ಮೀರಾ ರಾಘವೇಂದ್ರ ಮೊನ್ನೆ ಮಾಡಿದ್ದನ್ನು ಭಗವಾನ್ ಮೊದಲ ಬಾರಿ ಮಾತನಾಡುವಾಗಲೇ ಮಾಡಬೇಕಿತ್ತು!!

ಶ್ರೀರಾಮಚಂದ್ರ ದೇವರ ಬಗ್ಗೆ ಕೋಟ್ಯಾಂತರ ಹಿಂದೂಗಳಿಗೆ ಆರಾಧನಾ ಭಾವವಿದೆ. ಶ್ರೀರಾಮನಿಗೆ ಅಯೋಧ್ಯೆಯಲ್ಲಿ ಭವ್ಯ ಮಂದಿರ ಕಟ್ಟುವ ಬಗ್ಗೆ ಶತಮಾನಗಳಿಂದ ಹೋರಾಟ ನಡೆಯುತ್ತಿದೆ. ಅದಕ್ಕಾಗಿ ನಡೆದ ಸಂಘರ್ಷದಲ್ಲಿ ಲಕ್ಷಾಂತರ ಜನ ಪ್ರಾಣತ್ಯಾಗ ಮಾಡಿದ್ದಾರೆ. ಒಬ್ಬೊಬ್ಬ ರಾಮಭಕ್ತರ ಪ್ರಾಣ ಕೂಡ ಬಹಳ ಪವಿತ್ರವಾದದ್ದು. ಹೀಗಿರುವಾಗ ಯಕಶ್ಚಿತ್ ಒಬ್ಬ ಪುಡಿ ಬರಹಗಾರ ಭಗವಾನ್ ಎಂಬ ಹೆಸರಿನವ ರಾಮನನ್ನೇ ಹೀಯಾಳಿಸಿದರೆ ಕೇಳಿ ಸುಮ್ಮನೆ ಕುಳಿತುಕೊಳ್ಳಲು ಆಗುತ್ತದೆಯಾ? ಆತ ರಾಮನ ಬಗ್ಗೆ ಟೀಕಿಸುವಾಗ ನಮ್ಮ ರಕ್ತದಲ್ಲಿ ಆವೇಶ ಜಾಸ್ತಿಯಾಗುತ್ತಿರಲಿಲ್ಲವಾ? ಹಾಗೆಲ್ಲ ಭಗವಾನ್ ನಿಗೆ ಚಪ್ಪಲಿಯಿಂದ ಯಾರಾದರೂ ಹೊಡೆದು ಬುದ್ಧಿ ಕಲಿಸಲ್ವಾ ಎಂದು ಅನಿಸದೇ ಇರಲಿಲ್ಲ. ಕೊನೆಗೂ ಮೀರಾ ರಾಘವೇಂದ್ರ ಎನ್ನುವವರು ನ್ಯಾಯಾಲಯದ ಆವರಣದಲ್ಲಿಯೇ ಭಗವಾನ್ ಮುಖಕ್ಕೆ ಮಸಿ ಬಳಿದು ತಮ್ಮ ಕೋಪ ತೀರಿಸಿಕೊಂಡಿದ್ದಾರೆ. ನನ್ನ ಪ್ರಕಾರ ಅವರು ಭಗವಾನ್ ಹೇಳಿಕೆಗಳಿಂದ, ಬರಹಗಳಿಂದ ನೊಂದು ಕೊರಗುತ್ತಿದ್ದ ಅಸಂಖ್ಯಾತ ಹಿಂದೂಗಳ ಪ್ರತಿಯಾಗಿ ಆ ಕೆಲಸ ಮಾಡಿದ್ದಾರೆ. ಕೆಲವು ಬಿಜೆಪಿಗರಿಗೆ ಇದು ಸರಿಯಲ್ಲ ಎಂದೇ ಅನಿಸಬಹುದು. ಭಗವಾನ್ ಮುಗಿದ ಅಧ್ಯಾಯ, ಅವನಂತಹ ವೃದ್ಧನಿಗೆ ಮುಖಕ್ಕೆ ಬಸಿದರೆ ಏನು ಸಾಧಿಸಿದಂತೆ ಆಗುತ್ತದೆ ಎಂದು ಅನಿಸಲೂಬಹುದು. ಆದರೆ ವಿಷಯ ಇರುವುದು ಏನೆಂದರೆ ತಾನು ಬಹುಸಂಖ್ಯಾತರ ಆರಾಧ್ಯ ದೇವರಾಗಿರುವ ಶ್ರೀರಾಮನ ಬಗ್ಗೆ ಇಷ್ಟು ನಿಕೃಷ್ಟವಾಗಿ ಮಾತನಾಡಿದ ನಂತರವೂ ಈ ಕೈಲಾಗದ ಹಿಂದೂಗಳು ನನ್ನ ಕೂದಲನ್ನು ಮುಟ್ಟಲು ಆಗಲಿಲ್ಲ ಎಂದು ಭಗವಾನಿಗೆ ಅನಿಸಬಾರದು. ದುರ್ಗಾ ಸ್ವರೂಪಿಯಾದ ಹೆಣ್ಣು ಮಗಳೊಬ್ಬಳು ನಾಲ್ಕು ಜನರ ಎದುರೇ ಹಾಡುಹಗಲಲ್ಲಿ ಅವನಿಗೆ ಬುದ್ಧಿ ಕಲಿಸಿದ್ದಾಳೆ. ಇದು ಶೂಟ್ ಮಾಡುವುದಕ್ಕಿಂತ ಹೆಚ್ಚಿನ ಅವಮಾನ. ಇನ್ನು ಭಗವಾನ್ ಇದ್ದು ಕೂಡ ಸತ್ತ ಹಾಗೆ. ಕೆಲವು ಬಿಜೆಪಿ ಸಚಿವರುಗಳು ಮೀರಾ ರಾಘವೇಂದ್ರ ಮಾಡಿದ್ದು ತಪ್ಪು ಎನ್ನುವ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ಬಿಜೆಪಿಯ ಸುರೇಶ್ ಕುಮಾರ್, ಲಿಂಬಾವಳಿಯಂತವರಿಗೆ ನಿಜಕ್ಕೂ ನಾಚಿಕೆ ಆಗಬೇಕು. ಇನ್ನು ಒಬ್ಬನೇ ಒಬ್ಬ ಬಿಜೆಪಿಯ ಗಂಡು ಶಾಸಕ ಮೀರಾ ಪರ ಮಾತನಾಡಿಲ್ಲ ಎನ್ನುವುದೇ ಅಸಹ್ಯ. ವೇದಿಕೆಯಲ್ಲಿ ನಿಂತು ನೀವು ರಾಮನ ಬಗ್ಗೆ ಘಂಟಾಘೋಷವಾಗಿ ಮಾತನಾಡುವುದರಿಂದ ಇವತ್ತು ಬಿಜೆಪಿ ರಾಜ್ಯದಲ್ಲಿ ಎರಡು ಸೀಟುಗಳಿಂದ ನೂರಿಪ್ಪತ್ತು ಸೀಟಿಗೆ ಬಂದಿದೆ. ರಾಮನ ವಿಷಯ ಮಾತನಾಡದೇ ಇದ್ದರೆ ನಿಮಗೆ ವಿಧಾನಸೌಧ ಬಿಡಿ, ಕೆಎಸ್ ಆರ್ ಟಿಸಿ ಬಸ್ ಸ್ಟಾಪ್ ಹತ್ತಕ್ಕೂ ಯೋಗ್ಯತೆ ಇಲ್ಲ. ಚುನಾವಣೆ ಬಂದಾಗ ಮಾತ್ರ ರಾಮಜಪ ಮಾಡುವ ಬಿಜೆಪಿಗರೇ, ಆ ಹೆಣ್ಣುಮಗಳಿಗೆ ಕನಿಷ್ಟ ಬೆಂಬಲ ಸೂಚಿಸದೇ ಇದ್ದರೂ ಪರವಾಗಿಲ್ಲ, ವಿರೋಧ ಬರೆಯಲು ಹೋಗಬೇಡಿ. ಗಲ್ಲಿಗಲ್ಲಿಗಳಲ್ಲಿ ರಾಮನ ಬಗ್ಗೆ ಭಾಷಣ ಮಾಡಿ ಆ ಮೂಲಕ ಹಿಂದೂ ಸಮಾಜವನ್ನು ಒಟ್ಟು ಮಾಡಿದರೆ ಸಾಕಾಗದು. ಹೀಗೆ ಮಾತನಾಡುವವರನ್ನು ಹೇಗೆ ವಿಚಾರಿಸಬೇಕು ಎನ್ನುವುದು ಕೂಡ ಮುಖ್ಯ. ಇನ್ನು ಕೆಲವು ಸಲ ಏನು ಸಂಶಯ ಬರುತ್ತದೆ ಎಂದರೆ ಭಗವಾನ್ ಅಂತವರಿಗೆ ಹೀಗೆ ಮಾತನಾಡಲು ಬಿಜೆಪಿಯದ್ದೇ ಬೆಂಬಲ ಇದೆಯಾ ಎನ್ನುವುದು. ಯಾಕೆಂದರೆ ಆತ ಹಾಗೆ ಮಾತನಾಡುವುದರಿಂದಲೇ ಹಿಂದೂ ಸಮಾಜ ಒಟ್ಟಾಗುತ್ತದೆ ಎನ್ನುವುದು ಬಿಜೆಪಿ ಲೆಕ್ಕಾಚಾರವೇ?
ನಿಜ, ಭಗವಾನ್ ಯಾವತ್ತೋ ಔಟ್ ಡೇಟೆಡ್ ಆಗಿ ಹೋಗಿದ್ದಾನೆ. ಅವನಿಗೆ ಈಗ ಮುಖಕ್ಕೆ ಮಸಿ ಬಳಿಯುವುದರಿಂದ ಏನು ಪ್ರಯೋಜನ ಎಂದು ಬಿಜೆಪಿಯ ಕೆಲವು ಬುದ್ಧಿವಂತರು ಅಂದುಕೊಳ್ಳಬಹುದು. ಸ್ವಾಮಿ, ಭಗವಾನ್ ಮೊದಲ ಸಲ ಮಾತನಾಡುವಾಗ ನೀವು ಮೊನ್ನೆ ಮೀರಾ ಮಾಡಿದ್ದನ್ನೇ ಮಾಡಿದ್ದರೆ ಎರಡನೇ ಬಾರಿ ಭಗವಾನ್ ರಾಮನ ಬಗ್ಗೆ ಹಗುರವಾಗಿ ಮಾತನಾಡಲು ಯೋಚಿಸುವಾಗಲೇ ಪ್ಯಾಂಟ್ ಒದ್ದೆಯಾಗಬೇಕಿತ್ತು. ಆದರೆ ಆಗಿದೆಯಾ? ಇಲ್ಲ, ಎಷ್ಟೆಂದರೂ ನಾವು ಪರಧರ್ಮ ಸಹಿಷ್ಣುಗಳು. ಬೇರೆ ಧರ್ಮದವರನ್ನು ಹೀಯಾಳಿಸಿ ಎಂದು ನಾನು ಯಾವತ್ತೂ ಹೇಳುವುದಿಲ್ಲ. ಆದರೆ ನಮ್ಮ ಧರ್ಮದವನೇ ನಮ್ಮ ದೇವರನ್ನು ವಾಮಾಗೋಚರವಾಗಿ ಬೈಯುವಾಗ ನಾವು ಕೈಗೆ ಬಳೆ ಹಾಕಿ ಬಾಯಲ್ಲಿ ಚಕ್ಕುಲಿ ಹಾಕಿ ಕುಳಿತು ಈಗ ಲೇಟಾಗಿ ಮಸಿ ಬಳಿದ್ಳು ಎಂದರೆ ಏನರ್ಥ?ನನ್ನ ಪ್ರಕಾರ ಇದು ಕೇವಲ ಭಗವಾನ್ ಮುಖಕ್ಕೆ ಮಾತ್ರ ಮಸಿ ಬಳೆದದ್ದಲ್ಲ. ಭಗವಾನ್ ನ ಪಿಂಡಗಳು ಈಗಾಗಲೇ ಕೆಲವು ಆತನ ಅನುಯಾಯಿಗಳಾಗಿದ್ದರೆ ಮುಂದೆ ಅವರು ಹೀಗೆ ಮಾತನಾಡಲು ಶುರು ಮಾಡಿದರೆ ಆಗ ಏನು ಮಾಡುವುದು? ಅಂತವರಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ. ಇವತ್ತು ಒಬ್ಬ ಭಗವಾನ್ ಮಾತನಾಡಿದ್ದಾನೆ. ನಾಳೆ ಇವನಂತಹ ನಾಲ್ಕು ಜನ ಹೀಗೆ ಮಾತನಾಡಿದರೆ? ಚಿಕ್ಕಮಕ್ಕಳಿಗೆ ರಾಮನ ಸ್ತೋತ್ರ, ಕಥೆ ಹೇಳಿದರೆ ಅವುಗಳು ಕೇಳುವುದು ಕಡಿಮೆ. ಅದೇ ಭಗವಾನ್ ನಂತವರು ಹೇಳಿದ್ದು ಅವರ ಮನಸ್ಸಿಗೆ ಬೇಗ ಹೋಗುತ್ತದೆ. ಹಾಗಿರುವಾಗ ಒಂದು ಮಗು ಇವನ ಮಾತುಗಳನ್ನು ಕೇಳಿ ಅಪ್ಪಾ, ಭಗವಾನ್ ಹೇಳಿದ್ದು ಹೌದಾ ಎಂದರೆ ನಿಮ್ಮ ಬಳಿ ಉತ್ತರ ಇರುತ್ತಾ?
Leave A Reply