ಹಿಂದೂಗಳು ಮೃತ ಪಟ್ಟರೆ ಶವದಹನಕ್ಕೆ ನಾವಿದ್ದೇವೆ ಎಂದರೆ ಸಹಿಷ್ಣುಗಳಿಂದ ಕೊಲೆ ಬೆದರಿಕೆ!!
ಮೊದಲು ಆರಂಭಿಸಿದವರು ಯಾರು ಎಂದು ನೋಡೋಣ. ನಾವು ಹಿಂದೂಗಳ ಮೃತ ದೇಹದ ಅಂತ್ಯ ಸಂಸ್ಕಾರ ಮಾಡುತ್ತೇವೆ ಎಂದು ಫೋಸ್ ಕೊಟ್ಟವರು ಯಾರು? ಅದರ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಕೊಟ್ಟವರು ಯಾರು? ಹಿಂದೂಗಳು ಸತ್ತರೆ ಅವರ ಸಮುದಾಯದಲ್ಲಿ ಕೇಳುವವರಿಲ್ಲ ಎನ್ನುವ ವಾತಾವರಣ ಹಬ್ಬಿಸಿದವರು ಯಾರು? ಇದರಿಂದ ಹಿಂದೂಗಳ ಮನಸ್ಸಿನಲ್ಲಿ ಬಂದ ಭಾವನೆ ಏನು? ಈಗ ಎಲ್ಲಿ ಹೋಗಿದ್ದಾರೆ ಹಿಂದೂ ಸಂಘಟನೆಗಳು ಎಂದು ಯಾರಾದರೂ ಕೇಳುವ ಮುನ್ನವೇ ಎದ್ದು ನಿಂತವರು ಶರಣ್ ಪಂಪ್ ವೆಲ್.
ಹಿಂದೂಗಳು ಕೊರೋನಾದಿಂದ ಸತ್ತು ಅಂತವರ ಮನೆಯಿಂದ ಯಾರು ಅಂತ್ಯಸಂಸ್ಕಾರ ಮಾಡಲು ಮುಂದೆ ಬರದಿದ್ದರೆ ನಾವಿದ್ದೇವೆ ಎಂದು ಶರಣ್ ಹೇಳಿದ್ದರಲ್ಲಿ ತಪ್ಪೇನಿದೆ? ಅದರಲ್ಲಿ ಯಾವುದೇ ಕೋಮು ಭಾವನೆ ಕೆರಳಿಸುವ ವಿಷಯ ಬರುವುದಿಲ್ಲ. ಯಾಕೆಂದರೆ ನಾಲ್ಕು ಹಿಂದೂಗಳ ಅಂತ್ಯಸಂಸ್ಕಾರ ಮಾಡಿ ಯಾವುದೋ ಸಂಘಟನೆಯ ಟೀಶರ್ಟ್ ಧರಿಸಿ ಆ ಫೋಟೋಗಳನ್ನು ವೈರಲ್ ಮಾಡಿ ಮೇಲೆ ಸಾಮರಸ್ಯ ಎಂದು ಹೆಡ್ಡಿಂಗ್ ಹಾಕಿ ಕೆಳಗೆ ಹಿಂದೂಗಳು ಸತ್ತರೆ ಕೇಳುವವರಿಲ್ಲ ಎಂದು ಅನಿಸುವಂತೆ ಕೆಲವರು ಮಾಡಿದ್ದು ಹಿಂದೂಗಳ ಮೇಲಿನ ಪ್ರೀತಿಯಿಂದ ಅಲ್ಲ. ಇಲ್ಲಿ ಹಿಂದೂಗಳು ಸತ್ತರೆ ಹಿಂದೂ ಸಂಘಟನೆಗಳೇ ಮೂಸುವುದಿಲ್ಲ ಎಂದು ತೋರಿಸುವ ಉದ್ದೇಶ ಇತ್ತು. ಹಿಂದೂ ಸಂಘಟನೆಗಳನ್ನು ಕೀಳುಮಟ್ಟದಲ್ಲಿ ತೋರಿಸುವ ಅಗತ್ಯ ಇತ್ತು. ಹಿಂದೂಗಳ ಹೆಣ ಸುಡುವ ಮೂಲಕ ಮುಸ್ಲಿಂ ಸಮಾಜ ಎಂತಹ ವಿಶಾಲ ಮನಸ್ಸಿನವರು ಎಂದು ತೋರಿಸುವ ಹಪಾಹಪಿ ಇತ್ತು. ಆದರೆ ಶರಣ್ ಪಂಪ್ ವೆಲ್ ನಾವಿದ್ದೇವೆ ಎಂದು ಹೇಳಿದ ನಂತರ ಕೆಲವು ತೋರಿಕೆಯ ಸಾಮರಸ್ಸಿಗಳ ಆಟ ಮುಗಿದಿದೆ.
ಅದಕ್ಕಾಗಿ ಅವರು ಮತ್ತೊಂದು ಆಟ ಶುರು ಮಾಡಿದ್ದಾರೆ. ಹೇಗೂ ಶರಣ್ ಪಂಪ್ವೆಲ್ ಫೋನ್ ನಂಬರ್ ಇದೆ. ಒಂದು ಪೋಸ್ಟರ್ ಮಾಡಿ ಅದರಲ್ಲಿ ಕಷ್ಟದಲ್ಲಿರುವ ಹಿಂದೂಗಳಿಗೆ ಹತ್ತು ಕಿಲೋ ಅಕ್ಕಿ, ಸಕ್ಕರೆ ಅದು ಇದು ಕೊನೆಗೆ ಅರ್ಧ ಕಿಲೋ ತುಪ್ಪದ ಸಹಿತ ಕೊಡುತ್ತೇವೆ, ಸಂಪರ್ಕಿಸಿ ಎಂದು ಶರಣ್ ನಂಬ್ರ ಹಾಕಿ ವೈರಲ್ ಮಾಡಿದ್ದಾರೆ. ಈ ಮೂಲಕ ಎರಡು ರೀತಿಯ ಆಟ ಆಡಲು ಮತಾಂಧರು ಹೊರಟಿದ್ದಾರೆ. ಮೊದಲನೇಯದಾಗಿ ಶರಣ್ ಗೆ ನೂರಾರು ಕರೆ ಬಂದು ಉತ್ತರ ಕೊಡಲಾರದೇ ಜನ ಹಿಡಿಶಾಪ ಹಾಕಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಮೇಲೆ ಜನರಿಗೆ ಕೆಟ್ಟ ಹೆಸರು ಬರಲಿ ಎನ್ನುವ ಉದ್ದೇಶ. ಇನ್ನೊಂದು ಕೊಟ್ಟರೂ ಎಷ್ಟು ಜನರಿಗೆ ಎಂದು ಕೊಡುವುದು. ಅಕ್ಕಿ ಮತ್ತು ಬೇಳೆ ಸಹಿತ ಕಿಟ್ ಗಳನ್ನು ಹಿಂದೂ ಸಂಘಟನೆಗಳು ಕಳೆದ ಬಾರಿ ಸಾಕಷ್ಟು ಸಂಖ್ಯೆಯಲ್ಲಿ ಕೊಟ್ಟಿವೆ. ಈಗಲೂ ಕಡುಕಷ್ಟದಲ್ಲಿರುವವರಿಗೆ ಕೊಡಲು ಮುಂದೆ ಬರುವುದು ಕೇಸರಿ ಪಡೆಗಳಿಗೆ ಕಷ್ಟವಲ್ಲ. ಅದು ಗೊತ್ತಿರುವ ಮೂಲಭೂತವಾದಿಗಳು ಅರ್ಧ ಕಿಲೋ ತುಪ್ಪ ಕೂಡ ಪಟ್ಟಿಯಲ್ಲಿ ಸೇರಿಸಿದ್ದಾರೆ. ಅದೆಲ್ಲ ಸಾವಿರಾರು ಜನರಿಗೆ ಕೊಡಲು ಸಾಧ್ಯವಿಲ್ಲ ಎಂದು ಟೊಪ್ಪಿಗಳಿಗೆ ಗೊತ್ತಿದೆ.
