• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಅಟಲ್ ಭಾಷಣಗಳಲ್ಲಿದ್ದ ತೂಕ ಮತ್ತು ಈಗಿನ ತಾಂಟ್ ಬಾ ತಾಂಟ್ ಭಾಷಣಗಳ ಗುಣಮಟ್ಟ!!

Hanumantha Kamath Posted On January 23, 2021


  • Share On Facebook
  • Tweet It

ತಾಂಟ್ ರೇ ಬಾ ತಾಂಟ್ ಎನ್ನುವ ಶಬ್ದಗಳು ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಾಗುತ್ತಿವೆ. ಟ್ರೋಲ್ ಆಗುತ್ತಿವೆ. ಈ ಶಬ್ದಗಳು ಹೊರಗೆ ಬಂದದ್ದು ಎಸ್ ಡಿಪಿಐ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನಾಯಕ ರಿಯಾಜ್ ಫರಂಗಿಪೇಟೆ ಎನ್ನುವವರು ಮಾಡಿದ ಭಾಷಣದ ತುಂಡು. ಅದು ಎಷ್ಟರ ಮಟ್ಟಿಗೆ ಫೇಮಸ್ ಆಯಿತು ಎಂದರೆ ಯಕ್ಷಗಾನದಲ್ಲಿ ಪಾತ್ರಧಾರಿಗಳು ಬಳಸುವ ಮಟ್ಟಿಗೆ ಖ್ಯಾತಿ ಪಡೆಯಿತು. ಈ ರಿಯಾಜ್ ತಮ್ಮ ಹೇಳಿಕೆಯ ಬಗ್ಗೆ ಆಡಿಯೋ ಕ್ಲೀಪ್ ಮಾಡಿ ತಮ್ಮ ಮಾತುಗಳ ಮಧ್ಯದಲ್ಲಿ ಬಂದ ಈ ಶಬ್ದಗಳನ್ನು ಟ್ರೋಲ್ ಮಾಡಿದವರನ್ನು ಕ್ಷಮಿಸುತ್ತೇನೆ ಎಂದು ಹೇಳಿದ್ದಾರೆ. ಅವರು ಕ್ಷಮಿಸುತ್ತಾರೋ, ಇಲ್ಲವೋ ಎಂದು ಟ್ರೋಲ್ ಮಾಡಿದವರು ಕ್ಯಾರೇ ಮಾಡುವುದಿಲ್ಲ.

