• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಖಾದರ್ ಸ್ವಕ್ಷೇತ್ರದಲ್ಲಿ ತ್ಯಾಜ್ಯ ಘಟಕ ಇಲ್ಲದಿದ್ದರೆ ಕಸ ಪಂಚಾಯತ್ ಅಂಗಳದಲ್ಲಿ ಸುರಿಯಬೇಕಾ!

Hanumantha Kamath Posted On February 22, 2021
0


0
Shares
  • Share On Facebook
  • Tweet It

ಊರಿಗೆ ಅರಸನಾದರೂ ತಾಯಿಗೆ ಮಗ ಎನ್ನುವ ಗಾದೆ ಇದೆ. ಹಾಗೇ ರಾಜ್ಯಕ್ಕೆ ಮಾಜಿ ಸಚಿವನಾದರೂ ಕ್ಷೇತ್ರಕ್ಕೆ ಶಾಸಕ ಎನ್ನುವ ಲೇಟೇಸ್ಟ್ ಗಾದೆಯನ್ನು ನಮ್ಮ ಮಂಗಳೂರು ವಿಧಾನಸಭಾ ಕ್ಷೇತ್ರ means ಉಳ್ಳಾಲದ ಶಾಸಕ ಯುಟಿ ಖಾದರ್ ಅವರಿಗೆ ನೆನಪಿಸಲೇ ಬೇಕಾಗಿರುವ ವಾತಾವರಣ ಬಂದದ್ದು ಇತ್ತೀಚೆಗೆ ಅವರ ಕ್ಷೇತ್ರಕ್ಕೆ ಹೋಗುವ ದಾರಿಯಲ್ಲಿ ಕಂಡು ಬರುವ ತಳೀರು ತೋರಣ ಅಲ್ಲ, ಕಸ, ತ್ಯಾಜ್ಯದ ಸ್ವಾಗತ.
ಇಡೀ ದೇಶ ಸ್ವಚ್ಚತೆಯತ್ತ ಮನಸ್ಸು ಮಾಡುತ್ತಾ ಇದೆ. ರಾಮಕೃಷ್ಣ ಮಿಶನಿನವರು ಮಂಗಳೂರಿನ ಸ್ವಚ್ಚತೆ ಮಾಡಿ ಮಾಡಿ ಈಗ ಪುತ್ತೂರಿನ ತನಕವೂ ಹೋಗಿ ಕ್ಲೀನ್ ಮಾಡಿ ಬಂದಿದ್ದಾರೆ. ನಿಮ್ಮ ತೊಕ್ಕೊಟ್ಟು, ಉಳ್ಳಾಲದ ರಸ್ತೆಯನ್ನು ನೋಡಿದರೆ ಅವರು ಇಲ್ಲಿ ಕೂಡ ಬರಲಿಕ್ಕೆ ಮನಸ್ಸು ಮಾಡಬಹುದು. ಬಹುಶ: ಯಾರಾದರೂ ಸಂಘ ಸಂಸ್ಥೆಗಳು ಬಂದು ಕ್ಲೀನ್ ಮಾಡಲಿ, ನಮ್ಮ ಪಂಚಾಯತ್, ನಗರ ಸಭೆಗಳಿಗೆ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಸುಮ್ಮನೆ ಕೆಲಸ ಮಾಡಿ ಬಿಳಿ shirt ಕೆಸರು ಮಾಡಿಕೊಳ್ಳುವುದು ಬೇಡಾ ಎನ್ನುವ ಕಾರಣಕ್ಕೆ ಯುಟಿ ಖಾದರ್ ಅವರೇ ನೀವು ಕೂಡ ಸುಮ್ಮನೆ ಕುಳಿತುಕೊಂಡಂತೆ ಕಾಣುತ್ತಿದೆ.
ನಿಮಗೆ ಆಗುವುದಿಲ್ಲ ಎಂದು ಗ್ಯಾರಂಟಿಯಾಗಿ ಗೊತ್ತಿದ್ದ ಕಾರಣ ಕೆಲವು ರವಿವಾರ Chakravarthy ಸೂಲಿಬೆಲೆಯವರ ನೇತೃತ್ವದಲ್ಲಿ ಒಂದಿಷ್ಟು ಯುವ ಬ್ರೀಗೇಡಿನ ಯುವಕರು ನಿಮ್ಮ ಕ್ಷೇತ್ರವನ್ನು ಸ್ವಚ್ಚ ಮಾಡಿಕೊಂಡು ಬಂದಿದ್ದಾರೆ. ನೀವು ಆಹಾರ ಆರೋಗ್ಯ ಸಚಿವರಾಗಿ ರಾಜ್ಯ ಸುತ್ತುತ್ತಿರುವುದರಿಂದ ನಿಮಗೆ ನಿಮ್ಮ ಊರು ಗಬ್ಬೇರಿದ್ದು ಗಮನಕ್ಕೆ ಬರದೆ ಇರಬಹುದು. ಹಾಗಂತ ಯುವಾ ಬ್ರಿಗೇಡಿನವರು ಸ್ವಚ್ಚ ಮಾಡಿದ್ದು ಎಲ್ಲಿ ಕೂಡ ಅರ್ಧ ಪೇಜ್ ನ್ಯೂಸ್ ಬರದೇ ಇದ್ದ ಕಾರಣ ತುಂಬಾ ಜನರಿಗೆ ಗೊತ್ತು ಅಗಗಲ್ಲಿಲ್ಲ. ಕೆಲವರು ಮಾಧ್ಯಮ ಸಂಸ್ಥೆಗಳ ಧಣೆಗಳನ್ನು ಚೆನ್ನಾಗಿ ಇಟ್ಟುಕೊಂಡಿರುವುದರಿಂದ ಅದು ಪತ್ರಿಕೆಗಳಲ್ಲಿ ಹೈಲೈಟ್ ಆಗುತ್ತದೆ. ಅದರೊಂದಿಗೆ ಸ್ಥಳೀಯ ಶಾಸಕರನ್ನು ಕರೆಯುವುದರಿಂದ ಅದಕ್ಕೆ ಪ್ರಚಾರ ಸುಲಭವಾಗಿ ಸಿಗುತ್ತದೆ. ಆದ್ದರಿಂದ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನಿಂದ ಆಗದ್ದನ್ನು ಬೇರೆಯವರು ಮಾಡಿ ಮಂಗಳೂರನ್ನು ರಾಮಕ್ರಷ್ಣ ಮಠದವರು ಸ್ವಲ್ಪವಾದರೂ ಸ್ವಚ್ಚವಾಗಿ ಇಟ್ಟಿದ್ದಾರೆ.
ಖಾದರ್ ಅವರೇ, ನಿಮ್ಮ ಕ್ಷೇತ್ರವನ್ನು ಗಣನೆಗೆ ತೆಗೆದುಕೊಂಡಿದ್ದರೆ ಇದು ಸ್ವಚ್ಚತೆಯ ಅರ್ಹತಾ ಪಟ್ಟಿಯಲ್ಲಿಯೇ ಬರುವುದಿಲ್ಲ ಎಂದು ಕೇಂದ್ರದ ಅಧಿಕಾರಿಗಳು ಹೇಳುತ್ತಿದ್ದರೆನೋ. ಯಾಕೆಂದರೆ ಉಳ್ಳಾಲ, ತೊಕ್ಕೊಟ್ಟು, ದೇರಳಕಟ್ಟೆ, ಬೋಳಿಯಾರ್, ಇರಾ, ಪಡು, ತಲಪಾಡಿ ಸೇರಿಕೊಂಡು ವಿಶಾಲವಾಗಿ ಹರಡಿಕೊಂಡಿರುವ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಒಂದು ತ್ಯಾಜ್ಯ ಸಂಸ್ಕೃರಣ ಘಟಕ ಇಲ್ಲ. ನೀವು ಕ್ಯಾಬಿನೆಟ್ ನಲ್ಲಿ ಪೇಮೇಂಟ್ ಸೀಟ್ ಹೋಲ್ಡರಾ ಅಥವಾ ಮೆರಿಟ್ ಮೇಲೆ ಸಿಕ್ಕಿದ್ದಾ ಎನ್ನುವುದು ನಿಮಗೆ ಬಿಟ್ಟಿದ್ದು. ಆದರೆ ನೀವು ಸಚಿವರಾಗಿರುವುದು ನಿಜ. ನೀವು ಸಚಿವರಾಗಿ ಇದ್ದಾಗ ಅನೇಕ ಆಸ್ಪತ್ರೆಗಳಿಗೆ ಧೀಡಿರ್ ಭೇಟಿ ಕೊಟ್ಟು ಅಲ್ಲಿನ ವೈದ್ಯಾಧಿಕಾರಿಗಳ, ನರ್ಸಗಳ ಮುಖದಲ್ಲಿ ಬೆವರಿಳಿಸಿದ್ದೀರಿ. ಅದು ಒಳ್ಳೆಯ ವಿಷಯ. ನಿಮಗೆ ಬೆಂಗಳೂರಿನಲ್ಲಿ ಕುಳಿತು ಯಾವ್ಯಾವ ಆಸ್ಪತ್ರೆಗಳು ಸರಿ ಇಲ್ಲ ಎಂದು ಹೇಗೆ ಗೊತ್ತಾಗುತ್ತದೆಯೋ ಹಾಗೆ ನಿಮ್ಮ ಊರಿನಲ್ಲಿ ಆರೋಗ್ಯ ಕಾಪಾಡಲು ಅಗತ್ಯವಾಗಿರುವ ತ್ಯಾಜ್ಯ ಸಂಸ್ಕೃರಣ ಘಟಕ ಇಲ್ಲ ಎಂದು ಯಾಕೆ ಗೊತ್ತಾಗುವುದಿಲ್ಲ. ನೀವು ತ್ಯಾಜ್ಯ ಘಟಕ ಮಾಡಿದರೆ ನನಗೆ ಏನೂ ಲಾಭವಿಲ್ಲ. ಆದರೆ ಕನಿಷ್ಟ ನಿಮಗೆ ಮತ ಕೊಟ್ಟು ಗೆಲ್ಲಿಸಿದ ಪ್ರಜೆಗಳಿಗೆ ತಮ್ಮ ಮನೆಯ ಕಸ ಮನೆಯಿಂದ ತೆಗೆದುಕೊಂಡು ಹೋಗಲು ಯಾರಾದರೂ ಬರುತ್ತಾರೆ, ನಾವು ಕಸವನ್ನು ರಸ್ತೆಯ ಬದಿಯಲ್ಲಿ ಬಿಸಾಡಬೇಕೆಂದಿಲ್ಲ ಎನ್ನುವ ಸಮಾಧಾನವಾದರೂ ಇರುತ್ತದೆ. ನೀವು ಶಾಸಕರಾಗಿ, ಸಚಿವರಾಗಿಯೂ ನಿಮ್ಮ ಊರಿನ ಸ್ವಾಸ್ಥ ಉಳಿಸಬಲ್ಲ ಒಂದು ತ್ಯಾಜ್ಯ ಘಟಕ ಮಾಡದೇ ಇದ್ದ ಕಾರಣ ಈ ಕಲ್ಲಪುನಿಂದ ತೊಕೊಟ್ಟು ಅಗಿ ತಲಪಾಡಿಗೆ ಹೋಗುವ ರಸ್ತೆ, ಉಳ್ಳಾಲ, ತೊಕ್ಕೊಟ್ಟು ಪರಿಸರ ಹೇಗೆ ಆಗಿದೆ ಎಂದು ಇವತ್ತು ಫೋಟೋ ಪೋಸ್ಟ್ ಮಾಡುತ್ತಿದ್ದೆನೆ. ನೀವು ಬಜ್ಪೆ ವಿಮಾನ ನಿಲ್ದಾಣದಿಂದ ನಿಮ್ಮ ಸ್ವಗೃಹ ಇರುವ ಕಂಕನಾಡಿಯ ಕಡೆ ಹೋಗುವಾಗ ಇಂತಹ ದೃಶ್ಯ ವೈಭವವನ್ನು ನೋಡಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಇದು ಸಿಗುವುದು ಪಂಪ್ ವೆಲ್ ಕಳೆದ ಮೇಲೆ. ನೀವು ಯಾವತ್ತಾದರೂ ಉದ್ಘಾಟನೆ, ಅದು, ಇದು ಎಂದು ನಿಮ್ಮ ಕ್ಷೇತ್ರಕ್ಕೆ ಹೋದಾಗ ದಾರಿಯಲ್ಲಿ ಕಾರನ್ನು ಸ್ಲೋ ಮಾಡಿ ರಸ್ತೆಯ ಅಕ್ಕಪಕ್ಕದಲ್ಲಿರುವ ಚರಂಡಿಗಳ ಮೇಲೆ ಒಂದು ಕಣ್ಣು ಹಾಕಿ. ಒಂದು ವೇಳೆ ತ್ಯಾಜ್ಯ ಘಟಕ ಮಾಡಲು ನಿಮಗೆ ಸಾಧ್ಯವಾಗದಿದ್ದರೆ ಜನ ತಮ್ಮ ಮನೆಗಳ ಕಸ, ತ್ಯಾಜ್ಯವನ್ನು ಅವರವರ ಪಂಚಾಯತ್ ಕಚೇರಿಯ ಮೆಟ್ಟಿಲುಗಳ ಮೇಲೆ ಸುರಿಯಲು ಹೇಳಿಬಿಡಿ, ಮತ್ತೇನೂ ಮಾಡುವುದು ಕರ್ಮ. ತೆಗೆದುಕೊಂಡು ಹೋಗುವವರು ಇಲ್ಲದಿದ್ದಾಗ ತೋಡಿನಲ್ಲಿ ಹಾಕುವ ಬದಲು ಪಂಚಾಯತ್ ಅಥವಾ ನಗರ ಸಭೆಯ ಅಂಗಳದಲ್ಲಿ ಸುರಿಯಲಿ!!
0
Shares
  • Share On Facebook
  • Tweet It




Trending Now
ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
Hanumantha Kamath April 27, 2026
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Hanumantha Kamath April 14, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
  • Popular Posts

    • 1
      ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search