ಇನ್ನು ಶರಣ್ ಹಿಂದೂಗಳು ಸತ್ತರೆ ನಾವಿದ್ದೇವೆ ಎಂದು ಹೇಳಿದ ಬಳಿಕ ಅವರಿಗೆ ವಿದೇಶದಿಂದ ಬೆದರಿಕೆಯ ಕರೆಗಳು ಬಂದಿವೆ. ಆ ಬಗ್ಗೆ ಅವರು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಿಜಕ್ಕೂ ಒಳ್ಳೆಯ ಮನಸ್ಸಿನಿಂದ ಯಾವುದಾದರೂ ಮುಸಲ್ಮಾನ ಹುಡುಗರು ಹಿಂದೂಗಳ ಹೆಣ ಸುಡುತ್ತಿದ್ದರೆ ಶರಣ್ ನಂತವರ ಹೇಳಿಕೆಯಿಂದ ಬೇಸರಗೊಳ್ಳುತ್ತಿರಲಿಲ್ಲ. ಯಾಕೆಂದರೆ ಇರಲಿ, ಅವರ ಸಂಘಟನೆಯವರು ಆ ಜವಾಬ್ದಾರಿ ವಹಿಸಿಕೊಂಡರೆ ನಮಗೆ ಸುಲಭವಾಯಿತು. ಆ ಸಂಘಟನೆಗೆ ಒಳ್ಳೆಯದಾಗಲಿ ಎಂದು ಆಶಿಸುತ್ತಿದ್ದರು. ಆದರೆ ಇಲ್ಲಿ ಹಾಗಲ್ಲ. ಹಿಂದೂಗಳ ಹೆಣ ಸುಡುವುದರಿಂದ ಆ ಮುಸ್ಲಿಂ ಸಂಘಟನೆಗಳಿಗೆ ಹಣ ಸಿಗುತ್ತಿತ್ತಾ ಎನ್ನುವ ಸಂಶಯ ಬರುತ್ತದೆ. ನಮ್ಮ ತಟ್ಟೆಗೆ ಕಲ್ಲು ಹಾಕಿದ್ರು ಎನ್ನುವ ಕೋಪದಿಂದ ಬೆದರಿಕೆಯ ಕರೆಗಳನ್ನು ಮಾಡಿಸುತ್ತಿರಬಹುದು. ಅಂತ್ಯ ಸಂಸ್ಕಾರ ಮಾಡುವುದು ಪುಣ್ಯದ ಕೆಲಸ. ಲಾಭದ ಉದ್ದೇಶ ಇಟ್ಟುಕೊಂಡು ಸುಟ್ಟರೆ ಅದು ಕಮರ್ಷಿಯಲ್. ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಹಿಂದೂಗಳ ಹೆಣ ಮುಸ್ಲಿಮರು, ಮುಸ್ಲಿಮರ ಹೆಣ ಹಿಂದೂಗಳು ಸುಟ್ಟಿದ್ದಾರೆ. ಅದರಲ್ಲಿ ನಿಸ್ವಾರ್ತತೆ ಇದ್ದರೆ ಭಗವಂತ ಒಲಿಯುತ್ತಾನೆ. ಆದರೆ ಶರಣ್ ಪಂಪ್ವೆಲ್ ಫೋನ್ ನಂಬರ್ ಹಾಕಿ ಕಿಟ್ ಕೊಡುವ ಭರವಸೆಯ ಪೋಸ್ಟರ್ ಯಾರೇ ಮಾಡಿರಲಿ. ಅದು ಅಕ್ಷಮ್ಯ ಅಪರಾಧ. ಯಾಕೆಂದರೆ ಇದರಿಂದ ಜನರಿಗೆ ಪೋಸ್ಟರ್ ಗಳ ಮೇಲೆ ವಿಶ್ವಾಸ ಹೊರಟು ಹೋಗುತ್ತದೆ. ನಾಳೆ ನಿಜವಾಗಿಯೂ ಯಾರಾದರೂ ಕೊಡಲು ಮುಂದೆ ಬಂದರೆ ನೈಜ ಬಡವರು ಕೂಡ ಕೇಳಲು ಹಿಂಜರಿಯುತ್ತಾರೆ. ಏಕೆಂದರೆ ಫೇಕ್ ಇರಬಹುದು ಎನ್ನುವ ಅನುಮಾನದಿಂದ.
