರೆ ಜನ ಸುಮ್ಮನಿರಲಾರರು. ಇನ್ನು ಏನಿದ್ದರೂ ಅನುಷ್ಟಾನ ಮಾಡಿ ತೋರಿಸಬೇಕಾದ ಕಾರ್ಯ.
ಮೊದಲನೇಯದಾಗಿ ರಾಜ್ಯದಲ್ಲಿ ಸಂಪೂರ್ಣ ಗೋಹತ್ಯಾ ನಿಷೇಧ ಜಾರಿಗೆ ತರಬೇಕು. ಯಾವುದೇ ಪ್ರಾಯದ ದನ, ಎತ್ತು, ಎಮ್ಮೆ, ಕೋಣಗಳನ್ನು ಕೊಲ್ಲುವುದು ಮಹಾಪರಾಧ ಎಂದು ಘೋಷಿಸಬೇಕು. ಯಾರಾದರೂ ಹೀಗೆ ಮಾಡಿದರೆ ಅವರ ಮೇಲೆ ಮಾನವ ಹತ್ಯಾ ಪ್ರಕರಣಗಳನ್ನು ಹಾಕಬೇಕು. ಇಷ್ಟು ಮಾಡಿದರೆ ಸಾಕಾಗುವುದಿಲ್ಲ. ಗೋಮಾಳಗಳನ್ನು ಯಾರು ಅತಿಕ್ರಮಣ ಮಾಡಿದ್ದಾರೆ ಅವರನ್ನು ಅಲ್ಲಿಂದ ಓಡಿಸಬೇಕು. ಗೋಮಾಳದ ಅಭಿವೃದ್ಧಿಯನ್ನು ಖಾಸಗಿಯವರಿಗೆ ಕೊಡಬೇಕು. ಅಭಿವೃದ್ಧಿ, ನಿರ್ವಹಣೆಯನ್ನು ಅವರು ನೋಡಿಕೊಳ್ಳಲಿ. ವಿಮಾನ ನಿಲ್ದಾಣ ನಿರ್ವಹಣೆ, ಅಭಿವೃದ್ಧಿ ಖಾಸಗಿಯವರಿಗೆ ಕೊಟ್ಟ ಹಾಗೆ ಗೋಮಾಳಗಳ ಅಭಿವೃದ್ಧಿ ಕೂಡ ಕೊಡಲಿ. ಅವರಿಗೆ ಇಂತಿಷ್ಟು ಅನುದಾನವನ್ನು ಸರಕಾರ ಬಿಡುಗಡೆ ಮಾಡಲಿ. ಎಲ್ಲಾ ಅಕ್ರಮ-ಸಕ್ರಮ ಕಸಾಯಿ ಖಾನೆ ಮುಚ್ಚಲ್ಪಡಲಿ. ಇನ್ನು ಇದಕ್ಕೆಲ್ಲಾ ಕಾಂಗ್ರೆಸ್ಸಿಗರು ಪ್ರೋತ್ಸಾಹ ನೀಡಲಿ. ಹೇಗೂ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಗೋವನ್ನು ತುಂಬಾ ಪ್ರೀತಿಸುತ್ತಾರಂತೆ. ಇತ್ತೀಚೆಗೆ ಮಹಿಳಾ ಕಾಂಗ್ರೆಸ್ಸಿಗರು ಗೋಪೂಜೆ ಮಾಡಿ ಮಾಧ್ಯಮದವರನ್ನು ಕರೆಸಿ ಪ್ರಚಾರನೂ ಪಡೆದುಕೊಂಡಿದ್ದಾರೆ. ಹಾಗಿರುವಾಗ ಅವರಿಗೂ ಸಂಪೂರ್ಣ ಗೋಹತ್ಯಾ ನಿಷೇಧ ಆಗಲಿ ಎನ್ನುವ ಮನಸ್ಸಿದೆ ಎನ್ನುವುದು ಸ್ಪಷ್ಟ!

  • Share On Facebook
  • Tweet It


- Advertisement -


Trending Now
ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
Hanumantha Kamath September 25, 2023
ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
Hanumantha Kamath September 22, 2023
Leave A Reply

  • Recent Posts

    • ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
    • ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
    • ಅಂದು ಸಿದ್ದು, ಇಂದು ಹರಿ!
    • ಆ ನಿರೂಪಕ ಇದ್ದರೆ ಬರಲ್ಲ ಎನ್ನುವುದು ಶೂರತನವೇ?
    • ಏನಂತ ಚೈತ್ರಾಳಿಗೆ ಅಷ್ಟು ಹಣ ಕೊಟ್ರು ಪೂಜಾರಿ!?
    • ಉತ್ತರಖಂಡದ ಮದರಸಾಗಳಲ್ಲಿ ಇನ್ನು ಸಂಸ್ಕೃತ ಶಿಕ್ಷಣ
    • ಭಾರತ್ ಮಾತಾ ಕೀ ಜೈ ಎಂದು ಮೀಡಿಯಾ ಸೆಂಟರ್ ನಲ್ಲಿ ಉದ್ಘೋಷಣೆ!
    • ಈ ಬಾರಿ ಮಹಿಷ ದಸರಾ ಯಾಕೆ ನಡೆಯಬೇಕು!
    • ಸೌದಿಗೆ ಇಂಧನ ಶಕ್ತಿ ತುಂಬಲಿರುವ ಭಾರತ!
  • Popular Posts

    • 1
      ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • 2
      ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search