ಟ್ರಾಫಿಕ್ ಸಮಸ್ಯೆ ಪರಿಹಾರವಾದರೆ ಲಾಭ ನನಗೆ ಅಲ್ಲ, ನಿಮಗೆ ಮತ ನೀಡಿದ ಜನರಿಗೆ…
Posted On January 19, 2021
ನಮ್ಮಲ್ಲಿ ಕೆಲವು ಕಾನೂನುಗಳು ಪ್ರಭಾವಿ ವ್ಯಕ್ತಿಗಳಿಗೆ ಬೇಕಾದ ಹಾಗೆ ಬದಲಾಗುತ್ತದೆ. ಕೆಲವು ವ್ಯವಸ್ಥೆಗಳು ಹಣವಂತರಿಗಾಗಿ ಬದಲಾಯಿಸಲ್ಪಡುತ್ತದೆ. ನಿಷ್ಟಾವಂತ ಅಧಿಕಾರಿಗಳು ಮಾಡಿದಂತಹ ಯೋಜನೆಗಳು ಶ್ರೀಮಂತರಿಗೆ ಸರಿಹೊಂದಲಿಲ್ಲ ಎನ್ನುವ ಕಾರಣಕ್ಕೆ ರದ್ದುಗೊಳಿಸಲ್ಪಡುತ್ತದೆ. ಇದೆಲ್ಲಾ ಗೊತ್ತಿದ್ದು ಜನಪ್ರತಿನಿಧಿಗಳು ಟ್ರಾಫಿಕ್ ಸಮಸ್ಯೆ ಸರಿಮಾಡುತ್ತೇನೆ ಎಂದು ಹೇಳುವುದು ಯಾವ ಧೈರ್ಯದ ಮೇಲೆಯೊ ಗೊತ್ತಾಗುವುದಿಲ್ಲ. ನಿಜವಾಗಿಯೂ ಜಿಲ್ಲಾಡಳಿತಕ್ಕೆ,ಶಾಸಕರಿಗೆ ಈ ಬಗ್ಗೆ ಕಳಕಳಿ ಇದ್ದರೆ ಮಂಗಳೂರಿನಲ್ಲಿ ಯಾವತ್ತೂ ಟ್ರಾಫಿಕ್ ಜಾಮ್ ನಿಂದಲೇ ಕುಖ್ಯಾತವಾಗಿರುವ ಎರಡು ಪ್ರದೇಶಗಳ ಬಗ್ಗೆ ಶೀಘ್ರ decision ತೆಗೆದುಕೊಳ್ಳಬೇಕು. ಒಂದು ಕರಂಗಲಪಾಡಿ-ಬಂಟ್ಸ್ ಹಾಸ್ಟೆಲ್ ಪ್ರದೇಶ ಮತ್ತೊಂದು ಬೆಂದೂರ್ ವೆಲ್ ಪ್ರದೇಶ.
ಮೊದಲು ಬೆಂದೂರುವೆಲ್ ಕಡೆ ಹೋಗೋಣ. ಇಲ್ಲಿನ ಟ್ರಾಫಿಕ್ ಸಮಸ್ಯೆಯನ್ನು ಕೊನೆಗಾಣಿಸಲು ಹಿಂದೆ ಟ್ರಾಫಿಕ್ ಎಸಿಪಿಯಾಗಿದ್ದ ಉದಯ್ ನಾಯಕ್ ಅವರು ಬಹಳ ಉತ್ತಮವಾದ ಒಂದು ಪರಿಹಾರವನ್ನು ಕಂಡುಕೊಂಡಿದ್ದರು. ಅದನ್ನು ರಾಜಕೀಯ ಒತ್ತಡ ದಿಂದ ನಿಲ್ಲಿಸಿದ್ದಾರೆ. ಅರಕ್ಷಕ ಅಯುಕ್ತರು ಮೊದಲು ಸಾಧ್ಯವಾದರೆ ಮಾಜಿ ಎಸಿಪಿ ಉದಯ್ ನಾಯಕ್ ಅವರನ್ನು ತಮ್ಮ ಚೇಂಬರಿಗೆ ಕರೆದು ಆ ಬಗ್ಗೆ ಚರ್ಚ್ ನಡೆಸಿ. ಕಲೆಕ್ಟರ್ ಗೇಟ್ ಕಡೆಯಿಂದ ಹೋಗುವ ವಾಹನಗಳು ಎಸ್ಸಿಎಸ್ ಆಸ್ಪತ್ರೆಯ ರಸ್ತೆಯಲ್ಲಿ ಹೋಗಿ ಅಲ್ಲಿಂದ ಬಲಕ್ಕೆ ತಿರುಗಿ ನಂತರ ಬೆಂದೂರ್ ವೆಲ್ ಕಡೆ ಹೋಗುವುದು. ಹಾಗೆ ಅಲ್ಲಿಂದ ಜ್ಯೋತಿ, ಬಲ್ಮಠ ಕಡೆ ಬರುವ ಬಸ್ಸು, ವಾಹನಗಳು ಬೆಂದೂರುವೆಲ್ ರಸ್ತೆಯಲ್ಲಿ ಬರುವಂತೆ ವ್ಯವಸ್ಥೆ ಮೊದಲು ಇತ್ತು. ಆದರೆ ಕೆಲವು ವ್ಯಾಪಾರಿಗಳು ಮತ್ತು ಅಲ್ಲಿರುವ ಎರಡು ಶಿಕ್ಷಣ ಸಂಸ್ಥೆಗಳ ವಾಹನಗಳು ಪಾರ್ಕಿಂಗ್ ಮಾಡಲು ಸಮಸ್ಯೆ ಎಂದ ತಕ್ಷಣ ಸ್ಥಳೀಯ ಮನಪಾ ಸದಸ್ಯರು ದಾವಂತಕ್ಕೆ ಬಿದ್ದು ಆ ವ್ಯವಸ್ಥೆಯನ್ನೇ ರದ್ದುಗೊಳಿಸಿದ್ದಾರೆ. ಕೆಲವು ವ್ಯಾಪಾರಿಗಳಿಗಾಗಿ ಇವತ್ತಿಗೂ ಸಾವಿರಾರು ಜನ ವಾಹನ ಸವಾರರು, ಪಾದಚಾರಿಗಳು, ಪ್ರಯಾಣಿಕರು ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥಮಾಡಬೇಕಾಗಿದೆ. ನೀವು ಅಲ್ಲಿ ಬಂದು ಪರಿಸ್ಥಿತಿಯನ್ನು ಒಮ್ಮೆ ನೋಡಿ. ಮಾಜಿ ಎಸಿಪಿ ಉದಯ ನಾಯಕ್ ಅವರು ಹಿಂದೆ ಮಾಡಿದ ಆ ಯೋಜನೆ ಅವರ ಲಾಭಕ್ಕೆ ಅಲ್ಲವೇ ಅಲ್ಲ. ಆದರೆ ಆ ಯೋಜನೆಯನ್ನು ನಿಲ್ಲಿಸಿದ್ದು ಮಾತ್ರ ಕಾಂಗ್ರೆಸ್ ಮತ್ತು ಅ ಪಕ್ಷದ corporator ರವರ ವೈಯಕ್ತಿಕ ಲಾಭಕ್ಕಾಗಿ. ಅದು ಗೊತ್ತಿದ್ದವರಿಗೆ ಗೊತ್ತೇ ಇದೆ.
ಇನ್ನು ಮಂಗಳೂರಿನ ಅನೇಕ ರಸ್ತೆಗಳು ಚತುಷ್ಪಥ ಕಾಂಕ್ರೀಟ್ ರಸ್ತೆಗಳಾದದ್ದು ವಾಹನಗಳು ಸರಾಗವಾಗಿ ಚಲಿಸಲು ಅನುಕೂಲಕರವಾಗಲಿ ಎನ್ನುವ ಕಾರಣಕ್ಕೆ. ಆದರೆ ಚತುಷ್ಪಥ ಹೆಸರಿಗೆ ಮಾತ್ರ. ಅಗಲವಾದ ರಸ್ತೆಗಳ ಆಚೆ ಇಚೆ ದ್ವಿಚಕ್ರ ಮತ್ತು ಕಾರು ಸಹಿತ ಇತರ ವಾಹನಗಳನ್ನು ಅದರ ಮಾಲೀಕರು ಮೈಚಾಚಿ ಮಲಗಿಸಿಕೊಂಡಿರುತ್ತಾರೆ. ಅದರಿಂದ ರಸ್ತೆಗಳು ಅಗಲ ಮಾಡಿ ಆದ ಪ್ರಯೋಜನವಾದರೂ ಏನು? ಆ ಲೇಡಿಗೋಶನ್ ಎದುರಿನ ಸೆಂಟ್ರಲ್ ಮಾರುಕಟ್ಟೆಗೆ ಹೋಗುವ ರಸ್ತೆಯನ್ನು ಒಮ್ಮೆ ನೋಡಿ. ಆ ಲಿಂಕಿಂಗ್ ಟವರ್ ಗೆ parking ಎಲ್ಲಿ ಎಂದು ನೀವೆ ಹೇಳಬೇಕಾಗಿದೆ. ಅಂತಹ ಅನೇಕ ಕಟ್ಟಡಗಳ ಲಿಸ್ಟೆ ಪಾಲಿಕೆಯಲ್ಲಿದೆ. ಪುನ: ಹೇಳುವ ಅಗತ್ಯ ಇಲ್ಲ ಎಂದುಕೊಂಡಿದ್ದೇನೆ. ಆದರೆ ಪ್ರಶ್ನೆ ಇರುವುದು ಈ ಲಿಂಕಿಂಗ್ ಟವರ್ಸ್ ಎದುರು ಫುಟ್ ಪಾತ್ ಮೇಲೆಯೇ ಬೀದಿಬದಿ ವ್ಯಾಪಾರಿಗಳು ತಮ್ಮ ಸಾಮಾನು ಸರಂಜಾಮುಗಳನ್ನು ಹರಡಿ ಕುಳಿತುಕೊಂಡಿರುತ್ತಾರೆ. ಇದರಿಂದ ಆ ರಸ್ತೆಯ ಪರಿಸ್ಥಿತಿ ಹೇಗಿದೆ ಎಂದು ನಿಮಗೆ ಗೊತ್ತಿದೆಯೋ ಇಲ್ಲವೊ. ಈ ಬೀದಿಬದಿ ವ್ಯಾಪಾರಿಗಳಿಗೆ ಒಂದು ವ್ಯವಸ್ಥೆ ಮಾಡದೆ ಹೋದರೆ, ಅಂಗಡಿಗಳಿಗಿಂತ ಹೆಚ್ಚು ಸಾಮಾನುಗಳು ಅಂಗಡಿಯ ಹೊರಗೆನೆ ಇದ್ದರೆ, ನೀವು ಎಷ್ಟು ಟ್ರಾಫಿಕ್ ಸರಿಮಾಡುತ್ತೆನೆ ಎಂದು ಹೊರಟರೂ ಅಷ್ಟೇ. ಇನ್ನು ಟ್ರಾಫಿಕ್ ಪೊಲೀಸರ ಖಾಲಿ ಇರುವ ಹುದ್ದೆಯನ್ನು ಬರ್ತಿ ಮಾಡಿ. ನಾನು ಹೇಳುತ್ತಿರುವ ಟ್ರಾಫಿಕ್ ಸಮಸ್ಯೆ ಸರಣಿಯನ್ನು ಪುರುಸೊತ್ತಿದ್ದರೆ ಟ್ರಾಫಿಕ್ ಎಸಿಪಿ ಓದಿ ಅದರಲ್ಲಿ ಕೆಲವೊಂದನ್ನಾದರೂ ನೀವು ಅನುಷ್ಟಾನಕ್ಕೆ ತಂದರೆ ಮಂಗಳೂರಿನ ಟ್ರಾಫಿಕ್ ಸಮಸ್ಯೆ ಅರ್ಧ ಪರಿಹಾರವಾಯಿತು ಎಂದೆ ಇಟ್ಟುಕೊಳ್ಳಿ. ಸಮಸ್ಯೆ ಪರಿಹಾರವಾದರೆ ಜನ ಹೊಗಳುವುದು ನಿಮ್ಮನ್ನೆ, ಆ ಬಗ್ಗೆ ಸಂಶಯ ಬೇಡಾ.ಮಾಜಿ ಎಸಿಪಿ ಉದಯ ನಾಯಕ್ ರಿಗಾಗಲಿ, ನಾನಾಗಲೀ ಅದರ ಕ್ರೆಡಿಟ್ ತೆಗೆದುಕೊಳ್ಳುವುದಕ್ಕೆ ಹೋಗುವುದಿಲ್ಲ. ಅಷ್ಟಕ್ಕೂ ನಮಗೇನೂ ಮುಂದಿನ ಚುನಾವಣೆಯಲ್ಲಿ ನಿಲ್ಲಲು ಇಲ್ಲ. ನಿಲ್ಲಲು ಇರುವುದು ರಾಜಕೀಯ ಮಾಡುತ್ತಿರುವ ಜನಪ್ರತಿನಿಧಿಗಳಿಗೆ ಆದರೆ ಹಿಂದಿನ ಶಾಸಕರಾಗಲಿ ಅವರ ಪಕ್ಷದ ಮುಖಂಡರು ಅ ಐದು ವರ್ಷಗಳಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿದಿಲ್ಲ. ಕಂಡು ಹಿಡಿದವರಿಗೂ ಜಾರಿಗೊಳಿಸಲು ಬಿಟ್ಟಿಲ್ಲ. ಹೀಗಿರುವಾಗ ನೀವು ಹೊಸ ಶಾಸಕರು ಪರಿಹಾರ ಕಂಡುಹಿಡಿಯುತ್ತೀರಿ, ಅಕ್ರಮ construction ಗಳನ್ನು ಕೆಡವಲು ಸೂಚನೆ ಕೊಡುತ್ತಿರಿ, ಅನಧಿಕೃತ construction ಸ್ಥಳದಲ್ಲಿ ಅದನ್ನು ತೆರವುಗೊಳಿಸಿ parking ವ್ಯವಸ್ಥೆ ಜಾರಿಗೊಳಿಸುತ್ತಿರಿ, ಏಕಮುಖ ಸಂಚಾರ ವ್ಯವಸ್ಥೆಗೆ ಪ್ರೋತ್ಸಾಹ ಕೊಡುತ್ತಿರಿ, ರಸ್ತೆಗಳ ಇಕ್ಕೆಲಗಳಲ್ಲಿ parking ಮಾಡದಂತೆ ಸೂಚನೆ ನೀಡುತ್ತಿರಿ ಎಂದೆಲ್ಲ ಊಹಿಸಿಕೊಳ್ಳುವುದು ಹೇಗೆ?.
- Advertisement -
Trending Now
ದೇಶದ್ರೋಹಿ ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ.
August 30, 2024
Leave A Reply