ಇನ್ನು ಶರಣ್ ಪಂಪ್ವೆಲ್ ಹಿಂದೂಗಳಿಗೆ ಕೊಟ್ಟ ಭರವಸೆಯಿಂದ ಟೆನ್ಷನ್ ಗೆ ಒಳಗಾದದ್ದು ಕಾಂಗ್ರೆಸ್ ಯುವ ಮುಖಂಡರು. ಕೆಲವರಿಗೆ ಬಹಳ ಕಾಲದ ನಂತರ ಕಾಂಗ್ರೆಸ್ಸಿಗೆ ಮರಳಿರುವುದರಿಂದ ಈಗ ಅರ್ಜೆಂಟಾಗಿ ಜಾತ್ಯಾತೀತ ಮನೋಭಾವನೆಯನ್ನು ತೋರಿಸುವ ಚಟ. ಅದೇ ಕಾಂಗ್ರೆಸ್ಸಿನಿಂದ ಟಿಕೆಟ್ ಸಿಗಲಿಲ್ಲ ಎಂದರೆ ಇವರಿಗೆ ಜಾತ್ಯಾತೀತತೆ ಮರೆತು ಹೋಗುತ್ತದೆ. ಇನ್ನು ಕೆಲವರಿಗೆ ಎರಡು ವರ್ಷಗಳ ನಂತರ ನಡೆಯುವ ಚುನಾವಣೆಯ ಮೇಲೆ ಕಣ್ಣು. ಹಿಂದೂಗಳನ್ನು ಒಡೆಯುವುದು, ಮುಸ್ಲಿಮರ ಮತಗಳನ್ನು ಕ್ರೋಢಿಕರಿಸುವ ದೂರದೃಷ್ಟಿ. ಅದಕ್ಕಾಗಿ ಶರಣ್ ಧರ್ಮಗಳನ್ನು ಒಡೆದರು ಎನ್ನುವ ಹೇಳಿಕೆಯನ್ನು ನೀಡಿ ಹಿಂದೂಗಳಲ್ಲಿಯೇ ಇರುವ ಒಂದು ವರ್ಗವನ್ನು ಒಲೈಸುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ಹೇಳುವುದಾದರೆ ಯಾರೇ ಸತ್ತರೂ ಸತ್ತದ್ದು ಮನುಷ್ಯ ಎಂದು ಅಂದುಕೊಂಡು ಸುಡಲು ಮುಂದಾಗಿ. ಮೇಲಿನಿಂದ ಬರುವಾಗ ಜಾತಿ, ಧರ್ಮ ಇರಲಿಲ್ಲ. ತಾಯಿ ಗರ್ಭದಿಂದ ಹೊರಗೆ ಬಂದ ಮೇಲೆ ಜಾತಿ, ಧರ್ಮದ ಲೇಬಲ್ ಅಂಟಿತು. ಮತ್ತೆ ಮೇಲಕ್ಕೆ ಹೋಗಿ ಭೂಮಿತಾಯಿಯ ಗರ್ಭ ಸೇರುವಾಗ ಯಾಕೆ ಈ ಲೇಬಲು, ಅಲ್ಲವೇ!
Leave A Reply