• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಂಗನ ಕೈಗೆ ಮಾಣಿಕ್ಯ, ದಿಶಾ ಕೈಗೆ ಟೂಲ್ ಕಿಟ್!!

AvatarHanumantha Kamath Posted On February 17, 2021


  • Share On Facebook
  • Tweet It

ಇತ್ತೀಚಿನ ದಿನಗಳಲ್ಲಿ ನೀವು ಮಾಧ್ಯಮಗಳಲ್ಲಿ ಅತೀ ಹೆಚ್ಚು ಬಾರಿ ಕೇಳಿರುವ ಶಬ್ದ ಅಂದರೆ ಅದು ಟೂಲ್ ಕಿಟ್. ಅಷ್ಟಕ್ಕೂ ಜನಸಾಮಾನ್ಯರಿಗೆ ಗೊತ್ತಿರುವ ಟೂಲ್ ಕಿಟ್ ಯಾವುದು ಅಂದರೆ ವಾಹನಗಳು ಹಾಳಾದರೆ ಮ್ಯಾಕೆನಿಕಲ್ ಒಂದು ಕಬ್ಬಿಣದ ಬಾಕ್ಸ್ ತರಹದ್ದು ಒಂದು ಸೂಟ್ ಕೇಸ್ ಹಿಡಿದುಕೊಂಡು ಬರಲ್ವಾ? ಅನೇಕ ಬಾರಿ ಆ ಬಾಕ್ಸ್ ಮೇಲೆ ಟೂಲ್ ಕಿಟ್ ಎಂದು ಬರೆದಿರುತ್ತದೆ. ಆ ಟೂಲ್ ಕಿಟ್ ನಲ್ಲಿ ವಿವಿಧ ಸ್ಪೆನರ್, ಸ್ಕ್ರೂ ಡ್ರೈವರ್ಸ್ ಸಹಿತ ಏನೇನೋ ಇರುತ್ತದೆ. ಆ ವಸ್ತುಗಳನ್ನು ಬಳಸಿ ಹಾಳಾದ ಗಾಡಿಯನ್ನು ಸರಿ ಮಾಡಲೂಬಹುದು. ಒಂದು ವೇಳೆ ತಲೆಕೆಟ್ಟಿದರೆ ಅದನ್ನೇ ಯಾರಿಗಾದರೂ ತಿವಿದು ಹೆಣ ಬೀಳಿಸಲೂಬಹುದು. ಆದರೆ ಒಬ್ಬ ಪ್ರಜ್ಞಾವಂತ ಮನುಷ್ಯ ಟೂಲ್ ಕಿಟ್ ಅನ್ನು ಯಾವುದಕ್ಕೆ ಬಳಸುತ್ತಾನೆ ಎನ್ನುವುದು ಅವನಿಗೆ ಬಿಟ್ಟ ವಿಷಯ. ಈಗ ಸಾಮಾಜಿಕ ಜಾಲತಾಣಗಳನ್ನೇ ಗಾಡಿ ಎಂದು ಅಂದುಕೊಂಡು ಅದರಲ್ಲಿ ನಾವು ಟೂಲ್ ಕಿಟ್ ಬಳಸಿದರೆ ಗಾಡಿಯನ್ನು ಸಕರಾತ್ಮಕವಾಗಿ ಬಳಸಲೂಬಹುದು. ಅದೇ ಟೂಲ್ ಕಿಟ್ ಬಳಸಿ ಯಾರದಾದರೂ ಇಮೇಜ್ ಹಾಳು ಮಾಡಲುಬಹುದು. ಇದು ನಮ್ಮ ನಮ್ಮ ಮನಸ್ಥಿತಿಯನ್ನು ಅವಲಂಬಿಸುತ್ತೆ. ಈಗ ಬಂಧಿತರಾಗಿರುವ ದಿಶಾ ರವಿ, ನಿಖಿತಾ, ಶಂತನು ಎನ್ನುವವರು ಟೂಲ್ ಕಿಟ್ ನಿಂದ ದೇಶದ ಇಮೇಜನ್ನು ತಿವಿಯಲು ಪ್ರಯತ್ನಿಸಿದರು ಎನ್ನುವ ಕಾರಣಕ್ಕೆ ಬಂಧನಕ್ಕೆ ಒಳಗಾಗಿದ್ದಾರೆ. ಅವರನ್ನು ಬಿಡುಗಡೆ ಮಾಡಬೇಕು ಎನ್ನುವ ಧ್ವನಿ ಎಡಪಂಥಿಯರಿಂದ ಕೇಳಿಬರುತ್ತಿದೆ. ಅಷ್ಟಕ್ಕೂ ಬಿಡುಗಡೆಗೆ ಒತ್ತಾಯಿಸುತ್ತಿರುವ ಪ್ರತಿಭಟನಾಕಾರರ ಮುಖ್ಯ ವಾದ ದಿಶಾ ರವಿ ಚಿಕ್ಕ ಪ್ರಾಯದ ಹುಡುಗಿ. ಅವಳಿಗೆ 21 ವರ್ಷ ಅಷ್ಟೇ. ಅದಕ್ಕೆ ಬಿಡುಗಡೆ ಮಾಡಬೇಕಂತೆ. ಆಧುನಿಕ ತಂತ್ರಜ್ಞಾನವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕೆಂಬುದು ಸಣ್ಣ ಪ್ರಾಯದವರಿಗೆ ಗೊತ್ತಿಲ್ಲದೇ ಮುದಿ ವಯಸ್ಸಿನವರಿಗೆ ಗೊತ್ತಿರುತ್ತದೆಯಾ? ಹಾಗಂತ ಅದನ್ನು ದೇಶದ ವಿರುದ್ಧವೇ ಬಳಸುವುದಾ? ಟೂಲ್ ಕಿಟ್ ಮೂಲಕ ವಿದೇಶಿಗರನ್ನು ಈ ವಿಷಯದತ್ತ ಆಕರ್ಷಿಸಿ ಅವರಿಂದ ಭಾರತದ ಬಗ್ಗೆ ಕೀಳಾಗಿ ಬರೆಸುವಂತಹ ಕ್ರಿಯೆ ಮಾಡಿರುವವರನ್ನು ಹಾಗೆ ಸುಮ್ಮನೆ ಬಿಡಲು ಆಗುತ್ತಾ?

ಇನ್ನು ಅವಳ ವಯಸ್ಸಿಗೆ ಬರೋಣ. ಅವಳೇನು ತೊಟ್ಟಿಲಲ್ಲಿ ಆಡುತ್ತಾ, ಮೇಲೆ ಜುಮ್ಕಿ ಕಂಡರೆ ನಗುವ ಮಗುವಲ್ಲ. ಅವಳಿಗೆ 21 ವಯಸ್ಸು. ಪರಿಸರಕ್ಕಾಗಿ ಹೋರಾಡಿದ್ದಾಳೆ ಎನ್ನುವುದು ಈಗ ಅವಳಿಗೆ ಸಿಕ್ಕಿರುವ ಶಿಫಾರಸ್ಸು. ಅದನ್ನು ಬಿಟ್ಟರೆ ಅವಳು ಸಿಕ್ಕಿಬೀಳುವ ತನಕ ಜನವರಿ 26 ರಂದು ದೆಹಲಿಯ ಕೆಂಪುಕೋಟೆಯ ಗಲಾಟೆ ಹಾಗೂ ಅದಕ್ಕೆ ವಿದೇಶಿ ನೀಲಿಚಿತ್ರ ತಾರೆಯರಿಂದ ಹಿಡಿದು ಅನೇಕರು ತಮ್ಮ ಮೂಗು ಅದು ಇದು ತೂರಿಸಿ ರಾಡಿ ಎಬ್ಬಿಸಿದರಲ್ಲ, ಅವರಿಗೆ ಪ್ರೇರಣೆ ಆದ್ದದ್ದೇ ಈ ಟೂಲ್ ಕಿಟ್. ಅತ್ತ ರೈತರ ವೇಷದಲ್ಲಿದ್ದ ಖಲಿಸ್ತಾನಿಗಳು ತಲವಾರು ಹಿಡಿದು ಕುದುರೆಯ ಮೇಲೆ ಕುಳಿತು ಪೊಲೀಸರ ಮೇಲೆ ಆಯುಧ ಬೀಸುತ್ತಾ ರಣರಂಗದಲ್ಲಿ ಓಡಾಡುತ್ತಿದ್ದರೆ, ಸೈಲೆಂಟಾಗಿ ಇಂಟರ್ ನೆಟ್ ಎನ್ನುವ ತಲವಾರು ಹಿಡಿದು ಲ್ಯಾಪಟಾಪ್ ಎನ್ನುವ ರಣಾಂಗಣದಲ್ಲಿ ಮೌಸ್ ಎನ್ನುವ ಪ್ರಾಣಿಯ ಮೇಲೆ ಕುಳಿತು ದೇಶದ ಅಖಂಡತೆಯ ಮೇಲೆ ಆಯುಧ ಬೀಸುತ್ತಿದ್ದವಳೇ ಈ ದಿಶಾರವಿ. ಒಂದು ಖಲಿಸ್ತಾನಿಗಳ ಬೆಂಬಲ, ಇನ್ನೊಂದೆಡೆ ಪಾಕಿಗಳ ಐಎಸ್ ಐ ನೆರವು ಮತ್ತೊಂದೆಡೆ ಕಾಂಗ್ರೆಸ್ ಸಹಿತ ಮೋದಿ ವಿರೋಧಿ ಬಣಗಳ ಸಹಾಯಹಸ್ತ ಸಿಕ್ಕಿರುವುದರಿಂದ ದಿಶಾ ರವಿಗೆ ತನಗೆ ಏನೂ ಆಗುವುದಿಲ್ಲ ಎನ್ನುವ ಅಚಲ ವಿಶ್ವಾಸ ಇತ್ತು. ಇನ್ನು ಅವಳ ವಯಸ್ಸನ್ನು ಆಧರಿಸಿ ಅವಳಿಗೆ ಶಿಕ್ಷೆಯಿಂದ ಯಾವುದೇ ವಿನಾಯಿತಿ ಸಿಗಬಾರದು. ದೇಶದ ಮೇಲೆ ಆದ ಅತ್ಯಂತ ಭೀಕರ ದಾಳಿಯ ರೂವಾರಿ ಅಜ್ಮಲ್ ಕಸಬ್ ಸಿಕ್ಕಿಬಿದ್ದಾಗ ಅವನಿಗೆ 25. ಬದುಕಲು ಸಾಕಷ್ಟು ವಯಸ್ಸಿತ್ತು. ಹಾಗಂತ ಹೋಗ್ಲಿಬಿಡಿ, ಚಿಕ್ಕ ಪ್ರಾಯದವನಲ್ವಾ? ಎಲ್ಲೋ ಚಿಕ್ಕದಿರುವಾಗ ತಂದೆ ಪಿಸ್ತೂಲ್ ತೆಗೆಸಿಕೊಟ್ಟಿಲ್ಲ ಎಂದು ಕಾಣಿಸುತ್ತೆ. ಅದಕ್ಕೆ ಈ ವಯಸ್ಸಿಗೆ ಅಮಾಯಕರನ್ನು ಕೊಂದು ಖುಷಿಪಟ್ಟ ಎಂದು ಹೇಳಲು ಆಗುತ್ತಾ? ಇದು ಕೂಡ ಹೀಗೆ.
ಇನ್ನು ದೆಹಲಿಯ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಆ ಹೆಣ್ಣು ಜೀವದ ಮೇಲೆ ಅತೀ ಹೆಚ್ಚು ಮೃಗೀಯ ವರ್ತನೆ ಮಾಡಿ ಪೈಶಾಚಿಕ ಸಂತೋಷ ಪಟ್ಟಿದ್ದು ಅಪ್ರಾಪ್ತ ವಯಸ್ಸಿನ ಹುಡುಗ ಎಂದು ನಂತರ ತನಿಖೆಯಿಂದ ಗೊತ್ತಾಯಿತು. ಆದರೆ 18 ತುಂಬಿಲ್ಲ ಎನ್ನುವ ಒಂದೇ ಕಾರಣಕ್ಕೆ ಅವನಿಗೆ ಮರಣದಂಡನೆ ಆಗಿರಲಿಲ್ಲ. ಈಗ ಅವನು ಎಲ್ಲಿಯೋ ಮಜಾ ಉಡಾಯಿಸುತ್ತಲೂ ಇರಬಹುದು. ಆದ್ದರಿಂದ ಅಪರಾಧ ಆದ ಕೂಡಲೇ ಜಾತಿ, ಧರ್ಮ, ವಯಸ್ಸು, ಲಿಂಗ, ಪಕ್ಷ, ಪ್ರಾಂತ್ಯ ಎಂದು ನೋಡದೇ ತನಿಖೆ ನಡೆಸಿ ಸೂಕ್ತ ಅನಿಸಿದ ಶಿಕ್ಷೆ ನೀಡಲೇಬೇಕು. ಈ ಟೂಲ್ ಕಿಟ್ ಬಳಸಿ ವಿದೇಶಿದಲ್ಲಿಯೂ ಕೆಲವು ಐತಿಹಾಸಿಕ ಹೋರಾಟ ನಡೆದು ಸರಕಾರಗಳು ಅದಲುಬದಲಾಗಿವೆ. ಇಲ್ಲಿಯೂ ಇದ್ದದ್ದು ಅದೇ ಏಜೆಂಡಾ. ಅಷ್ಟಕ್ಕೂ ಟೂಲ್ ಕಿಟ್ ಎನ್ನುವ ಶಬ್ದವೇ ನೆಗೆಟಿವ್ ಅಲ್ಲ. ಟೂಲ್ ಕಿಟ್ ಬಳಸಿ ದೇಶ ಕಟ್ಟಲೂ ಸಾಧ್ಯ. ದಿಶಾರವಿಯಂತವರಿಂದ ಬೀಳಿಸುವ ಷಡ್ಯಂತ್ರವೂ ಸಾಧ್ಯ!

