ನಮಾಜು ಮಾಡಲು “ಅಲ್ಪ”ರಿಗೆ ಪಡುಬಿದ್ರೆ ಬೀಚೇ ಬೇಕಾ?

ಒಂದು ಧರ್ಮ ಎಂದ ಮೇಲೆ ಅದಕ್ಕೆ ದೇವರು ಇದ್ದೇ ಇರುತ್ತಾರೆ. ದೇವರು ಇದ್ದ ಮೇಲೆ ದೇವರಿಗೊಂದು ಪ್ರಾರ್ಥನೆ ಇದ್ದೇ ಇದೆ. ಪ್ರಾರ್ಥನೆ ಇದ್ದ ಮೇಲೆ ಅದನ್ನು ಹೇಗೆ ಮಾಡಬೇಕು ಎನ್ನುವುದು ಇದ್ದೇ ಇರುತ್ತದೆ. ಹೇಗೆ ಮಾಡಬೇಕು ಎಂದು ಇದ್ದ ಮೇಲೆ ಎಲ್ಲಿ ಮಾಡಬೇಕು ಎಂದು ಇದ್ದೇ ಇದೆ. ಇದೆಲ್ಲವೂ ಇದ್ದ ಮೇಲೆಯೂ ಕೆಲವರು ನೀವು ಏನು ಮಾಡುತ್ತೀರೋ ಮಾಡ್ಕೊಳ್ಳಿ ಎಂದು ಧೈರ್ಯದಿಂದ ಎದೆ ಉಬ್ಬಿಸಿ ಹೇಳುತ್ತಾರೆ ಎಂದರೆ ಅವರು ಒಂದೋ ಅವರ ಧರ್ಮವನ್ನೇ ಗೌರವಿಸುವುದಿಲ್ಲ ಅಥವಾ ಈ ನೆಲದ ಕಾನೂನನ್ನು ಗೌರವಿಸುವುದಿಲ್ಲ. ಈ ಎರಡರಲ್ಲಿ ಒಂದು ಇರಲೇಬೇಕು. ಇಲ್ಲದೆ ಹೋದರೆ ಪಡುಬಿದ್ರೆಯ ಬ್ಲೂಫ್ಲಾಗ್ ಬೀಚಿನಲ್ಲಿ ಕೆಲವರು ಗಲಾಟೆ ಮಾಡಲೇಬೇಕು ಎಂದು ನಿರ್ಣಯಿಸುವುದಿಲ್ಲ. ಸಾಮಾನ್ಯ ಬೀಚಿಗೂ, ಬ್ಲೂಫ್ಲಾಗ್ ಬೀಚಿಗೂ ಸಾಕಷ್ಟು ವ್ಯತ್ಯಾಸವಿದೆ. ಭಾರತದಲ್ಲಿರುವ ಕೆಲವೇ ಕೆಲವು ಬೀಚ್ ಗಳಿಗೆ ಈ ಅಂತರಾಷ್ಟ್ರೀಯ ಸ್ಥಾನಮಾನ ಸಿಕ್ಕಿದೆ. ಅದರಲ್ಲಿ ನಮ್ಮ ಪಡುಬಿದ್ರೆ ಕಡಲತೀರ ಕೂಡ ಒಂದು ಎನ್ನುವುದು ನಮಗೆ ಹೆಮ್ಮೆಯ ಸಂಗತಿ. ಈ ಸ್ಥಾನಮಾನ ಸಿಗುವ ಮೊದಲು ಅಂತರಾಷ್ಟ್ರೀಯ ಜ್ಯೂರಿಗಳು ಬಂದು ಇಲ್ಲಿ ಅಧ್ಯಯನ ಮಾಡಿ ಅದನ್ನು ಇಂಟರ್ ನ್ಯಾಶನಲ್ ಫೋರಂನಲ್ಲಿ ಇಟ್ಟು ಅಲ್ಲಿ ಜಗತ್ತಿನ ಪ್ರಮುಖ ಸಂಸ್ಥೆಗಳ ಮುಖ್ಯಸ್ಥರು ವಿಮರ್ಶಿಸಿ ನಂತರ ಈ ಗ್ರೇಡ್ ಸಿಗುತ್ತದೆ. ಇದರಿಂದ ಪಡುಬಿದ್ರೆಗೆ ಏನು ಲಾಭ ಎಂದರೆ ಮುಂದಿನ ಕೆಲವು ವರ್ಷಗಳಲ್ಲಿ ಇಲ್ಲಿ ಹೊರಗಿನಿಂದ ಅಭಿವೃದ್ಧಿ ಫಂಡ್ ಗಳು ಧಾರಾಳವಾಗಿ ಹರಿದುಬಂದು ಇದೊಂದು ಅಂತರಾಷ್ಟ್ರೀಯ ಪ್ರವಾಸಿತಾಣವಾಗುತ್ತದೆ. ವಿದೇಶದಲ್ಲಿ ಕುಳಿತ ವ್ಯಕ್ತಿಯೊಬ್ಬ ಭಾರತದ ಬೀಚುಗಳಲ್ಲಿ ಎಲ್ಲಿ ಒಳ್ಳೆಯದಿದೆ ಎಂದು ಗೂಗಲ್ ಸರ್ಚ್ ಮಾಡಿದ್ರೆ ಆಗ ಬ್ಲೂಫ್ಲಾಗ್ ಬೀಚ್ ಗಳು ಮೊದಲಿಗೆ ಅವನ ಎದುರಿಗೆ ಕಾಣ ಸಿಗುತ್ತವೆ. ಅದರ ನಂತರ ವಿದೇಶಿ ಪ್ರವಾಸಿ ಹಿಂದೆ ಮುಂದೆ ನೋಡುವುದಿಲ್ಲ. ಯಾಕೆಂದರೆ ಅದೊಂದು ಭರವಸೆ. ಸೀದಾ ಟಿಕೆಟ್ ಬುಕ್ ಮಾಡುತ್ತಾನೆ. ಇದರಿಂದ ಕರಾವಳಿಯ ಪ್ರವಾಸೋದ್ಯಮ, ವ್ಯಾಪಾರ, ವ್ಯವಹಾರ, ಇಮೇಜು ಕೂಡ ವೃದ್ಧಿಸುತ್ತವೆ. ಆದರೆ ಬ್ಲೂಫ್ಲಾಗ್ ಕಿರೀಟ ಕೊಟ್ಟ ಬಳಿಕ ಅದನ್ನು ಉಳಿಸಿಕೊಳ್ಳುವುದು ಕೂಡ ಅವಶ್ಯಕ. ಯಾಕೆಂದರೆ ಅದಕ್ಕೆ ಕೆಲವು ನಿರ್ಬಂಧನೆಗಳು ಇರುತ್ತವೆ. ಒಟ್ಟು 33 ಷರತ್ತುಗಳಲ್ಲಿ ಬ್ಲೂಫ್ಲಾಗ್ ಪರಿಧಿಯಲ್ಲಿ ಯಾವ ಧರ್ಮದ ಆಚರಣೆಗಳಿಗೂ ಅವಕಾಶ ಇಲ್ಲ ಎನ್ನುವುದು ಪ್ರಮುಖ ಷರತ್ತು. ಅದನ್ನು ಉಲ್ಲಂಘಿಸಿದರೆ ಆ ಬೀಚಿಗೆ ಅದು ಕಪ್ಪುಚುಕ್ಕೆ. ಅದನ್ನು ಎಲ್ಲರೂ ಒಪ್ಪಬೇಕಾಗುತ್ತದೆ. ಒಂದು ವೇಳೆ ಆ ಪರಿಸರದ ಯಾವುದೇ ಧರ್ಮದ ವ್ಯಕ್ತಿ ತಾನು ಹಾಗೆ ಮಾಡುತ್ತೇನೆ ಎಂದು ಧೈರ್ಯದಿಂದ ನಿಯಮ ಉಲ್ಲಂಘಿಸಿದರೆ ಆ ಬೀಚಿನ ಸುರಕ್ಷತಾ ಸಮಿತಿಯ ಪ್ರಮುಖರು ಅಂತವರನ್ನು ತಡೆಯಬಹುದು. ಮೊನ್ನೆ ಕೂಡ ಹಾಗೆ ಆಗಿದೆ. ಆದರೆ ಬುದ್ಧಿ ಇಲ್ಲದವರು ಆ ಸಮಿತಿಯವರೊಂದಿಗೆ, ಸುರಕ್ಷತಾ ಸಿಬ್ಬಂದಿಗಳೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ.
