• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಸ್ಲೀಪರ್ ಸೆಲ್ ನಲ್ಲಿ ಮಲಗಿದ ನಾಯಿಗಳು ಎಚ್ಚೆತ್ತಿವೆ!!

Tulunadu News Posted On November 28, 2020
0


0
Shares
  • Share On Facebook
  • Tweet It

ಕಚ್ಚುವ ನಾಯಿ ಬೊಗಳುವುದಿಲ್ಲ. ಬೊಗಳುವ ನಾಯಿ ಕಚ್ಚುವುದಿಲ್ಲ. ಮಂಗಳೂರಿನ ನಗರ ಭಾಗದಲ್ಲಿ ಗೋಡೆಯ ಮೇಲೆ ಅದ್ಯಾರನ್ನೋ ಕರೆಯುತ್ತೇವೆ ಎಂದು ಬರೆದಿರುವ ನಾಯಿಗಳು ಬಹುಶ: ಕಚ್ಚಲಿಕ್ಕಿಲ್ಲ. ಆದರೂ ನಾವು ನಮ್ಮ ಎಚ್ಚರಿಕೆಯಲ್ಲಿ ಇರಲೇಬೇಕು. ಯಾಕೆಂದರೆ ನಿಜವಾದ ನಾಯಿಗಳನ್ನಾದರೂ ನಂಬಬಹುದು. ದೇಶದ್ರೋಹಿ ಮನುಷ್ಯನ ರೂಪದಲ್ಲಿರುವ ನಾಯಿಗಳನ್ನು ನಂಬುವುದು ಕಷ್ಟ. ಲಷ್ಕರ್ ತೋಯ್ಬಾ ಅಥವಾ ಇನ್ಯಾವುದೋ ಭಯೋತ್ಪಾದಕ ಸಂಘಟನೆಗಳನ್ನು ಮಂಗಳೂರಿಗೆ ಕರೆದು ರಾಷ್ಟ್ರೀಯ ಸ್ವಯಂ ಸೇವಕ ಸಂಘದವರಿಗೆ ಹಾಗೂ ಮನುವಾದಿಗಳಿಗೆ ಬುದ್ಧಿ ಕಲಿಸುತ್ತೇವೆ ಎಂದು ಗೋಡೆಯಲ್ಲಿ ಬರೆದವರು ಹೇಳುತ್ತಾರೆ. ಗೋಡೆಯಲ್ಲಿ ಬರೆದವರು ಮಾತ್ರ ಇಲ್ಲಿ ಭಯೋತ್ಪಾದಕರೆಂದು ನಾನು ಭಾವಿಸುವುದಿಲ್ಲ. ಯಾರೋ ಹಣ ಕೊಟ್ಟು ಹೀಗೆ ಬರೆದು ಬನ್ನಿ ಎಂದು ಕಳಿಸುತ್ತಾರೆ. ಅವರು ಕೂಡ ಭಯೋತ್ಪಾದಕರೇ. ಆದರೆ ಬರೆದವರನ್ನು ಹಿಡಿದರೆ ಅವರು ಯಾರಿಂದ ಹಣ ತೆಗೆದು ಬರೆದರು ಎನ್ನುವುದು ಪಕ್ಕಾ ಆಗುತ್ತದೆ. ನಂತರ ಯಾರು ಯಾರ ಪ್ರೇರಣೆಯಿಂದ ಬರೆದರು ಎಂದು ತಿಳಿಯುವುದು ಕಷ್ಟವೇನಲ್ಲ. ಹೇಗೆ ಬರೆಸಿದವರ ಜಾಡು ಹಿಡಿದು ಮೂಲಕ್ಕೆ ಹೋದರೆ ಸ್ಲೀಪಿಂಗ್ ಸೆಲ್ ತನಕ ಹೋಗಲು ಸಾಧ್ಯ. ಹಾಗಂತ ಹೀಗೆ ಪೊಲೀಸರು ತಕ್ಷಣ ಜಾಗೃತರಾಗುತ್ತಾರೆ ಮತ್ತು ಬುಡದ ತನಕ ಬಂದೇ ಬರುತ್ತಾರೆ ಎಂದು ಬರೆದವರಿಗೆ ಮತ್ತು ಬರೆಸಿದವರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಅದಕ್ಕಾಗಿ ಕಳೆದ ಒಂದು ವಾರದಲ್ಲಿ ಮಂಗಳೂರಿನಿಂದ ಬೇರೆ ರಾಜ್ಯದ ಮೂಲಕ ಅಥವಾ ನೇರವಾಗಿ ಅರಬ್ ರಾಷ್ಟ್ರಗಳಿಗೆ ಹಾರಿದವರ ಪಟ್ಟಿಯನ್ನು ಕೂಡ ತೆಗೆಸಬೇಕಾಗಬಹುದು. ಯಾಕೆಂದರೆ ವಿಧ್ವಂಸಕ ಸಂಚು ಮಾಡುವ ಮೊದಲು ಅದರ ಸಂಪೂರ್ಣ ಪ್ಲಾನ್ ಮಾಡಿಯೇ ನಂತರ ಹೀಗೆ ತಮಾಷೆ ನೋಡುವ ಎನ್ನುವ ಸಾಧ್ಯತೆಯಿರುತ್ತದೆ. ಹಾಗಂತ ಮಂಗಳೂರಿನಲ್ಲಿ ಏನೋ ಆಗುತ್ತೆ ಎಂದು ಸಾರ್ವಜನಿಕರು ಹೆದರುವಂತಹ ವಿಷಯ ಇಲ್ಲ. ಆದರೆ ಒಂದು ವೇಳೆ ನಿಮ್ಮ ಅಕ್ಕಪಕ್ಕದ ಮನೆಗಳಲ್ಲಿ ಏನಾದರೂ ಸಂಶಯಾಸ್ಪದ ವ್ಯಕ್ತಿಗಳ ಚಲನವಲನ ಕಂಡುಬಂದರೆ ನೇರವಾಗಿ ಪೊಲೀಸರಿಗೆ ಮಾಹಿತಿ ನೀಡಿ ಅಥವಾ ನಿಮ್ಮ ಏರಿಯಾದ ಜವಾಬ್ದಾರಿಯುತ ನಾಗರಿಕರಿಗೆ ತಿಳಿಸಿಬಿಡಿ. ಅವರು ಜನಪ್ರತಿನಿಧಿಗಳಿಗೆ ಮಾಹಿತಿ ಕೊಡಲಿ. ಈ ಮೂಲಕ ನಾವು ನಮ್ಮ ಕಡೆಯಿಂದ ಸಮಾಜಕ್ಕಾಗಿ ಪರೋಕ್ಷವಾಗಿ ಏನಾದರೂ ಕಿಂಚಿತ್ ಸಹಾಯ ಮಾಡಿದಂತೆ ಆಗುತ್ತದೆ. ಅಷ್ಟಕ್ಕೂ ನಿಮಗೆ ಸಂಶಯ ಬಂದವರೆಲ್ಲರೂ ಭಯೋತ್ಪಾದಕರೇ ಆಗಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ ಒಂದು ವಿಚಾರಣೆ ಮಾಡಿ ಅವರು ಅಂತವರಲ್ಲ ಎಂದು ಗೊತ್ತಾದರೆ ಅವರನ್ನು ಬಿಡಬಹುದು. ಹಾಗಂತ ಮಾಹಿತಿ ಕೊಟ್ಟ ನಿಮ್ಮ ಹೆಸರನ್ನು ಪೊಲೀಸ್ ಇಲಾಖೆ ಗೌಪ್ಯವಾಗಿ ಇಡಬೇಕು. ಹಾಗೊಂದು ವ್ಯವಸ್ಥೆ ಆದರೆ ನಿಜಕ್ಕೂ ಒಳ್ಳೆಯದು. ಅಷ್ಟಕ್ಕೂ ಎಲ್ಲ ಬಿಟ್ಟು ಮಂಗಳೂರನ್ನೇ ಯಾಕೆ ಭಯೋತ್ಪಾದಕರು ಹಿಡಿದರು ಎನ್ನುವ ಅನುಮಾನ ನಮಗೆ ಬರಬಹುದು. ವಿಷಯ ಏನೆಂದರೆ ಮಂಗಳೂರಿನಲ್ಲಿ ಬೃಹತ್ ಕೈಗಾರಿಕಾ ಘಟಕಗಳು ಇವೆ. ರಾಷ್ಟ್ರಮಟ್ಟದ ತೈಲ ನಿಕ್ಷೇಪ ಸಂಗ್ರಹಾರಗಳಿವೆ. ಬಂದರು ಇರುವುದು ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಏಕೈಕ ಕರಾವಳಿ ಪ್ರದೇಶವಿದು. ಸಾಫ್ಟವೇರ್ ಕಂಪೆನಿಗಳಿವೆ. ಅತೀ ಉತ್ತಮ ಶಿಕ್ಷಣ ಸಂಸ್ಥೆಗಳಿರುವ ಜಿಲ್ಲೆ ಎನ್ನುವ ಖ್ಯಾತಿ ಇದೆ. ಗುಣಮಟ್ಟದ ಆಸ್ಪತ್ರೆಗಳನ್ನು ಹೊಂದಿರುವ ಸ್ಥಳ ಮಂಗಳೂರು. ಹೀಗಿರುವಾಗ ಮಂಗಳೂರಿನಲ್ಲಿ ಏನಾದರೂ ಅಹಿತಕರ ಘಟನೆ ಆದರೆ ಅದರ ಪರಿಣಾಮ ದಶದಿಕ್ಕುಗಳಿಗೆ ಹರಡಲು ತುಂಬಾ ಲೇಟ್ ಆಗುವುದಿಲ್ಲ. ಪಬ್ ದಾಳಿಯಿಂದ ಹೋಂಸ್ಟೇ ಸೇರಿಸಿ ಮತಾಂತರ ಪ್ರದೇಶಗಳ ಮೇಲೆ ದಾಳಿಯಾದಾಗ ನಾವು ಅದನ್ನು ಅನುಭವಿಸಿದ್ದೇವೆ. ಆದ್ದರಿಂದ ಭಯೋತ್ಪಾದಕರಿಗೆ ಬೇರೆ ಮೆಟ್ರೋ ಸಿಟಿಗಳಿಗಿಂತ ಮಂಗಳೂರು ಸ್ಲೀಪರ್ ಸೆಲ್ ಆಗಲು ಸೇಫ್. ಈ ಹಿಂದೆ ಕೂಡ ಉಳ್ಳಾಲದಂತಹ ಏರಿಯಾಗಳಲ್ಲಿ ನಾವು ಸ್ಲೀಪರ್ ಸೆಲ್ ಗಳಂತೆ ಕಾರ್ಯ ನಿರ್ವಹಿಸಿ ಪೊಲೀಸರ ಬಲೆಗೆ ಬಿದ್ದವರನ್ನು ಗಮನಿಸಿದ್ದೇವೆ. ತನಿಖೆ ಆಗಿ ಏನು ಆಯಿತು ಎನ್ನುವುದು ಬೇರೆ ವಿಷಯ. ಇನ್ನು ಹೀಗೆ ಬರೆದವರ ಜಾಡು ಹಿಡಿದು ಪೊಲೀಸರು ಆರೋಪಿಗಳನ್ನು ಬಂಧಿಸಿದ ಬಳಿಕ ಒಂದು ಮಾತು ಆ ಆರೋಪಿಯ ಮನೆಯಿಂದ ಖಂಡಿತ ಹೊರಗೆ ಬಂದೇ ಬರುತ್ತದೆ. ಅದೇನೆಂದರೆ ನನ್ನ ಮಗ ಅಮಾಯಕ.

ನಮ್ಮದೇ ಊರಿನಲ್ಲಿ ವಾಸಿಸಿ, ಇಲ್ಲಿಯದ್ದೇ ನೀರು, ಗಾಳಿ ಸೇವಿಸಿ, ಇಲ್ಲಿಯೇ ದುಡಿಯುತ್ತಾ ಇರುವವರು ಹೀಗೆ ಮನಸ್ಸನ್ನು ವಾಶ್ ಮಾಡಿಸಿಕೊಂಡು ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿ ಸಾಯಲು ತಯಾರಾಗುತ್ತಾರೆ. ಮೇಲೆ ಎಲ್ಲಿಯೋ ಸ್ವರ್ಗ ಸಿಗುತ್ತದೆ ಎಂದು ಆಸೆಯಿಂದ ಇಲ್ಲಿ ಅಮಾಯಕರನ್ನು ಕೊಂದರೆ ಅವರನ್ನು ಮನುಷ್ಯರೆಂದು ಹೇಳಲು ಆಗುತ್ತದೆಯಾ? ಕೆಲವರು ಹಣದ ಆಸೆಗೆ, ವಾಹನದ ಆಸೆಗೆ, ಧರ್ಮದ ಅಫೀಮು ತಲೆಗೆರಿಸಿ ಹೀಗೆ ಮಾಡಿರಬಹುದು. ಹಾಗಂತ ಹೀಗೆ ಮಾಡಿದವರು ಮುಸ್ಲಿಮರು ಮತ್ತು ಮುಸ್ಲಿಮರು ಭಾರತಕ್ಕೆ ವಿರೋಧವಾಗಿ ಯೋಚಿಸುತ್ತಾರೆ ಎಂದು ಯಾರಾದರೂ ಹೇಳಿದರೆ ನಾನು ಅದನ್ನು ಪೂರ್ಣವಾಗಿ ಒಪ್ಪುವುದಿಲ್ಲ. ಯಾರೋ ಕೆಲವರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ಗುರಿಯಾಗಿರಿಸಬಾರದು. ಆದರೆ ಯಾರೋ ಎಂದು ಹಗರುವಾಗಿ ತೆಗೆದುಕೊಳ್ಳಲೂಬಾರದು. ಅಂತಿಮವಾಗಿ ಒಬ್ಬ ಹೇಡಿಯಂತೆ ಬಾಂಬ್ ಸಿಡಿಸಿ ಸತ್ತರೆ ಅವನಿಗೆ ನರಕದಲ್ಲಿಯೂ ಜಾಗ ಇಲ್ಲ ಎಂದು ಅವನ ಸಮುದಾಯದ ಹಿರಿಯರು ಅವನಿಗೆ ಬುದ್ಧಿ ಹೇಳಬೇಕು!

 

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
  • Popular Posts

    • 1
      ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • 2
      ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!

  • Privacy Policy
  • Contact
© Tulunadu Infomedia.

Press enter/return to begin your search