ಇಲ್ಲಿ ವಿಷಯ ಇರುವುದು ಈ ಸಮಾಜದ ಸಭ್ಯ ಜನ ಅವರನ್ನು ಕ್ಷಮಿಸುತ್ತಾರಾ ಎನ್ನುವುದು ಮಾತ್ರ. ಒಂದು ವೇಳೆ ಈ ತಾಂಟ್ ಬಾ ತಾಂಟ್ ಟ್ರೋಲ್ ಆಗದೇ ಇದ್ದರೆ ಎಸ್ ಡಿಪಿಐ ಪಕ್ಷದ ಕಾರ್ಯಕರ್ತರು ಅದನ್ನು ಗಂಭೀರವಾಗಿ ತೆಗೆದುಕೊಂಡು ಏನಾದರೂ ಅನಾಹುತವನ್ನು ನಮ್ಮ ಜಿಲ್ಲೆಯಲ್ಲಿ ಮಾಡುವ ಸಾಧ್ಯತೆ ಇತ್ತು. ಯಾಕೆಂದರೆ ತಾಂಟ್ ಬಾ ತಾಂಟ್ ಎನ್ನುವುದು ಬಹಿರಂಗ ಆಹ್ವಾನ. ಬನ್ನಿ, ನಮ್ಮನ್ನು ಕೆಣಕಿ, ಪರಿಣಾಮ ನೋಡಿ ಎನ್ನುವ ಅರ್ಥದ ಮಾತುಗಳು ಅದು. ಇಲ್ಲಿ ಇದರ ಅಗತ್ಯ ಒಂದು ಭಾಷಣದಲ್ಲಿ ಇದೆಯಾ ಎನ್ನವುದನ್ನು ಎಸ್ ಡಿಪಿಐ ಮುಖಂಡರು ಅರ್ಥ ಮಾಡಿಕೊಳ್ಳಬೇಕು. ಪ್ರತಿಭಟನೆ ಮಾಡಲು ಎಲ್ಲರಿಗೂ ನಮ್ಮ ಪ್ರಜಾಪ್ರಭುತ್ವದಲ್ಲಿ ಹಕ್ಕಿದೆ. ಹಾಗಂತ ಪ್ರಜಾಪ್ರಭುತ್ವ ಹಕ್ಕನ್ನು ಸ್ವೇಚ್ಚಾಚಾರವನ್ನಾಗಿ ಮಾಡಿ ಎಂದು ಅವಕಾಶ ಕೊಟ್ಟಿಲ್ಲ. ಭಾರತೀಯ ಜನತಾ ಪಾರ್ಟಿ ಯಾವತ್ತೂ ಹೀಗೆ ಬಹಿರಂಗವಾಗಿ ಇನ್ನೊಂದು ಪುಟ್ಟ ಅಂಬೆಗಾಲು ಇಡುತ್ತಿರುವ ಪಕ್ಷದೊಂದಿಗೆ ಜಿದ್ದಿಗೆ ಬಿದ್ದೇ ಇಲ್ಲ. ಆದರೆ ಎಸ್ ಡಿಪಿಐಗೆ ಈಗ ಅರ್ಜೆಂಟಾಗಿ ದೊಡ್ಡ ದೊಡ್ಡವರನ್ನು ಕೆಣಕಬೇಕು. ಅವರಿಗೆ ಗೊತ್ತಿದೆ. ಕಾಂಗ್ರೆಸ್ ಈಗಾಗಲೇ ಜಿಲ್ಲೆಯಲ್ಲಿ ಎಷ್ಟು ಗುಂಪುಗಳಾಗಿ ಒಡೆದು ಹೋಗಿದೆ ಎಂದು ಎಣಿಸಲು ಅವರದ್ದೇ ಪಕ್ಷದ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ಮಿಥುನ್ ರೈಯಿಂದ ಹಿಡಿದು ವಿನಯರಾಜ್ ತನಕ ಎಲ್ಲರಿಗೂ ಶಾಸಕನಾಗುವ ಉಮ್ಮೇದಿನಲ್ಲಿ ಯಾರು ಕೂಡ ಒಬ್ಬರ ಬೆನ್ನಿಗೆ ಇನ್ನೊಬ್ಬರು ನಿಲ್ಲಲು ಹೋಗುತ್ತಿಲ್ಲ. ಈ ಮಧ್ಯೆ ಕಾಂಗ್ರೆಸ್ ಹಿರಿಯರು ಅತ್ತ ವಯಸ್ಸಾಗಿರುವುದನ್ನು ಒಪ್ಪಿಕೊಳ್ಳದೇ, ಇತ್ತ ಹೋರಾಡಲು ಆರೋಗ್ಯ ಸರಿಯಿಲ್ಲದೆ ಮುಂದಿನ ಚುನಾವಣೆಯಲ್ಲಿ ನಿಲ್ಲಬೇಕಾ, ಬೇಡ್ವಾ ಎನ್ನುವ ಗೊಂದಲದಲ್ಲಿದ್ದಾರೆ.

ಆದ್ದರಿಂದ ಎಸ್ ಡಿಪಿಐ ನೇರವಾಗಿ ತನ್ನ ಎದುರು ಪಕ್ಷ ಎಂದು ಅಂದುಕೊಂಡಿರುವುದು ಬಿಜೆಪಿಯನ್ನು. ಬಿಜೆಪಿಯನ್ನು ಬೈದಷ್ಟು ತನ್ನ ಪಕ್ಷದ ಕಾರ್ಯಕರ್ತರಿಗೆ ಖುಷಿಯಾಗುತ್ತದೆ ಎನ್ನುವ ಐಡಿಯಾ ಆ ಪಕ್ಷದ ಮುಖಂಡರಿಗೆ ಸಿಕ್ಕಿ ಆಗಿದೆ. ಅದರೊಂದಿಗೆ ಮೊನ್ನೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಿರೀಕ್ಷೆಗಿಂತ ಹೆಚ್ಚು ಸೀಟುಗಳನ್ನು ಕಾಂಗ್ರೆಸ್ ತೆಕ್ಕೆಯಿಂದ ತನ್ನತ್ತ ಸೆಳೆಯಲು ಜಿಲ್ಲೆಯಲ್ಲಿ ಎಸ್ ಡಿಪಿಐ ಯಶಸ್ವಿಯಾಗಿದೆ. ಈಗ ಈ ಸಂಭ್ರಮವನ್ನು ತೋರಿಸಬೇಕಲ್ಲ, ಅದಕ್ಕಾಗಿ ಆಗಾಗ ಹೋರಾಟ, ಪ್ರತಿಭಟನೆ ಮಾಡುವ ಮೂಲಕ ರಣಾಂಗಣಕ್ಕೆ ಇಳಿಯುತ್ತಿದೆ. ಅವರು ತಮ್ಮ ಪಕ್ಷವನ್ನು ಬೆಳೆಸುವುದು ತಪ್ಪಲ್ಲ. ಅದಕ್ಕೆ ಬಿಜೆಪಿ ಆಕ್ಷೇಪ ಮಾಡಲು ಹೋಗುವ ಸಾಧ್ಯತೆಯೂ ಇಲ್ಲ. ಅವರಿಂದ ತೊಂದರೆ ಇದ್ದರೆ ಅದು ಕಾಂಗ್ರೆಸ್ಸಿಗೆ ಮಾತ್ರ.

ತಾಂಟ್ ಬಾ ತಾಂಟ್ ವಿಷಯದಲ್ಲಿ ಕಾಂಗ್ರೆಸ್ ದಿವ್ಯ ಮೌನ ತಾಳುತ್ತಿದೆ. ಹಾಗಂತ ವಿರೋಧ ಮಾಡಿದರೂ ಕಷ್ಟ, ಒಪ್ಪಿಕೊಂಡರೂ ಕಷ್ಟ ಎನ್ನುವ ನಿಲುವು ಕಾಂಗ್ರೆಸ್ಸಿನದ್ದು. ಆದರೆ ಕಾರ್ಯಕರ್ತರ ಚಪ್ಪಾಳೆ, ಸಿಳ್ಳೆಗೆ ಮತ್ತು ಕಡಿಮೆ ಖರ್ಚಿನಲ್ಲಿ ಪಬ್ಲಿಸಿಟಿ ಸಿಗುತ್ತೆ ಎನ್ನುವ ಕಾರಣಕ್ಕೆ ಹಾಗೂ ತಮ್ಮ ಪಕ್ಷದಲ್ಲಿ ತಾವು ಉಳಿದವರಿಗಿಂತ ದೊಡ್ಡ ನಾಯಕನಾಗಿ ಬೆಳೆಯಬೇಕು ಎನ್ನುವ ಆತುರದಿಂದ ಕೆಲವು ನಾಯಕರು ಹೀಗೆ ಮಾಡುವುದು ಇದೆ. ಆದರೆ ಏನು ಮಾತನಾಡುವುದಿದ್ದರೂ ಅದನ್ನು ಪರಿಧಿಯೊಳಗೆ ಮಾತನಾಡಿದರೆ ಚೆಂದ. ಆದರೆ ಫೇಮಸ್ ಆಗಬೇಕು ಎನ್ನುವ ಕಾರಣಕ್ಕೆ ಹೀಗೆ ಮಾತನಾಡುತ್ತಾ ಹೋದರೆ ಚಪ್ಪಾಳೆ ಹೊಡೆದ ಕಾರ್ಯಕರ್ತ ಒಂದು ದಿನ ನಿಮ್ಮನ್ನು ಅಷ್ಟಕ್ಕೆ ಮಾತ್ರ ಸೀಮಿತಗೊಳಿಸುತ್ತಾನೆ. ಕಾಂಗ್ರೆಸ್ಸಿನ ಸಿಎಂ ಇಬ್ರಾಹಿಂ ಅವರ ಭಾಷಣವನ್ನೇ ತೆಗೆದುಕೊಳ್ಳಿ. ಜನ ಅದನ್ನು ಎಂಜಾಯ್ ಮಾಡುತ್ತಾರೆ ಬಿಟ್ಟರೆ ಅವರನ್ನು ಯಾವತ್ತೂ ಸಿರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ. ಒಬ್ಬ ನಾಯಕ ತನ್ನ ಭಾಷಣದಲ್ಲಿ ಎಷ್ಟು ಸತ್ವಭರಿತ ಅಂಶಗಳನ್ನು ಇಟ್ಟುಕೊಳ್ಳುತ್ತಾನೆ ಎನ್ನುವುದರ ಮೇಲೆ ಕಾರ್ಯಕರ್ತ ನಿಮ್ಮನ್ನು ಅಳೆಯಲು ಶುರು ಮಾಡುತ್ತಾನೆ. ಆ ನಿಟ್ಟಿನಲ್ಲಿ ಇವತ್ತಿನ ಯುವ ನಾಯಕರು ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣಗಳನ್ನು ಅಧ್ಯಯನ ಮಾಡಬೇಕು. ಬಟ್ಟೆಯಲ್ಲಿ ಸುತ್ತಿಟ್ಟು ಹೊಡೆದ ಸಲಾಕೆಗಳಂತೆ ಇದ್ದವು. ಆದರೆ ಯಾವತ್ತೂ ಅವರು ಸಭ್ಯತೆಯ ಪರಿಧಿಯನ್ನು ಮೀರಲೇ ಇಲ್ಲ. ಭಾಷಣದ ಮಧ್ಯೆ ವಚನಗಳನ್ನು ಹೇಳುತ್ತಾ, ಅಂಕಿ ಸಂಖ್ಯೆಗಳನ್ನು ನೀಡುತ್ತಾ, ಎದುರಾಳಿಗೆ ಸಮರ್ಥ ಉತ್ತರ ನೀಡುವುದು ಒಂದು ಕಲೆ. ಟ್ವೆಂಟಿ ಟ್ವೆಂಟಿಯಲ್ಲಿ ಬ್ಯಾಟ್ಸಮ್ಯಾನ್ ಒಂದೊಂದು ಎಸೆತವನ್ನು ತೂಗಿ ನೋಡಿ ಹೊಡೆಯಬೇಕು. ಹಾಗೆ ವೇದಿಕೆಯಲ್ಲಿ ತಮಗೆ ಸಿಗುವ ಐದತ್ತು ನಿಮಿಷಗಳನ್ನು ವೇದಿಕೆಯ ಕೆಳಗಿನವರು ಹೌದೌದು ಎನ್ನುವಂತೆ ಕಳೆಯಬೇಕು. ಸ್ಟಡಿ ಮಾಡದೇ ವೇದಿಕೆಯಲ್ಲಿ ಭಾಷಣಕ್ಕೆ ನಿಂತವ ಕೇವಲ ಚಪ್ಪಾಳೆ ಸಿಗುವಂತಹ ಶಬ್ದಗಳನ್ನೇ ಹುಡುಕುತ್ತಾನೆ. ಯಾಕೆಂದರೆ ಅವನ ಬಳಿ ವಿಷಯ ಇರುವುದಿಲ್ಲ!

  • Share On Facebook
  • Tweet It


- Advertisement -


Trending Now
ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
Hanumantha Kamath January 27, 2023
ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
Hanumantha Kamath January 26, 2023
Leave A Reply

  • Recent Posts

    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
    • ಹಿಂದೂಗಳ ಫಲವತ್ತತೆಯ ತಾಕತ್ತು ಪರೀಕ್ಷಿಸುತ್ತೀಯಾ ಬದ್ರುದ್ದೀನ್?
    • ಮಕ್ಕಳ ಬ್ಯಾಗಿನಲ್ಲಿ ಕಾಂಡೋಮ್ ಉತ್ತಮ ಲಕ್ಷಣವಲ್ಲ!!
    • ಬೊಮ್ಮಾಯಿ ಕಣ್ಣು ಮುಚ್ಚಿ ಕೊಟ್ಟ ಮುಸ್ಲಿಂ ಕಾಲೇಜು ಪ್ರಪಂಚ ನೋಡಿತು!!
    • ವಕ್ಫ್ ಬೋರ್ಡ್ ಅಧ್ಯಕ್ಷರ ಕ್ಲೈಮ್ಯಾಕ್ಸ್ ಆಟದಿಂದ ಬಿಜೆಪಿಗೆ ಟೆನ್ಷನ್!
  • Popular Posts

    • 1
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • 2
      ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search