• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಂಗಳೂರು ವಿವಿಯ ಸಿಸಿ ಕ್ಯಾಮೆರಾ ಯೋಜನೆಯ ಅಸಲಿ ಗುಟ್ಟೇನು?

TNN Correspondent Posted On August 16, 2017


  • Share On Facebook
  • Tweet It

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಯೋಜನೆ ಹಾಕಲಾಯಿತು. ಒಟ್ಟು ಯೋಜನೆ ಎಷ್ಟು ಕೋಟಿಯದ್ದು ಗೊತ್ತಾ? ಬರೋಬ್ಬರಿ ನಾಲ್ಕು ಕೋಟಿ ರೂಪಾಯಿಯದ್ದು. ಅಷ್ಟಕ್ಕೂ ಏಕಾಏಕಿ ಸಿಸಿ ಕ್ಯಾಮೆರಾ ಅಳವಡಿಸಲು ಹೋದರೆ ಸಂಶಯ ಬರುತ್ತದೆಯಲ್ಲ, ಅದಕ್ಕೆ ಮಂಗಳೂರು ವಿವಿ ಕುಲಪತಿ ಭೈರಪ್ಪನವರು ಮತ್ತು ಅವರ ಟೀಮ್ ಒಂದು ಪ್ಲಾನ್ ಮಾಡುತ್ತದೆ. ಆ ಪ್ರಕಾರ ವಿವಿಯ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಕ್ಯಾಮೆರಾ ಇದೆ ಎಂದು ಸುದ್ದಿ ಹರಡಿಸಲಾಗುತ್ತದೆ. ಈ ಕ್ಯಾಮೆರಾದ ಘಟನೆ ಆಗದಿದ್ದರೆ ಸಿಸಿ ಕ್ಯಾಮೆರಾ ಇಡುವ ಇವರ ಯೋಜನೆಯ ಬಗ್ಗೆ ಎಲ್ಲರಿಗೂ ಸಂಶಯ ಬರುತ್ತಿತ್ತು. ಆದರೆ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಕ್ಯಾಮೆರಾದ ಕೇಸ್ ಆದ ನಂತರ ಎಲ್ಲಾ ಕಡೆ ಸಿಸಿ ಕ್ಯಾಮೆರಾ ಬೇಕೆ ಬೇಕು ಎನ್ನುವ ಪ್ರತಿಭಟನೆ, ಚರ್ಚೆ ಆದಾಗ ಇವರಿಗೆಲ್ಲ ತಮ್ಮ ಪ್ಲಾನ್ ಯಶಸ್ವಿಯಾದ ಖುಷಿಯಾಯಿತು. ಆ ಪ್ರಕರಣದ ಆರೋಪಿಯನ್ನಾಗಿ ಒಬ್ಬ ಯುವಕನನ್ನು ಫಿಕ್ಸ್ ಮಾಡಲಾಯಿತು. ಆತನನ್ನು ಬಂಧಿಸಿದಾಗೆ ಮಾಡಿ ತಕ್ಷಣ ಜಾಮೀನು ಕೂಡ ಕೊಡಿಸಲಾಯಿತು. ಆರೋಪಿಗೆ ಜಾಮೀನು ಕೊಡುವಾಗ ವಿವಿ ಕಡೆಯಿಂದ ಆಬ್ಜೆಕ್ಷನ್ ಹಾಕದ ಹಾಗೆ ಭೈರಪ್ಪ ಅಂಡ್ ಟೀಮ್ ನೋಡಿಕೊಂಡಿತು. ಅದಕ್ಕಾದ ಖರ್ಚನ್ನು ಇವರೇ ನೋಡಿಕೊಂಡರು. ಹಾಗೆ ಒಂದು ದೊಡ್ಡ ನಾಟಕ ಸೃಷ್ಟಿಸಿ ತಮ್ಮ ಸಿಸಿ ಕ್ಯಾಮೆರಾದ ಯೋಜನೆ ಜಾರಿಗೆ ಬರುವಂತೆ ನೋಡಿಕೊಂಡರು. ನಾಲ್ಕು ಕೋಟಿಯ ಯೋಜನೆ, ಟೆಂಡರ್ ಇಲ್ಲದೇ ಅನುಷ್ಟಾನಗೊಂಡಿತು. ಅದರಿಂದ ಇವರ ಜೇಬು ತುಂಬಿತು ಎಂದು ಮತ್ತೆ ಹೇಳುವ ಅಗತ್ಯ ಇದೆಯಾ?