  • Share On Facebook
  • Tweet It


- Advertisement -


Trending Now
ರಸ್ತೆಯ ಮೇಲೆ ಬಾಕಿಯಾದ ಮಣ್ಣು, ಮರಳು ಕೃತಕ ನೆರೆಯ ಸಂಬಂಧಿಗಳು!!
Hanumantha Kamath March 5, 2021
ಸದನದಲ್ಲಿ ಜಾರಕಿಹೊಳಿ ವಿಷಯ ಬಿಟ್ಟು ಅಭಿವೃದ್ಧಿ ಚರ್ಚೆಯಾಗಲಿ!!
Hanumantha Kamath March 4, 2021
Leave A Reply

  • Recent Posts

    • ರಸ್ತೆಯ ಮೇಲೆ ಬಾಕಿಯಾದ ಮಣ್ಣು, ಮರಳು ಕೃತಕ ನೆರೆಯ ಸಂಬಂಧಿಗಳು!!
    • ಸದನದಲ್ಲಿ ಜಾರಕಿಹೊಳಿ ವಿಷಯ ಬಿಟ್ಟು ಅಭಿವೃದ್ಧಿ ಚರ್ಚೆಯಾಗಲಿ!!
    • ಹೊಸ ಮೇಯರ್ ಮಾಡಬೇಕಾದ ಮೊದಲ ಕೆಲಸಕ್ಕೆ ಗುಂಡಿಗೆ ಬೇಕು!!
    • ಮನ್ ಕಿ ಬಾತ್ ನಲ್ಲಿ ಅಡುಗೆ ಅನಿಲದ ರೇಟ್ ಬಗ್ಗೆ ಮೋದಿ ಮಾತನಾಡಲಿ!!
    • ಜಾತಿ ಮೀಸಲಾತಿ ತೆಗೆದು ಆರ್ಥಿಕ ಮೀಸಲಾತಿ ಜಾರಿಗೆ ಬರಲಿ!!
    • ಬಿಜೆಪಿ ಪಾಲಿಕೆಯಲ್ಲಿ ಅಧಿಕಾರಕ್ಕೆ ಬಂದ 1 ವರ್ಷದಲ್ಲಿಯೇ ಲಗಾಮು ತಪ್ಪಿ ಹೋಗಿದೆ!!
    • ಪಾಲಿಕೆಯ ಹೊಸ ನಿಯಮದಿಂದ ಉದ್ದಿಮೆದಾರ ಬೀದಿಗೆ??
    • ನೀರು ಬರುತ್ತಿಲ್ಲ, ಮಣ್ಣು ತೆಗೆಸುವ ಗಂಡಸು ಪಾಲಿಕೆಯಲ್ಲಿ ಇದ್ದಾರಾ?
    • ಕಾಂಗ್ರೆಸ್ಸಿನ ಲೆಕ್ಕ ಕೊಡಿ ಅಭಿಯಾನ ಖಾದರ್ ಮನೆಯಿಂದಲೇ ಆರಂಭವಾಗಲಿ!!
    • ಖಾದರ್ ಸ್ವಕ್ಷೇತ್ರದಲ್ಲಿ ತ್ಯಾಜ್ಯ ಘಟಕ ಇಲ್ಲದಿದ್ದರೆ ಕಸ ಪಂಚಾಯತ್ ಅಂಗಳದಲ್ಲಿ ಸುರಿಯಬೇಕಾ!
  • Popular Posts

    • 1
      ರಸ್ತೆಯ ಮೇಲೆ ಬಾಕಿಯಾದ ಮಣ್ಣು, ಮರಳು ಕೃತಕ ನೆರೆಯ ಸಂಬಂಧಿಗಳು!!
    • 2
      ಸದನದಲ್ಲಿ ಜಾರಕಿಹೊಳಿ ವಿಷಯ ಬಿಟ್ಟು ಅಭಿವೃದ್ಧಿ ಚರ್ಚೆಯಾಗಲಿ!!
    • 3
      ಹೊಸ ಮೇಯರ್ ಮಾಡಬೇಕಾದ ಮೊದಲ ಕೆಲಸಕ್ಕೆ ಗುಂಡಿಗೆ ಬೇಕು!!
    • 4
      ಮನ್ ಕಿ ಬಾತ್ ನಲ್ಲಿ ಅಡುಗೆ ಅನಿಲದ ರೇಟ್ ಬಗ್ಗೆ ಮೋದಿ ಮಾತನಾಡಲಿ!!
    • 5
      ಜಾತಿ ಮೀಸಲಾತಿ ತೆಗೆದು ಆರ್ಥಿಕ ಮೀಸಲಾತಿ ಜಾರಿಗೆ ಬರಲಿ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia, Mangalore - 1

Press enter/return to begin your search