ಇಲ್ಲಿ ಒಂದು ಸೂಕ್ಷ್ಮವನ್ನು ನೀವು ಅರಿತುಕೊಂಡಿದ್ದಿರಿ ಎಂದು ಅಂದುಕೊಳ್ಳುತ್ತೇನೆ. ಒಬ್ಬ ಇಸ್ಲಾಂ ಧರ್ಮದ ವ್ಯಕ್ತಿಯು ದಿನದಲ್ಲಿ ಐದು ಸಲ ನಮಾಜು ಕಡ್ಡಾಯವಾಗಿ ಮಾಡಬೇಕೆಂಬ ನಿಯಮ ಇದೆ. ಅದನ್ನು ಎಷ್ಟು ಮಂದಿ ಪಾಲಿಸುತ್ತಾರೆ ಅದು ಬೇರೆ ವಿಷಯ. ಆದರೆ ಒಬ್ಬ ವ್ಯಕ್ತಿ ನಿಜಕ್ಕೂ ಅದನ್ನು ಅನುಸರಿಸುತ್ತಾನೆ ಎಂದಾದರೆ ಮತ್ತು ಅವನು ನಮಾಜು ಮಾಡುವ ವೇಳೆಯಲ್ಲಿ ಹತ್ತಿರದಲ್ಲಿ ಯಾವುದೇ ಮಸೀದಿ ಇಲ್ಲದಿದ್ದಲ್ಲಿ, ಆತ ತಾನು ಇರುವ ಪ್ರದೇಶ ಬೇರೆಯವರದ್ದು ಆಗಿದ್ದಲ್ಲಿ ಅವರ ಅನುಮತಿ ಕೇಳಿ ಅವರು ಅನುಕೂಲ ಮಾಡಿಕೊಟ್ಟ ಜಾಗದಲ್ಲಿ ನಮಾಜ್ ಮಾಡಬಹುದು. ಆದರೆ ನಮಾಜಿಗೆ ಅನುಮತಿ ಸಿಗದೇ ಇದ್ದಲ್ಲಿ ಹಟಕ್ಕೆ ಬಿದ್ದು ಮಾಡಿದ ನಮಾಜು ಅಲ್ಲಾನಿಗೆ ತಲುಪುವುದಿಲ್ಲ ಮತ್ತು ಅದಕ್ಕೆ ಫಲ ಸಿದ್ದಿಸುವುದಿಲ್ಲ ಎಂದು ನೈಜ ಮುಸಲ್ಮಾನರಿಗೆ ಗೊತ್ತಿದೆ. ಅಷ್ಟಿದ್ದೂ ಅನುಮತಿ ಇಲ್ಲ ಎಂದು ಗೊತ್ತಿದ್ದು, ಒಬ್ಬ ನಮಾಜು ಮಾಡುತ್ತಾನೆ ಎಂದರೆ ಇದರ ಹಿಂದೆ ಕೇವಲ ಗಲಾಟೆ ಮಾಡುವ ಉದ್ದೇಶ ಇದೆ ವಿನ: ಬೇರೆ ಏನೂ ಅಲ್ಲ. ಮುಸಲ್ಮಾನರಿಗಾಗಿ ಈ ದೇಶದ ವಿಮಾನ ನಿಲ್ದಾಣಗಳಲ್ಲಿ ನಮಾಜು ಮಾಡುವ ಕೋಣೆಗಳಿವೆ. ಮಾಲ್, ಆಸ್ಪತ್ರೆಗಳಲ್ಲಿ ಅಂತಹ ಸೌಲಭ್ಯಗಳಿವೆ. ಅಲ್ಲಿ ಅವರು ಸಾವಕಾಶವಾಗಿ ಮಾಡಬಹುದು. ಈ ನೆಲ ನಮಾಜಿಗೆ ವಿರೋಧ ವ್ಯಕ್ತಪಡಿಸಿಲ್ಲ. ಎಷ್ಟೋ ರಸ್ತೆಗಳನ್ನು ಬ್ಲಾಕ್ ಮಾಡಿ ಇಲ್ಲಿ ನಮಾಜುಗಳು ನಡೆದಿವೆ. ಆದರೆ ಬ್ಲೂಫ್ಲಾಗ್ ಬೀಚ್ ನಲ್ಲಿ ಅಂತಹ ಅವಕಾಶ ಇಲ್ಲ. ಒಂದು ವೇಳೆ ಬೇರೆ ಬೀಚ್ ಗಳಲ್ಲಿ ಆದರೆ ಯಾರೂ ವಿರೋಧಿಸುತ್ತಿರಲಿಲ್ಲ. ಇಲ್ಲಿ ಅದಕ್ಕೆ ಕಾವಲುಗಾರರು ಇದ್ದು ಅವರಿಗೆ ಇದನ್ನೇ ನೋಡುವ ಕೆಲಸ ಕೊಟ್ಟಿದ್ದಾರೆ. ಸಾಲದಕ್ಕೆ ಈ ಬೀಚ್ ನಲ್ಲಿ ಧಾರ್ಮಿಕ ಆಚರಣೆಗೆ ಅವಕಾಶ ಇಲ್ಲ ಎಂದು ಬೋರ್ಡ್ ಬೇರೆ ಹಾಕಿದ್ದಾರೆ. ಒಂದು ವೇಳೆ ಮುಸಲ್ಮಾನರಲ್ಲಿ ಒಬ್ಬರಿಗೆ ಅವಕಾಶ ಕೊಟ್ಟರೆ ನಾಳೆ ಅನೇಕರು ಹಾಗೆ ಬಂದು ನಿನ್ನೆ ಒಬ್ಬರಿಗೆ ಕೊಟ್ಟಿದ್ದೀರಿ, ಇವತ್ತು ನಾವು ಮಾಡುತ್ತೇವೆ ಎಂದು ಕಿರಿಕಿರಿ ಮಾಡಬಹುದು. ಮುಸಲ್ಮಾನರಿಗೆ ನಿಯಮ ಮೀರಿ ಅವಕಾಶ ಕೊಟ್ಟಿದ್ದೀರಿ. ನಮಗೆ ಮುಂದಿನ ವಾರ ಇಲ್ಲಿಯೇ ದೇವರ ಪೂಜೆ ಮಾಡಲು ಇದೆ. ಅವಕಾಶ ಕೊಡಿ ಎಂದು ಹಿಂದೂಗಳು ಕೇಳಿದರೆ, ಕ್ರೈಸ್ತರು ಅವರ ಧರ್ಮದ ಆಚರಣೆಗೆ ಕೇಳಿದರೆ ಏನು ಮಾಡುವುದು. ಬ್ಲೂಫ್ಲಾಗ್ ಸಿಗುವುದೇ ಅದೃಷ್ಟ. ಹಾಗಿರುವಾಗ ನಮ್ಮ ಅಹಂ, ಇಗೋಗೆ ದೇಶದ ಘನತೆಯನ್ನು ಮಣ್ಣುಪಾಲು ಮಾಡಲು “ಅಲ್ಪ”ಮನಸ್ಸಿನವರು ಹೋಗಬಾರದು!
Leave A Reply