ನಂತರ ನಡೆದದ್ದು ಸೋಲಾರ್ ಹಗರಣ. ಇದು ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು. ಕಡಿಮೆ ಬಿಡ್ ಅನ್ನು ಬಿಟ್ಟು ಹೆಚ್ಚು ಬಿಡ್ ಗೆ ಗುತ್ತಿಗೆ ನೀಡಲಾಗಿತ್ತು. ಇದರ ಹಿಂದೆ ಲಂಚ ಕೆಲಸ ಮಾಡಿದೆ ಎಂದು ಒಬ್ಬ ಕುರುಡ ಕೂಡ ಹೇಳಬಲ್ಲ. ವಿವಿಗೆ ಹಣ ಉಳಿಸುವ ಮನಸ್ಸು ಇದ್ದರೆ ಯಾಕೆ ಹೆಚ್ಚು ಬಿಡ್ ಮಾಡಿದವರಿಗೆ ಗುತ್ತಿಗೆ ಕೊಡುವ ಕೆಲಸ ಮಾಡಿತ್ತು. ಈ ಬಗ್ಗೆ ಸಮಗ್ರ ತನಿಖೆ ನಡೆದರೆ ಸತ್ಯ ಹೊರಗೆ ಬರಲ್ವಾ? ಭೈರಪ್ಪ ಮತ್ತು ಟೀಮ್ ನ ಮತ್ತೊಂದು ಭ್ರಷ್ಟಾಚಾರ ಎಂದರೆ ಗುತ್ತಿಗೆ ಆಧಾರಿತ ನೌಕರರ ಸಂಬಳಕ್ಕೆ ಕೈ ಹಾಕುವುದು. ಮಂಗಳೂರು ವಿವಿಯಲ್ಲಿ ಸುಮಾರು 700 ರಷ್ಟು ಗುತ್ತಿಗೆ ಆಧಾರಿತ ನೌಕರರಿದ್ದಾರೆ. ಅದರಲ್ಲಿ ಸೆಕ್ಯೂರಿಟಿ, ಪಿಯೋನ್, ಎಟೆಂಡರ್ ಎಲ್ಲ ಬರುತ್ತಾರೆ. 700 ಜನರಲ್ಲಿ ಹಲವರ ಸಂಬಳ 20 ರಿಂದ 23 ಸಾವಿರದ ತನಕ ಇದೆ. ಆದರೆ ನಿಜವಾಗಿ ಅವರ ಕೈಗೆ ಸಿಗುವುದು ಎಷ್ಟು ಗೊತ್ತಾ? ಏಳರಿಂದ ಎಂಟು ಸಾವಿರ ಸಂಬಳ ಮಾತ್ರ. ಉಳಿದ ಹಣ ಎಲ್ಲಿಗೆ ಹೋಗುತ್ತದೆ. ಅದಕ್ಕೆ ಕುಲಪತಿ ಭೈರಪ್ಪ ಅವರು ಏನು ಹೇಳುತ್ತಾರೆ?

ಮಂಗಳೂರು ವಿವಿಯಲ್ಲಿ ಪರ್ಚೇಸ್ ಕಮಿಟಿ ಎನ್ನುವುದು ಇದೆ. ಮಂಗಳೂರು ವಿವಿಯಲ್ಲಿ ನಡೆಯುವ ಎಲ್ಲಾ ಭ್ರಷ್ಟಾಚಾರಗಳಿಗೂ ಇದು ಒಂದು ರೀತಿಯಲ್ಲಿ ದೊಡ್ಡಪ್ಪ ಇದ್ದ ಹಾಗೆ. ವಿವಿಗೆ ಪ್ರತಿ ವಸ್ತುವನ್ನು ಖರೀದಿ ಮಾಡುವಾಗ ಬಿಲ್ ಲಕ್ಷಾಂತರ ರೂಪಾಯಿಯಿಂದ ಕೋಟ್ಯಾಂತರ ರೂಪಾಯಿಗಳ ತನಕ ಹೋಗುತ್ತದೆ. ಪೀಠೋಪಕರಣಗಳಿರಬಹುದು, ಕಂಪ್ಯೂಟರ್ ಗಳಿರಬಹುದು, ಎಲೆಕ್ಟ್ರೀಕಲ್ ವಸ್ತುಗಳು ಇರಬಹುದು. ಇದನ್ನೆಲ್ಲಾ ಖರೀದಿ ಮಾಡುವಾಗ ಖರೀದಿಗೆ ಒಂದಕ್ಕೆ ಎರಡು ಪಟ್ಟು ಹಣವನ್ನು ಇಲ್ಲಿ ವಿನಿಯೋಗಿಸಲಾಗಿದೆ. ಕಡಿಮೆ ಹಣಕ್ಕೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಖರೀದಿಸುವ ಅವಕಾಶ ಇರುವಾಗ ಮನಸ್ಸಿಗೆ ಬಂದಂತೆ ಹಣ ಕೊಟ್ಟು ವಸ್ತುಗಳ ಖರೀದಿ ನಡೆದಿದೆ. ಈ ಪರ್ಚೇಸ್ ಕಮಿಟಿಯ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಆಗ ಹೊರಗೆ ಬರುವ ಭ್ರಷ್ಟಾಚಾರವನ್ನು ಕಂಡರೆ ರಾಜಕಾರಣಿಗಳೇ ದಂಗಾಗಬಹುದು.

