• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಕೆಲವು ಫೋಟೋ ಸಂಸದರಿಗೆ, ಶಾಸಕರಿಗೆ, ಮೇಯರಿಗೆ ತೋರಿಸಲೇಬೇಕಾಯಿತು!!

Hanumantha Kamath Posted On May 17, 2021
0


0
Shares
  • Share On Facebook
  • Tweet It

ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಾವು ನಗರದ ಬೇರೆ ಬೇರೆ ಕಡೆ ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಹಂಚಲು ಹೋಗುವಾಗ ಈ ದೃಶ್ಯ ಕಣ್ಣಿಗೆ ಬಿತ್ತು. ಅದರ ಫೋಟೋ ತೆಗೆದು ನಮ್ಮ ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿಯವರ ಬಳಿ ಹೋದೆ. ಮೂವರು ಎಂಪಿ ವಾರ್ ರೂಂನಲ್ಲಿ ಸಿಕ್ಕಿದರು. ಅವರಿಗೆ ಈ ವಿಷಯವನ್ನು ವಿವರಿಸಿದೆ. ನಮ್ಮ ನಾಗರಿಕರಿಗೆ ಗೊತ್ತಿರುವಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನೇಕ ಕಡೆ ಒಳಚರಂಡಿ ಸಮರ್ಪಕವಾಗಿ ಇಲ್ಲ. ಅದನ್ನು ಈಗ ಸ್ಮಾರ್ಟ್ ಸಿಟಿ, ಅಮೃತ ಯೋಜನೆ ಸಹಿತ ವಿವಿಧ ಅನುದಾನಗಳ ಮೂಲಕ ನಿರ್ಮಿಸುವ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿ ಸಂಪೂರ್ಣ ಮುಗಿಯುವ ಮೊದಲೇ ಮಂಗಳೂರಿನಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಮಳೆ ಬಂದಿರುವುದರಿಂದ ಅರ್ಧ ಕೆಲಸ ಮುಗಿದ ಕಡೆ ಒಂದು ರೀತಿಯಲ್ಲಿ ಕಂಬಳದ ಗದ್ದೆ ತರಹ ಕಾಣಿಸುತ್ತದೆ. ಇಲ್ಲಿ ಏನಾಗಿದೆ ಎಂದರೆ ಅಗೆದ ಮಣ್ಣು ಈಗ ಈ ಹೊಂಡದ ಒಳಗೆ ಹುದುಗಿ ಹೋದಂತೆ ಆಗಿರುವುದರಿಂದ ಇಲ್ಲಿ ವಾಹನಗಳು ಚಲಿಸುವುದು ನಿಜಕ್ಕೂ ಡೇಂಜರಸ್ ಆಗಿದೆ. ಈಗಾಗಲೇ ಒಂದು ಕಾರು ಮತ್ತು ಎರಡು ಸ್ಕೂಟರ್ ಈ ಹುದುಗಿದ ಮಣ್ಣಿನಲ್ಲಿ ಹೂತು ಹೋದಂತೆ ಆಗಿರುವುದನ್ನು ಕೂಡ ನಾವು ಗಮನಿಸಿದ್ದೇವೆ. ಆದ್ದರಿಂದ ಮಂಗಳೂರಿನ ಹಳೆಬಂದರು ರಸ್ತೆಯಲ್ಲಿ ಹೋಗುವಾಗ ನಾಗರಿಕರು ತುಂಬಾ ಎಚ್ಚರಿಕೆಯನ್ನು ವಹಿಸಬೇಕು. ಇನ್ನು 45 ನೇ ಪೋರ್ಟ್ ವಾರ್ಡಿನ ಒಂದು ರಸ್ತೆಯ ಫೋಟೋಗಳನ್ನು ಕೂಡ ಇವತ್ತು ಪೋಸ್ಟ್ ಮಾಡುತ್ತಿದ್ದೇನೆ. ಅದರ ವಿಶೇಷತೆ ಎಂದರೆ ಈ ರಸ್ತೆಗಳ ಇಕ್ಕೆಲಗಳು ಮಲೇರಿಯಾ ಮಾಸಾಚರಣೆಗೆ ಬೆನ್ನು ಮಾಡಿ ನಿಂತಂತೆ ಕಾಣುತ್ತದೆ. ಆರೋಗ್ಯ ಇಲಾಖೆಗಳು ಮಲೇರಿಯಾ ಮಾಸಾಚರಣೆ ಎಂದು ಮಾಡುತ್ತವೆ. ಅದರ ಅರ್ಥ ಮಲೇರಿಯಾಗೆ ಕಾರಣವಾಗಿರುವ ಸೊಳ್ಳೆಗಳು ಹೆಚ್ಚಾಗಲು ಪೂರಕ ವಾತಾವರಣ ಸೃಷ್ಟಿಸೋಣ ಎನ್ನುವುದು ಅಲ್ಲ. ಮಳೆಗಾಲ ಬರುವ ಮೊದಲು ನಾವು ಮುಂದೆ ಮಲೇರಿಯಾ ಹರಡದಂತೆ ಏನೇನು ಜಾಗ್ರತೆ ವಹಿಸಬೇಕು ಮತ್ತು ಈ ಕುರಿತು ಅಗತ್ಯವಾಗಿ ಏನೆಲ್ಲ ಕ್ರಮ ಕೈಗೊಳ್ಳಬೇಕು ಎನ್ನುವ ಜಾಗೃತಿ ಕಾರಣಕ್ಕೆ ಮಲೇರಿಯಾ ಮಾಸವನ್ನು ಆಚರಿಸಲಾಗುತ್ತದೆ. ಈ ಫೋಟೋಗಳನ್ನು ನೋಡುವಾಗ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರಿಗೆ ತಿಂಗಳಿಗೆ ಎರಡು ಕೋಟಿ ನಮ್ಮ ತೆರಿಗೆಯ ಹಣದಿಂದ ಕೊಡುವಾಗ ಮೈ ಉರಿಯುವುದಿಲ್ಲವೇ? ಅಷ್ಟಕ್ಕೂ ಇಂತಹ ವಾರ್ಡ್ ಗಳ ಹೆಲ್ತ್ ಇನ್ಸಪೆಕ್ಟರ್ , ಕಾರ್ಪೋರೇಟರ್ಸ್ ಯಾರು ಎಂದು ನೋಡಬೇಕು. ತಮ್ಮ ವಾರ್ಡಿನಲ್ಲಿ ಆಂಟೋನಿ ವೇಸ್ಟ್ ನವರು ಹೀಗೆ ಚರಂಡಿಗಳಲ್ಲಿ ಎದ್ದಿರುವ ಗಿಡಗಂಟಿಗಳನ್ನು, ತ್ಯಾಜ್ಯಗಳನ್ನು ಯಾಕೆ ತೆಗೆಯುತ್ತಿಲ್ಲ ಎಂದು ಪಾಲಿಕೆಯ ಆರೋಗ್ಯ ವಿಭಾಗದ ಹೆಲ್ತ್ ಇನ್ಸಪೆಕ್ಟರ್, ಪಾಲಿಕೆ ಸದಸ್ಯರು ಪ್ರಶ್ನಿಸದೇ ಆಂಟೋನಿ ವೇಸ್ಟ್ ನವರಿಗೆ ಹೇಗೆ ಬಿಲ್ ಪಾಸಾಗುತ್ತದೆ ಎಂದು ನೋಡಬೇಕು. ಇದು ನೇರವಾಗಿ ಅಧಿಕಾರಿಗಳು ಮತ್ತು ಕಾರ್ಪೋರೇಟರ್ ಗಳು ಆಂಟೋನಿ ವೇಸ್ಟ್ ನವರೊಂದಿಗೆ ಅಪವಿತ್ರ ಮೈತ್ರಿ ಮಾಡಿದ್ದಾರೆ ಎನ್ನುವುದು ದಿಟ. ಆಂಟೋನಿ ವೇಸ್ಟ್ ನವರು ಇಂತಹ ಸ್ವಚ್ಚತೆಯ ಕೆಲಸಗಳನ್ನು ಮಾಡಲೇಬೇಕು ಎನ್ನುವುದು ಅವರಿಗೆ ಗುತ್ತಿಗೆ ನೀಡುವಾಗಲೇ ಷರತ್ತು ಇತ್ತು. ಉದಾಹರಣೆಗೆ ಒಂದು ವಾರ್ಡಿನ ಒಂದು ಮೀಟರ್ ಅಗಲದ ಚರಂಡಿಗಳನ್ನು ಸ್ವಚ್ಚ ಮಾಡಲು ಹತ್ತು ಜನ ಸಿಬ್ಬಂದಿಗಳು ಬೇಕಾಗಬಹುದು ಎಂದು ಇಟ್ಟುಕೊಳ್ಳೋಣ. ಅವರಲ್ಲಿ ಒಬ್ಬೊಬ್ಬರಿಗೆ 350 ರೂಪಾಯಿ ದಿನಕೂಲಿ ಎಂದು ಲೆಕ್ಕ ಹಾಕಿದರೆ ದಿನಕ್ಕೆ ಮೂರುವರೆ ಸಾವಿರ ರೂಪಾಯಿ ಆಗುತ್ತೆ. ಇದು ಆರು ತಿಂಗಳಿಗೆ ಗುಣಿಸಿದರೆ ಎಷ್ಟು ಆಗುತ್ತದೆ ಎನ್ನುವ ಅಂದಾಜು ಮಾಡಿಕೊಳ್ಳಿ. ಒಂದು ವಾರ್ಡಿನಲ್ಲಿ ಹೀಗೆ ಲಕ್ಷಾಂತರ ರೂಪಾಯಿ ಉಳಿಸುತ್ತಾ ಹೋಗುವ ಆಂಟೋನಿ ವೇಸ್ಟ್ ನವರು ಅದರಲ್ಲಿ ಒಂದಿಷ್ಟು ಬಿಸ್ಕಿಟ್ ಆರೋಗ್ಯ ವಿಭಾಗದವರಿಗೆ, ಮನಪಾ ಸದಸ್ಯರಿಗೆ ಬಿಸಾಡಿದರೆ ಇವರು ಸುಮ್ಮನೆ ಕುಳಿತುಕೊಂಡುಬಿಡುತ್ತಾರೆ. ಪ್ರತಿಯೊಂದು ವಾರ್ಡಿನಲ್ಲಿ ಆಂಟೋನಿ ವೇಸ್ಟ್ ನವರು ಇಂತಿಂತಹ ರಸ್ತೆಗಳನ್ನು ನಿತ್ಯ, ವಾರಕ್ಕೆ ಮೂರು ಸಲ, ವಾರಕ್ಕೊಂದು ಸಲ ಗುಡಿಸಬೇಕು, ಡಿವೈಡರ್ ಬಳಿಯಿರುವ ಮಣ್ಣು, ಕಸ, ಕಡ್ಡಿ ತೆಗೆಯಬೇಕು, ಒಂದು ಮೀಟರ್ ಅಗಲದ ಚರಂಡಿಯ ತ್ಯಾಜ್ಯ ತೆಗೆಯಬೇಕು ಎನ್ನುವ ಷರತ್ತು ಇದೆ. ಆದರೆ ಇವರು ಮಾಡುತ್ತಾರಾ ಎಂದು ಯಾರಾದರೂ ಗಮನಿಸಿದ್ದಾರಾ? ಯಾರಾದರೂ ತಮ್ಮ ವಾರ್ಡಿನಲ್ಲಿ ಇಂತಹ ಸ್ವಚ್ಚತೆ ಆಗುತ್ತಿಲ್ಲ ಎಂದು ಪಾಲಿಕೆಯ ಆಯುಕ್ತರಿಗೆ ಲಿಖಿತ ಮನವಿ ಕೊಟ್ಟಿದ್ದಾರಾ? ಇಲ್ಲ. ಈ ಬಾರಿ ಮಳೆ ಬೇಗ ಬಂದಿರುವುದರಿಂದ ಚರಂಡಿಗಳಲ್ಲಿ ಲೆಕ್ಕಕ್ಕಿಂತ ಬೇಗ ಹಸಿರು ಬೆಳೆಯುತ್ತಿದೆ. ತೋಡುಗಳೇ ಕಾಣದಂತಹ ಪರಿಸ್ಥಿತಿ ಇದೆ. ಇದನ್ನೆಲ್ಲ ವಿವರವಾಗಿ ನಾನು ಸಂಸದರಿಗೆ, ಶಾಸಕರಿಗೆ, ಮೇಯರಿಗೆ ಹೇಳಿದ ಬಳಿಕ ಅವರು ಫೋಟೋ, ವಿಡಿಯೋ ನೋಡಿದ ನಂತರ ತಕ್ಷಣ ಸಂಬಂಧಪಟ್ಟವರನ್ನು ಕರೆಸಿ ಕೂಡಲೇ ಇ ಬಗ್ಗೆ ಕೆಲಸಕಾರ್ಯ ಮಾಡಬೇಕೆಂದು ಸೂಚಿಸಿದ್ದಾರೆ. ಅವರು ಹೇಳಿದ ನಂತರ ಮರುದಿನ ಚರಂಡಿಗಳ ಸ್ವಚ್ಚತೆಯ ಕಾರ್ಯ ಆರಂಭವಾಗಿದೆ. ಇದರಿಂದ ಒಬ್ಬ ನಾಗರಿಕನಾಗಿ ಮನಸ್ಸಿಗೆ ಸಮಾಧಾನ ತಂದಿದೆ. ನನ್ನ ಕಳಕಳಿಯನ್ನು ಪರಿಗಣಿಸಿ ತಕ್ಷಣ ಕಾರ್ಯಪ್ರವೃತ್ತರಾದ ಸಂಸದರಿಗೆ, ಶಾಸಕರಿಗೆ, ಮೇಯರ್ ಅವರಿಗೆ ಜನರ ಪರವಾಗಿ ಧನ್ಯವಾದಗಳು. ನಾವು ಜವಾಬ್ದಾರಿಯುತ ನಾಗರಿಕರಾಗಿ ಮಾಡಬೇಕಾಗಿರುವ ಇಂತಹ ಸಣ್ಣಪುಟ್ಟ ಕಾರ್ಯಗಳು ನಮ್ಮ ವಾರ್ಡಿನ ಜನರ ಜೀವವನ್ನು ಮಲೇರಿಯಾ, ಡೆಂಗ್ಯೂವಿನಿಂದ ಉಳಿಸಬಲ್ಲದು. ಎಲ್ಲರೂ ಹಣದಿಂದಲೇ ದಾನಧರ್ಮ ಮಾಡಿ ಉತ್ತಮ ಕಾರ್ಯ ಮಾಡಬೇಕಿಲ್ಲ. ನಿಮ್ಮ ವಾರ್ಡು ಸ್ವಚ್ಚವಾಗಿಲ್ಲ ಎಂದರೆ ಕಾರ್ಪೋರೇಟರ್ ಅವರಿಗೆ ಕರೆ ಮಾಡಿ ಕೆಲಸ ಮಾಡಿಸಲು ಸೂಚಿಸಿ. ನೀವು ಹೇಳಿದ ನಂತರವೂ ಕೆಲಸ ಆಗುತ್ತಿಲ್ಲ, ಕಾರ್ಪೋರೇಟರ್ ಮಾಡಿಸಲು ಆಸಕ್ತಿ ತೋರಿಸುತ್ತಿಲ್ಲ ಎಂದರೆ ಸಂಶಯವೇ ಬೇಡಾ. ಅಪವಿತ್ರ ಮೈತ್ರಿಯಾಗಿದೆ!

0
Shares
  • Share On Facebook
  • Tweet It




Trending Now
ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
Hanumantha Kamath December 10, 2025
ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
Hanumantha Kamath December 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
  • Popular Posts

    • 1
      ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • 2
      ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • 3
      ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • 4
      ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!

  • Privacy Policy
  • Contact
© Tulunadu Infomedia.

Press enter/return to begin your search