• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಆತ್ಮಹತ್ಯೆ ಯತ್ನ ಕೇಸುಗಳನ್ನು ಹಿಡಿದು ಅಧಿಕಾರಕ್ಕೆ ಬರಬೇಕು ಎನ್ನುವ ಕಾಂಗ್ರೆಸ್ ಕನಸುಗಳು!!

Hanumantha Kamath Posted On November 30, 2020
0


0
Shares
  • Share On Facebook
  • Tweet It

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣದಿಂದ ಕಾಂಗ್ರೆಸ್ ಮತ್ತೆ ಚಿಗಿತುಕೊಂಡಿದೆ. ಸಂತೋಷ್ ಬಳಿ ಯಾವುದೋ ಸಿಡಿ ಇದೆ, ಅದನ್ನು ಅವರು ತಮ್ಮದೇ ಪಕ್ಷದ ಎಂಎಲ್ ಸಿ ಮತ್ತು ಸಚಿವರೊಬ್ಬರಿಗೆ ಕೊಟ್ಟು ಪಕ್ಷದ ಹೈಕಮಾಂಡ್ ಗೆ ತಲುಪಿ ಎಂದು ಮನವಿ ಮಾಡಿದ್ದಾರೆ ಎಂದು ಡಿಕೆಶಿವಕುಮಾರ್ ಹೇಳುತ್ತಿದ್ದಾರೆ ಅಥವಾ ಮಾಧ್ಯಮಗಳ ಊಹಾಪೋಹವನ್ನೇ ನಂಬುತ್ತಿದ್ದಾರೆ. ಅಷ್ಟಕ್ಕೂ ಸಿಡಿ ಎಂದರೆ ಯಾವುದೋ ಮದುವೆಯ ಸಿಡಿ ಎಂದು ಈಗಿನ ಕಾಲಕ್ಕೆ ಯಾರೂ ಅಂದುಕೊಳ್ಳುವುದಿಲ್ಲ.  ಸಿಡಿ ಎಂದರೆ ಸಾರ್ವಜನಿಕವಾಗಿ ಮನೆಮಂದಿ ಒಟ್ಟಿಗೆ ಕುಳಿತು ನೋಡಲಾಗದ ಸಿಡಿ ಎಂದೇ ಅರ್ಥ. ಅದನ್ನು ಇಟ್ಟು ಸಂತೋಷ್ ಯಾರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು, ಅದರಿಂದ ಅವರಿಗೆ ಏನು ಅಪೇಕ್ಷೆ ಇತ್ತೋ, ಎಲ್ಲವನ್ನು ತನಿಖೆ ಮಾಡಬೇಕು ಎಂದು ಡಿಕೆಶಿ ಒತ್ತಾಯ ಮಾಡುತ್ತಿದ್ದಾರೆ.
ಸಂತೋಷ್ ಹೆಂಡತಿ ಕೂಡ ರಾಜಕೀಯದ ಒತ್ತಡದಿಂದ ತನ್ನ ಪತಿ ಹೀಗೆ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಅಷ್ಟಕ್ಕೂ ಅನೇಕ ಬಾರಿ ಏನಾಗುತ್ತದೆ ಎಂದರೆ ಕೆಲಸದವನೊಬ್ಬ ತನ್ನ ಧಣಿಗಾಗಿ ಮಾಡಿದ ಕೆಲಸವೊಂದರಿಂದ ಧಣಿಗೆ ಲಾಭವಾದಾಗ ಅದು ತನ್ನಿಂದಲೇ ಧಣಿ ಈ ಮಟ್ಟಕ್ಕೆ ಬೆಳೆದ ಎಂದು ಅಂದುಕೊಂಡು ಮಹತ್ವಾಕಾಂಕ್ಷೆಗೆ ಕೈ ಹಾಕುತ್ತಾನಲ್ಲ, ಅದು ಈಡೇರದೇ ಹೋದಾಗ ಆಗ ಸಂತೋಷ್ ಗೆ ಆದ ಪರಿಸ್ಥಿತಿಯೇ ಆಗುತ್ತದೆ. ರಾಜಕೀಯದಲ್ಲಿ ಮಹತ್ವಾಕಾಂಕ್ಷೆ ಸಹಜ ಮತ್ತು ಇರಲೇಬೇಕು. ಆದರೆ 30 ವರ್ಷ ಆಸುಪಾಸು ವಯಸ್ಸಿನ ಯುವಕರು ಏಕಾಏಕಿ ಮಹತ್ವಾಕಾಂಕ್ಷೆ ಇಟ್ಟು ಅದು ಈಡೇರದೇ ಇದ್ದಾಗ ತಾಳ್ಮೆ ವಹಿಸಬೇಕೆ ವಿನ: ಜೀವನವೇ ಮುಗಿಯಿತು ಎಂದು ಅಂದುಕೊಳ್ಳಬಾರದು. ಆಪರೇಶನ್ ಕಮಲದಿಂದ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಬಿಜೆಪಿ ತನ್ನ ತೆಕ್ಕೆಗೆ ಎಳೆಯುವಾಗ ಅಂತಹ ಶಾಸಕರನ್ನು ಒಂದು ಕಡೆಯಿಂದ ಮತ್ತೊಂದು ರೆಸಾರ್ಟ್ ಗೆ ಶಿಫ್ಟ್ ಮಾಡುವಲ್ಲಿ ಸಂತೋಷ್ ಪ್ರಮುಖ ಜವಾಬ್ದಾರಿ ವಹಿಸಿರಬಹುದು. ಅಷ್ಟಕ್ಕೆ ತನಗೆ ಕೂಡ ಒಂದು ಕ್ಷೇತ್ರದಿಂದ ಶಾಸಕನಾಗಲು ಟಿಕೆಟ್ ಕೇಳುವಷ್ಟು ದೊಡ್ಡಸ್ತಿಕೆಗೆ ಹೋಗಬಾರದಿತ್ತು. ಅದರಿಂದ ಬಿಎಸ್ ವೈ ಮಗ ವಿಜಯೇಂದ್ರ ಕೋಪಗೊಂಡು ಸಂತೋಷ್ ಅವರನ್ನು ದೂರ ಇಟ್ಟರು ಮತ್ತು ಅದೇ ಸಂತೋಷ್ ಹತಾಶೆಗೆ ಕಾರಣವಾಯಿತು ಎಂದು ಹೇಳಲಾಗುತ್ತದೆ. ಇದೇನೂ ವಿಪಕ್ಷಗಳು ದೊಡ್ಡ ವಿವಾದ ಮಾಡುವಂತಹ ರಾಜಕೀಯ ವಿಷಯವೇ ಅಲ್ಲ. ಇನ್ನು ಸಿಡಿಗಳಿಂದ ಯಡಿಯೂರಪ್ಪನವರಿಗೆ ಏನೂ ಹೆದರಿಕೆ ಇರಲಾರರು. ಆದರೆ ಯಾವುದೇ ಊರಿನ ಒಂದು ಸಣ್ಣ ವಿಷಯವಾದರೂ ಹಿಡಿದು ಅಲ್ಲಿ ಜನರ ಕಣ್ಣಿಗೆ ಬಿಜೆಪಿಯನ್ನು ವಿಲನ್ ಮಾಡಲೇಬೇಕು ಎನ್ನುವ ಹಪಾಹಪಿಗೆ ಬಿದ್ದಿರುವ ಕಾಂಗ್ರೆಸ್ ಎಲ್ಲಿ ಆತ್ಮಹತ್ಯೆಯಾಗುತ್ತದೆ ಎಂದು ದುರ್ಬೀನ್ ಹಿಡಿದು ಹುಡುಕುತ್ತಿದೆ. ಇತ್ತೀಚೆಗೆ ವಿಘ್ನೇಶ್ ನಾಯಕ್ ಎನ್ನುವವರ ಆತ್ಮಹತ್ಯೆ ವಿಷಯದಲ್ಲಿಯೂ ಇಂತಹುದೇ ಒಂದು ಸುದ್ದಿಗೋಷ್ಟಿ ಮಾಡಿ ಕಾಂಗ್ರೆಸ್ ರಾಜಕೀಯ ಮೈಲೇಜ್ ಪಡೆದುಕೊಳ್ಳುವ ಪ್ರಯತ್ನ ಮಾಡಿತ್ತು.
ಪ್ರತಿಯೊಂದು ಆತ್ಮಹತ್ಯೆಯ ಹಿಂದೆ ವೈಯಕ್ತಿಕ ಕಾರಣಗಳು ಬಿಟ್ಟರೆ ಅಂತಿಮವಾಗಿ ಏನೂ ಇರುವುದಿಲ್ಲ. ಎಲ್ಲವನ್ನು ಸಿಬಿಐ, ಸಿಒಡಿಗೆ ಕೊಡಬೇಕು ಎಂದು ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡುವುದಾದರೆ ಸಿಬಿಐ ಮುಂದೊಂದು ದಿನ ಆತ್ಮಹತ್ಯೆಗಳ ತನಿಖೆಗಳನ್ನು ಮಾತ್ರ ಮಾಡಿ ಸಮಯ ವ್ಯರ್ಥ ಮಾಡುವ ಪರಿಸ್ಥಿತಿ ಬರಬಹುದು. ಇನ್ನು ಡಿಕೆಶಿಯವರು ರೂಮರ್ಸ್ ಬಿಟ್ಟು ಏನಾದರೂ ಸಾಕ್ಷ್ಯವನ್ನು ತಮ್ಮ ಬಳಿ ಇಟ್ಟುಕೊಂಡಿದ್ದರೆ ಅದನ್ನು ಪೊಲೀಸರಿಗೆ ಕೊಡಬಹುದಲ್ಲ. ಯಾವ ಎಂಎಲ್ ಸಿ ಹಾಗೂ ಸಚಿವ ಎಂದು ಬಾಯಿಬಿಟ್ಟು ಹೇಳಬಹುದಲ್ಲ. ಅದು ಬಿಟ್ಟು ಸುಮ್ಮನೆ ಪುಂಗಿ ಊದುವ ಅವಶ್ಯಕತೆ ಏನು? ಇನ್ನು ಮಾಧ್ಯಮಗಳಲ್ಲಿ ಬಂದಂತೆ ಸಂತೋಷ್ ಮೇಲೆ ವರದಕ್ಷಿಣೆ ಕೇಸು ಮತ್ತು ಕೊಲೆಯತ್ನ ಪ್ರಕರಣ ಇತ್ತು. ಈಶ್ವರಪ್ಪನವರ ಆಪ್ತ ಸಹಾಯಕನನ್ನು ಕಿಡ್ನಾಪ್ ಮಾಡಿರುವ ಪ್ರಕರಣದಲ್ಲಿ ಸಂತೋಷ್ ಹೆಸರಿತ್ತು. ಅದು ಬಿಜೆಪಿಯೊಳಗಿನ ಗಲಾಟೆ. ಹೀಗೆಲ್ಲ ಇರುವಾಗ ಸಂತೋಷ್ ಆತ್ಮಹತ್ಯೆ ಯತ್ನ ವಿಚಾರ ರಾಜ್ಯದ ಆಗುಹೋಗುಗಳ ಮೇಲೆ ಏನೂ ಪರಿಣಾಮ ಬೀರುವುದಿಲ್ಲ. ಸಂತೋಷ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಕಿತ್ತುಹಾಕಿದ್ರು ಅಥವಾ ಬಿಟ್ರು ಅದರಿಂದ ರಾಜ್ಯದ ಜನತೆಗೆ ಏನೂ ತೊಂದರೆ ಇಲ್ಲ. ಆದ್ದರಿಂದ ಡಿಕೆಶಿಯಂತವರು ಈ ಕ್ಷುಲಕ ಕಾರಣಕ್ಕೆ ಆತ್ಮಹತ್ಯೆ ಮತ್ತು ಆತ್ಮಹತ್ಯೆ ಯತ್ನ ಮಾಡುವ ಪ್ರಕರಣಗಳ ಬಗ್ಗೆ ಆರೋಪ ಮಾಡುವುದು ಬಿಟ್ಟು ರಾಜ್ಯದ ಒಳಿತಿಗೆ ಏನಾದರೂ ಹಮ್ಮಿಕೊಳ್ಳಲಿ. ಮೈತ್ರಿ ಸರಕಾರ ಹೋದ ಮೇಲೆ ಸಹಜವಾಗಿ ಕಾಂಗ್ರೆಸ್ ನೀರಿನಿಂದ ತೆಗೆದ ಮೀನಿನಂತೆ ಆಗಿದೆ. ಮತ್ತೊಂದೆಡೆ ಅಧಿಕಾರಕ್ಕೆ ಬಂದ ಎರಡು ವರ್ಷಗಳ ನಂತರ ಬಿಜೆಪಿ ನೀರಿನಲ್ಲಿ ಮುಳುಗುತ್ತಿರುವ ಹಡಗಿನಂತೆ ಕಾಣುತ್ತದೆ. ಅದರ ಮಧ್ಯೆ ಯಡಿಯೂರಪ್ಪ ಹೈಕಮಾಂಡ್ ನತ್ತ ಬಾವುಟ ತೋರಿಸುತ್ತಾ ನನಗೆ ಹಡಗು ಬಿಟ್ಟುಕೊಡಿ, ಇಲ್ಲದಿದ್ದರೆ ಮುಳುಗಿಸಿಯೇ ಹೋಗುತ್ತೇನೆ ಎಂದು ಪರೋಕ್ಷವಾಗಿ ಆರ್ಭಟಿಸುವಂತೆ ಕಾಣುತ್ತಿದೆ. ಈ ನಡುವೆ ರಾಜ್ಯದ ಚಾವಿ ಯಡಿಯೂರಪ್ಪನವರ ಕೈಲಿ ಬಿಡಲೂ ಆಗದೇ ತೆಗೆದುಕೊಳ್ಳಲು ಆಗದೇ ಹೈಕಮಾಂಡ್ ಮೊದಲ ಬಾರಿಗೆ ಯಡ್ಡಿ ಎದುರು ಮಂಡಿಯೂರುವಂತೆ ಕಾಣುತ್ತಿದೆ. ಅತ್ತ ಡಿಕೆಶಿ ಮಾತ್ರ ಆತ್ಮಹತ್ಯೆ ಪ್ರಕರಣಗಳನ್ನು ಹಿಡಿದು ರಾಜಕೀಯ ಮಾಡುತ್ತಿದ್ದಾರೆ!
0
Shares
  • Share On Facebook
  • Tweet It




Trending Now
'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
Hanumantha Kamath February 11, 2026
ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
Hanumantha Kamath February 10, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್
    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
  • Popular Posts

    • 1
      'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • 2
      ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • 3
      ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್

  • Privacy Policy
  • Contact
© Tulunadu Infomedia.

Press enter/return to begin your search