ವಿಷಯ ಇಷ್ಟೇ ಇಲ್ಲ. ಎಲ್ಲವನ್ನು ಒಮ್ಮೆಲ್ಲೆ ಎಲ್ಲಾ ಹೇಳಿದರೆ ಅದನ್ನು ಅರಗಿಸಿಕೊಳ್ಳುವುದು ಕಷ್ಟ. ಯಾಕೆಂದರೆ ಒಂದೊಂದು ಭ್ರಷ್ಟಾಚಾರವೂ ಒಂದೊಂದು ಅಧ್ಯಾಯ. ಭೈರಪ್ಪ ಹಾಗೂ ಟೀಮ್ ಮಾಡಿರುವ ಹಗರಣಗಳನ್ನು ಬಯಲಿಗೆಳೆದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನವರು ಪ್ರತಿಭಟನೆಗೆ ಹೊರಟ ಕೂಡಲೇ ಅದರ ವಾಸನೆ ವಿವಿ ಸಿಂಡಿಕೇಟ್ ನಲ್ಲಿರುವ ಒಬ್ಬರಿಗೆ ತಕ್ಷಣ ಗೊತ್ತಾಗುತ್ತದೆ. ಅವರು ತಕ್ಷಣ ಫೀಲ್ಡಿಗೆ ಇಳಿದು ಬಿಡುತ್ತಾರೆ. ಪ್ರತಿಭಟನೆಯನ್ನು ಮಾಡಲು ಹೊರಟವರಿಗೆ ಆಚಾರ್ಯರಂತೆ ಭೋದನೆ ಮಾಡಲು ಶುರುಮಾಡುತ್ತಾರೆ. ಸಂಘಟನೆಯನ್ನು “ಹರಿ”ಯುವ ಕೆಲಸ ಮಾಡುತ್ತಾರೆ. ಅದಕ್ಕಾಗಿಯೇ ಅವರು ಭೈರಪ್ಪನವರಿಗೆ ನಿಕಟರಾಗಿದ್ದಾರೆ. ಅದನ್ನು ಕೂಡ ಮುಂದಿನ ಅಧ್ಯಾಯದಲ್ಲಿ ತಿಳಿಸುತ್ತೇವೆ.

  • Share On Facebook
  • Tweet It


- Advertisement -


Trending Now
ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
Tulunadu News March 23, 2023
ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
Tulunadu News March 22, 2023
Leave A Reply

  • Recent Posts

    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
    • ಲೋಕಾಯುಕ್ತದಲ್ಲಿ ಸಿದ್ದು ಕೇಸ್ ಯಾಕೆ ಮುಚ್ಚಿಹೋದವು!!
    • ಹಿಂದೂ ರಾಷ್ಟ್ರ ಸಮ್ಮೇಳನ ಮಾಡುವುದು ಗ್ಯಾರಂಟಿ ರಿಯಾಜ್!!
    • ಯಾವ ಮುಸ್ಲಿಂ ರಾಜ ಜಾಗ ಕೊಟ್ಟಿದ್ದು ಮಿಥುನ್ ರೈ!!
  • Popular Posts

    • 1
      ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • 2
      ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • 3
      ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • 4
      ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • 5
      ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search